Saturday, 30 May 2020

ಪಂಪನ ವಿಕ್ರಮಾರ್ಜುನ ವಿಜಯ ಮತ್ತು ರನ್ನನ ಗದ್ದಾಯುದ್ಧ ಕುರಿತ ಪ್ರಶ್ನೋತ್ತರಗಳು / pam...



ಪಂಪನು ಒಂದು ಧಾರ್ಮಿಕ ಕಾವ್ಯವನ್ನು ಮತ್ತೊಂದು ಲೌಕಿಕ ಕಾವ್ಯವನ್ನು ರಚಿಸಿದ್ದಾನೆ.

ಪಂಪನ ಮೊದಲನೆಯ ಕೃತಿ ಆದಿಪುರಾಣ.
ಎರಡನೆಯ ಕೃತಿ ವಿಕ್ರಮಾರ್ಜುನ ವಿಜಯ ಅಥವಾ ಪಂಪಭಾರತ.

ಪಂಪಭಾರತ ಮಹಾಭಾರತದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ.ಈ ಕಥೆಯ ನಾಯಕ ಅರ್ಜುನ.ಇಲ್ಲಿ ಪಂಪ ತನ್ನ ಆಶ್ರಯದಾತ,ಮಿತ್ರನಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಕಾವ್ಯ ರಚಿಸಿದ್ದಾನೆ.ಈ ಕೃತಿಯ ಪ್ರಕಾರ ದ್ರೌಪದಿ ವಿವಾಹವಾಗುವುದು ಅರ್ಜುನನನ್ನು ಮಾತ್ರ.ತನ್ನ ರಾಜ ಅರಿಕೇಸರಿಗೆ ಹೋಲಿಸಿ ಬರೆದ ಕಾರಣ ಪಂಪ ಮಹಾಭಾರತದ ಕಥೆಯಲ್ಲಿ ಇಂತಹ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿ ಬಂತು. ಅಸಾಧಾರಣವಾದ ಪ್ರತಿಭೆ ಹಾಗೂ ಸೌಂದರ್ಯದಿಂದ ಕೂಡಿದ ಈ ಕಾವ್ಯದ ಕೊನೆಯಲ್ಲಿ ಅರ್ಜುನನೊಡನೆ ಸಿಂಹಾಸನವನ್ನೇರುವವಳು ಸುಭದ್ರೆ! ಇವನು ಹತ್ತನೆಯ ಶತಮಾನಕ್ಕೆ ಸೇರಿದವನು.ಪಂಪಭಾರತ ಕಾವ್ಯವು ಗದ್ಯ ಪದ್ಯ ಮಿಶ್ರಣದ ಒಂದು ಚಂಪೂ ಕಾವ್ಯ.ಪಂಪ ಕವಿ ತನ್ನ ಕಥಾಭಿತ್ತಿಯಾಗಿ ಆರಿಸಿಕೊಂಡಿದ್ದು ಸಂಸ್ಕೃತ ವ್ಯಾಸಭಾರತ ಕಥೆ.[೨] ಕನ್ನಡ ಭಾಷೆಯ ಆದಿಕಾವ್ಯವಾಗಿರುವುದು ಇದರ ವೈಶಿಷ್ಟ್ಯ.ಹಿಂದಿನ ಪ್ರಸಿದ್ಧ ಮಹಾಕಾವ್ಯಗಳಂತಲ್ಲದೆ ನಗರ,ಸಮುದ್ರ, ಪರ್ವತ, ಋತು ಮುಂತಾಗಿ ಪ್ರಸಿದ್ಧವಾಗಿರುವ 18 ವರ್ಣನೆಗಳಿಗೆ ಯಥೋಚಿತ್ತವಾಗಿ ಪ್ರಾಮುಖ್ಯಕೊಟ್ಟು ನಾಯಕನೊಬ್ಬನ ಚರಿತ್ರೆಯ್ನು ಅವನ ಜನನದಿಂದ ಮೊದಲ್ಗೊಂಡು ಅವನು ಅತಿಶಯವಾದ ಅಭ್ಯುದಯವನ್ನು ಪಡೆಯುವವರೆಗೆ ವರ್ಣಿಸಿರುವುದು ಈ ಕಾವ್ಯದ ಸಾಮಾನ್ಯ ಲಕ್ಷಣವಾಗಿದೆ. ಇದರಲ್ಲಿ 14 ಆಶ್ವಾಸಗಳಿವೆ. ಇಲ್ಲಿಯೂ ನಡುನಡುವೆ ಸಣ್ಣ ದೊಡ್ಡ ಗದ್ಯಖಂಡಗಳು ದಟ್ಟವಾಗಿ ಹೆಣೆದುಕೊಂಡು ವಿವಿಧ ಪದ್ಯಜಾತಿಗಳ 1609 ಪದ್ಯಗಳಿವೆ. ಈ ಪದ್ಯಜಾತಿಗಳಲ್ಲಿ ಕಂದಪದ್ಯಗಳೂ ಆ ಬಳಿಕ ಖ್ಯಾತ ಕರ್ಣಾಟಕಗಳು ಸಂಖ್ಯಾಬಾಹುಳ್ಯ ಪಡೆದಿವೆ. ರಗಳೆ, ಪಿರಿಯಕ್ಕರಗಳು ಇಲ್ಲಿ ಕಂಡುಬರುತ್ತವೆ. ಪಂಪಕವಿಯೇ ಹೇಳುವಂತೆ ಇದು ಆರು ತಿಂಗಳಲ್ಲಿ ಬರೆದು ಮುಗಿಸಿದನಂತೆ ಇದರ ರಚನೆಯ ಭಾಷೆ ಶೈಲಿಗಳ ಹದ ಇಲ್ಲಿ ಹೆಚ್ಚಾಗಿ ಕನ್ನಡತನವನ್ನು ತೋರುತ್ತದೆ ಹೀಗೆ ವ್ಯಾಸಭಾರತದಂತಹ ಒಂದು ದೊಡ್ಡಗ್ರಂಥದ ಕಥಾವಸ್ತುವನ್ನು ಸಮಗ್ರವಾಗಿ,ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ.

ಮಹಾಕವಿ ರನ್ನನ ಗದಾಯುದ್ಧ
’ಗದಾಯುದ್ಧ’ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.
ಭೀಮನ ಪರಾಕ್ರಮವನ್ನಷ್ಟೇ ಅಲ್ಲ, ಕರ್ಣ-ದುರ್ಯೋಧನರ ಸ್ನೇಹದ ಆಳ-ವಿಸ್ತಾರವನ್ನಿಲ್ಲಿ ಕಾಣುತ್ತೇವೆ. ಕರ್ಣನ ಸಾವಿಗಾಗಿ ಮರುಗುವ ದುರ್ಯೋಧನ ನನ್ನು ಕಂಡು ನಮಗೂ ಅಷ್ಟೇ ವ್ಯಥೆಯಾಗದೇ ಇರದು. ಎಲ್ಲೋ ಒಮ್ಮೆ ದುರ್ಯೋಧನನೂ ತುಂಬ ಇಷ್ಟವಾಗಿಬಿಡುತ್ತಾನೆ ಇಲ್ಲಿ! ಹಾಗಿದೆ ಆ ಪಾತ್ರದ ಪೋಷಣೆ.
ಕವಿಯು ತನ್ನ ಆಶ್ರಯದಾತನನ್ನು ಭೀಮನಿಗೆ ಹೋಲಿಸಿ ಈ ಕಾವ್ಯವನ್ನು ರಚಿಸಿದ್ದಾನೆ. ಹಾಗಾಗಿ ಹಲವಾರು ಐತಿಹಾಸಿಕ ಘಟನೆಗಳೂ(ಸತ್ಯಾಶ್ರಯನ ಬಗೆಗಿನ ಘಟನೆಗಳೂ) ಈ ಕಾವ್ಯದಲ್ಲಿ ಪ್ರಸ್ತಾಪಿತವಾಗಿವೆ. ಕೃತಿಯ ಆದಿಯಲ್ಲಿಯೇ ಕವಿಯು ತಾನು ಈ ಕೃತಿಯನ್ನು ಏಕೆ ಬರೆಯು ತ್ತಿರುವುದಾಗಿ ಹೇಳಿಬಿಡುತ್ತಾನೆ.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...