Showing posts with label ಮನೆಮದ್ದು. Show all posts
Showing posts with label ಮನೆಮದ್ದು. Show all posts

Friday, 16 February 2024

ದೇಹ ಪೂರ್ತಿ ಸಣ್ಣಗಾಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ ? ಇಂದೇ ಈ ಪಾನೀಯ ಟ್ರೈ ಮಾಡಿ

Belly fat reducing drinks : ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ದೇಹ ಕೊಬ್ಬನ್ನು ಸುಲಭವಾಗಿ  ಕರಗಿಸಬಹುದು.   



ಬಹುತೇಕ ಮಂದಿಯದ್ದು ದೇಹ ತೂಕ ಹೆಚ್ಚುತ್ತಿರುವುದೇ ಸಮಸ್ಯೆ

ಹೊಟ್ಟೆಯ ಭಾಗದ ಬೊಜ್ಜು ಕರಗಿಸುವುದು ಅಷ್ಟು ಸುಲಭವಲ್ಲ.

ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.

ದೇಹ ಪೂರ್ತಿ ಸಣ್ಣಗಾಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ ? ಇಂದೇ ಈ ಪಾನೀಯ ಟ್ರೈ ಮಾಡಿ  


Belly fat reducing drinks : ದೇಹ ತೂಕ ಹೆಚ್ಚಾಗುತ್ತಿದೆ ಎನ್ನುವುದು ಇತ್ತಿಚೀನ ದಿನಗಳಲ್ಲಿ ಬಹುತೇಕ ಮಂದಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಒಮ್ಮೆ ತೂಕ ಹೆಚ್ಚಾದರೆ ಮತ್ತೆ ಅದನ್ನು ಇಳಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹೆಚ್ಚಿನ ಕೇಸ್ ಗಳಲ್ಲಿ ಈ ಪ್ರಯತ್ನ ಯಾವುದೇ ರೀತಿಯ ಪ್ರಯೋಜನ ನೀಡುವುದಿಲ್ಲ. ಇನ್ನು ಜಿಮ್, ಜುಂಬಾ, ಆರೋಬಿಕ್ಸ್ ಎಂದೆಲ್ಲಾ ಹೇಳಿದರೂ ಇದು ಎಲ್ಲರಿಗೂ ಹೊಂದುವುದಿಲ್ಲ. ದೇಹ ತೂಕ ಇಳಿಸುವ ಪ್ರಯತ್ನದ ಫಲವಾಗಿ ದೇಹದ ಇತರ ಭಾಗಗಳ ಕೊಬ್ಬು ಕರಗಿದರೂ ಹೊಟ್ಟೆಯ ಭಾಗದ ಬೊಜ್ಜು ಕರಗಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಕೊಬ್ಬು ಕರಗಿಸಲು ಮಾಡುವ ಎಲ್ಲಾ ಪ್ರಯತ್ನಗಳೂ ವ್ಯರ್ಥ ಎಂದೆನಿಸಲು ಆರಂಭವಾಗುತ್ತದೆ. ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ದೇಹ ಕೊಬ್ಬನ್ನು ಸುಲಭವಾಗಿ  ಕರಗಿಸಬಹುದು. 

ಹೊಟ್ಟೆಯ ಕೊಬನ್ನು ಕರಗಿಸುವುದು ಹೇಗೆ? :  

ಅನೇಕ ಜನರಲ್ಲಿ ದೇಹದ ಇತರ ಭಾಗಗಳು ತೆಳ್ಳಗೆ ಇರುತ್ತವೆ. ಆದರೆ, ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಮಾತ್ರ ಅತಿಯಾದ ಕೊಬ್ಬು ತುಂಬಿರುತ್ತದೆ. ಅನಾರೋಗ್ಯಕರ ಆಹಾರ ಸೇವನೆ ಕೂಡಾ ಇದಕ್ಕೆ ಕಾರಣ. ಇನ್ಸ್ಟಂಟ್ ಆಹಾರ ಸೇವನೆಯಿಂದ ಹೊಟ್ಟೆಯ ಭಾಗ ದಪ್ಪಾಗಾಗಲು ಆರಂಭವಾಗುತ್ತದೆ. ಒಮ್ಮೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ಅದನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ. 




ಕೆಲವು ಮನೆಮದ್ದುಗಳು ಹೊಟ್ಟೆಯಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಹೊಟ್ಟೆಯ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಕರಗಿಸುವುದು ಸಾಧ್ಯವಾಗುತ್ತದೆ. ಅಲ್ಲದೆ ಇವುಗಳ ಸೇವನೆ ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಉಂಟು ಮಾಡುವುದಿಲ್ಲ ಎನ್ನುವುದು ಮತ್ತೊಂದು ಖುಷಿಯ ವಿಚಾರ. 

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮನೆಮದ್ದುಗಳು:

ನೆಲ್ಲಿಕಾಯಿ ರಸ:

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೆಲ್ಲಿಕಾಯಿ ರಸವು ಪರಿಣಾಮಕಾರಿಯಾಗಿದೆ. ನೆಲ್ಲಿಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಿನ ಪ್ರಮಾ ಣದಲ್ಲಿ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ನೆಲ್ಲಿಕಾಯಿ ರಸವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಮೆಂತ್ಯೆ  :

ತೂಕ ಇಳಿಸುವ ಆಹಾರದಲ್ಲಿ ಫೈಬರ್‌ನಲ್ಲಿ ಸಮೃದ್ಧವಾಗಿರುವ ಮೆಂತ್ಯೆಗೆ ವಿಶಿಷ್ಟ ಸ್ಥಾನ ಇರಲೇಬೇಕು. ಮೆಂತ್ಯೆಯನ್ನು  ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಈ ನೀರನ್ನು ಬಿಸಿ ಮಾಡಿ  ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ  ಪ್ರತಿದಿನ ಈ ನೀರನ್ನು ಕುಡಿಯುತ್ತಾ ಬಂದರೆ ಹೊಟ್ಟೆ ಭಾಗದ ಕೊಬ್ಬು ಸುಲಭವಾಗಿ ಕರಗುವುದು. ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಕೂಡಾ ಸಹಾಯ ಮಾಡುತ್ತದೆ. 

ನಿಂಬೆ ರಸ : 

ನಿಂಬೆ ರಸ ಕೂಡಾ ದಪ್ಪಗಿರುವ ಹೊಟ್ಟೆಯನ್ನು ಮತ್ತೆ ಶೇಪ್ ಗೆ ತರಲು ಸಹಾಯಕವಾಗಿದೆ. ನಿಂಬೆ ರಸವು ಚಯಾಪಚಯವನ್ನು ಸುಧಾರಿಸುತ್ತದೆ. ಕೊಬ್ಬನ್ನು ಕರಗಿಸುತ್ತದೆ. ಅದರಲ್ಲೂ ಹೊಟ್ಟೆಯ ಭಾಗದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ತ್ವರಿತ ಪರಿಣಾಮವನ್ನು ಬೀರುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬಿಸಿ ನೀರಿಗೆ ಹಾಕಿ ಕುಡಿಯಿರಿ. ತೂಕ ಇಳಿಸುವ ಪ್ರಯತ್ನಗಳಲ್ಲಿ ನಿಂಬೆ ರಸ ಅತ್ಯಂತ ಪ್ರಯೋಜನಕಾರಿಯಾಗಿದೆ. 

 ಓಮ ಕಾಳಿನ ನೀರು :  

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಓಮ ಕಾಳಿನ ನೀರನ್ನು ಕುಡಿಯುತ್ತಿದ್ದರೆ, ಹೊಟ್ಟೆಯ ಗಾತ್ರ ಇಳಿಯುವುದನ್ನು ಬಹಳ ಬೇಗನೆ ಗಮನಿಸಬಹುದು.  ಒಂದು ಚಮಚ ಓಮ ಕಾಳನ್ನು 3 ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿ. ಈ ನೀರು 3 ಲೋಟದಿಂದ 2 ಲೋಟಕ್ಕೆ ಇಳಿಯುವವರೆಗೆ ಕುದಿಸಬೇಕು. ರಾತ್ರಿ ಊಟವಾದ ಅರ್ಧ ಗಂಟೆಯ ನಂತರ ಈ ನೀರನ್ನು ಕುಡಿಯಿರಿ ಮತ್ತು ಮರುದಿನ ಬೆಳಿಗ್ಗೆ ಉಳಿದ ನೀರನ್ನು ಕುಡಿಯಿರಿ.  ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಪರಿಣಾಮ ಕಂಡು ಬರುವುದು. 

ಓಮ ಕಾಳಿನ ನೀರು ದೇಹದಲ್ಲಿ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊಬ್ಬನ್ನು ಕರಗಿಸುತ್ತದೆ ಮತ್ತು ದೇಹದ ತೂಕವನ್ನು ತ್ವರಿತವಾಗಿ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕಡಿಮೆ ಮಾಡುತ್ತದೆ.






Sunday, 11 February 2024

Hair Fall Control: ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ 5 ಸಿಂಪಲ್‌ ಸಲಹೆ ಪಾಲಿಸಿ


Hair Fall Control: ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ 5 ಸಿಂಪಲ್‌ ಸಲಹೆ ಪಾಲಿಸಿ



ಕೂದಲು ಉದುರುವುದು ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದು ಹೆಣ್ಣುಮಕ್ಕಳನ್ನು ಮಾತ್ರವಲ್ಲ, ಗಂಡುಮಕ್ಕಳನ್ನು ಕಾಡುತ್ತಿದೆ. ಹಾಗಾದ್ರೆ ಕೂದಲು ಉದುರುವ ಸಮಸ್ಯೆ ಥಟ್ಟಂತ ನಿಲ್ಲಬೇಕು ಅಂದ್ರೆ ಏನು ಮಾಡಬಹುದು? ಇಲ್ಲಿದೆ ಪರಿಹಾರ

ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ 5 ಸಿಂಪಲ್‌ ಸಲಹೆ ಪಾಲಿಸಿ
ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ 5 ಸಿಂಪಲ್‌ ಸಲಹೆ ಪಾಲಿಸಿ



ಋತುಮಾನಗಳು ಬದಲಾದಂತೆ ಚರ್ಮ ಹಾಗೂ ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ಚಳಿಗಾಲ ಬಂತೆಂದರೆ ಕೂದಲು ಉದುರುವ ಸಮಸ್ಯೆ ಹೆಚ್ಚು ಕಾಡುತ್ತದೆ. ಇತ್ತೀಚೆಗಂತೂ ನೀರು, ಕಲುಷಿತ ವಾತಾವರಣ, ಆಹಾರಗಳ ಕಾರಣದಿಂದ ಎಲ್ಲಾ ವಯೋಮಾನದವರಲ್ಲೂ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ಪ್ರತಿದಿನ ಅಲ್ಪಸ್ವಲ್ಪ ಕೂದಲು ಉದುರಿದರೆ ತೊಂದರೆಯಿಲ್ಲ, ಆದರೆ ಪ್ರತಿದಿನ ರಾಶಿ ರಾಶಿ ಕೂದಲು ಉದುರುತಿದ್ರೆ ಯಾರಿಗೆ ಬೇಸರ ಆಗೊಲ್ಲ ಹೇಳಿ. ಆದರೆ ಖಂಡಿತ ಈ ಸಮಸ್ಯೆಗೆ ಪರಿಹಾರವಿದೆ. ಅಲ್ಲದೆ ಈ ಪರಿಹಾರವು ಆದಷ್ಟು ಬೇಗ ನಿಮ್ಮಲ್ಲಿ ಕೂದಲು ಉದುರುವ ಸಮಸ್ಯೆ ಸರಿ ಹೋಗುವಂತೆ ಮಾಡುತ್ತದೆ. ಹಾಗಾದ್ರೆ ಅದೇನು ಅಂತಹ ಪರಿಹಾರ ಅಂತ ಯೋಚನೆ ಮಾಡ್ತಾ ಇದೀರಾ? ಮುಂದೆ ಓದಿ

ಸಮತೋಲಿತ ಡಯೆಟ್‌

ಕೂದಲು ಉದುರುವುದು ಥಟ್‌ ಅಂತ ನಿಲ್ಲಬೇಕು ಅಂದ್ರೆ ನೀವು ಮೊದಲು ಮಾಡಬೇಕಿರುವುದು ಸಮತೋಲಿತ ಆಹಾರ ಸೇವಿಸುವುದು. ಪೋಷಕಾಂಶ ಸಮೃದ್ಧ ಆಹಾರ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದು. ಕಬ್ಬಿಣಾಂಶ, ವಿಟಮಿನ್ ಎ ಮತ್ತು ಡಿ, ಸತುವಿನ ಅಂಶದ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ. ವಿವಿಧ ಬಗೆಯ ಹಣ್ಣು, ತರಕಾರಿ, ಲೀನ್‌ ಪ್ರೊಟೀನ್‌, ಧಾನ್ಯಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಇದರೊಂದಿಗೆ ಪಾಲಕ್‌, ಮೊಟ್ಟೆ, ಒಣಹಣ್ಣುಗಳು, ಮೀನು ಇವುಗಳ ಸೇವನೆಯು ಬಹಳ ಅವಶ್ಯ. ಇವುಗಳಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ.

ಎಸೆನ್ಷಿಯಲ್‌ ಆಯಿಲ್‌ ಮಸಾಜ್‌

ಸಾರಭೂತ ತೈಲವನ್ನು ಹಚ್ಚಿ ಕೂದಲ ಬುಡಕ್ಕೆ ಚೆನ್ನಾಗಿ ಮಸಾಜ್‌ ಮಾಡುವುದರಿಂದ ಕೂದಲಿನ ಫಾಲಿಕಲ್‌ಗಳಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಇದು ಕೂದಲವನ್ನು ಪೋಷಿಸಿ, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಆಲಿವ್‌ ಎಣ್ಣೆ ಇವುಗಳಲ್ಲಿ ಯಾವುದಾದರೂ ಒಂದು ಎಣ್ಣೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಲ್ಯಾವೆಂಡರ್‌ ಎಣ್ಣೆ, ರೋಸ್ಮರಿ ಅಥವಾ ಪೆಪ್ಪರ್‌ಮಿಂಟ್‌ ಆಯಿಲ್‌ ಸೇರಿಸಿ. ಇದನ್ನು ಬಿಸಿ ಮಾಡಿ, ಉಗುರು ಬೆಚ್ಚಗಿನ ಎಣ್ಣೆಯನ್ನು ನೆತ್ತಿಯ ಬುಡಕ್ಕೆ ಮಸಾಜ್‌ ಮಾಡಿ. ನಂತರ 30 ಗಂಟೆ ಬಿಟ್ಟು ತಲೆಸ್ನಾನ ಮಾಡಿ.

ರಾಸಾಯನಿಕಗಳ ಬಳಕೆ ತಕ್ಷಣಕ್ಕೆ ನಿಲ್ಲಿಸಿ

ರಾಸಾಯನಿಕ ಅಂಶಗಳಿರುವ ಯಾವುದೇ ಶಾಂಪೂ, ಕಂಡೀಷನರ್‌ ಅಥವಾ ಕೂದಲಿನ ಉತ್ಪನ್ನಗಳ ಅತಿಯಾದ ಬಳಕೆಯು ಕೂದಲು ಉದುರುವಿಕೆಯನ್ನು ಹೆಚ್ಚಿಸಬಹುದು. ಸೌಮ್ಯತರದ ಸಲ್ಫೇಟ್‌ ಮುಕ್ತ ಉತ್ಪನ್ನಗಳನ್ನು ಬಳಸುವುದು ಸೂಕ್ತ. ಇದರೊಂದಿಗೆ ಸ್ಟ್ರೇಟ್‌ನಿಂಗ್‌, ಕರ್ಲಿಂಗ್‌ ಐರನ್‌ನಂತಹ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಬಿಸಿಯು ಕೂದಲ ಹಾನಿಯನ್ನು ಇನ್ನಷ್ಟು ಹೆಚ್ಚು ಮಾಡಬಹುದು. ಅತಿಯಾದ ಶಾಖದಿಂದ ಕೂದಲು ಬುಡದಿಂದಲೇ ದುರ್ಬಲವಾಗಬಹುದು ಎಚ್ಚರ.

ಲೋಳೆಸರದ ತಿರುಳು

ಅಲೊವೆರಾ ಜೆಲ್‌ ಕೂದಲು ಚರ್ಮದ ಉರಿಯೂತವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಇದು ಕೂದಲು ಉದುರುವುದನ್ನು ತಡೆಯಲು ಬೆಸ್ಟ್‌. ತಾಜಾ ಲೋಳೆಸರ ತಿರುಳನ್ನು ಕೂದಲಿನ ಬುಡಕ್ಕೆ ಹಚ್ಚಿ, ಇದನ್ನು 45 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಿನ ನೀರಿನಿಂದ ಸೌಮ್ಯತರ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಅಲೊವೆರಾ ಕೂದಲಿನ ಬುಡದಲ್ಲಿ ಪಿಎಚ್‌ ಲೆವೆಲ್‌ ನಿಯಂತ್ರಣದಲ್ಲಿ ಇರಲು ಸಹಾಯ ,ಆಡುತ್ತದೆ. ಆ ಮೂಲಕ ಉರಿಯೂತವನ್ನು ನಿವಾರಿಸಿ, ಕೂದಲು ಉದುರುವುದನ್ನು ತಡೆಯುತ್ತದೆ.

ಸರಿಯಾದ ಕ್ರಮದಲ್ಲಿ ಕೂದಲ ನಿರ್ವಹಣೆ

ಕೂದಲು ಉದುರುವುದನ್ನು ನಿಲ್ಲಿಸಲು ಸರಿಯಾದ ಕ್ರಮದಲ್ಲಿ ಕೂದಲ ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಕೂದಲಿಗೆ ಹೊಂದುವ ಶಾಂಪೂವಿನಿಂದ ನಿರಂತರ ತಲೆಸ್ನಾನ, ಕೂದಲ ತೇವಾಂಶ ಕಾಪಾಡಿಕೊಳ್ಳಲು ಕಂಡಿಷನರ್‌ ಬಳಸುವುದು, ಒದ್ದೆ ಕೂದಲು ಬಾಚುವಾಗ ಅಗಲ ಹಲ್ಲಿನ ಬಾಚಣಿಗೆ ಬಳಸುವುದು ಈ ಎಲ್ಲವೂ ಮುಖ್ಯವಾಗುತ್ತದೆ. ಕೂದಲನ್ನು ಗಾಳಿಗೆ ಹರಡಿ ಆರಿಸುವುದು ಉತ್ತಮ ವಿಧಾನ. ಕೂದಲನ್ನು ಸೌಮ್ಯತರದ ರಬ್ಬರ್‌ ಬೆಂಡ್‌ಗಳಿಂದ ಜುಟ್ಟು ಹಾಕಿ. ಟೈಟ್‌ ಆಗಿ ಕೂದಲಿಗೆ ಜುಟ್ಟು ಹಾಕುವುದು ಅಪಾಯ.

ಆದರೆ ಒಂದು ವಿಚಾರ ನೆನಪಿರಲಿ ಕೂದಲು ಉದುರುವುದನ್ನು ನಿಲ್ಲಿಸಲು ಒಂದೆರಡು ದಿನಗಳಲ್ಲಿ ಖಂಡಿತ ಸಾಧ್ಯವಿಲ್ಲ. ಆದರೆ ಮೇಲೆ ತಿಳಿಸಿದ ಮಾರ್ಗಗಳನ್ನು ಚಾಚೂ ತಪ್ಪದೇ ಪಾಲಿಸುವುದರಿಂದ ಖಂಡಿತ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಸಲಹೆಗಳನ್ನು ಪಾಲಿಸಿದ ಮೇಲೂ ನಿರಂತರವಾಗಿ ಕೂದಲು ಉದುರುತ್ತಿದ್ದರೆ ಅದಕ್ಕೆ ಬೇರೆ ಆರೋಗ್ಯ ಸಮಸ್ಯೆಗಳೂ ಕಾರಣವಿರಬಹುದು. ಹಾಗಾಗಿ ತಜ್ಞ ವೈದ್ಯರನ್ನು ಕಾಣುವುದು ಉತ್ತಮ.







Friday, 9 February 2024

ಹೊಟ್ಟೆಯ ಅಲ್ಸರ್ ಸಮಸ್ಯೆಯನ್ನು ಈ ಮನೆಮದ್ದು ಮೂಲಕ ಸುಲಭವಾಗಿ ಪರಿಹರಿಸಬಹುದು! Stomac...


Stomach Ulcer: ಎದೆ ಉರಿ ಇದೆಯಾ? ಹೊಟ್ಟೆ ಹುಣ್ಣಿನ ಬಗ್ಗೆ ಇರಲಿ ಎಚ್ಚರ, ಇಲ್ಲಿದೆ ಕೆಲವು ಮನೆಮದ್ದುಗಳು





ಹೊಟ್ಟೆಯ ಹುಣ್ಣುಗಳನ್ನು ಸುಲಭವಾಗಿ ಗುಣಪಡಿಸಬಹುದು. ಆದರೂ ಸಹ ಸರಿಯಾದ ಚಿಕಿತ್ಸೆ ನೀಡದೇ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ಪೆಪ್ಟಿಕ್ ಅಲ್ಸರ್ ಇದ್ದವರಿಗೆ ವೈದ್ಯರು 10 ದಿನಗಳವರೆಗೆ ಔಷಧ ನೀಡುತ್ತಾರೆ. ಎಲೆಕೋಸು ಹುಣ್ಣುಗಳನ್ನು ಗುಣಪಡಿಸುತ್ತದೆ.



ಹೊಟ್ಟೆಯಲ್ಲಿ (Stomach) ಉಂಟಾಗುವ ಹುಣ್ಣುಗಳನ್ನು (Ulcer) ಗ್ಯಾಸ್ಟ್ರಿಕ್ ಅಲ್ಸರ್ (Gastric Ulcer) ಎಂದು ಕರೆಯುತ್ತಾರೆ. ಇವು ಹೊಟ್ಟೆಯ ಒಳಪದರದಲ್ಲಿ ಉಂಟಾಗುವ ನೋವಿನ (Pain) ಹುಣ್ಣುಗಳಾಗಿವೆ. ಇದು ಒಂದು ರೀತಿಯ ಪೆಪ್ಟಿಕ್ ಹುಣ್ಣು. ಪೆಪ್ಟಿಕ್ ಹುಣ್ಣುಗಳು ಹೊಟ್ಟೆ ಮತ್ತು ಸಣ್ಣ ಕರುಳು ಮತ್ತು ಅನ್ನನಾಳದ ಒಳಪದರದ ಮೇಲೆ ಉಂಟಾಗುತ್ತವೆ. ಜೀರ್ಣಕಾರಿ ರಸದಿಂದ ನಿಮ್ಮ ಹೊಟ್ಟೆಯನ್ನು ರಕ್ಷಿಸುವ ಲೋಳೆಯ ದಪ್ಪ ಪದರವು ಕುಗ್ಗಿದಾಗ ಹೊಟ್ಟೆಯ ಹುಣ್ಣು ಉಂಟಾಗುತ್ತದೆ. ಹೊಟ್ಟೆಯ ಹುಣ್ಣುಗಳು ಮುಖ್ಯವಾಗಿ ಬ್ಯಾಕ್ಟೀರಿಯಂ ಹೆಲಿಕೋಬ್ಯಾಕ್ಟರ್ ಪೈಲೋರಿ (H. ಪೈಲೋರಿ) ಸೋಂಕಿನಿಂದ ಅಥವಾ ಆಸ್ಪಿರಿನ್, ಐಬುಪ್ರೊಫೇನ್ ಅಥವಾ ನ್ಯಾಪ್ರೋಕ್ಸೆನ್‌ನಂತಹ ಉರಿಯೂತದ ಔಷಧಗಳ ದೀರ್ಘಾವಧಿಯ ಬಳಕೆಯಿಂದ ಉಂಟಾಗುತ್ತವೆ.



ಹೊಟ್ಟೆಯಲ್ಲಿ ಹುಣ್ಣುಗಳಿದ್ದರೆ ಏನು ಮಾಡಬೇಕು?

ಹೊಟ್ಟೆಯ ಹುಣ್ಣುಗಳನ್ನು ಸುಲಭವಾಗಿ ಗುಣಪಡಿಸಬಹುದು. ಆದರೂ ಸಹ ಸರಿಯಾದ ಚಿಕಿತ್ಸೆ ನೀಡದೇ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ಪೆಪ್ಟಿಕ್ ಅಲ್ಸರ್ ಇದ್ದವರಿಗೆ ವೈದ್ಯರು 10 ದಿನಗಳವರೆಗೆ ಔಷಧ ನೀಡುತ್ತಾರೆ.

ಇದು ಮುಖ್ಯವಾಗಿ PPI ಗಳು (ಪ್ರೋಟಾನ್  ಪಂಪ್ ಇನ್ಹಿಬಿಟರ್ಗಳು), ಕ್ಲಾರಿಥ್ರೊಮೈಸಿನ್ ಮತ್ತು ಅಮೋಕ್ಸಿಸಿಲಿನ್ ಗುಂಪಿನ ಔಷಧವಾಗಿದೆ. ಅದು ಆಮ್ಲದ ಪರಿಣಾಮ ಕಡಿಮೆ ಮಾಡುತ್ತದೆ. ಮನೆಯಲ್ಲಿ ಮನೆಮದ್ದುಗಳ ಮೂಲಕ ಪೆಪ್ಟಿಕ್ ಅಲ್ಸರ್ ನ್ನು ತೊಡೆದು ಹಾಕಬಹುದು. ಅವುಗಳ ಬಗ್ಗೆ ಇಲ್ಲಿ ನೋಡೋಣ.

ಪೆಪ್ಟಿಕ್ ಅಲ್ಸರ್ ಲಕ್ಷಣಗಳು

ಹೊಟ್ಟೆಯಲ್ಲಿ ಮಂದ ನೋವು, ತೂಕ ಇಳಿಕೆ, ಆಹಾರ ಸೇವನೆ ಮಾಡಲಾಗದಿರುವುದು, ಊತ, ಹೊಟ್ಟೆ ತುಂಬಿದ ಭಾವನೆ, ಬೆಲ್ಚಿಂಗ್ ಅಥವಾ ಆಮ್ಲೀಯತೆ, ಎದೆಯುರಿ, ರಕ್ತಹೀನತೆ, ಡಾರ್ಕ್, ಟಾರಿ ಮಲ, ರಕ್ತಸಿಕ್ತ ವಾಂತಿ,


ಅಲ್ಸರ್ಗೆ ರಾಮಬಾಣ - ಎಲೆಕೋಸು ರಸ

ಅಧ್ಯಯನದ ಪ್ರಕಾರ ಎಲೆಕೋಸು ಹುಣ್ಣುಗಳನ್ನು ಗುಣಪಡಿಸುತ್ತದೆ. ಹುಣ್ಣುಗಳಿಗೆ ಇದು ಜನಪ್ರಿಯ ಮತ್ತು ನೈಸರ್ಗಿಕ ಚಿಕಿತ್ಸೆ. ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು ಪ್ರತಿಜೀವಕಗಳು ಲಭ್ಯವಾಗುವ ದಶಕಗಳ ಮೊದಲು ಇದನ್ನು ವೈದ್ಯರು ಬಳಸುತ್ತಿದ್ದರು.

ಎಲೆಕೋಸು ರಸವು ಹೊಟ್ಟೆಯ ಹುಣ್ಣುಗಳನ್ನು ತಡೆಗೆ ಮತ್ತು ಗುಣಪಡಿಸುವ ಸಂಯುಕ್ತಗಳನ್ನು ಹೊಂದಿದೆ. ಎಲೆಕೋಸು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ರಕ್ಷಣಾತ್ಮಕ ಗುಣಗಳನ್ನು ಹೊಂದಿದೆ.

ಬಳಸುವುದು ಹೇಗೆ

ಎಲೆಕೋಸು ರಸ ತಯಾರಿಸಿ. ಪ್ರತಿದಿನ 1 ಕಪ್ ರಸ ಸೇವಿಸಿ. ಇದು ಹುಣ್ಣುಗಳ ನಿವಾರಣೆಗೆ ತುಂಬಾ ಪ್ರಯೋಜನಕಾರಿ.

ಹುಣ್ಣು ಗುಣಪಡಿಸಲು ಏನು ತಿನ್ನಬೇಕು - ಜೇನುತುಪ್ಪ

ಜೇನುತುಪ್ಪವು ಉತ್ಕರ್ಷಣ ನಿರೋಧಕ-ಭರಿತ ಆಹಾರ. ವಿವಿಧ ಆರೋಗ್ಯ ಪ್ರಯೋಜನ ನೀಡುತ್ತದೆ. ಈ ಕಿಣ್ವವು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉತ್ಪಾದಿಸುತ್ತದೆ. ಇದು ಹುಣ್ಣು ಉಂಟು ಮಾಡುವ ಬ್ಯಾಕ್ಟೀರಿಯಾ ಹೆಲಿಕೋಬ್ಯಾಕ್ಟರ್ ಪೈಲೋರಿ ವಿರುದ್ಧ ಹೋರಾಡುತ್ತದೆ. ಅಲ್ಲದೇ ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಕಣ್ಣಿನ ಆರೋಗ್ಯ, ಹೃದ್ರೋಗ ಮತ್ತು ಪಾರ್ಶ್ವವಾಯು ತಡೆಗೆ ಸಹಕಾರಿ.

ಬಳಸುವುದು ಹೇಗೆ

ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಬೆರೆಸಿ ಮಿಶ್ರಣ ತಯಾರಿಸಿ. ದಿನಕ್ಕೆರಡು ಬಾರಿ ಸೇವಿಸಿ. ಇದು ಅಲ್ಸರ್ ಸಮಸ್ಯೆ ನಿವಾರಣೆ ಮಾಡುತ್ತದೆ.
ಬೆಳ್ಳುಳ್ಳಿ ಹುಣ್ಣುಗಳಿಗೆ ನೈಸರ್ಗಿಕ ಔಷಧ

ಒಂದು ಅಧ್ಯಯನದ ಪ್ರಕಾರ, ಬೆಳ್ಳುಳ್ಳಿ ಅಲಿಸಿನ್ ಎಂಬ ಸಂಯುಕ್ತ ಹೊಂದಿದೆ. ಇದು ಪ್ರಬಲವಾದ ಆಂಟಿಮೈಕ್ರೊಬಿಯಲ್ ಗುಣಲಕ್ಷಣ ಹೊಂದಿದೆ. ಇದು ಹೆಲಿಕೋಬ್ಯಾಕ್ಟರ್ ಪೈಲೋರಿ ವಿರುದ್ಧ ಹೋರಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಪೆಪ್ಟಿಕ್ ಹುಣ್ಣು ಉಂಟು ಮಾಡುತ್ತವೆ. ಇದು ಹುಣ್ಣುಗಳಾಗದಂತೆ ತಡೆಯುತ್ತದೆ. ಹುಣ್ಣು ಗುಣ ಪಡಿಸುತ್ತದೆ.

ಬಳಸುವುದು ಹೇಗೆ

ಪ್ರತಿದಿನ 2-3 ಎಸಳು ಬೆಳ್ಳುಳ್ಳಿ ತರಕಾರಿಗೆ ಹಾಕಿ ಸೇವಿಸಿ. ಪ್ರತಿದಿನ 1 ಲವಂಗ ಮತ್ತು ಬೆಳ್ಳುಳ್ಳಿ ಜಗಿಯುವುದು ಪ್ರಯೋಜನಕಾರಿ.

ಮೂಲದಿಂದ ಹುಣ್ಣು ತೊಡೆದು ಹಾಕುವುದು ಹೇಗೆ?  

ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಸಂಯುಕ್ತವು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಇದು ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಇದು ರಕ್ತನಾಳಗಳ ಕಾರ್ಯ ಸುಧಾರಿಸಲು ಮತ್ತು ಉರಿಯೂತ ಮತ್ತು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.

Tuesday, 21 November 2023

10 ದಿನ ಖಾಲಿ ಹೊಟ್ಟೆಯಲ್ಲಿ ಜೀರಿಗೆ ತಿಂದ್ನೋಡಿ ! ಜೀರಿಗೆ ಕಷಾಯ ಉಪಯೋಗ | Jeera Wa...

ಖಾಲಿ ಹೊಟ್ಟೆಗೆ ಒಂದು ಲೋಟ ಜೀರಿಗೆ ನೀರು ಕುಡಿದ್ರೆ, ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?


ಪೌಷ್ಠಿಕಾಂಶ ಮತ್ತು ಆರೋಗ್ಯ ತಜ್ಞರ ಪ್ರಕಾರ, ಬೆಳಿಗ್ಗೆದ್ದ ಬಳಿಕ ಮೊದಲ ಆಹಾರವಾಗಿ ಜೀರಿಗೆ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ.

health benefits of drinking jeera water in empty stomach
ಖಾಲಿ ಹೊಟ್ಟೆಗೆ ಒಂದು ಲೋಟ ಜೀರಿಗೆ ನೀರು ಕುಡಿದ್ರೆ, ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
ಖಾಲಿ ಹೊಟ್ಟೆಯಲ್ಲಿ ಏನೇ ಕುಡಿದರೂ ಅದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುವುದು. ಇಂತಹ ಒಂದು ಪಾನೀಯವೆಂದರೆ ಅದು ಜೀರಿಗೆ ನೀರು. ಇದನ್ನು ಕುಡಿದರೆ ದೇಹವು ತಂಪಾಗಿರುತ್ತದೆ ಮತ್ತು ಇದು ದೇಹದಲ್ಲಿ ಉಷ್ಣತೆಯನ್ನು ಕಾಪಾಡಲು ನೆರವಾಗುವುದು.

ಆಯುರ್ವೇದದಲ್ಲಿ ಕೂಡ ಜಲಜೀರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರಲ್ಲಿ ಇರುವಂತಹ ದೇಹವನ್ನು ತಂಪಾಗಿಸುವ ಗುಣವೇ ಇದಕ್ಕೆ ಕಾರಣವಾಗಿದೆ. ಇದು ತೂಕ ಇಳಿಸಲು ಕೂಡ ತುಂಬಾ ನೆರವಾಗುವುದು.
ಜೀರಿಗೆ ಹೆಚ್ಚಾಗಿ ಏಶ್ಯಾದಲ್ಲಿ ಬಳಕೆಯಾಗುವಂತಹ ಸಾಂಬಾರವಾಗಿದ್ದು, ಇದರಲ್ಲಿರುವ ಪ್ರಮುಖ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಗಳು ಆರೋಗ್ಯ ಕಾಪಾಡುವುದು. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ.
  • ಜೀರಿಗೆಯ ಪ್ರಯೋಜನಗಳು
ಜೀರಿಗೆಯ ಪ್ರಯೋಜನಗಳು

ಜೀರಿಗೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಅದು ದೇಹವನ್ನು ತಂಪಾಗಿಡುತ್ತದೆ ಮತ್ತು ಕೆಲವೊಂದು ಅನಾರೋಗ್ಯವನ್ನು ದೂರವಿಡುವುದು. ಜೀರಿಗೆಯು ಆಹಾರದ ನಾರಿನಾಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಹಲವಾರು ಆರೋಗ್ಯ ಲಾಭಗಳನ್ನು ಇದು ನೀಡುವುದು. ಒಂದು ಲೋಟ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಆ ದಿನವು ತುಂಬಾ ಪರಿಣಾಮಕಾರಿ ಆಗಿರುತ್ತದೆ. ನೀವು ಆರೋಗ್ಯವಾಗಿಯೂ ಇರಬಹುದು. ಜೀರಿಗೆ ನೀರಿನಿಂದ ಸಿಗುವ ಕೆಲವು ಲಾಭಗಳ ಬಗ್ಗೆ ನೀವು ತಿಳಿಯಿರಿ.

ಖಾಲಿ ಹೊಟ್ಟೆಗೆ ಬೆಲ್ಲ ಬೆರೆಸಿದ ಜೀರಿಗೆ ನೀರು ಕುಡಿದ್ರೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಜೀರ್ಣಕ್ರಿಯೆ ಸುಧಾರಿಸುವುದು

ಜೀರ್ಣಕ್ರಿಯೆ ಸುಧಾರಿಸುವುದು

ಒಂದು ಲೋಟ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಜೀರ್ಣಕ್ರಿಯೆಯು ವೃದ್ಧಿಸುವುದು ಮತ್ತು ಹೊಟ್ಟೆಯ ಸಮಸ್ಯೆಯನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡಬಹುದು. ಯಾಕೆಂದರೆ ಜೀರಿಗೆಯಲ್ಲಿ ಕೆಲವೊಂದು ಪ್ರಮುಖ ಸಾರಭೂತ ತೈಲಗಳು ಮತ್ತು ಪೋಷಕಾಂಶ ಗಳಾಗಿರುವಂತಹ ಮೆಗ್ನಿಶಿಯಂ, ಸೋಡಿಯಂ ಇದ್ದು, ಜೀರ್ಣಕ್ರಿಯೆಗೆ ಸಹಕಾರಿ ಆಗಿರುವುದು. ಜೀರಿಗೆಯು ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುವುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗಿರುವಂತಹ ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ವಾಕರಿಕೆ ನಿವಾರಣೆ ಮಾಡುವುದು.

ಪ್ರತಿರೋಧಕ ಶಕ್ತಿ ವೃದ್ಧಿ

ಪ್ರತಿರೋಧಕ ಶಕ್ತಿ ವೃದ್ಧಿ

ಕಬ್ಬಿನಾಂಶ ಮತ್ತು ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಜೀರಿಗೆಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದರ ಜತೆಗೆ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಜೀರಿಗೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಎ ಮತ್ತು ಸಿ ಇದೆ. ಇವುಗಳು ಆಂಟಿಆಕ್ಸಿಡೆಂಟ್ ಗಳಾಗಿ ಕೆಲಸ ಮಾಡಿ ಸೋಂಕು ವಿರುದ್ಧ ಹೋರಾಡುವುದು.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಮನೆ ಮದ್ದುಗಳು

ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಸಹಕಾರಿ

ಖಾಲಿ ಹೊಟ್ಟೆಯಲ್ಲ ಜಲ ಜೀರ ಕುಡಿದರೆ ಅದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಲಿದೆ. ಯಾಕೆಂದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಆಗಲು ನೆರವಾಗುವುದು.

ಜೀರಗೆಯಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ. ಜೀರಿಗೆಯು ಚಯಾಪಚಯವನ್ನು ಹೆಚ್ಚಿಸಿ ಕ್ಯಾಲರಿ ದಹಿಸುವಂತೆ ಮಾಡುವುದು ಮತ್ತು ವೇಗವಾಗಿ ತೂಕ ಇಳಿಸಲು ಇದು ಸಹಕಾರಿ ಆಗಿರುವುದು.

ಉಸಿರಾಟದ ಸಮಸ್ಯೆ ನಿವಾರಿಸುವುದು

ಉಸಿರಾಟದ ಸಮಸ್ಯೆ ನಿವಾರಿಸುವುದು

ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣ ಹೊಂದಿರುವಂತಹ ಜೀರಿಗೆಯು ಉಸಿರಾಟದ ಸಮಸ್ಯೆಗೆ ತುಂಬಾ ಪರಿಣಾಮಕಾರಿ ಮನೆ ಮದ್ದು ಆಗಿದೆ.

ಇದು ಅಸ್ತಮಾ ಮತ್ತು ಬ್ರಾಂಕೈಟಿಸ್ ಗೆ ಪರಿಣಾಮಕಾರಿ ಆಗಿರುವುದು. ಕಫಗಟ್ಟುವುದನ್ನು ನಿವಾರಿಸು ವಂತಹ ಅಂಶವು ಜೀರಿಗೆಯಲ್ಲಿದೆ ಮತ್ತು ಇದು ಉಸಿರಾಟದ ವ್ಯವಸ್ಥೆಯನ್ನು ಕಫ ನಿಲ್ಲುವುದನ್ನು ತಡೆಯುವುತ್ತದೆ.

ಉಬ್ಬಸ ಸಮಸ್ಯೆಗೆ ಮನೆ ಮದ್ದು

ಸಾಮಾನ್ಯ ಶೀತ ವಿರುದ್ಧ ಹೋರಾಡುವುದು

ಸಾಮಾನ್ಯ ಶೀತ ವಿರುದ್ಧ ಹೋರಾಡುವುದು

ಜೀರಿಗೆಯಲ್ಲಿ ಇರುವಂತಹ ಕೆಲವೊಂದು ಸಾರಭೂತ ಎಣ್ಣೆಗಳು ವೈರಲ್ ಸೋಂಕಿನಿಂದಾಗಿ ಉಂಟಾಗುವ ಸಾಮಾನ್ಯ ಶೀತದಿಂದ ಕಾಪಾಡುವುದು. ಜೀರಿಗೆಯಲ್ಲಿ ಇರುವ ವಿಟಮಿನ್ ಸಿ ಪ್ರತಿರೋಧಕ ವ್ಯವಸ್ಥೆ ಬಲಪಡಿಸಲು ತುಂಬಾ ಪರಿಣಾಮಕಾರಿ ಮನೆಮದ್ದು ಆಗಿದೆ.

ಅಗತ್ಯವಿರುವ ಪದಾರ್ಥಗಳು

  • 2 ಚಿಕ್ಕ ಚಮಚ ಜೀರಿಗೆ
  • 1 ಕಪ್ ನೀರು

ತಯಾರಿಸುವ ವಿಧಾನ
*ಎರಡು ಚಿಕ್ಕ ಚಮಚ ಜೀರಿಗೆ ಬೀಜವನ್ನು ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ನೆನೆಸಿಡಿ.
*ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಮಣ್ಣಿನ ಹಳದಿ ಬಣ್ಣಕ್ಕೆ ತಿರುಗಿರುವ ಈ ನೀರನ್ನು ಸೇವಿಸಿ

ಜೀರಿಗೆ, ನೀರು ಮತ್ತು ನಿಂಬೆ ಪಾನೀಯ ವಿಧಾನ

ಜೀರಿಗೆ, ನೀರು ಮತ್ತು ನಿಂಬೆ ಪಾನೀಯ ವಿಧಾನ

ಅಗತ್ಯವಿರುವ ಪದಾರ್ಥಗಳು
1 ಚಿಕ್ಕ ಚಮಚ ಜೀರಿಗೆ
ಅರ್ಧ ಲಿಂಬೆ
1 ಕಪ್ ನೀರು

ತಯಾರಿಸುವ ವಿಧಾನ
ಎರಡು ಚಿಕ್ಕ ಚಮಚ ಜೀರಿಗೆಯನ್ನು ಒಂದು ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ.
ಬೆಳಿಗ್ಗೆ, ನೀರನ್ನು ಸೋಸಿ ಈ ನೀರಿಗೆ ಅರ್ಧ ಲಿಂಬೆಯ ರಸವನ್ನು ಹಿಂಡಿ ಬೆರೆಸಿ
ಚೆನ್ನಾಗಿ ಬೆರೆಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಕುಡಿಯಿರಿ.
ನಿಂಬೆ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುವ ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ, ತನ್ಮೂಲಕ ಹೆಚ್ಚುವರಿ ಪ್ರಯೋಜನವನ್ನು ಪಡೆಯಬಹುದು.

Monday, 20 November 2023

ಈ ರೋಗಿಗಳು ಮಾವಿನಹಣ್ಣನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬೇಡಿ!

ಮಾವಿನಹಣ್ಣು ಕೇವಲ ರುಚಿಕರವಾದ ಹಣ್ಣಲ್ಲ, ಅವು ಉತ್ಕರ್ಷಣ ನಿರೋಧಕಗಳು, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಎದುರಾಗುವ ಸಮಸ್ಯೆಗಳಿಂದಲೂ ರಕ್ಷಣೆ ನೀಡುವ ಸಾಮರ್ಥ್ಯ ಇದಕ್ಕಿದೆ. ಸಾಮಾನ್ಯವಾಗಿ ಮಾವಿನ ಹಣ್ಣುಗಳು ಆ ಋತುವಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ನೀವು ಮಾವಿನ ಹಣ್ಣಿನ ಪ್ರಿಯರೇ? ಮಾವಿನ ಸೀಸನ್ ಪ್ರಾರಂಭವಾದಾಗ ನೀವು ಪ್ರತಿದಿನ ಮಾವಿನ ಹಣ್ಣನ್ನು ಸವಿಯುತ್ತೀರಾ? ಹಾಗಾದರೆ ಈ ವಿಚಾರವನ್ನು ನೀವು ತಿಳಿದಿರಲೇಬೇಕು. ಅನೇಕ ಮಾವು ಪ್ರಿಯರು ಮಾವಿನಹಣ್ಣು ತಿನ್ನುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ನೀವು ಈ ತಪ್ಪುಗಳನ್ನು ತಪ್ಪಿಸಿದರೆ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಹಾಗಾದರೆ ಮಾವಿನಹಣ್ಣು ತಿನ್ನುವಾಗ ಮಾಡಬಾರದ ತಪ್ಪುಗಳು ಯಾವುವು ಎಂಬುದನ್ನು ಈಗ ನೋಡೋಣ.

Friday, 3 July 2020

ಕಫ, ಗಂಟಲು ಬಾಧೆ ಮತ್ತು ಮಂಡಿ ನೋವು ಜೀವನದಲ್ಲಿ ಮತ್ತೆ ಯಾವತ್ತೂ ಬರಬಾರದು ಅಂದ್ರೆ ಈ ನಾಟಿಮದ್ದು ರಾಮಬಾಣ

ಗಂಟಲು ನೋವು ಕಫ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ಮನೆಮದ್ದು. ಇದನ್ನು  ಹೇಗೆ ಬಳಸಬೇಕು ಗೊತ್ತಾ. 
ಒಂದೇ ದಿನದಲ್ಲಿ ಶೀತ, ಕೆಮ್ಮು, ಕಫ ...
ಗಂಟಲು ನೋವು ಇದ್ದರೆ ನೀರಿಗೆ ಅರ್ಧ ಹೋಳು ನಿಂಬೆ ರಸ ಒಂದು ಚಮಚ ಸೈಂಧವ ಉಪ್ಪು ಮತ್ತು ಒಂದು ಚಮಚ ಸಾಸಿವೆಯನ್ನು ಹಾಕಿ 10 ನಿಮಿಷ ಕುದಿಸಿ. ಬೆಚ್ಚಗಾದ ನಂತರ ಈ ನೀರನ್ನು ಬಾಯಿಗೆ ಹಾಕಿ ಗಾರ್ಗಲ್‌ ಮಾಡಿದರೆ ನೋವು ಬೇಗ ಶಮನವಾಗುತ್ತದೆ.
ಮಕ್ಕಳಿಗೆ ಒಣ ಕೆಮ್ಮು ಬರದ ಹಾಗೇ ತಡೆಯಲು ...

ಒಂದು ಚಮಚ ಹಳದಿ ಸಾಸಿವೆ ಪೇಸ್ಟ್‌ ಅನ್ನು ಸೇವಿಸಿ ಮೇಲೆ ಬಿಸಿ ನೀರು ಕುಡಿದರೆ ಸ್ನಾಯು ಸೆಳೆತ ನಿವಾರಣೆಯಾಗುತ್ತದೆ. ಮಂಡಿ ನೋವಿದ್ದರೆ ಒಂದು ಕಪ್‌ ಸಾಸಿವೆಯನ್ನು ಬಿಸಿ ನೀರಲ್ಲಿ ಕಲಸಿ ಬಟ್ಟೆ ಮೇಲೆ ಲೇಪಿಸಿ ಅದನ್ನು ನೋವಿರುವ ಮಂಡಿಗಳಿಗೆ ಕಟ್ಟಿದರೆ ನೋವು ಬೇಗ ಕಡಿಮೆಯಾಗುತ್ತದೆ.

ಕರಿ ಸಾಸಿವೆ ಬೀಜವನ್ನು ನೀರಿನೊಂದಿಗೆ ಪೇಸ್ಟ್‌ ಮಾಡಿ ಹುಳುಕಡ್ಡಿ ಆದ ಚರ್ಮದ ಮೇಲೆ ದಿನಕ್ಕೆ 3 ರಿಂದ 4 ಬಾರಿ ಲೇಪಿಸಿದರೆ ಹುಳುಕಡ್ಡಿ ಸಮಸ್ಯೆ ನಿವಾರಣೆಯಾಗುತ್ತದೆ. ಹೆಚ್ಚು ಸಮಯ ನಿಂತು ಕೆಲಸ ಮಾಡಿ ಪಾದಗಳ ನೋವಿದ್ದರೆ ಸಾಸಿವೆ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಆ ನೀರಲ್ಲಿ ಎರಡು ಕಾಲುಗಳನ್ನು ಇಟ್ಟುಕೊಂಡರೆ ನೋವು ಬೇಗ ಕಡಿಮೆಯಾಗುತ್ತದೆ.
ಎದೆಯಲ್ಲಿ ಕಫ ಹೆಚ್ಚು ಕಟ್ಟಿದ್ದರೆ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಎದೆ ಮತ್ತು ಬೆನ್ನಿಗೆ ಮಸಾಜ್‌ ಮಾಡಿದರೆ ಕಫ ಕರಗಿ ದಮ್ಮು, ಕೆಮ್ಮು ಶಮನವಾಗುತ್ತದೆ.

ಮಕ್ಕಳು ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ ಹಳದಿ ಸಾಸಿವೆಯನ್ನು ಹುರಿದು ಪುಡಿ ಮಾಡಿ. ಅರ್ಧ ಚಮಚ ಪುಡಿಯನ್ನು ಒಂದು ಲೋಟ ಬಿಸಿ ಹಾಲಿಗೆ ಹಾಕಿ ಕಲಸಿ ಮಲಗುವ ಮುಂಚೆ ಮಕ್ಕಳಿಗೆ ಕುಡಿಸಿದರೆ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುವುದು ಕಡಿಮೆಯಾಗುತ್ತದೆ.

Thursday, 2 July 2020

ನಿಂತುಕೊಂಡೇ ನೀರು ಸೇವಿಸುವ ಅದೆಷ್ಟೋ ಮಂದಿಗೆ ಈ ಘೋರ ಸತ್ಯ ತಿಳಿದಿಲ್ಲ., ವೈದ್ಯಲೋಕ ಹೇಳಿದ ಭಯಂಕರ ಸತ್ಯ ಇದು.!

ಮಾನವನ ದೇಹದ 75 ಪ್ರತಿಶತ ಭಾಗ ನೀರಿನಿಂದ ಮಾಡಲ್ಪಟ್ಟಿದೆ ಎಂದು ವಿಜ್ಞಾನ ಹೇಳುತ್ತದೆ, ನೀರು ನಮ್ಮ ದೇಹಕ್ಕೆ ಅತೀ ಅವಶ್ಯಕ, ದೇಹದ ಶೇ 75ರಷ್ಟು ಭಾಗದಲ್ಲಿ ನೀರಿರುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ನೀರು ಕುಡಿಯುವುದರಿಂದ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದು, ದೇಹದಲ್ಲಿನ ನೀರು ರಕ್ತ ಸಂಚಾರವನ್ನು ಹೆಚ್ಚಿಸುವುದಲ್ಲದೆ ಆಹಾರದಿಂದ ಪಡೆದಿರುವಂತಹ ಪ್ರಮುಖ ಪೋಷಕಾಂಶಗಳನ್ನು ವಿವಿಧ ಅಂಗಾಂಗಗಳು ಹಾಗೂ ಕೋಶಗಳಿಗೆ ತಲುಪಿಸುವಂತಹ ಕೆಲಸವನ್ನು ನೀರು ಮಾಡುತ್ತದೆ. 
Water Purifier A Safeguard Initiative To A Healthy Life | Blogging ...
ಸಾಮಾನ್ಯ ಸ್ಥಿತಿಯಲ್ಲಿ ಇದು 71% ರಷ್ಟಿರುತ್ತದೆ, ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿ ಬೇಕೇ ಬೇಕು ಮತ್ತು ನೀರಿಲ್ಲದ ಪರಿಸ್ಥಿತಿಯನ್ನು ನಿರ್ಜಲೀಕರಣ ಎಂದು ಕರೆಯಲಾಗುತ್ತದೆ ಹಾಗೂ ಈ ಸ್ಥಿತಿಯಲ್ಲಿ ದೇಹದ ಪ್ರಮುಖ ಅಂಗಗಳಿಗೆ ನೀರಿನ ಪೂರೈಕೆಯಾಗದೇ ಇವು ಒಣಗತೊಡಗುತ್ತವೆ ಮತ್ತು ಪ್ರತಿ ಅಂಗಾಂಶ ಕಾರ್ಯನಿರ್ವಹಿಸಲು ನೀರು ಬೇಕು.
Hyper Hydration : Can you benefit? - BodyWorx Physiotherapy
ಜೀವಕೋಶದ ಹಂತದಲ್ಲಿ ನೀರನ್ನು ಬಳಸಿಕೊಂಡು ಆರೋಗ್ಯ ಕಾಪಾಡುತ್ತದೆ ಅಷ್ಟೇ ಅಲ್ಲದೆ ರಕ್ತದ ಮೂಲಕ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಕೊಂಡೊಯ್ಯಲೂ ನೀರು ಬೇಕು ಆದರೆ ಎಷ್ಟೋ ಜನರಿಗೆ ನೀರು ಕುಡಿಯುವ ಸರಿಯಾದ ವಿಧಾನವೇ ತಿಳಿದಿಲ್ಲ. ಬಹಳ ಜನರಿಗಿರುವ ಒಂದು ಕೆಟ್ಟ ಹವ್ಯಾಸ ಎಂದರೆ ಅದು ನಿಂತುಕೊಂಡು ನೀರು ಕುಡಿಯುವುದು ಆದರೆ ವಿಜ್ಞಾನದ ಹಲವು ಸಂಶೋಧನೆಗಳ ಪ್ರಕಾರ ನಿಂತುಕೊಂಡು ನೀರು ಕುಡಿಯುವುದು ದೇಹಕ್ಕೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಹಾಗಾದರೆ ನಿಂತುಕೊಂಡು ನೀರು ಕುಡಿಯುವುದರಿಂದ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ನಿಂತುಕೊಂಡು ನೀರು ಕುಡಿಯುತ್ತಿದ್ದರೆ ಇಂದೇ ಅದನ್ನ ನಿಲ್ಲಿಸುವುದು ಬಹಳ ಒಳ್ಳೆಯದು.
Ways In Which You're Drinking Water Wrong - Boldsky.com
ಹೌದು ತಜ್ಞರು ಹೇಳುವ ಪ್ರಕಾರ ನಾವು ನಿಂತು ನೀರು ಕುಡಿಯಲೇ ಬಾರದು ಇದರಿಂದ ದೇಹಕ್ಕೆ ಬಹಳ ಅಪಾಯಗಳಾಗಬಹುದು. ನಿಂತು ನೀರು ಕುಡಿಯುವುದರಿಂದ ಜೀರ್ಣದ ಸಮಸ್ಯೆ ಎದುರಾಗಬಹುದು ಮತ್ತು ನರಮಂಡಲದಲ್ಲಿ ಒತ್ತಡ ಹೆಚ್ಚಾಗುತ್ತದೆ ಹಾಗೆ ಹೃದಯ ಹಾಗೂ ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದಲ್ಲ. ಇನ್ನು ನಿಂತುಕೊಂಡು ನೀರು ಕುಡಿಯುವಾಗ ಅನ್ನನಾಳದ ಮೂಲಕ ನೀರು ವೇಗವಾಗಿ ಸಾಗುವುದರಿಂದ ಅನ್ನನಾಳಕ್ಕೆ ಹಾನಿಯಾಗುತ್ತದೆ. ನಿಂತುಕೊಂಡು ಈ ರೀತಿ ನೀರನ್ನು ಕುಡಿಯುವುದರಿಂದ ನಿಮ್ಮ ಬಾಯಾರಿಕೆ ತಣಿಯುವುದಿಲ್ಲ ಮತ್ತು ನೀರು ನೇರವಾಗಿ ಹಾದು ಹೋಗುವುದರಿಂದ ಅಗತ್ಯವಿರುವ ಪೋಷಕಾಂಶಗಳು ಮತ್ತು ಜೀವಸತ್ವಗಳು ಯಕೃತ್ತು ಮತ್ತು ಜೀರ್ಣಾಂಗವ್ಯೂಹವನ್ನು ತಲುಪುವುದಿಲ್ಲ.

ಕೇವಲ ವಿಜ್ಞಾನ ಮಾತ್ರವಲ್ಲ ನಮ್ಮ ಆಯುರ್ವೇದ ಶಾಸ್ತ್ರದಲ್ಲೂ ಕೂಡ ನಿಂತುಕೊಂಡು ನೀರು ಕುಡಿಯುವುದನ್ನು ಅಪಾಯ ಎಂದು ಸೂಚಿಸಲಾಗಿದೆ. ನಿಂತು ನೀರು ಕುಡಿದಾಗ ರಭಸವಾಗಿ ಗಂಟಲಿನಿಂದ ಇಳಿಯುವ ನೀರು ಅನ್ನನಾಳ ಹಾಗೂ ಹೊಟ್ಟೆ ಕೂಡುವ ಸ್ಥಳದಲ್ಲಿ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ ಇದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ಹೊಟ್ಟೆ ನೋವು ಬರಬಹುದು. ನೀರು ಒಮ್ಮೆಲೆ ದೇಹ ಸೇರಿದರೆ ಕಿಡ್ನಿಗೆ ಕೆಲಸದ ಒತ್ತಡ ಉಂಟಾಗಿ ನೀರನ್ನು ಸರಿಯಾಗಿ ಸೋಸಲು ಆಗುವುದಿಲ್ಲ ಮತ್ತು ಇದರಿಂದ ಕಿಡ್ನಿಗೆ ಹಾನಿಯಾಗಬಹುದು.

ಸ್ನೇಹಿತರೆ ನೀವು ಸಾಧ್ಯವಾದಷ್ಟು ದಣಿವಾದಾಗ ಅಥವಾ ಬಾಯಾರಿಕೆಯಾದಾಗ ಆತುರದಲ್ಲಿ ನೀರು ಕುಡಿಯಬೇಡಿ ಮತ್ತು ನಿಧಾನವಾಗಿ ಕುಳಿತುಕೊಂಡು ನೀರನ್ನು ಕುಡಿಯಿರಿ ಇದರಿಂದ ದೇಹಕ್ಕೆ ಬಹಳ ಒಳ್ಳೆಯದು.

ಅಳುವುದರಿಂದ ನಮಗಾಗುವ ಪ್ರಯೋಜನ ಕೇಳಿದರೆ ಶಾಕ್ ಆಗ್ತೀರಾ, ತುಂಬಾ ಜನರಿಗೆ ಅಳುವಿನ ರಹಸ್ಯ ಗೊತ್ತಿಲ್ಲ..!

ಅಳು ಹುಟ್ಟಿನಿಂದಲೇ ನಮ್ಮ ಸಂಗಾತಿ, ನಾವು ಮಕ್ಕಳಾಗಿದ್ದಾಗ ನಮ್ಮ ಭಾವನಾತ್ಮಕ, ಶಾರೀರಿಕ ಅವಶ್ಯಕತೆಗಳಿಗಾಗಿ ಅಳುತ್ತಿದ್ದೆವು, ಇನ್ನು ಭಾವನಾತ್ಮಕ ಕಣ್ಣೀರು ಉಕ್ಕಿ ಬರಲು ಅನೇಕ ಕಾರಣಗಳಿವೆ. ದುಃಖ, ನಿರಾಶೆ, ದೈಹಿಕ ಅಥವಾ ಮಾನಸಿಕ ವೇದನೆ ಇವೆಲ್ಲಾ ನಾವು ಕಣ್ಣೀರಿಡುವಂತೆ ಮಾಡುತ್ತವೆ, 
ಮಹಿಳೆಯರು ವರ್ಷಕ್ಕೆ ಎಷ್ಟು ಬಾರಿ ...
ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ಬರಿಸುತ್ತವೆ, ಆದರೆ ಇವು ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ, ನಿಮಗೆ ಗೊತ್ತಿರಲು ಸಾಧ್ಯವಿಲ್ಲ ಅಳುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಅಮೆಕದ ವಿಜ್ಞಾನಿಗಳು ನಡೆಸಿದ ಹಲವು ಸಂಶೋಧನೆಗಳು ಈ ಬಗ್ಗೆ ಸತ್ಯ ಹೇಳಿದೆ. ಹಾಗಾದರೆ ಅಳುವುದರಿಂದ ದೇಹದಕ್ಕೆ ಆಗುವ ಲಾಭಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಮತ್ತೆ ಮತ್ತೆ ಅಳುವುದೂ ಒಂದು ಮನೋರೋಗ
ಹೌದು ಅಳುವುದರಿಂದ ಈ ಐದು ಅರೋಗ್ಯ ಸಮಸ್ಯೆಯನ್ನು ದೂರಮಾಡಬಹುದು ಎಂದು ಈ ಅಧ್ಯಯನ ತಿಳಿಸಿದೆ, ಸಮಾಜವು ಸಾಮಾನ್ಯವಾಗಿ ಅಳುವುದನ್ನು ದೌರ್ಬಲ್ಯದ ಸಂಕೇತವಾಗಿ ನೋಡುತ್ತದೆ ಆದರೆ ನೀವು ಅಳಬೇಕು ಎಂದು ನಿಮಗೆ ಅನಿಸಿದರೆ ನಿಮ್ಮ ಕಣ್ಣೀರನ್ನು ತಡೆಹಿಡಿಯಬೇಡಿ ಮತ್ತು ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಳುವಿನ ಈ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಹೆಚ್ಚು ಸ್ಟ್ರೆಸ್ ಅಥವಾ ಒತ್ತಡದ ಸಂದರ್ಭದಲ್ಲಿ ಅಳುವುದು ಬಹಳ ಒಳ್ಳೆಯು ಎನ್ನಬಹುದು, ಒತ್ತಡದ ಸಂದರ್ಭದಲ್ಲಿ ಕಣ್ಣೀರು ಸುರಿಸುವುದರಿಂದ ರಿಲ್ಯಾಕ್ಸ್ ಆಗಬಹುದು ಎಂದು ಸಂಶೋಧನೆ ತಿಳಿಸಿದೆ ಮತ್ತು ಆ ಕ್ಷಣಕ್ಕೆ ಇದರ ಪರಿಣಾಮ ತಿಳಿಯದಿದ್ದರೂ ಸ್ವಲ್ಪ ಸಮಯದ ನಂತರ ದೇಹ ವಿಶ್ರಾಂತಿ ಪಡೆಯಲು ಅಳು ಸಹಕಾರಿ.
ಸಂಶೋಧಕರ ಪ್ರಕಾರ ಅಳುವುದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು (ಪಿಎನ್‌ಎಸ್) ಸಕ್ರಿಯಗೊಳಿಸುತ್ತದೆ, ಸಕ್ರಿಯಗೊಳಿಸಿದಾಗ ಪಿಎನ್ಎಸ್ ಮೆದುಳಿನ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ಎರಡನೆಯದಾಗಿ ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಹೃದಯಾಘಾತ, ಹೃದಯ ವೈಫಲ್ಯ, ಬುದ್ಧಿಮಾಂದ್ಯತೆ ಮತ್ತು ಮೂತ್ರಪಿಂಡದ ವೈಫಲ್ಯದಂತಹ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಆದರೆ ಒಳ್ಳೆಯ ಸುದ್ದಿ ಏನೆಂದರೆ ಹಲವಾರು ಅಧ್ಯಯನಗಳ ಪ್ರಕಾರ, ಅಳುವುದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅಳುವುದು ನಾಡಿಯನ್ನು ಸ್ಥಿರಗೊಳಿಸುತ್ತದೆ. ಮೂರನೆಯದಾಗಿ ಸಂಶೋಧನೆಗಳ ಪ್ರಕಾರ ಭಾವನಾತ್ಮಕವಾಗಿ ಬರುವಂತಹ ಕಣ್ಣೀರಿನಲ್ಲಿ ಕೆಲವೊಂದು ವಿಷಕಾರಿ ಅಂಶಗಳು ಇರುತ್ತದೆ ಇದರಿಂದ ಅಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.
Sandhyadeepa…. – ಪುಟ 127 – ನೆನಪು ...
ಇಷ್ಟೇ ಅಲ್ಲದೆ ಅಳುವಾಗ ನಿಮ್ಮ ಕಣ್ಣಿನಿಂದ ಹರಿಯುವ ಕಣ್ಣೀರು ಕಣ್ಣುಗಳಿಂದ ಹೊಗೆ ಮತ್ತು ಧೂಳಿನಂತಹ ಅಂಶಗಳನ್ನು ತೆಗೆದುಹಾಕುತ್ತದೆ, ಇದರಿಂದಾಗಿ ಹಗುರವಾದ ಮನಸ್ಥಿತಿ ಉಂಟಾಗುತ್ತದೆ. ನಾಲ್ಕನೆಯದಾಗಿ ಅಳುವುದರಿಂದ ಸಿಗುವ ಮತ್ತೊಂದು ಉಪಯೋಗ ಎಂದರೆ ಅಳುವ ಮತ್ತೊಂದು ಆರೋಗ್ಯ ಲಾಭವೆಂದರೆ ಅದು ಕಣ್ಣಿಗೆ ತೇವಾಂಶವನ್ನು ನೀಡುತ್ತದೆ, ಅಳುವುದರಿಂದ ಕಣ್ಣು ಒಣಗುವುದು, ಕೆಂಪಾಗುವುದು ಮತ್ತು ತುರಿಕೆಯನ್ನು ತಡೆಯುವಲ್ಲಿ ಸಹಕರಿಸುತ್ತದೆ. ಕೊನೆಯದಾಗಿ ನೋವನ್ನು ಕಡಿಮೆ ಮಾಡಲು ಅಳು ಸಹಕಾರಿ ಎಂದು ಸಂಶೋಧನೆ ಹೇಳುತ್ತದೆ, ನಾವು ದೈಹಿಕವಾಗಿ ನೋವಲ್ಲಿದ್ದಾಗ ಕೂಡ ಕೆಲವೊಮ್ಮೆ ಕಣ್ಣೀರು ಹೊರಬರುತ್ತದೆ ಮತ್ತು ನೋವು ಸಂವೇದನೆಯನ್ನು ಕಡಿಮೆ ಮಾಡುವ ದೇಹದ ವಿಧಾನ ಇದು. ಹೀಗೆ ಅಳುವುದಂದ ಕಣ್ಣೀರು ಸುರಿಸುವುದರಿಂದ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ಗಳು ಬಿಡುಗಡೆಯಾಗುತ್ತವೆ. ಇವುಗಳು ಮನಸ್ಸನ್ನು ಹಗುರಗೊಳಿಸಿ ಮನಸ್ಥಿತಿಯನ್ನು ಸುಧಾರಿಸುತ್ತದೆ, ದಯವಿಟ್ಟು ಈ ಉತ್ಮ ವಿಷಯವನ್ನು ಎಲ್ಲರಿಗು ತಿಳಿಸುವ ಜವಾಬ್ದಾರಿ ನಿಮ್ಮದು.

ಹೀಗೆ ಮಾಡಿದ್ರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು
ಜೀವನದಲ್ಲಿ ಎಂದಿಗೂ ಕಿಡ್ನಿ ಸಮಸ್ಯೆ ಕಾಡಬಾರದು ಎಂದರೆ ಹೀಗೆ ಮಾಡಿ

Wednesday, 1 July 2020

ಭಾರೀ ಬೇಡಿಕೆ ಉಂಟಾಗಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳು.!


ಕೊರೋನಾ ಸೋಂಕಿನ ಭಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕಿತರು ನಾನಾ ಆಸ್ಪತ್ರೆಗಳಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕೊರೋನಾ ಬಾರದಂತೆ ತಡೆಯೋದು ಹೇಗೆ? ಸೋಂಕು ಇಲ್ಲದವರು ವೈರಸ್ ತಮ್ಮ ಹತ್ತಿರಕ್ಕೂ ಬಾರದಂತೆ ತಡೆಯೋಕೆ ಮಾರ್ಗಗಳಿವೆಯಾ? ಇದೆ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು. ಯಾವೆಲ್ಲಾ ಗಿಡಮೂಲಿಕೆಗಳು, ಹಣ್ಣು, ತರಕಾರಿಗಳು ಈ ವಿಚಾರದಲ್ಲಿ ಆರೋಗ್ಯಕ್ಕೆ ಸಹಕಾರಿ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ...
ಕೋವಿಡ್ ಮಣಿಸಲು ಆಯುರ್ವೇದ‌ ಔಷಧ ಪ್ರಯೋಗ ...

ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಯಾವ ಕಾಯಿಲೆಯೂ ನಮ್ಮನ್ನು ಬಾಧಿಸುವುದಿಲ್ಲ. ಅದರಲ್ಲೂ ಕೊರೋನಾ ವೈರಸ್ ಸೋಂಕಂತೂ ಹತ್ತಿರಕ್ಕೂ ಸುಳಿಯುವುದಿಲ್ಲ. ಹಾಗಾಗಿ, ಕೊರೋನಾದಿಂದ ಬಚಾವಾಗಬೇಕು ಎಂದರೆ ಮೊದಲು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಾನಾ ಔಷಧಿಗಳಿವೆ. ತಮ್ಮ ಹತ್ತಿರದವರು ಯಾರಿಗೂ ಕೊರೋನಾ ಇಲ್ಲದಿದ್ದರೂ ನಮ್ಮ ರೋಗ ನಿರೋಧಕ ಶಕ್ತಿ ಉತ್ತಮ ಮಾಡಿಕೊಳ್ಳುವುದರ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ಕೊರೋನಾ ಕಾಡುವ ಚಾನ್ಸೇ ಇಲ್ಲವಾಗುತ್ತದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಅರಿಶಿನ, ಮೆಣಸಿನಕಾಳು, ಅಮೃತಬಳ್ಳಿ ಮುಂತಾದ ಒಂದಷ್ಟು ಪದಾರ್ಥಗಳು ದೊಡ್ಡ ಮಟ್ಟಿಗೆ ಪ್ರಯೋಜನಕಾರಿಯಾಗಬಲ್ಲವು. ಪ್ರತಿದಿನ ಶುಂಠಿ, ತುಳಸಿ ಮುಂತಾದ ವಸ್ತುಗಳನ್ನು ಕಷಾಯದ ರೂಪದಲ್ಲಿ ಬಳಸುವುದು ಕೂಡ ಅತ್ಯುತ್ತಮ ಪರಿಹಾರ. ಮನೆ ಮತ್ತು ಸುತ್ತಲಿನ ಸ್ಥಳದ ಸ್ವಚ್ಛತೆ ಕಾಪಾಡಿಕೊಳ್ಳುವುದರ ಬಗ್ಗೆಯೂ ಗಮನ ಹರಿಸಬೇಕು. ಧೂಳು, ಕಲುಷಿತ ವಾತಾವರಣ, ತಣ್ಣಗಿನ ನೀರು ಮತ್ತು ಆಹಾರಗಳಿಂದ ದೂರವಿರಬೇಕು. ಫ್ರೆಶ್ ಆಗಿ ತಯಾರಿಸಿದ ಆಹಾರವನ್ನು ಬಿಸಿಯಾಗಿಯೇ ಸೇವಿಸಬೇಕು. ಬೀದಿ ಬದಿಯ ಆಹಾರಗಳನ್ನು ಸೇವಿಸಲೇಬಾರದು. ದಾಳಿಂಬೆ, ಕಿತ್ತಳೆ, ಮೂಸಂಬಿ, ಸೇಬು ಮುಂತಾದ ಹಣ್ಣುಗಳು ಕೂಡ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಕೊರೊನಾಗೆ ಆಯುರ್ವೇದ ಔಷಧ ಕಂಡು ಹಿಡಿದೆ ...
ಮನೆಯಲ್ಲೇ ಇರುವ ನಾನಾ ಸಾಮಗ್ರಿಗಳು ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಕಾಯಿಲೆಗಳು ಯಾವುದೇ ಪ್ರಭಾವ ಬೀರದಂತೆ ತಡೆಯುತ್ತವೆ. ಅದರಲ್ಲೂ ಅಮೃತ ಬಳ್ಳಿ, ಶುಂಠಿ, ಅರಿಶಿನ ಮತ್ತು ಕಾಳು ಮೆಣಸು ವೈರಸ್​ಗಳನ್ನು ಕೊಲ್ಲುವ ಶಕ್ತಿ ಹೊಂದಿರುತ್ತವೆ. ಇದೆಲ್ಲದರ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸೂಕ್ತ ಆಹಾರ ಕೂಡ ನಿಮ್ಮ ದಿನಚರಿಯಲ್ಲಿ ಇರಬೇಕು. ಆಗ ದೇಹ ಎಲ್ಲ ಬಗೆಯ ಸೋಂಕಿನ ವಿರುದ್ಧ ಹೋರಾಡಲು ಸಜ್ಜಾಗಿರುತ್ತದೆ.

Sunday, 28 June 2020

ಉಪ್ಪು ಬಳಸಿ ಶೈನಿಂಗ್‌ ಆಕರ್ಷಕ ಕೂದಲು ಬೆಳೆಸಿಕೊಳ್ಳಿ..!



ದುಬಾರಿ ಶಾಂಪೂ ಮತ್ತು ಇತರ ಕೂದಲ ಉತ್ಪನ್ನಗಳು ನಿಮ್ಮ ಹಣವನ್ನು ಪೋಲು ಮಾಡುತ್ತಿದ್ದರೆ ಇಲ್ಲಿದೆ ಕೆಲವು ಸಲಹೆಗಳು. ಆರೋಗ್ಯಕರವಾದ ಕೂದಲನ್ನು ಪಡೆಯಲು ಬೇಕಾದ ಅಗ್ಗದ ರಹಸ್ಯ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ. ನಿಮಗೆ ಇದನ್ನು ನಂಬಲು ಅಸಾಧ್ಯ ಎಂದೆನಿಸಿದರೂ ಇದು ನಿಜ. ಆದು ಬೇರೇನಲ್ಲಾ ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವ ಉಪ್ಪು. ನಿಮ್ಮ ಕೂದಲಿನ ಆರೋಗ್ಯ ಹೆಚ್ಚಿಸಲು ಉಪ್ಪು ಸಹಾಯಕ ಎಂಬುದು ನಿಜ.

ತಲೆಹೊಟ್ಟಿಗೆ ಇರುವ ಮುಖ್ಯವಾದ ಕಾರಣ ಎಂದರೆ ಕೂದಲಿನ ಬುಡದಲ್ಲಿರುವ ಡೆಡ್ ಸ್ಕಿನ್ ಒಣಗಿ ಫ್ಲೆಕ್ಸ್ ಆಗಿ ಉದುರುವುದು. ತಲೆಯಲ್ಲಿ ಆರ್ದ್ರತೆ ಮತ್ತು ಶಿಲೀಂಧ್ರ ಕೂಡ ತಲೆಹೊಟ್ಟು ಹೆಚ್ಚುವಂತೆ ಮಾಡುತ್ತದೆ.ಅಡುಗೆಗೆ ಬಳಸುವ ಉಪ್ಪು ಕೂದಲಿನಲ್ಲಿ ಹೆಚ್ಚಾದ ಎಣ್ಣೆ ಅಂಶ ಮತ್ತು ಆರ್ಧ್ರತೆಯನ್ನು ತಡೆಯುವುದರ ಜೊತೆಗೆ ತಲೆಹೊಟ್ಟನ್ನು ಕೂಡ ನಿವಾರಿಸುತ್ತದೆ. ಉಪ್ಪು ನೀರನ್ನು ನಿಮ್ಮ ಕೂದಲಿಗೆ ಸಿಂಪಡಿಸಿ ನಿಧಾನವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಕೂದಲನ್ನು ಯಾವಾಗಲೂ ವಾಶ್ ಮಾಡುವಂತೆ ತಲೆಗೆ ಸ್ನಾನ ಮಾಡಿ ಮತ್ತು ಇದರ ಅನುಕೂಲವನ್ನು ನೋಡಿ.

ಕೂದಲು ಉದುರುವಿಕೆ ಸಾಮನ್ಯವಾಗಿ ಎಲ್ಲರಲ್ಲಿ ಕಂಡು ಬರುವ ಸಮಸ್ಯೆ. ರಾಸಾಯನಿಕ ಉತ್ಪನ್ನಗಳನ್ನು ಒಳಗೊಂಡಿರುವ ಶಾಂಪೂ ಬಳಸುವುದರಿಂದ ಕೂದಲು ಹೊಳಪನ್ನು ಕಳೆದುಕೊಳ್ಳುತ್ತದೆ. ಶಾಂಪೂವಿನ ಜೊತೆಗೆ ಸ್ವಲ್ಪ ಉಪ್ಪನ್ನು ಬಳಸುವುದರಿಂದ ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ.

ಇದು ಕೂದಲು ದಪ್ಪವಾಗಿ ಕಾಣುವುದು ಮಾತ್ರವಲ್ಲ,ದಟ್ಟವಾಗಿ ಬೆಳೆಯಲು ಕೂಡ ಸಹಕರಿಸುತ್ತದೆ. ನಿಮಗೆ ಬೇಕಾದಷ್ಟು ಶಾಂಪೂವನ್ನು ತೆಗೆದುಕೊಂಡು ಅದರ ಅರ್ಧದಷ್ಟು ಉಪ್ಪನ್ನು ಬೆರೆಸಿ. ನಿಧಾನವಾಗಿ ಮಸಾಜ್ ಮಾಡಿ ಅದನ್ನು ಸ್ವಲ್ಪ ಹೊತ್ತು ಹಾಗೇ ಬಿಟ್ಟುಬಿಡಿ. ನಂತರ ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ.

ಅತಿಯಾದ ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಸಮುದ್ರದ ಉಪ್ಪು ನೈಸರ್ಗಿಕವಾಗಿ ಮತ್ತು ಅತಿ ಕಡಿಮೆ ಮೊತ್ತದಲ್ಲಿ ದೊರೆಯುವ ಸಾಮಗ್ರಿ. ಮುಚ್ಚಿದ ರಂಧ್ರಗಳನ್ನು ತೆರೆದು ಕೂದಲು ಸರಿಯಾದ ರೀತಿಯಲ್ಲಿ ಬೆಳೆಯಲು ಇದು ಸಹಕರಿಸುತ್ತದೆ. ಸ್ವಲ್ಪ ಎಣ್ಣೆ ಮತ್ತು ಉಪ್ಪನ್ನು ತೆಗೆದುಕೊಂಡು ಕೂದಲಿನ ಬುಡದಲ್ಲಿ ಒಂದೆರಡು ವಾರ ಮಸಾಜ್ ಮಾಡಿ ನೋಡಿ. ಕೂದಲು ಬೆಳವಣಿಗೆ ಸರಾಗವಾಗಿ ಆಗುತ್ತದೆ.


ಕೂದಲು ಜಿಡ್ಡುಗಟ್ಟುವುದನ್ನು ತಡೆಯಲು ಪ್ರತಿ ಎರಡು ದಿನಕ್ಕೊಮ್ಮೆ ತಲೆಗೆ ಸ್ನಾನ ಮಾಡಬೇಕಾಗಿ ಬರುತ್ತಿದೆಯೇ? ಹಾಗಿದ್ದರೆ ಉಪ್ಪು ನಿಮ್ಮ ಸಹಾಯಕ್ಕೆ ಬರಬಹುದು. ಆರೋಗ್ಯಕರ ಕೂದಲನ್ನು ಪಡೆಯಲು ಎಣ್ಣೆ ಬಳಸುವುದು ಅಗತ್ಯ ಆದರೆ ವಿಪರೀತ ಎಣ್ಣೆಯಂಶ ಕೂಡ ಮುಜುಗರ ಉಂಟು ಮಾಡುತ್ತದೆ. ತಲೆ ಬುಡದಲ್ಲಿ ಸೆಬಾಸಿಯಸ್ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಎಣ್ಣೆ ಅಂಶವನ್ನು ಉಪ್ಪು ತಡೆಯುತ್ತದೆ. ಇದರಿಂದ ನಿಮ್ಮ ಕೂದಲಿನ ಗುಣಮಟ್ಟ ಸುಧಾರಿಸುತ್ತದೆ.

ಸೀ ಸಾಲ್ಟ್ ರಕ್ತ ಸಂಚಾರವನ್ನು ಸರಾಗಗೊಳಿಸಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಒಂದು ರೀತಿಯ ಉಪ್ಪು. ಇದರಲ್ಲಿರುವ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಬ್ರೋಮೈಡ್, ಸಲ್ಫಾರ್, ಜಿಂಕ್, ಕ್ಲೋರೈಡ್ ಇವುಗಳು ಕೂದಲಿನ ಬೆಳವಣಿಗೆ ಹೆಚ್ಚಿಸಿ ಬಲಯುತವಾಗಿಸುತ್ತದೆ. ಈ ಎಲ್ಲಾ ರೀತಿಯಲ್ಲಿ ಉಪ್ಪನ್ನು ಬಳಸುವುದರಿಂದ ಕೂದಲು ಬೆಳೆಯಲು ಅನುಕೂಲವಾಗುತ್ತದೆ. ಅಡುಗೆ ಮನೆಯಲ್ಲಿ ದೊರೆಯುವ ಈ ಉಪ್ಪನ್ನು ಬಳಸಿ ಮತ್ತು ಇದರಿಂದಾಗುವ ಮ್ಯಾಜಿಕ್ ನೋಡಿ.

Monday, 15 June 2020

ಯಾವುದೇ ಲಕ್ಷಣವಿಲ್ಲದೇ ನಿಮಗೆ ಕೊರೊನಾ ಬಂದಿರಬಹುದು ಎಚ್ಚರ..!

ಕೋವಿಡ್‌ ಸೋಂಕು ಪೀಡಿತರಲ್ಲಿ ಕೆಲವರಿಗೆ ಯಾವುದೇ ರೋಗಲಕ್ಷಣಗಳಿಲ್ಲ ಎನ್ನುವ ಸುದ್ದಿ ಕೇಳಿರಬಹುದು. ಇದು ನಿಜ. ಜಗತ್ತಿನ ಶೇ.40ರಿಂದ ಶೇ.45ರಷ್ಟು ರಷ್ಟು ಮಂದಿಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಕೋವಿಡ್‌ ಸೋಂಕು ದೃಢಪಟ್ಟಿದೆ.


ಹೀಗೆ ಕೋವಿಡ್‌ ರೋಗಲಕ್ಷಣಗಳಿಲ್ಲದೇ ಇರುyವುದು ಅಪಾಯಕಾರಿ ಎಂದು ಸಂಶೋಧನೆಯೊಂದು ಹೇಳಿದೆ.


Coronavirus causes: ಪ್ರಾಣವನ್ನೇ ತೆಗೆಯುವ ...

ಕೋವಿಡ್‌ ರೋಗಲಕ್ಷಣವಿಲ್ಲದಲ್ಲಿ ಅದು ಮನುಷ್ಯನ ದೇಹವನ್ನು ಇನ್ನಷ್ಟು ಹಾನಿ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಅಮೆರಿಕಾದ ಎರಿಕ್‌ ಟೊಪೊಲ್‌ ಮತ್ತು ಸಕ್ರಿಪ್ಸ್‌ ರಿಸರ್ಚ್‌ ಟ್ರಾನ್ಸ್‌ಲೇಷನಲ್‌ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ದತ್ತಾಂಶಗಳನ್ನು ಕಲೆ ಹಾಕಿ ಸಂಶೋಧನೆ ನಡೆಸಿದ್ದಾರೆ. ಈ ವರದಿಯನ್ನು ಆಯನಲ್ಸ್‌ ಆಫ್ ಇಂಟರ್ನಲ್‌ ಮೆಡಿಸಿನ್ಸ್‌ನಲ್ಲಿ ಪ್ರಕಟಿಸಲಾಗಿದೆ. ಸೋಂಕಿನ ಲಕ್ಷಣವಿಲ್ಲದವರೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿಸಲು ಕಾರಣವಾಗುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.



ಇದರೊಂದಿಗೆ ಸಾರ್ವತ್ರಿಕವಾಗಿ ಜನರನ್ನು ಪರೀಕ್ಷೆಗೊಳಪಡಿಸುವುದು, ಸೋಂಕಿನ ಮೂಲವನ್ನು ಗುರುತಿಸುವ, ಸಂಪರ್ಕಿತರನ್ನು ಗುರುತಿಸುವ ಕ್ರಮಗಳು ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಬಲ್ಲವು ಎಂದು ಹೇಳಲಾಗಿದೆ.


coronavirus in iraq: ಕೊರೊನಾ ಅಂಕಿಅಂಶಗಳನ್ನು ...

ಸಂಶೋಧನ ಲೇಖನದಲ್ಲಿ ಕೋವಿಡ್‌ ಪರೀಕ್ಷೆಯ ಪ್ರಾಮುಖ್ಯ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ರೋಗ ಲಕ್ಷಣಗಳು ಇಲ್ಲದಿದ್ದರೆ ಅದು ಅತ್ಯಂತ ಅಪಾಯಕಾರಿ. ಇದಕ್ಕಾಗಿ ಪರೀಕ್ಷೆಯ ಮಹತ್ವವನ್ನು ಹೇಳಲಾಗಿದೆ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ.


ಈ ಸಂಶೋಧನೆಗಾಗಿ ವಿಶ್ವದ 16 ದೇಶಗಳ ವಿವಿಧ ಪರೀಕ್ಷಾ ಕೇಂದ್ರಗಳಿಂದ ದತ್ತಾಂಶಗಳನ್ನು ಪಡೆದುಕೊಳ್ಳಲಾಗಿದೆ. ಜತೆಗೆ ನರ್ಸಿಂಗ್‌ ಹೋಂಗಳು, ಹಡಗಿನಲ್ಲಿ ಕೆಲಸ ಮಾಡುವವರು, ಜೈಲುಗಳಲ್ಲಿದ್ದವರ ಕುರಿತ ದತ್ತಾಂಶಗಳನ್ನೂ ಪಡೆದುಕೊಂಡು ಕೋವಿಡ್‌ ರೋಗ ಲಕ್ಷಣ ರಹಿತವಾಗಿರುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲದಿರುವ ಕೋವಿಡ್‌ ಪೀಡಿತರು ಸಾಮಾನ್ಯವಾಗಿ ಕಂಡು ಬಂದಿದ್ದಾರೆ ಎಂದು ಹೇಳಲಾಗಿದೆ.



ಇನ್ನು ಅಮೆರಿಕಾವೊಂದರಲ್ಲೇ ನಾಲ್ಕು ರಾಜ್ಯಗಳ 3 ಸಾವಿರ ಕೈದಿಗಳ ಮಾಹಿತಿ ಕಲೆಹಾಕಲಾಗಿದ್ದು, ಇವರಲ್ಲಿ ಶೇ.96ರಷ್ಟು ಮಂದಿ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ಸಂಶೋಧನೆ ಹೇಳಿದೆ.


ಹೀಗೆ ಯಾವುದೇ ರೋಗ ಲಕ್ಷಣಗಳಿಲ್ಲದವರು ಕೂಡ 14 ದಿನಗಳಿಗೂ ಹೆಚ್ಚಿನ ಅವಧಿಯಲ್ಲಿ ಸೋಂಕನ್ನು ಇತರರಿಗೆ ಹರಡಬಲ್ಲರು. ಇನ್ನು ದೇಹದಲ್ಲಿ ವೈರಸ್‌ ವೃದ್ಧಿಯ ಪ್ರಮಾಣ ರೋಗ ಲಕ್ಷಣ ಇರುವವರಲ್ಲೂ, ಇಲ್ಲದವರಲ್ಲೂ ಸಾಮಾನ್ಯವಾಗಿ ಒಂದೇ ರೀತಿ ಇರಬಹುದು ಎನ್ನಲಾಗಿದೆ.


ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ ...

ಅಲ್ಲದೇ ಸಂಶೋಧನೆ ವೇಳೆ ರೋಗ ಲಕ್ಷಣವಿಲ್ಲದೇ ಇರುವವರನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಗಿದ್ದು ಅವರ ಶ್ವಾಸಕೋಶದ ಕೆಲಸಗಳು ಅಸಮರ್ಪಕವಾಗಿರುವುದು ಕಂಡುಬಂದಿದೆ.


ಇಂತಹ ಸಮಸ್ಯೆಗಳನ್ನು ತಪ್ಪಿಸಲು ಎಲ್ಲರನ್ನೂ ಪರೀಕ್ಷೆಗೊಳಪಡಿಸುವುದು ಮತ್ತು ಒಂದು ನಿಗದಿತ ಕಾಲಾವಧಿಯಲ್ಲಿ ಮತ್ತೆ ಮತ್ತೆ ಪರೀಕ್ಷೆ ನಡೆಸಬೇಕಾದ ಅನಿವಾರ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.


Wednesday, 3 June 2020

ಕಿವಿಯಲ್ಲಿ ಈರುಳ್ಳಿ ತುಂಡು ಇಟ್ಟುಕೊಂಡು ಮಲಗಿದರೆ ಅದ್ಭುತ ಚಮತ್ಕಾರ

ಈ ಒಂದು ಟಿಪ್ಸ್ ಪಾಲಿಸಿದರೆ ನಿಮಗೆ ಯಾವತ್ತು ಕಿವಿಗೆ ಸಂಬಂಧಪಟ್ಟ ಸಮಸ್ಯೆಗಳು ಬರೋದಿಲ್ಲ. ಈ ಒಂದೇ ಒಂದು ಟಿಪ್ಸ್ ನಿಮ್ಮ ಕಿವಿಯ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತೆ. ಕಿವಿಯಲ್ಲಿ ಈರುಳ್ಳಿ ತುಂಡನ್ನು ಇಟ್ಟುಕೊಂಡು ಮಲಗಿದರೆ ಅಧ್ಬುತ ಚಮತ್ಕಾರ ಕಾಣಬಹುದು ಅದು ಏನು ಗೊತ್ತಾ ತಿಳಿಯಲು ಈ ಲೇಖನ ಓದಿ. ನೀವು ರಾತ್ರಿಯಲ್ಲಿ ನಿಮ್ಮ ಕಿವಿಯಲ್ಲಿ ಈರುಳ್ಳಿಯ ಒಂದು ತುಂಡು ಹಾಕಿಕೊಂಡು ಮಲಗಿದಾಗ ಏನಾಗುತ್ತದೆ ನಿಮಗೆ ಗೊತ್ತಾ? 



ಈರುಳ್ಳಿಯನ್ನು ಅನೇಕ ವಿಷಯಗಳಿಗೆ ಬಳಸಬಹುದು ಈರುಳ್ಳಿ ತಿನ್ನುವುದರ ಜೊತೆಗೇ ಅದನ್ನು ಅಡಿಗೆ ರುಚಿಯಂತೆ ಬಳಸುವರು. ಕಿವಿಯಲ್ಲಿನ ಅನೇಕ ಖಾಯಿಲೆಗಳನ್ನು ರಕ್ಷಣೆ ಪಡೆಯಲು ಈರುಳ್ಳಿಯನ್ನು ರಾತ್ರಿ ಸಮಯದಲ್ಲಿ ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಶೀತ ಕೆಮ್ಮು ಜ್ವರ ಮುಂತಾದ ಅನೇಕ ಖಾಯಿಲೆಗಳಿಂದ ರಕ್ಷಿಸಲು ಈರುಳ್ಳಿ ಪ್ರಯೋಜನಕಾರಿ ಆಗಿದೆ. ಕಿವಿಯಲ್ಲಿ ಈರುಳ್ಳಿಯ ಸಣ್ಣ ಖಾಂಡಗಳ ಇಡುವುದರ ಮೂಲಕ ಅನೇಕ ರೋಗಗಳಿಂದ ಮುಕ್ತ ಗೊಳಿಸಬಹುದು. ನೀವು ಕಿವಿ ನೋವಿನಿಂದ ಬಳಲುತ್ತಿದ್ದರೆ ಈ ಈರುಳ್ಳಿ ಅದರ ಮೇಲೆ ರಾಮ ಬಾಣದಂತೆ ಪರಿಹಾರ ನೀಡುವುದು.



ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿ ಒಳ ಭಾಗವನ್ನು ತೆಗೆದುಕೊಳ್ಳಬೇಕು ರಾತ್ರಿಯಲ್ಲಿ ನಿದ್ದೆ ಮಾಡುವ ಮೊದಲು ಕಿವಿಯ ತೆರೆದ ಪರದೆಯ ಮೇಲೆ ಈರುಳ್ಳಿಯ ಒಳ ಭಾಗವನ್ನು ಇರಿಸಿ ಬೆಳಗ್ಗೆ ಏಳುವ ಮುಂಚೆ ನಿಮ್ಮ ಕಿವಿಯ ನೋವು ಮಾಯವಾಗುವುದು ನಿಶ್ಚಿತ. ಈ ಪರಿಹಾರವನ್ನು ನೈಸರ್ಗಿಕವಾಗಿ ಬಳಸಲಾಗುತ್ತದೆ ಮತ್ತು ರಾತ್ರಿಯಲ್ಲಿ ಆಗುವ ಅನೇಕ ಕಿವಿಯ ವಿಧದ ನೋವು ಮತ್ತು ಉರಿಯನ್ನು ದೂರ ಗೊಳಿಸುತ್ತದೆ. ಈರುಳ್ಳಿ ಪಾಸ್ಫೇರಿಕ್ ಆಮ್ಲವನ್ನು ಹೊಂದಿರುತ್ತದೆ ಇದು ಯಾವುದೇ ರೀತಿಯ ಕಿವಿಯ ನೋವನ್ನು ಅಥವಾ ಉರಿತವನ್ನು ಹೊಡೆದೋಡಿಸುತ್ತೆ. ನಿಮ್ಮ ಕಿವಿಯಲ್ಲಿ ತೀವ್ರವಾದ ನೋವನ್ನೂ ಹೊಂದಿದ್ದರೆ ಅಥವಾ ಕಿವಿಯಲ್ಲಿ ಸಾಕಷ್ಟು ಪ್ರಮಾಣದ ಕಸ ತುಂಬಿದ್ದರೆ ನೀವು ಈ ಪ್ರಕಾರವಾಗಿ ಎಲ್ಲ ಸಮಸ್ಯೆಗಳಿಗೆ ತಡೆ ಹಾಕಬಹುದು. ಈರುಳ್ಳಿಯಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಪಾಸ್ಪರಿಕ್ ಆಸಿಡ್ ನಿಮ್ಮ ಕಿವಿಗಳನ್ನು ಸ್ವಚ್ಚವಾಗಿ ಮತ್ತು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ. ಇದು ಯಾವುದೇ ರೀತಿಯ ಸಮಸ್ಯೆಯ ವಿರುದ್ಧ ಪ್ರತಿರೋಧ ಶಕ್ತಿಯಂತೆ ಕಾರ್ಯವನ್ನು ಮಾಡುವುದು.



ಇದು ಅಗ್ಗದ ಮತ್ತು ಸುಲಭ ಪರಿಹಾರದ ಮಾರ್ಗವಾಗಿದೆ. ನಿಮ್ಮ ಮನೆಯಲ್ಲಿ ನೀವು ಅದನ್ನು ಸುಲಭವಾಗಿ ಬಳಸಬಹುದು ಮತ್ತು ಕಿವಿಯ ಸಮಸ್ಯೆಗೆ ಆಸ್ಪತ್ರೆಗೆ ಕೊಡುವ ಸಂಧರ್ಭ ಬರುವುದಿಲ್ಲ. ಆದರೆ ಒಂದೇ ಒಂದು ಸಮಸ್ಯೆ ಎದುರಿಸಬೇಕಾಗಿ ಬರುವುದು ಅದು ಏನೆಂದರೆ ನೀವು ರಾತ್ರಿ ಪೂರ್ತಿ ಈರುಳ್ಳಿಯ ವಾಸನೆ ಸಹಿಸಿಕೊಳ್ಳಬೇಕು ಅಷ್ಟೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಉಪಯುಕ್ತ ಅನಿಸಿದರೆ ದಯವಿಟ್ಟು ಇದನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಬಂಧುಗಳಿಗೆ ತಿಳಿಸಿರಿ ಹಾಗೂ ಈ ಆರೋಗ್ಯಕರ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ಶೇರ್ ಮಾಡಿರಿ.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...