Showing posts with label ಧಾರ್ಮಿಕ ಮಾಹಿತಿ. Show all posts
Showing posts with label ಧಾರ್ಮಿಕ ಮಾಹಿತಿ. Show all posts

Wednesday, 31 January 2024

ಭಾರತದ ಹೊರಗಿನ ಪ್ರಪಂಚದ ಅತಿ ದೊಡ್ಡ ಹಿಂದೂ ದೇವಾಲಯಗಳ ಪಟ್ಟಿ

ಭಾರತದ ಹೊರಗಿನ ಪ್ರಪಂಚದ ಅತಿ ದೊಡ್ಡ ಹಿಂದೂ ದೇವಾಲಯಗಳ ಪಟ್ಟಿ

ಭಾರತದ ಹೊರಗೆ ಇರುವ ಅತಿದೊಡ್ಡ ಮತ್ತು ಪ್ರಭಾವಶಾಲಿ ಹಿಂದೂ ದೇವಾಲಯಗಳನ್ನು ಅನ್ವೇಷಿಸಿ. ಈ ದೇವಾಲಯಗಳು ಪ್ರವಾಸಿಗರಿಗೆ ಹಿಂದೂ ಧರ್ಮದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಒಂದು ನೋಟವನ್ನು ನೀಡುತ್ತದೆ.

ಭಾರತದ ಹೊರಗಿನ ಪ್ರಪಂಚದ ಅತಿ ದೊಡ್ಡ ಹಿಂದೂ ದೇವಾಲಯಗಳ ಪಟ್ಟಿ
ಭಾರತದ ಹೊರಗಿನ ಪ್ರಪಂಚದ ಅತಿ ದೊಡ್ಡ ಹಿಂದೂ ದೇವಾಲಯಗಳ ಪಟ್ಟಿ

ಹಿಂದೂ ಧರ್ಮವು ಪ್ರಪಂಚದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದಾಗಿದೆ. ಬ್ರಿಟಾನಿಕಾ ಪ್ರಕಾರ "ಅನುಯಾಯಿಗಳು ಆಧುನಿಕ ಜಗತ್ತಿನ ಪ್ರಮುಖ ನಂಬಿಕೆಗಳಲ್ಲಿ ಒಂದಾದ, ಸುಮಾರು ಒಂದು ಶತಕೋಟಿ ಅನುಯಾಯಿಗಳನ್ನು ಹೊಂದಿರುವ ಹಿಂದೂ ಧರ್ಮವು ಪ್ರಪಂಚದ ಅತ್ಯಂತ ಹಳೆಯ ಧರ್ಮವಾಗಿದೆ, 3,000 ವರ್ಷಗಳ ಹಿಂದಿನ ಸಂಪೂರ್ಣ ಧರ್ಮಗ್ರಂಥಗಳನ್ನು ಹೊಂದಿದೆ."
ಹಿಂದೂ ದೇವಾಲಯಗಳನ್ನು ಪ್ರಪಂಚದಾದ್ಯಂತ ಶತಮಾನಗಳಿಂದ ನಿರ್ಮಿಸಲಾಗಿದೆ. ಭಾರತವು ಅತಿ ಹೆಚ್ಚು ಸಂಖ್ಯೆಯ ಹಿಂದೂ ದೇವಾಲಯಗಳಿಗೆ ನೆಲೆಯಾಗಿದೆ, ಭಾರತದ ಹೊರಗೆ ಅನೇಕ ಪ್ರಭಾವಶಾಲಿ ಹಿಂದೂ ದೇವಾಲಯಗಳಿವೆ.

ಭಾರತದ ಹೊರಗೆ ಇರುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳು ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾದಂತಹ ದೊಡ್ಡ ಹಿಂದೂ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿವೆ. 

ಭಾರತದಿಂದ ಹೊರಗಿರುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳು ಪ್ರಮುಖ ಧಾರ್ಮಿಕ ಸ್ಥಳಗಳಷ್ಟೇ ಅಲ್ಲ, ಅವು ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಈ ದೇವಾಲಯಗಳು ಪ್ರವಾಸಿಗರಿಗೆ ಹಿಂದೂ ಧರ್ಮದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಒಂದು ನೋಟವನ್ನು ನೀಡುತ್ತದೆ.

ಪ್ರಪಂಚದಾದ್ಯಂತ ಇರುವ 5 ದೊಡ್ಡ ಹಿಂದೂ ದೇವಾಲಯಗಳು ಇಲ್ಲಿವೆ: 

  • ಅಂಕೋರ್ ವಾಟ್
  • BAPS ಶ್ರೀ ಸ್ವಾಮಿನಾರಾಯಣ ಮಂದಿರ 
  •  ಬೆಸಾಕಿಹ್ ದೇವಾಲಯ
  • ಅಕ್ಷರಧಾಮ ಸಂಕೀರ್ಣ
  • ಪ್ರಂಬನನ್, ತ್ರಿಮೂರ್ತಿ ದೇವಸ್ಥಾನ

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಕಾಂಬೋಡಿಯಾದಲ್ಲಿ 162.6 ಹೆಕ್ಟೇರ್ (401 ಎಕರೆ) ವಿಸ್ತೀರ್ಣವನ್ನು ಹೊಂದಿರುವ ಅಂಕೋರ್ ವಾಟ್ ಅತಿದೊಡ್ಡ ಧಾರ್ಮಿಕ ರಚನೆಯಾಗಿದೆ.

1. ಅಂಕೋರ್ ವಾಟ್

ಮೂಲ: ಪ್ರಜ್ಞಾತಾ 

ಅಂಕೋರ್ ವಾಟ್ ಕಾಂಬೋಡಿಯಾದಲ್ಲಿರುವ ಹಿಂದೂ ದೇವಾಲಯದ ಸಂಕೀರ್ಣವಾಗಿದೆ ಮತ್ತು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವಾಗಿದೆ. 12 ನೇ ಶತಮಾನದಲ್ಲಿ ಖಮೇರ್ ಸಾಮ್ರಾಜ್ಯದಿಂದ ನಿರ್ಮಿಸಲ್ಪಟ್ಟ ಅಂಕೋರ್ ವಾಟ್ ಅನ್ನು ಹಿಂದೂ ದೇವರು ವಿಷ್ಣುವಿಗೆ ಸಮರ್ಪಿಸಲಾಗಿದೆ. ದೇವಾಲಯದ ಸಂಕೀರ್ಣವು 400 ಎಕರೆಗಳಲ್ಲಿ ಹರಡಿದೆ ಮತ್ತು 70 ಕ್ಕೂ ಹೆಚ್ಚು ಸ್ಮಾರಕಗಳನ್ನು ಒಳಗೊಂಡಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೇಳುತ್ತದೆ, "ಅಂಗ್ಕೋರ್ ವಾಟ್ (ನಗರ ದೇವಾಲಯ), ಕಾಂಬೋಡಿಯಾದಲ್ಲಿ 162.6 ಹೆಕ್ಟೇರ್ (401 ಎಕರೆ) ಸುತ್ತುವರಿದಿರುವ ಅತ್ಯಂತ ದೊಡ್ಡ ಧಾರ್ಮಿಕ ರಚನೆಯಾಗಿದೆ. ಇದನ್ನು ಖಮೇರ್ ರಾಜ ಸೂರ್ಯವರ್ಮನ್ II ​​ಹಿಂದೂ ದೇವರು ವಿಷ್ಣುವಿಗೆ ನಿರ್ಮಿಸಿದನು. 1113–50. ಇದರ ಪರದೆ ಗೋಡೆಯು 1,280 ಮೀ (4,200 ಅಡಿ) ಅಳತೆಯನ್ನು ಹೊಂದಿದೆ ಮತ್ತು 1432 ರಲ್ಲಿ ಅದನ್ನು ಕೈಬಿಡುವ ಮೊದಲು ಅದರ ಜನಸಂಖ್ಯೆಯು 80,000 ಆಗಿತ್ತು.

2. ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರ

ಮೂಲ: ವಿಕಿಪೀಡಿಯಾ

ಯುಕೆ ಲಂಡನ್‌ನಲ್ಲಿರುವ BAPS ಶ್ರೀ ಸ್ವಾಮಿನಾರಾಯಣ ಮಂದಿರವು ಭಾರತದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿದೆ. ಇದನ್ನು ಸಾಂಪ್ರದಾಯಿಕ ಹಿಂದೂ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಸಂಕೀರ್ಣವಾದ ಕೆತ್ತನೆಗಳು ಮತ್ತು ಶಿಲ್ಪಗಳನ್ನು ಒಳಗೊಂಡಿದೆ. ದೇವಾಲಯದ ಸಂಕೀರ್ಣವು ಹಿಂದೂ ದೇವರಾದ ಸ್ವಾಮಿನಾರಾಯಣನಿಗೆ ಸಮರ್ಪಿತವಾಗಿದೆ ಮತ್ತು ಮುಖ್ಯ ದೇವಾಲಯ, ಸಾಂಸ್ಕೃತಿಕ ಕೇಂದ್ರ, ಸಮುದಾಯ ಕೇಂದ್ರ ಮತ್ತು ಉದ್ಯಾನವನ್ನು ಒಳಗೊಂಡಿದೆ.

3. ಬೆಸಾಕಿಹ್ ದೇವಾಲಯ

ಮೂಲ: ವಿಕಿಪೀಡಿಯಾ 

ಪುರ ಬೆಸಕಿಹ್ ಎಂದೂ ಕರೆಯಲ್ಪಡುವ ಬೆಸಾಕಿಹ್ ದೇವಾಲಯವು ಇಂಡೋನೇಷ್ಯಾದ ಬಾಲಿಯಲ್ಲಿರುವ ಅತಿದೊಡ್ಡ ಮತ್ತು ಪ್ರಮುಖ ಹಿಂದೂ ದೇವಾಲಯ ಸಂಕೀರ್ಣವಾಗಿದೆ. ಇದು ಬಾಲಿಯ ಅತಿ ಎತ್ತರದ ಪರ್ವತವಾದ ಅಗುಂಗ್ ಪರ್ವತದ ಇಳಿಜಾರಿನಲ್ಲಿದೆ ಮತ್ತು ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನಿಗೆ ಸಮರ್ಪಿಸಲಾಗಿದೆ.

ಬೆಸಾಕಿಹ್ ದೇವಾಲಯವು 23 ದೇವಾಲಯಗಳ ಸಂಕೀರ್ಣವಾಗಿದೆ, ಇದು ಪರ್ವತದ ಮೇಲೆ ಹಲವಾರು ಟೆರೇಸ್‌ಗಳಲ್ಲಿ ಹರಡಿದೆ. ಮುಖ್ಯ ದೇವಾಲಯ, ಪುರ ಪೆನಾತರನ್ ಅಗುಂಗ್, ಸಂಕೀರ್ಣದಲ್ಲಿರುವ ಅತ್ಯಂತ ದೊಡ್ಡ ಮತ್ತು ಪ್ರಮುಖ ದೇವಾಲಯವಾಗಿದೆ. ಇದು ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾಗಿದೆ.

4. ಅಕ್ಷರಧಾಮ ಸಂಕೀರ್ಣ

ಮೂಲ: ವರ್ಲ್ಡ್ ರೆಕಾರ್ಡ್ ಅಕಾಡೆಮಿ

USA, ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿರುವ ಅಕ್ಷರಧಾಮ ಸಂಕೀರ್ಣವು ಪಶ್ಚಿಮ ಗೋಳಾರ್ಧದಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿದೆ. ಇದು ಹಿಂದೂ ದೇವರಾದ ಸ್ವಾಮಿನಾರಾಯಣನಿಗೆ ಸಮರ್ಪಿತವಾಗಿದೆ ಮತ್ತು ಮುಖ್ಯ ದೇವಾಲಯ, ಸಾಂಸ್ಕೃತಿಕ ಕೇಂದ್ರ, ಸಮುದಾಯ ಕೇಂದ್ರ ಮತ್ತು ಉದ್ಯಾನವನ್ನು ಒಳಗೊಂಡಿದೆ. ದೇವಾಲಯದ ಸಂಕೀರ್ಣವು 160 ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಸಂಕೀರ್ಣವಾದ ಕೆತ್ತನೆಗಳು ಮತ್ತು ಶಿಲ್ಪಗಳನ್ನು ಒಳಗೊಂಡಿದೆ.

5.ಪ್ರಂಬನನ್, ತ್ರಿಮೂರ್ತಿ ದೇವಸ್ಥಾನ

ಮೂಲ: ವಿಕಿಪೀಡಿಯಾ 

ಪ್ರಾಂಬನನ್ ಇಂಡೋನೇಷ್ಯಾದ ದಕ್ಷಿಣ ಜಾವಾದಲ್ಲಿರುವ ಯೊಗ್ಯಕಾರ್ತಾದ ವಿಶೇಷ ಪ್ರದೇಶದಲ್ಲಿ 9 ನೇ ಶತಮಾನದ ಹಿಂದೂ ದೇವಾಲಯ ಸಂಕೀರ್ಣವಾಗಿದೆ. ಇದು ಹಿಂದೂ ಧರ್ಮದ ಮೂರು ಪ್ರಮುಖ ದೇವರುಗಳಾದ ತ್ರಿಮೂರ್ತಿಗಳಿಗೆ ಸಮರ್ಪಿಸಲಾಗಿದೆ: ಬ್ರಹ್ಮ, ವಿಷ್ಣು ಮತ್ತು ಶಿವ. ದೇವಾಲಯದ ಸಂಕೀರ್ಣವು UNESCO ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಇಂಡೋನೇಷ್ಯಾದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

ತ್ರಿಮೂರ್ತಿ ದೇವಾಲಯವು ಪ್ರಂಬನನ್ ಸಂಕೀರ್ಣದಲ್ಲಿರುವ ಅತ್ಯಂತ ದೊಡ್ಡ ಮತ್ತು ಪ್ರಮುಖ ದೇವಾಲಯವಾಗಿದೆ. ಇದು ಎತ್ತರದ ಮತ್ತು ತೆಳ್ಳಗಿನ ರಚನೆಯಾಗಿದ್ದು, ಎತ್ತರದ ಕೇಂದ್ರ ಶಿಖರವನ್ನು ಹೊಂದಿದೆ. ಹಿಂದೂ ಪುರಾಣದ ದೃಶ್ಯಗಳನ್ನು ಚಿತ್ರಿಸುವ ವಿಸ್ತಾರವಾದ ಉಬ್ಬುಶಿಲ್ಪಗಳಿಂದ ದೇವಾಲಯವನ್ನು ಅಲಂಕರಿಸಲಾಗಿದೆ. ದೇವಾಲಯದ ಒಳಗಿನ ಗರ್ಭಗುಡಿಯಲ್ಲಿ ಶಿವನ ಪ್ರತಿಮೆ ಇದೆ.


Wednesday, 1 July 2020

ಶ್ರೀ_ವಿಷ್ಣುಸಹಸ್ರನಾಮ

#ಶ್ರೀ_ವಿಷ್ಣುಸಹಸ್ರನಾಮ
ಅನುಕ್ರಮಣಿಕೆ
೧) ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಜಪದ ಮಹತ್ವ
೨) ಪಾರಾಯಣ ಸಮಯ, ಪದ್ಧತಿ
೩) ವಿಷ್ಣು ಸಹಸ್ರನಾಮ ಚಕ್ರ
೪) ಜಪಗಳಲ್ಲಿ_ಸರ್ವ_ಶ್ರೇಷ್ಠ
೫) ಸಂವಿಧಾನ
೬) ಸಕಲ_ಪುರುಷಾರ್ಥ_ಸಿದ್ಧಿ
೭) ಸಾಡೇಸಾತಿ ನಿವಾರಣೆಗೆ
೮) ಸ್ವರ_ತರಂಗಗಳ_ಪ್ರಭಾವ
೯) ತಾಪತ್ರಯಗಳ ನಿವಾರಣೆಗೆ (ಉದ್ಯೋಗ, ದಾರಿದ್ರ್ಯ ನಾಶ, ಧನ, ಐಶ್ವರ್ಯ, ವಿದ್ಯಾ, ಸಂತಾನ, ರೋಗ ಮುಕ್ತಿ, ಪಾಪ ನಾಶ, ಸುಖ ಪ್ರಸವಕ್ಕೆ)
೧೦) ಪಾರಾಯಣ ವಿಧಿ ವಿಧಾನ ಸಹಿತ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಮತ್ತು ಫಲಶ್ರುತಿ
೧) #ವಿಷ್ಣು_ಸಹಸ್ರನಾಮ_ಜಪದ_ಮಹತ್ವ

ವಿಷ್ಣು ಸಹಸ್ರನಾಮ ಸ್ತೋತ್ರ ಏಕೆ ಬೇಕು

ಬೇರೆ ಬೇರೆ ದೇವತೆ ಉಪಾಸನೆ ಬೇರೆ ಬೇರೆ ಫಲವಿರುವುದು ರೂಢಿ

ಬೃಹಸ್ಪತಿ -ಆರಾದನೆಯಿಂದ ಬ್ರಹ್ಮ ವರ್ಚಸ್ಸು.

ಈಶ್ವರನಿಂದ - ವಿದ್ಯೆ ಹಾಗೂ ಒಳ್ಳೆಯ ಮನೋಭಾವ.

ಗೌರೀ ಪೂಜೆಯಿಂದ - ಅನ್ಯೋನ್ಯತೆ ಸುಖ ದಾಂಪತ್ಯ.

ಇಂದ್ರನ -ಆರಾದನೆಯಿಂದ ಇಂದ್ರಿಯಕ್ಕ

ದಕ್ಷ ಪ್ರಜಾಪತಿಗಳ - ಆರಾದನೆಯಿಂದ ಪ್ರಜಾ ಸಂಪತ್ತು ಸತ್ಸಂತಾನ.

ಮಹಾಲಕ್ಷ್ಮೀ ಉಪಾಸನೆಯಿಂದ - ಐಶ್ವರ್ಯ.

ಅಗ್ನಿಯಿಂದ -ತೇಜಸ್ಸು ವಸ್ತುಗಳಿಂದ ಸಂಪತ್ತು

ಅದಿತಿಯಿಂದ - ಅನ್ನಹಾರ ದೇವತೆಗಳಿಂದ - ಸ್ವರ್ಗ ಪ್ರಾಪ್ತಿ.

ವಿಶ್ವ ದೇವತೆಗಳಿಂದ -  ಭೂಸಂಪತ್ತು.

ಅಶ್ವಿನಿ ದೇವತೆಗಳಿಂದ ಆಯುವೃದ್ದಿ. 

ಗಂಧರ್ವರಿಂದ ಸ್ಪುರದ್ರೂಪ ಸೌಂದರ್ಯ.

ಊರ್ವಶಿಯಿಂದ - ಸ್ತ್ರೀ ವಿಕಾರ ನಿವೃತ್ತಿ.

ಯಜ್ಞ ದಿಂದ - ಕೀರ್ತಿ.

ಪಿತೃಗಳಿಂದ ಸಂತತಿ ವೃದ್ಧಿ.

ಆದರೆ

🔼  ಶ್ರೀ ವಿಷ್ಣು ಸಹಸ್ರನಾಮದಿಂದ ಈ ಎಲ್ಲಾ ಸಿದ್ಧಿಗಳೂ ಒಟ್ಟಿಗೇ ಸುಲಭವಾಗಿ ಲಭಿಸುವುದು.

2) #ಪಾರಾಯಣ_ಸಮಯ_ಮತ್ತು_ಪದ್ಧತಿ

🔼  ಹಬ್ಬ, ವ್ರತ, ಉತ್ಸವಗಳಲ್ಲಿ ಪಾರಾಯಣ ಮಾಡಬಹುದು ಹಾಗೂ ಭೀಷ್ಮಾಷ್ಠಮಿ, ಏಕಾದಶಿ ದಿನಗಳು ಪಾರಾಯಣಕ್ಕೆ ಪ್ರಶಸ್ತವಾದ ದಿನಗಳು.

🔼  ಪಾರಾಯಣ ಮಾಡುವಾಗ, ಪೂರ್ವ ಹಾಗೂ ಉತ್ತರಾಭಿಮುಖವಾಗಿ ಕುಳಿತು ಮಾಡಬೇಕು.

🔼  ಸಾಮೂಹಿಕವಾಗಿ / ಕುಟುಂಬದವರೆಲ್ಲಾ ಒಟ್ಟಿಗೇ ಕುಳಿತು ಪಾರಾಯಣ ಮಾಡಿದರೆ ಹೆಚ್ಚಿನ ಅನುಗ್ರಹ ಇರುತ್ತದೆ.

🔼  ಆತ್ಮಸುಖ, ಯೋಗಕ್ಷೇಮ, ಭಾಗ್ಯ ಸೌಭಾಗ್ಯ, ಧೈರ್ಯ, ಆತ್ಮ ಸ್ಥೈರ್ಯ, ಸ್ಮರಣ ಶಕ್ತಿ, ಸ್ಪುರಣ ಶಕ್ತಿ, ಮೇಧಾಶಕ್ತಿ ಹಾಗೂ ಕೀರ್ತಿಗಳು ಪ್ರಾಪ್ತಿಯಾಗುವುವು.
ವಿಷ್ಣು ಸಹಸ್ರನಾಮ ಸ್ತೋತ್ರ ಯಾರು ಹೇಳುವುರೋ, ಯಾರು ಕೇಳುವರೋ ಅವರಿಗೆ ಇಹ-ಪರದಲ್ಲಿ ಅಶುಭ, ಅಮಂಗಳ ಎಂಬುದೇ ಇಲ್ಲ. ಆರೋಗ್ಯ, ಕಾಂತಿ, ಬಲ, ಸೌಂದರ್ಯ ಹೆಚ್ಚುತ್ತದೆ ಅಃತಕರಣ ಶುದ್ದವಾಗುತ್ತದೆ. ಶೀಘ್ರದಲ್ಲಿ ಎಲ್ಲನೋವು , ಸಂಕಟದಿಂದ ಪಾರಾಗುತ್ತಾರೆ. ಶಾಂತಿ, ಸಮಾಧಾನ,  ನೆಮ್ಮದಿ ಲಭಿಸುತ್ತವೆ. ಒಂದೊಂದು ನಾಮಕ್ಕೂ ನೂರು-  ನೂರು ಅರ್ಥಗಳು. ಭಗವಂತನ ಸಾವಿರ ರೂಪಗಳ ಸಾವಿರ ನಾಮಗಳೇ ವಿಷ್ಣು ಸಹಸ್ರನಾಮ.

 3) #ವಿಷ್ಣು_ಸಹಸ್ರನಾಮ_ಚಕ್ರ
ಹನ್ನೊಂದರ ಮಹತ್ವ: ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ, ಸ್ಥಿತಿ, ಬಲ, ಶ್ರವಣ, ಶೀಲ , ವಿದ್ಯೆ ಇವಿಷ್ಟು ವಿಷ್ಣು ಸಹಸ್ರನಾಮದ  ಚಕ್ರದಿಂದ ಅಂದರೆ ಹನ್ನೊಂದು ದಿನ. ಪ್ರತಿದಿನ 11 ಬಾರಿ ಪಾರಾಯಣ ಮಾಡುವುದರಿಂದ ಲಭ್ಯವಾಗುತ್ತವೆ. ಹನ್ನೊಂದು ಚಕ್ರ ಮುಗಿಸಿದವರಿಗೆ ಪುನರ್ಜನ್ಮವಿಲ್ಲ ಎಂದು ಹೇಳುವರು. ವಿಷ್ಣು ಸಹಸ್ರನಾಮವು ಪವಿತ್ರಕ್ಕೆ- ಪವಿತ್ರವಾಗಿ..
ಮಂಗಳಕ್ಕೆ-  ಮಂಗಳ ವಾಗಿದೆ. ವಿಷ್ಣುವಿನ ಪಾರಾಯಣ ಮಾಡುವವರ ಮನೆ ಪಾವನವಾಗುತ್ತದೆ.

4) #ಜಪಗಳಲ್ಲಿ_ಸರ್ವ_ಶ್ರೇಷ್ಠ.

 ಧರ್ಮರಾಜ ಕೇಳಿದರು " ಕಿಂ ಜಪನ್ ಮುಚ್ಯತೇ ಜಂತುಃ ಜನ್ಮ ಸಂಸಾರ ಬಂಧನಾತ್" ಅಂದರೆ ಜಪಗಳಲ್ಲಿ ಸರ್ವ ಶ್ರೇಷ್ಟ ಯಾವುದು ಎಂದು, ಭೀಷ್ಮರು ಉತ್ತರಿಸಿದರು. ಜಪಗಳಲ್ಲಿ ವಿಷ್ಣು ಸಹಸ್ರನಾಮ  ಜಪ ಶ್ರೇಷ್ಠ ಎಂದು.

ವಿಷ್ಣು ಸಹಸ್ರನಾಮ ಪಾರಾಯಣ ಮಾಡುವಾಗ ನಾಮ ಮಂತ್ರ ತರಂಗಗಳು ಪರಿಸರ ಶುದ್ದಿ ಮಾಡಿ, ಅಪೂರ್ವ ಸನ್ನಿದಾನ ನಿರ್ಮಾಣ ಮಾಡುತ್ತವೆ.

 ೫) ಸಂವಿಧಾನ 
ಮಹಾಮಂತ್ರವಾದ ವಿಷ್ಣು ಸಹಸ್ರನಾಮದ ದೈವ ಮಹಾವಿಷ್ಣು.
 ಇದನ್ನು ನೀಡಿದವರು ವೇದ ವ್ಯಾಸರು.
ಇವರ ಛಂಧಸ್ಸು ಅನುಷ್ಟಪ್ ಛಂದಃ
ಈ ಮಂತ್ರದ ಬೀಜಭಾಗ , ಅಮೃತಾಂಶೂದ್ಭವೋ ಭಾನುಃ ಸ್ತೋತ್ರ . 
ಈ ಮಂತ್ರದ ಮಹಾಶಕ್ತಿ ದೇವಕೀ ನಂದನಃ ಸ್ರಷ್ಟಾ ಸ್ತೋತ್ರ.
ಇದರ ಪರಮಂತ್ರ ಉದ್ಭವಃ ಕ್ಷೋಭಣೋ ದೇವಃ ಸ್ತೋತ್ರ. 
ಈ ಮಂತ್ರದ ಅನಾವರಣ ಭಾಗ ಶಂಖ ಭೃತ್ ನಂದಕೀ ಚಕ್ರೀ ಸ್ತೋತ್ರ.
ಈ ಮಂತ್ರದ ಅಸ್ತ್ರ ಭಾಗ ಶಾಂಗ ಧನ್ವಾಗದಾದರಃ ಸ್ತೋತ್ರ.
ಈ ಮಂತ್ರದ ಜಾಗೃತಿಭಾಗ ರಥಾಂಗಪಾಣಿಃ ಅಕ್ಷೋಭ್ಯ .
ಇದರ ಕವಚ ಭಾಗ ತ್ರಿಸಾಮಾಸಾಮಗಸಾಮ.
ಇಡೀ ಮಂತ್ರದ ಮೂಲಪ್ರೇರಣೆ 
ಆನಂದಂ ಪರಬ್ರಹ್ಮ.
ಈ ಮಂತ್ರದ ಪಹರೆ ಋತುಃ ಸುದರ್ಶನಃ ಕಾಲ ಸ್ತೋತ್ರ. 
ವಿಷ್ಣುವೇ ಜಗದೊಡೆಯ  ಎಂಬುದೇ ದ್ಯಾನ. 
ಇದರ ಪಠಣ, ಜಪ, ಪಾರಾಯಣವು  ವಿಷ್ಣು ಪ್ರೇರಣೆಯಾಗಿದ್ದು, ಅದರಿಂದ ವಿಷ್ಣು ಪ್ರೀತನಾಗಲೀ ಎಂಬ ಭಾವನೆಯೇ ಇದರ ಪ್ರಯೋಜನ.
 
 6) #ಸಕಲ_ಪುರುಷಾರ್ಥ_ಸಿದ್ದಿ
ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ "ಇಡೀ ಜಗತ್ತಿನ ಧೈವ ಯಾವುದು?, ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ಶ್ರೇಯಸ್ಸಾಗುತ್ತದೆ ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಯಾವುದು. ಯಾರ ಜಪ ಮಾಡುವುದರಿಂದ,  ಸಂಸಾರ ಚಕ್ರದ ಬಂದನದಿಂದ , ಜನನ - ಮರಣಗಳ ಚಕ್ರದಿಂದ ಮುಕ್ತರಾಗಬಹುದು?.

ಈ ಎಲ್ಲಾ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಒಂದೇ ಉತ್ತರ ಹೇಳುತ್ತಾರೆ.
ಜಗತ್ ಪ್ರಭುವೂ, ದೇವ ದೇವನೂ, ಅನಂತನೂ, ಪುರುಷೋತ್ತಮನೂ ಆದ ಮಹಾವಿಷ್ಣುವನ್ನು ವಿಷ್ಣು ಸಹಸ್ರನಾಮದ ಮೂಲಕ ಸ್ತುತಿ ಮಾಡುವ ಎಲ್ಲರೂ ಸರ್ವ ದುಃಖಗಳಿಂದ ಪಾರಾಗುತ್ತಾರೆ. ಅಷ್ಟೇ ಅಲ್ಲದೇ ಅಂತಹವರು ನಿರಂತರವಾಗಿ ಪ್ರಗತಿಯ ಅಭ್ಯುದಯದ, ಯಶಸ್ಸಿನ ಹಾದಿಯಲ್ಲಿ ಇರುತ್ತಾರೆ. 

 7) #ಶನಿಮಹಾತ್ಮನ_ಸಾಡೇಸಾತಿಯ ಪ್ರಭಾವವಿರುವಾಗ ಸದಾ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವವರಿಗೆ, ಹೆಚ್ಚಿನ ತೊಂದರೆ ಇರುವುದಿಲ್ಲ. ಎಲ್ಲ ತಾಪತ್ರಯಗಳ ಪರಿಹಾರಕ, ಇಷ್ಟಪ್ರದ, ಅನಿಷ್ಟ ನಿವಾರಕ, ನಾದ ಪವಿತ್ರ  ಮಹಾವಿಷ್ಣುವಿನ ಸಹಸ್ರನಾಮ ಒಂದೇ ವಿಶಿಷ್ಠವಾಗಿರುವಂಥದ್ದು.

8) #ಸ್ವರ_ತರಂಗಗಳ_ಪ್ರಭಾವ
ಬೃಹಸ್ಪತಿ (ಗುರು)ಸಹಸ್ರ  ಶಾಸ್ತ್ರ ಗ್ರಥವು ಸುಂದರ ಹಾರವಾಗಿದೆ. ಬೃಹಸ್ಪತಿ ಛಂಧಸ್ಸಿನಲ್ಲಿ ಪ್ರತೀ ಸ್ತೋತ್ರದಲ್ಲಿಯೂ 36 ಸ್ವರಾಕ್ಷರ ಹಾಗೂ 36 ವ್ಯಂಜನಾಕ್ಷರಗಳಿವೆ. ಅಂದರೆ ಪ್ರತೀ ಸ್ತೋತ್ರದಲ್ಲಿ 72 ಅಕ್ಷರಗಳಿವೆ. ಒಂದು ಸಾವಿರ ಸ್ತೋತ್ರಗಳಲ್ಲಿ 72 ಸಾವಿರ ಅಕ್ಷರಗಳು. ಬೃಹಸ್ಪತಿ ಸಹಸ್ರದ ವ್ಯಾಖ್ಯಾನವೇ ವಿಷ್ಣು ಸಹಸ್ರನಾಮ ಸ್ತೋತ್ರವಾಗಿರುತ್ತದೆ. ವಿಷ್ಣು ಸಹಸ್ರನಾಮ 72 ಸಾವಿರ ನಾಡಿಗಳನ್ನು ಸಂಸ್ಕಾರ ಮಾಡಿ, ನಾಡೀಶುದ್ದಿ , ದೇಹಶುದ್ದಿ, ಮನ ಶುದ್ದಿ ಮಾಡುತ್ತದೆ.

೯) #ತಾಪತ್ರಯಗಳ_ನಿವಾರಣೆಗೆ

ಅಪಾಯ ಕೋಟಿಗಳಿಗೆ ಉಪಾಯ ಒಂದೇ - ಹರಿನಾಮ - ಶ್ರೀ. ವಿಷ್ಣು ಸಹಸ್ರ ನಾಮ.
(ಇಷ್ಟಾರ್ಥ ಸಿದ್ಧಿಗಾಗಿ ಮಂತ್ರಗಳು)

#ಉದ್ಯೋಗ_ಪ್ರಾಪ್ತಿಗಾಗಿ:

ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ಧಿ: ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ ||  (೪೨ನೇ ಶ್ಲೋಕ)

#ದಾರಿದ್ರ್ಯನಾಶನ_ಮತ್ತು_ಧನಪ್ರಾಪ್ತಿಗೆ:

ವಿಸ್ತಾರಃ ಸ್ಥಾವರಃ ಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ | ಅರ್ಥೋಅನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || 
 (೪೬ನೇ ಶ್ಲೋಕ)

#ಐಶ್ವರ್ಯ_ಪ್ರಾಪ್ತಿಗೆ:

ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ | ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ ||  (೬೫ನೇ ಶ್ಲೋಕ)

#ವಿದ್ಯಾ_ಪ್ರಾಪ್ತಿಗೆ:

ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃತ್ | ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ ||  (೮೦ನೇ ಶ್ಲೋಕ)

#ಸಂತಾನ_ಪ್ರಾಪ್ತಿಗೆ:

ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ | ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || (೯೦ನೇ ಶ್ಲೋಕ)

#ಸರ್ವ_ರೋಗ_ನಿವಾರಣೆಗೆ:

ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ | ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮ ಮೃತ್ಯುಜರಾತಿಗಃ || (೧೦೩ನೇ ಶ್ಲೋಕ)

#ಪಾಪ_ನಾಶನಕ್ಕೆ:

ಆತ್ಮ ಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ | ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || (೧೦೬ನೇ ಶ್ಲೋಕ)

#ಸುಖ_ಪ್ರಸವಕ್ಕೆ:

ಶಂಖಭೃನ್ನಂದಕೀ ಚಕ್ರೀ ಶಾಙ್ಗ೯ಧನ್ವಾ ಗದಾಧರಃ | ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || (೧೦೭ನೇ ಶ್ಲೋಕ)

ಈ ಮೇಲಿನವು #ಕೆಲವು_ಉದಾಹರಣೆ_ಮಾತ್ರ. ಇನ್ನು ಅನುಸಂಧಾನದಿಂದ ಪ್ರತಿನಿತ್ಯವೂ, ಸಂಸಾರದ ಎಲ್ಲರೂ ದಿನಕ್ಕೋಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಣ ಮಾಡುವುದರಿಂದ ಬಹಳ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

 ೩) #ಶ್ರೀ_ವಿಷ್ಣು_ಸಹಸ್ರ_ನಾಮ_ಸ್ತೋತ್ರಮ್

ಓಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ || 1 ||

ಯಸ್ಯದ್ವಿರದವಕ್ತ್ರಾದ್ಯಾಃ ಪಾರಿಷದ್ಯಾಃ ಪರಃ ಶತಮ್ |
ವಿಘ್ನಂ ನಿಘ್ನಂತಿ ಸತತಂ ವಿಶ್ವಕ್ಸೇನಂ ತಮಾಶ್ರಯೇ || 2 ||

ವ್ಯಾಸಂ ವಸಿಷ್ಠ ನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ || 3 ||

ವ್ಯಾಸಾಯ ವಿಷ್ಣು ರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ || 4 ||

ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ |
ಸದೈಕ ರೂಪ ರೂಪಾಯ ವಿಷ್ಣವೇ ಸರ್ವಜಿಷ್ಣವೇ || 5 ||

ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್ |
ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ || 6 ||

ಓಂ ನಮೋ ವಿಷ್ಣವೇ ಪ್ರಭವಿಷ್ಣವೇ |

ಶ್ರೀ ವೈಶಂಪಾಯನ ಉವಾಚ
ಶ್ರುತ್ವಾ ಧರ್ಮಾ ನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯ ಭಾಷತ || 7 ||

ಯುಧಿಷ್ಠಿರ ಉವಾಚ
ಕಿಮೇಕಂ ದೈವತಂ ಲೋಕೇ ಕಿಂ ವಾ‌உಪ್ಯೇಕಂ ಪರಾಯಣಂ
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || 8 ||

ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರ ಬಂಧನಾತ್ || 9 ||

ಶ್ರೀ ಭೀಷ್ಮ ಉವಾಚ
ಜಗತ್ಪ್ರಭುಂ ದೇವದೇವ ಮನಂತಂ ಪುರುಷೋತ್ತಮಮ್ |
ಸ್ತುವನ್ನಾಮ ಸಹಸ್ರೇಣ ಪುರುಷಃ ಸತತೋತ್ಥಿತಃ || 10 ||

ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || 11 ||

ಅನಾದಿ ನಿಧನಂ ವಿಷ್ಣುಂ ಸರ್ವಲೋಕ ಮಹೇಶ್ವರಮ್ |
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವ ದುಃಖಾತಿಗೋ ಭವೇತ್ || 12 ||

ಬ್ರಹ್ಮಣ್ಯಂ ಸರ್ವ ಧರ್ಮಙ್ಞಂ ಲೋಕಾನಾಂ ಕೀರ್ತಿ ವರ್ಧನಮ್ |
ಲೋಕನಾಥಂ ಮಹದ್ಭೂತಂ ಸರ್ವಭೂತ ಭವೋದ್ಭವಮ್|| 13 ||

ಏಷ ಮೇ ಸರ್ವ ಧರ್ಮಾಣಾಂ ಧರ್ಮೋ‌உಧಿಕ ತಮೋಮತಃ |
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || 14 ||

ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ | 15 ||

ಪವಿತ್ರಾಣಾಂ ಪವಿತ್ರಂ ಯೋ ಮಂಗಳಾನಾಂ ಚ ಮಂಗಳಮ್ |
ದೈವತಂ ದೇವತಾನಾಂ ಚ ಭೂತಾನಾಂ ಯೋ‌உವ್ಯಯಃ ಪಿತಾ || 16 ||

ಯತಃ ಸರ್ವಾಣಿ ಭೂತಾನಿ ಭವಂತ್ಯಾದಿ ಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || 17 ||

ತಸ್ಯ ಲೋಕ ಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ |
ವಿಷ್ಣೋರ್ನಾಮ ಸಹಸ್ರಂ ಮೇ ಶ್ರುಣು ಪಾಪ ಭಯಾಪಹಮ್ || 18 ||

ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || 19 ||

ಋಷಿರ್ನಾಮ್ನಾಂ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ ||
ಛಂದೋ‌உನುಷ್ಟುಪ್ ತಥಾ ದೇವೋ ಭಗವಾನ್ ದೇವಕೀಸುತಃ || 20 ||

ಅಮೃತಾಂ ಶೂದ್ಭವೋ ಬೀಜಂ ಶಕ್ತಿರ್ದೇವಕಿನಂದನಃ |
ತ್ರಿಸಾಮಾ ಹೃದಯಂ ತಸ್ಯ ಶಾಂತ್ಯರ್ಥೇ ವಿನಿಯುಜ್ಯತೇ || 21 ||

ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಪ್ರಭವಿಷ್ಣುಂ ಮಹೇಶ್ವರಮ್ ||
ಅನೇಕರೂಪ ದೈತ್ಯಾಂತಂ ನಮಾಮಿ ಪುರುಷೋತ್ತಮಮ್ || 22 ||

#ಪೂರ್ವನ್ಯಾಸಃ
ಅಸ್ಯ ಶ್ರೀ ವಿಷ್ಣೋರ್ದಿವ್ಯ ಸಹಸ್ರನಾಮ ಸ್ತೋತ್ರ ಮಹಾಮಂತ್ರಸ್ಯ ||
ಶ್ರೀ ವೇದವ್ಯಾಸೋ ಭಗವಾನ್ ಋಷಿಃ |
ಅನುಷ್ಟುಪ್ ಛಂದಃ |
ಶ್ರೀಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ |
ಅಮೃತಾಂಶೂದ್ಭವೋ ಭಾನುರಿತಿ ಬೀಜಮ್ |
ದೇವಕೀನಂದನಃ ಸ್ರಷ್ಟೇತಿ ಶಕ್ತಿಃ |
ಉದ್ಭವಃ, ಕ್ಷೋಭಣೋ ದೇವ ಇತಿ ಪರಮೋಮಂತ್ರಃ |
ಶಂಖಭೃನ್ನಂದಕೀ ಚಕ್ರೀತಿ ಕೀಲಕಮ್ |
ಶಾರ್ಂಗಧನ್ವಾ ಗದಾಧರ ಇತ್ಯಸ್ತ್ರಮ್ |
ರಥಾಂಗಪಾಣಿ ರಕ್ಷೋಭ್ಯ ಇತಿ ನೇತ್ರಮ್ |
ತ್ರಿಸಾಮಾಸಾಮಗಃ ಸಾಮೇತಿ ಕವಚಮ್ |
ಆನಂದಂ ಪರಬ್ರಹ್ಮೇತಿ ಯೋನಿಃ |
ಋತುಸ್ಸುದರ್ಶನಃ ಕಾಲ ಇತಿ ದಿಗ್ಬಂಧಃ ||
ಶ್ರೀವಿಶ್ವರೂಪ ಇತಿ ಧ್ಯಾನಮ್ |
ಶ್ರೀ ಮಹಾವಿಷ್ಣು ಪ್ರೀತ್ಯರ್ಥೇ ಸಹಸ್ರನಾಮ ಜಪೇ ವಿನಿಯೋಗಃ |

#ಕರನ್ಯಾಸಃ
ವಿಶ್ವಂ ವಿಷ್ಣುರ್ವಷಟ್ಕಾರ ಇತ್ಯಂಗುಷ್ಠಾಭ್ಯಾಂ ನಮಃ
ಅಮೃತಾಂ ಶೂದ್ಭವೋ ಭಾನುರಿತಿ ತರ್ಜನೀಭ್ಯಾಂ ನಮಃ
ಬ್ರಹ್ಮಣ್ಯೋ ಬ್ರಹ್ಮಕೃತ್ ಬ್ರಹ್ಮೇತಿ ಮಧ್ಯಮಾಭ್ಯಾಂ ನಮಃ
ಸುವರ್ಣಬಿಂದು ರಕ್ಷೋಭ್ಯ ಇತಿ ಅನಾಮಿಕಾಭ್ಯಾಂ ನಮಃ
ನಿಮಿಷೋ‌உನಿಮಿಷಃ ಸ್ರಗ್ವೀತಿ ಕನಿಷ್ಠಿಕಾಭ್ಯಾಂ ನಮಃ
ರಥಾಂಗಪಾಣಿ ರಕ್ಷೋಭ್ಯ ಇತಿ ಕರತಲ ಕರಪೃಷ್ಠಾಭ್ಯಾಂ ನಮಃ

#ಅಂಗನ್ಯಾಸಃ
ಸುವ್ರತಃ ಸುಮುಖಃ ಸೂಕ್ಷ್ಮ ಇತಿ ಙ್ಞಾನಾಯ ಹೃದಯಾಯ ನಮಃ
ಸಹಸ್ರಮೂರ್ತಿಃ ವಿಶ್ವಾತ್ಮಾ ಇತಿ ಐಶ್ವರ್ಯಾಯ ಶಿರಸೇ ಸ್ವಾಹಾ
ಸಹಸ್ರಾರ್ಚಿಃ ಸಪ್ತಜಿಹ್ವ ಇತಿ ಶಕ್ತ್ಯೈ ಶಿಖಾಯೈ ವಷಟ್
ತ್ರಿಸಾಮಾ ಸಾಮಗಸ್ಸಾಮೇತಿ ಬಲಾಯ ಕವಚಾಯ ಹುಂ
ರಥಾಂಗಪಾಣಿ ರಕ್ಷೋಭ್ಯ ಇತಿ ನೇತ್ರಾಭ್ಯಾಂ ವೌಷಟ್
ಶಾಂಗಧನ್ವಾ ಗದಾಧರ ಇತಿ ವೀರ್ಯಾಯ ಅಸ್ತ್ರಾಯಫಟ್
ಋತುಃ ಸುದರ್ಶನಃ ಕಾಲ ಇತಿ ದಿಗ್ಭಂಧಃ

#ಧ್ಯಾನಮ್
ಕ್ಷೀರೋಧನ್ವತ್ಪ್ರದೇಶೇ ಶುಚಿಮಣಿವಿಲಸತ್ಸೈಕತೇಮೌಕ್ತಿಕಾನಾಂ
ಮಾಲಾಕ್ಲುಪ್ತಾಸನಸ್ಥಃ ಸ್ಫಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ |
ಶುಭ್ರೈರಭ್ರೈರದಭ್ರೈರುಪರಿವಿರಚಿತೈರ್ಮುಕ್ತಪೀಯೂಷ ವರ್ಷೈಃ
ಆನಂದೀ ನಃ ಪುನೀಯಾದರಿನಲಿನಗದಾ ಶಂಖಪಾಣಿರ್ಮುಕುಂದಃ || 1 ||

ಭೂಃ ಪಾದೌ ಯಸ್ಯ ನಾಭಿರ್ವಿಯದಸುರನಿಲಶ್ಚಂದ್ರ ಸೂರ್ಯೌ ಚ ನೇತ್ರೇ
ಕರ್ಣಾವಾಶಾಃ ಶಿರೋದ್ಯೌರ್ಮುಖಮಪಿ ದಹನೋ ಯಸ್ಯ ವಾಸ್ತೇಯಮಬ್ಧಿಃ |
ಅಂತಃಸ್ಥಂ ಯಸ್ಯ ವಿಶ್ವಂ ಸುರ ನರಖಗಗೋಭೋಗಿಗಂಧರ್ವದೈತ್ಯೈಃ
ಚಿತ್ರಂ ರಂ ರಮ್ಯತೇ ತಂ ತ್ರಿಭುವನ ವಪುಶಂ ವಿಷ್ಣುಮೀಶಂ ನಮಾಮಿ || 2 ||

ಓಂ ನಮೋ ಭಗವತೇ ವಾಸುದೇವಾಯ !

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಮ್
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ || 3 ||

ಮೇಘಶ್ಯಾಮಂ ಪೀತಕೌಶೇಯವಾಸಂ
ಶ್ರೀವತ್ಸಾಕಂ ಕೌಸ್ತುಭೋದ್ಭಾಸಿತಾಂಗಮ್ |
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ
ವಿಷ್ಣುಂ ವಂದೇ ಸರ್ವಲೋಕೈಕನಾಥಮ್ || 4 ||

ನಮಃ ಸಮಸ್ತ ಭೂತಾನಾಮ್ ಆದಿ ಭೂತಾಯ ಭೂಭೃತೇ |
ಅನೇಕರೂಪ ರೂಪಾಯ ವಿಷ್ಣವೇ ಪ್ರಭವಿಷ್ಣವೇ || 5||

ಸಶಂಖಚಕ್ರಂ ಸಕಿರೀಟಕುಂಡಲಂ
ಸಪೀತವಸ್ತ್ರಂ ಸರಸೀರುಹೇಕ್ಷಣಮ್ |
ಸಹಾರ ವಕ್ಷಃಸ್ಥಲ ಶೋಭಿ ಕೌಸ್ತುಭಂ
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್ | 6||

ಛಾಯಾಯಾಂ ಪಾರಿಜಾತಸ್ಯ ಹೇಮಸಿಂಹಾಸನೋಪರಿ
ಆಸೀನಮಂಬುದಶ್ಯಾಮಮಾಯತಾಕ್ಷಮಲಂಕೃತಮ್ || 7 ||

ಚಂದ್ರಾನನಂ ಚತುರ್ಬಾಹುಂ ಶ್ರೀವತ್ಸಾಂಕಿತ ವಕ್ಷಸಮ್
ರುಕ್ಮಿಣೀ ಸತ್ಯಭಾಮಾಭ್ಯಾಂ ಸಹಿತಂ ಕೃಷ್ಣಮಾಶ್ರಯೇ || 8 ||

#ಪಂಚಪೂಜ
ಲಂ - ಪೃಥಿವ್ಯಾತ್ಮನೇ ಗಂಥಂ ಸಮರ್ಪಯಾಮಿ
ಹಂ - ಆಕಾಶಾತ್ಮನೇ ಪುಷ್ಪೈಃ ಪೂಜಯಾಮಿ
ಯಂ - ವಾಯ್ವಾತ್ಮನೇ ಧೂಪಮಾಘ್ರಾಪಯಾಮಿ
ರಂ - ಅಗ್ನ್ಯಾತ್ಮನೇ ದೀಪಂ ದರ್ಶಯಾಮಿ
ವಂ - ಅಮೃತಾತ್ಮನೇ ನೈವೇದ್ಯಂ ನಿವೇದಯಾಮಿ
ಸಂ - ಸರ್ವಾತ್ಮನೇ ಸರ್ವೋಪಚಾರ ಪೂಜಾ ನಮಸ್ಕಾರಾನ್ ಸಮರ್ಪಯಾಮಿ

#ಸ್ತೋತ್ರಮ್

ಹರಿಃ ಓಂ

ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ || 1 ||

ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾಗತಿಃ |
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಙ್ಞೋ‌உಕ್ಷರ ಏವ ಚ || 2 ||

ಯೋಗೋ ಯೋಗವಿದಾಂ ನೇತಾ ಪ್ರಧಾನ ಪುರುಷೇಶ್ವರಃ |
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || 3 ||

ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||

ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 ||

ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋ‌உಮರಪ್ರಭುಃ |
ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ || 6 ||

ಅಗ್ರಾಹ್ಯಃ ಶಾಶ್ವತೋ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಳಂ ಪರಮ್ || 7 ||

ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ |
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ || 8 ||

ಈಶ್ವರೋ ವಿಕ್ರಮೀಧನ್ವೀ ಮೇಧಾವೀ ವಿಕ್ರಮಃ ಕ್ರಮಃ |
ಅನುತ್ತಮೋ ದುರಾಧರ್ಷಃ ಕೃತಙ್ಞಃ ಕೃತಿರಾತ್ಮವಾನ್|| 9 ||

ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ |
ಅಹಸ್ಸಂವತ್ಸರೋ ವ್ಯಾಳಃ ಪ್ರತ್ಯಯಃ ಸರ್ವದರ್ಶನಃ || 10 ||

ಅಜಸ್ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ |
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ || 11 ||

ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಮ್ಮಿತಸ್ಸಮಃ |
ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ || 12 ||

ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ |
ಅಮೃತಃ ಶಾಶ್ವತಸ್ಥಾಣುರ್ವರಾರೋಹೋ ಮಹಾತಪಾಃ || 13 ||

ಸರ್ವಗಃ ಸರ್ವ ವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ |
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ಕವಿಃ || 14 ||

ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ |
ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ || 15 ||

ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ನುರ್ಜಗದಾದಿಜಃ |
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || 16 ||

ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ |
ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ || 17 ||

ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ |
ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || 18 ||

ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ |
ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || 19 ||

ಮಹೇಶ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂಗತಿಃ |
ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂ ಪತಿಃ || 20 ||

ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ |
ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ || 21 ||

ಅಮೃತ್ಯುಃ ಸರ್ವದೃಕ್ ಸಿಂಹಃ ಸಂಧಾತಾ ಸಂಧಿಮಾನ್ ಸ್ಥಿರಃ |
ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ || 22 ||

ಗುರುರ್ಗುರುತಮೋ ಧಾಮ ಸತ್ಯಃ ಸತ್ಯಪರಾಕ್ರಮಃ |
ನಿಮಿಷೋ‌உನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ || 23 ||

ಅಗ್ರಣೀಗ್ರಾಮಣೀಃ ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ || 24 ||

ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ |
ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ || 25 ||

ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ |
ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ || 26 ||

ಅಸಂಖ್ಯೇಯೋ‌உಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |
ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿ ಸಾಧನಃ || 27 ||

ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ |
ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ || 28 ||

ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ |
ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ || 29 ||

ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ |
ಋದ್ದಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ || 30 ||

ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ |
ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ || 31 ||

ಭೂತಭವ್ಯಭವನ್ನಾಥಃ ಪವನಃ ಪಾವನೋ‌உನಲಃ |
ಕಾಮಹಾ ಕಾಮಕೃತ್ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || 32 ||

ಯುಗಾದಿ ಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ |
ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್ || 33 ||

ಇಷ್ಟೋ‌உವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ |
ಕ್ರೋಧಹಾ ಕ್ರೋಧಕೃತ್ಕರ್ತಾ ವಿಶ್ವಬಾಹುರ್ಮಹೀಧರಃ || 34 ||

ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ |
ಅಪಾಂನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ || 35 ||

ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ |
ವಾಸುದೇವೋ ಬೃಹದ್ಭಾನುರಾದಿದೇವಃ ಪುರಂಧರಃ || 36 ||

ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ |
ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ || 37 ||

ಪದ್ಮನಾಭೋ‌உರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್ |
ಮಹರ್ಧಿರೃದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ || 38 ||

ಅತುಲಃ ಶರಭೋ ಭೀಮಃ ಸಮಯಙ್ಞೋ ಹವಿರ್ಹರಿಃ |
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ || 39 ||

ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಃ ಸಹಃ |
ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ || 40 ||

ಉದ್ಭವಃ, ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ |
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ || 41 ||

ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |
ಪರರ್ಧಿಃ ಪರಮಸ್ಪಷ್ಟಃ ತುಷ್ಟಃ ಪುಷ್ಟಃ ಶುಭೇಕ್ಷಣಃ || 42 ||

ರಾಮೋ ವಿರಾಮೋ ವಿರಜೋ ಮಾರ್ಗೋನೇಯೋ ನಯೋ‌உನಯಃ |
ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋಧರ್ಮ ವಿದುತ್ತಮಃ || 43 ||

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |
ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || 44 ||

ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ |
ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ || 45 ||

ವಿಸ್ತಾರಃ ಸ್ಥಾವರ ಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |
ಅರ್ಥೋ‌உನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || 46 ||

ಅನಿರ್ವಿಣ್ಣಃ ಸ್ಥವಿಷ್ಠೋ ಭೂದ್ಧರ್ಮಯೂಪೋ ಮಹಾಮಖಃ |
ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ, ಕ್ಷಾಮಃ ಸಮೀಹನಃ || 47 ||

ಯಙ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂಗತಿಃ |
ಸರ್ವದರ್ಶೀ ವಿಮುಕ್ತಾತ್ಮಾ ಸರ್ವಙ್ಞೋ ಙ್ಞಾನಮುತ್ತಮಮ್ || 48 ||

ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ |
ಮನೋಹರೋ ಜಿತಕ್ರೋಧೋ ವೀರ ಬಾಹುರ್ವಿದಾರಣಃ || 49 ||

ಸ್ವಾಪನಃ ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್| |
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ || 50 ||

ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್||
ಅವಿಙ್ಞಾತಾ ಸಹಸ್ತ್ರಾಂಶುರ್ವಿಧಾತಾ ಕೃತಲಕ್ಷಣಃ || 51 ||

ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತ ಮಹೇಶ್ವರಃ |
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ || 52 ||

ಉತ್ತರೋ ಗೋಪತಿರ್ಗೋಪ್ತಾ ಙ್ಞಾನಗಮ್ಯಃ ಪುರಾತನಃ |
ಶರೀರ ಭೂತಭೃದ್ ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ || 53 ||

ಸೋಮಪೋ‌உಮೃತಪಃ ಸೋಮಃ ಪುರುಜಿತ್ ಪುರುಸತ್ತಮಃ |
ವಿನಯೋ ಜಯಃ ಸತ್ಯಸಂಧೋ ದಾಶಾರ್ಹಃ ಸಾತ್ವತಾಂ ಪತಿಃ || 54 ||

ಜೀವೋ ವಿನಯಿತಾ ಸಾಕ್ಷೀ ಮುಕುಂದೋ‌உಮಿತ ವಿಕ್ರಮಃ |
ಅಂಭೋನಿಧಿರನಂತಾತ್ಮಾ ಮಹೋದಧಿ ಶಯೋಂತಕಃ || 55 ||

ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ |
ಆನಂದೋ‌உನಂದನೋನಂದಃ ಸತ್ಯಧರ್ಮಾ ತ್ರಿವಿಕ್ರಮಃ || 56 ||

ಮಹರ್ಷಿಃ ಕಪಿಲಾಚಾರ್ಯಃ ಕೃತಙ್ಞೋ ಮೇದಿನೀಪತಿಃ |
ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್ || 57 ||

ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ |
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರ ಗದಾಧರಃ || 58 ||

ವೇಧಾಃ ಸ್ವಾಂಗೋ‌உಜಿತಃ ಕೃಷ್ಣೋ ದೃಢಃ ಸಂಕರ್ಷಣೋ‌உಚ್ಯುತಃ |
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ || 59 ||

ಭಗವಾನ್ ಭಗಹಾ‌உ‌உನಂದೀ ವನಮಾಲೀ ಹಲಾಯುಧಃ |
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ || 60 ||

ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ |
ದಿವಃಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ || 61 ||

ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ |
ಸನ್ಯಾಸಕೃಚ್ಛಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಮ್| 62 ||

ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ |
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ || 63 ||

ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ |
ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂವರಃ || 64 ||

ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾಂಲ್ಲೋಕತ್ರಯಾಶ್ರಯಃ || 65 ||

ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ |
ವಿಜಿತಾತ್ಮಾ‌உವಿಧೇಯಾತ್ಮಾ ಸತ್ಕೀರ್ತಿಚ್ಛಿನ್ನಸಂಶಯಃ || 66 ||

ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ |
ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ || 67 ||

ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ |
ಅನಿರುದ್ಧೋ‌உಪ್ರತಿರಥಃ ಪ್ರದ್ಯುಮ್ನೋ‌உಮಿತವಿಕ್ರಮಃ || 68 ||

ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ |
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ || 69 ||

ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ |
ಅನಿರ್ದೇಶ್ಯವಪುರ್ವಿಷ್ಣುರ್ವೀರೋ‌உನಂತೋ ಧನಂಜಯಃ || 70 ||

ಬ್ರಹ್ಮಣ್ಯೋ ಬ್ರಹ್ಮಕೃದ್ ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ |
ಬ್ರಹ್ಮವಿದ್ ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಙ್ಞೋ ಬ್ರಾಹ್ಮಣಪ್ರಿಯಃ || 71 ||

ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ |
ಮಹಾಕ್ರತುರ್ಮಹಾಯಜ್ವಾ ಮಹಾಯಙ್ಞೋ ಮಹಾಹವಿಃ || 72 ||

ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ |
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ || 73 ||

ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ |
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ || 74 ||

ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || 75 ||

ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋ‌உನಲಃ |
ದರ್ಪಹಾ ದರ್ಪದೋ ದೃಪ್ತೋ ದುರ್ಧರೋ‌உಥಾಪರಾಜಿತಃ || 76 ||

ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್ |
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ || 77 ||

ಏಕೋ ನೈಕಃ ಸವಃ ಕಃ ಕಿಂ ಯತ್ತತ್ ಪದಮನುತ್ತಮಮ್ |
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ || 78 ||

ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ |
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ || 79 ||

ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ |
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || 80 ||

ತೇಜೋ‌உವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂವರಃ |
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ || 81 ||

ಚತುರ್ಮೂರ್ತಿ ಶ್ಚತುರ್ಬಾಹು ಶ್ಚತುರ್ವ್ಯೂಹ ಶ್ಚತುರ್ಗತಿಃ |
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್ || 82 ||

ಸಮಾವರ್ತೋ‌உನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ |
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ || 83 ||

ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ |
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ || 84 ||

ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ |
ಅರ್ಕೋ ವಾಜಸನಃ ಶೃಂಗೀ ಜಯಂತಃ ಸರ್ವವಿಜ್ಜಯೀ || 85 ||

ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ |
ಮಹಾಹೃದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ || 86 ||

ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋ‌உನಿಲಃ |
ಅಮೃತಾಶೋ‌உಮೃತವಪುಃ ಸರ್ವಙ್ಞಃ ಸರ್ವತೋಮುಖಃ || 87 ||

ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ |
ನ್ಯಗ್ರೋಧೋ‌உದುಂಬರೋ‌உಶ್ವತ್ಥಶ್ಚಾಣೂರಾಂಧ್ರ ನಿಷೂದನಃ || 88 ||

ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |
ಅಮೂರ್ತಿರನಘೋ‌உಚಿಂತ್ಯೋ ಭಯಕೃದ್ಭಯನಾಶನಃ || 89 ||

ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |
ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || 90 ||

ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ |
ಆಶ್ರಮಃ ಶ್ರಮಣಃ, ಕ್ಷಾಮಃ ಸುಪರ್ಣೋ ವಾಯುವಾಹನಃ || 91 ||

ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ |
ಅಪರಾಜಿತಃ ಸರ್ವಸಹೋ ನಿಯಂತಾ‌உನಿಯಮೋ‌உಯಮಃ || 92 ||

ಸತ್ತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |
ಅಭಿಪ್ರಾಯಃ ಪ್ರಿಯಾರ್ಹೋ‌உರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || 93 ||

ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ |
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ || 94 ||

ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋ‌உಗ್ರಜಃ |
ಅನಿರ್ವಿಣ್ಣಃ ಸದಾಮರ್ಷೀ ಲೋಕಧಿಷ್ಠಾನಮದ್ಭುತಃ || 95 ||

ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |
ಸ್ವಸ್ತಿದಃ ಸ್ವಸ್ತಿಕೃತ್ಸ್ವಸ್ತಿಃ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || 96 ||

ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ |
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ || 97 ||

ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ, ಕ್ಷಮಿಣಾಂವರಃ |
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ || 98 ||

ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ |
ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || 99 ||

ಅನಂತರೂಪೋ‌உನಂತ ಶ್ರೀರ್ಜಿತಮನ್ಯುರ್ಭಯಾಪಹಃ |
ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ || 100 ||

ಅನಾದಿರ್ಭೂರ್ಭುವೋ ಲಕ್ಷ್ಮೀಃ ಸುವೀರೋ ರುಚಿರಾಂಗದಃ |
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ || 101 ||

ಆಧಾರನಿಲಯೋ‌உಧಾತಾ ಪುಷ್ಪಹಾಸಃ ಪ್ರಜಾಗರಃ |
ಊರ್ಧ್ವಗಃ ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ || 102 ||

ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || 103 ||

ಭೂರ್ಭುವಃ ಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ |
ಯಙ್ಞೋ ಯಙ್ಞಪತಿರ್ಯಜ್ವಾ ಯಙ್ಞಾಂಗೋ ಯಙ್ಞವಾಹನಃ || 104 ||

ಯಙ್ಞಭೃದ್ ಯಙ್ಞಕೃದ್ ಯಙ್ಞೀ ಯಙ್ಞಭುಕ್ ಯಙ್ಞಸಾಧನಃ |
ಯಙ್ಞಾಂತಕೃದ್ ಯಙ್ಞಗುಹ್ಯಮನ್ನಮನ್ನಾದ ಏವ ಚ || 105 ||

ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |
ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || 106 ||

ಶಂಖಭೃನ್ನಂದಕೀ ಚಕ್ರೀ ಶಾರ್ಂಗಧನ್ವಾ ಗದಾಧರಃ |
ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || 107 ||

ಶ್ರೀ ಸರ್ವಪ್ರಹರಣಾಯುಧ ಓಂ ನಮ ಇತಿ |

ವನಮಾಲೀ ಗದೀ ಶಾರ್ಂಗೀ ಶಂಖೀ ಚಕ್ರೀ ಚ ನಂದಕೀ |
ಶ್ರೀಮಾನ್ನಾರಾಯಣೋ ವಿಷ್ಣುರ್ವಾಸುದೇವೋ‌உಭಿರಕ್ಷತು || 108 ||

ಶ್ರೀ ವಾಸುದೇವೋ‌உಭಿರಕ್ಷತು ಓಂ ನಮ ಇತಿ |

#ಉತ್ತರ_ಭಾಗಂ

#ಫಲಶ್ರುತಿಃ
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್| || 1 ||

ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್||
ನಾಶುಭಂ ಪ್ರಾಪ್ನುಯಾತ್ ಕಿಂಚಿತ್ಸೋ‌உಮುತ್ರೇಹ ಚ ಮಾನವಃ || 2 ||

ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ |
ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಃ ಸುಖಮವಾಪ್ನುಯಾತ್ || 3 ||

ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಮರ್ಥಾರ್ಥೀ ಚಾರ್ಥಮಾಪ್ನುಯಾತ್ |
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಪ್ರಾಪ್ನುಯಾತ್ಪ್ರಜಾಮ್| || 4 ||

ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ |
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ || 5 ||

ಯಶಃ ಪ್ರಾಪ್ನೋತಿ ವಿಪುಲಂ ಙ್ಞಾತಿಪ್ರಾಧಾನ್ಯಮೇವ ಚ |
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್| || 6 ||

ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ |
ಭವತ್ಯರೋಗೋ ದ್ಯುತಿಮಾನ್ ಬಲರೂಪ ಗುಣಾನ್ವಿತಃ || 7 ||

ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ |
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ || 8 ||

ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ || 9 ||

ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ |
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್| || 10 ||

ನ ವಾಸುದೇವ ಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ || 11 ||

ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ |
ಯುಜ್ಯೇತಾತ್ಮ ಸುಖಕ್ಷಾಂತಿ ಶ್ರೀಧೃತಿ ಸ್ಮೃತಿ ಕೀರ್ತಿಭಿಃ || 12 ||

ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾಮತಿಃ |
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ || 13 ||

ದ್ಯೌಃ ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ || 14 ||

ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ |
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸ ಚರಾಚರಮ್| || 15 ||

ಇಂದ್ರಿಯಾಣಿ ಮನೋಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ |
ವಾಸುದೇವಾತ್ಮಕಾನ್ಯಾಹುಃ, ಕ್ಷೇತ್ರಂ ಕ್ಷೇತ್ರಙ್ಞ ಏವ ಚ || 16 ||

ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪತೇ |
ಆಚರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ || 17 ||

ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ || 18 ||

ಯೋಗೋಙ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ |
ವೇದಾಃ ಶಾಸ್ತ್ರಾಣಿ ವಿಙ್ಞಾನಮೇತತ್ಸರ್ವಂ ಜನಾರ್ದನಾತ್ || 19 ||

ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ |
ತ್ರೀಂಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ || 20 ||

ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ |
ಪಠೇದ್ಯ ಇಚ್ಚೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || 21 ||

ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭುಮವ್ಯಯಮ್|
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ || 22 ||

ನ ತೇ ಯಾಂತಿ ಪರಾಭವಮ್ ಓಂ ನಮ ಇತಿ |

ಅರ್ಜುನ ಉವಾಚ
ಪದ್ಮಪತ್ರ ವಿಶಾಲಾಕ್ಷ ಪದ್ಮನಾಭ ಸುರೋತ್ತಮ |
ಭಕ್ತಾನಾ ಮನುರಕ್ತಾನಾಂ ತ್ರಾತಾ ಭವ ಜನಾರ್ದನ || 23 ||

ಶ್ರೀಭಗವಾನುವಾಚ
ಯೋ ಮಾಂ ನಾಮಸಹಸ್ರೇಣ ಸ್ತೋತುಮಿಚ್ಛತಿ ಪಾಂಡವ |
ಸೋ‌உಹಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ || 24 ||

ಸ್ತುತ ಏವ ನ ಸಂಶಯ ಓಂ ನಮ ಇತಿ |

ವ್ಯಾಸ ಉವಾಚ
ವಾಸನಾದ್ವಾಸುದೇವಸ್ಯ ವಾಸಿತಂ ಭುವನತ್ರಯಮ್ |
ಸರ್ವಭೂತನಿವಾಸೋ‌உಸಿ ವಾಸುದೇವ ನಮೋ‌உಸ್ತು ತೇ || 25 ||

ಶ್ರೀವಾಸುದೇವ ನಮೋಸ್ತುತ ಓಂ ನಮ ಇತಿ |

ಪಾರ್ವತ್ಯುವಾಚ
ಕೇನೋಪಾಯೇನ ಲಘುನಾ ವಿಷ್ಣೋರ್ನಾಮಸಹಸ್ರಕಮ್ |
ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತುಮಿಚ್ಛಾಮ್ಯಹಂ ಪ್ರಭೋ || 26 ||

ಈಶ್ವರ ಉವಾಚ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ || 27 ||

ಶ್ರೀರಾಮ ನಾಮ ವರಾನನ ಓಂ ನಮ ಇತಿ |

ಬ್ರಹ್ಮೋವಾಚ
ನಮೋ‌உಸ್ತ್ವನಂತಾಯ ಸಹಸ್ರಮೂರ್ತಯೇ ಸಹಸ್ರಪಾದಾಕ್ಷಿಶಿರೋರುಬಾಹವೇ |
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ ಸಹಸ್ರಕೋಟೀ ಯುಗಧಾರಿಣೇ ನಮಃ || 28 ||

ಶ್ರೀ ಸಹಸ್ರಕೋಟೀ ಯುಗಧಾರಿಣೇ ನಮ ಓಂ ನಮ ಇತಿ |

ಸಂಜಯ ಉವಾಚ
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ || 29 ||

ಶ್ರೀ ಭಗವಾನ್ ಉವಾಚ
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್| || 30 ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್| |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ || 31 ||

ಆರ್ತಾಃ ವಿಷಣ್ಣಾಃ ಶಿಥಿಲಾಶ್ಚ ಭೀತಾಃ ಘೋರೇಷು ಚ ವ್ಯಾಧಿಷು ವರ್ತಮಾನಾಃ |
ಸಂಕೀರ್ತ್ಯ ನಾರಾಯಣಶಬ್ದಮಾತ್ರಂ ವಿಮುಕ್ತದುಃಖಾಃ ಸುಖಿನೋ ಭವಂತಿ || 32 ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ || 33 ||

ಯದಕ್ಷರ ಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್
ತಥ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋ‌உಸ್ತ?
ನಿಸರ್ಗ ಬಿಂದು ಮಾತ್ರಾಣಿ ಪದಪಾದಾಕ್ಷರಾಣಿ ಚ
ನ್ಯೂನಾನಿ ಚಾತಿರಿಕ್ತಾನಿ ಕ್ಷಮಸ್ವ ಪುರುಷಮಃ!

Wednesday, 24 June 2020

ಶ್ರೀ ಗಣೇಶ ಶ್ಲೋಕಗಳು

ganesha

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ

ಅಥವಾ

ಓಂ ನಮೋ ವಿಘ್ನೇಶ್ವರಾಯ ನಮಃ

– ಏನೇ ಒಂದು ಹೊಸ (embarking on anything new) ಕೆಲಸ/ಕಾರ್ಯ (ಪರೀಕ್ಷೆ, ಹೊಸ ಮನೆ, ಮದುವೆ, interview ) ಶುರು ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿ.

ಗಣೇಶ ಗಾಯತ್ರಿ ಮಂತ್ರ:

ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್

ಅಥವಾ

ಓಂ  ತತ್ಪುರುಶ್ಯಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್

********************

ಶ್ರೀ ಗಜಮುಖನ  ಶ್ಲೋಕಗಳು :

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ

*******************

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ಅಗಜಾನನ  ಪದ್ಮಾರ್ಕಂ ಗಜಾನನ  ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್

****************************

ಗಜಾನನಂ ಭೂತ ಗಾಣಧಿ ಸೇವಿತಂ

ಕಪಿಥ ಜಂಬೋ ಫಲ ಸಾರ ಭಕ್ಷಿತಂ

ಉಮಾಸುತಂ ಶೋಕ ವಿನಾಶಕಾರಣಂ

ನಮಾಮಿ ವಿಘ್ನೇಶ ಪಾದ ಪಂಕಜಂ.

***********************

ಗಣಾನಾಂ  ತ್ವಂ ಗಣಪತಿ ಗಂ ಹವಾಮಹೇ
ಕವಿಂ ಕವೀನಾಂ ಉಪಮಸ್ರ ವಸ್ತಮಂ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆನಶ್ರುನ್ವನ್ನ ಊತಿಭಿ ಸೀದ ಸಾದನಂ

************************

ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ
ಜನಕ: ಶಂಕರೋ ದೇವಃ, ತಮ್  ವಂದೇ ಕುಂಜರಾನನಂ

********************************

ganesha

ಗಜವಕ್ತ್ರಂ  ಸುರ-ಶ್ರೇಷ್ಟಂ
ಕರ್ಣ ಚಾಮರ  ಭೂಷಿತಾಂ
ಪಾಶಾಂಕುಶ  ಧರಂ ದೇವಂ
ವಂದೆಹಂ ಗಣನಾಯಕಂ

****************

ಏಕದಂತಂ ಮಹಾಕಾಯಂ ತಪ್ತಕಾಜ್ಞ್ಚಂಸಂನಿಭಮ್
ಲಂಬೋದರಂ ವಿಶಾಲಾಕ್ಷo ವಂದೆಹಂ ಗಣನಾಯಕಂ

*******************************

ಏಕದಂತಂ ಮಹಕಾಯಂ
ಲಂಬೋದರ ಗಜಾನನಂ
ವಿಘ್ನ ನಾಶಕರ್ಮ ದೇವಂ
ಹೇರಮ್ಬಂ ಪ್ರಾಣ ಮಾಮ್ಯಹಂ

*******************

ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ

*******************************

ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ  ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ

***************************

೧೬ ಶ್ರೀ ಗಣೇಶನ ನಾಮಗಳು:

Ganesh

೧. ಓಂ  ಸುಮುಖಾಯ ನಮಃ
೨. ಓಂ  ಏಕದಂತಾಯ ನಮಃ
೩. ಓಂ  ಕಪಿಲಾಯ ನಮಃ
೪. ಓಂ ಗಜಕರ್ಣಾಯ ನಮಃ
೫. ಓಂ ಲಂಬೋಧರಾಯ ನಮಃ
೬. ಓಂ ವಿಕಟಾಯ ನಮಃ
೭. ಓಂ ವಿಘ್ನರಾಜಾಯ ನಮಃ
೮. ಓಂ  ಗಣಾಧಿಪಾಯ ನಮಃ
೯. ಓಂ  ಧೂಮಕೇತವೆ ನಮಃ
೧೦. ಓಂ ಗಣಾಧ್ಯಕ್ಷಾಯ ನಮಃ
೧೧. ಓಂ ಬಾಲಚಂದ್ರಾಯ ನಮಃ
೧೨. ಓಂ  ಗಜಾನನಾಯ ನಮಃ
೧೩. ಓಂ ವಕ್ರತುಂಡಾಯ ನಮಃ
೧೪.    ಓಂ ಸೂರ್ಪಕರ್ಣಾಯ ನಮಃ
೧೫. ಓಂ ಹೇರಮ್ಭಾಯ ನಮಃ
೧೬. ಓಂ ಸ್ಕಂದಪೂರ್ವಜಾಯ ನಮಃ

೧೬ ನಾಮಗಳೊಂದಿಗೆ ಶ್ರೀ ಗಣೇಶನಿಗೆ ಪ್ರಾಥನೆ:

ಸುಮುಖಶ್ಚ  ಏಕದನ್ತಶ್ಚ  ಕಪಿಲೋ  ಗಜಕರ್ಣಕ:
ಲಂಬೋದರಶ್ಚ  ವಿಕಟ: ವಿಘ್ನರಾಜೋ ವಿನಾಯಕ:
ಧೂಮಕೆತುರ್ ಗಣಾಧಕ್ಷ್ಯೋ ಬಾಲಚಂದ್ರೋ ಗಜಾನನ:
ವಕ್ರತುಂಡ:  ಸೂರ್ಪಕರ್ಣ: ಹೇರಂಭ: ಸ್ಕಂದಪೂರ್ವಜ:

ಶ್ರೀ ಗಣೇಶ ದ್ವಾದಶನಾಮ ಸ್ತೋತ್ರ:

ಪ್ರಣಮ್ಯ  ಶಿರಸಾ ದೇವಂ  ಗೌರಿ  ಪುತ್ರಂ  ವಿನಾಯಕಂ
ಭಕ್ತವಾಸಂ  ಸ್ಮರೆನಿತ್ಯಂ ಅಯುರ್ಕಾಮರ್ಥ ಸಿದ್ಧಯೇ          ೧

ಪ್ರಥಮಂ  ವಕ್ರತುಂದಮ್ಚ  ಏಕದಂತಂ  ದ್ವಿತಿಯಕಂ
ತ್ರುತಿಯಂ  ಕ್ರಿಷ್ಣಪಿನ್ಗಕಾಶಂ ಗಜವಕ್ರಂ ಚತುರ್ಥಕಂ             ೨

ಲಂಬೋದರಂ  ಪಂಚಮಂಚ  ಶಷ್ಟಂ ವಿಕಟಮೇವಚ
ಸಪ್ತಮಂ  ವಿಘ್ನರಾಜಮ್ಚ ಧೂಮ್ರವರ್ಣಂ ತಥಾಷ್ಟಕಂ           ೩

ನವಮಂ ಬಾಲಚಂದ್ರಮ್ಚ ದಶಮಂತು  ವಿನಾಯಕಂ
ಏಕದಶಂ ಗಣಪತಿಂ ದ್ವಾದಶಂತು ಗಜಾನನಂ                   ೪

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯ: ಪಠೇನ್ ನರಃ
ನಚವಿಘ್ನ ಭಯಂ ತಸ್ಯ ಸರ್ವಸಿಧಿಕರಂ ಪ್ರಭೋ                ೫

*******************************

ಶ್ರೀ ವಿಘ್ನೇಶ್ವರ ಅಷ್ಟೋತ್ತರ ಶತನಾಮಾವಳಿ:


೧. ಓಂ  ಗಜಾನನಾಯ ನಮಃ
೨. ಓಂ  ಗಣಾಧ್ಯಾಕ್ಷಯ ನಮಃ
೩.ಓಂ ವಿಘ್ನರಾಜಾಯ ನಮಃ
೪. ಓಂ ವಿನಾಕಯ ನಮಃ
೫. ಓಂ ದ್ವೈಮಾತುರಾಯ ನಮಃ
೬. ಓಂ ದ್ವಿಮುಖಾಯ ನಮಃ
೭. ಓಂ  ಪ್ರಮುಖಾಯ ನಮಃ
೮. ಓಂ ಸುಮುಖಾಯ ನಮಃ
೯. ಓಂ  ಕ್ರುತಿನೆ ನಮಃ
೧೦. ಓಂ ಸುಪ್ರ-ದೀಪಾಯ ನಮಃ
೧೧. ಓಂ  ಸುಖ – ನಿಧಯೇ ನಮಃ

೧೨. ಓಂ  ಸುರ- ಅಧ್ಯಕ್ಷಾಯ ನಮಃ
೧೩. ಓಂ  ಸುರ- ರಿಘ್ನಯ ನಮಃ
೧೪. ಓಂ  ಮಹಾಗಣಪತಯೇ ನಮಃ
೧೫. ಓಂ ಮನ್ಯಾಯ ನಮಃ
೧೬. ಓಂ ಮಹಾಕಳಾಯ ನಮಃ
೧೭. ಓಂ ಮಹಾಬಲಾಯ ನಮಃ
೧೮. ಓಂ ಹೇರಮ್ಬಾಯ ನಮಃ
೧೯. ಓಂ ಲಂಬ- ಜಟರಾಯ ನಮಃ
೨೦. ಓಂ ಹಸ್ವಗ್ರಿವಾಯ ನಮಃ
೨೧. ಓಂ  ಮಹೋದರಾಯ ನಮಃ

೨೨. ಓಂ ಮದೊತ್ಕತಾಯ ನಮಃ
೨೩. ಓಂ ಮಹಾವೀರಾಯ ನಮಃ
೨೪. ಓಂ ಮಂತ್ರಿನೆ ನಮಃ
೨೫. ಓಂ ಮಂಗಳ-ಸ್ವರೂಪಾಯ ನಮಃ
೨೬. ಓಂ ಪ್ರಮೊದಾಯ ನಮಃ
೨೭. ಓಂ ಪ್ರದನಾಯ ನಮಃ
೨೮. ಓಂ ಪ್ರಾಘ್ಯ್ನಾಯ ನಮಃ
೨೯. ಓಂ ವಿಘ್ನಕತ್ರೆ ನಮಃ
೩೦. ಓಂ ವಿಘ್ನಹಂತ್ರೆ ನಮಃ
೩೧. ಓಂ ವಿಶ್ವ-ನೇತ್ರಾಯ ನಮಃ

೩೨. ಓಂ ವಿರಾತ್ಪತಯೇ ನಮಃ
೩೩. ಓಂ ಶ್ರೀಪತಯೇ ನಮಃ
೩೪. ಓಂ ವಾಕ್ಪತಯೇ ನಮಃ
೩೫. ಓಂ ಶ್ರುಂಗರಿನೆ ನಮಃ
೩೬. ಓಂ ಆಶ್ರಿತ -ವಾತ್ಸಲ್ಯ  ನಮಃ
೩೭. ಓಂ ಶಿವಪ್ರಿಯಾಯ ನಮಃ
೩೮. ಓಂ ಶೀಘ್ರ-ಕಾರಿಣೆ  ನಮಃ
೩೯. ಓಂ ಶಾಶ್ವತಾಯ ನಮಃ
೪೦. ಓಂ ಬಲಾಯ ನಮಃ
೪೧. ಓಂ ಬಲೋಧಿತಾಯ ನಮಃ
೪೨. ಓಂ ಭಾವಾತ್ಮಜಾಯ ನಮಃ
೪೩. ಓಂ ಪುರಾಣ-ಪುರುಷಾಯ ನಮಃ
೪೪. ಓಂ ಪೂಷ್ನೆ ನಮಃ
೪೫. ಓಂ ಪುಷ್ಕರೋಚಿತ್ತಯ  ನಮಃ
೪೬. ಓಂ ಅಗ್ರಗನ್ಯಾಯ ನಮಃ
೪೭. ಓಂ ಅಗ್ರಪುಜ್ಯಾಯ ನಮಃ
೪೮. ಓಂ ಅಗ್ರಗಾಮಿನೆ ನಮಃ
೪೯. ಓಂ ಮಂತ್ರಕ್ರುತೈ ನಮಃ
೫೦. ಓಂ ಚಾಮಿಕರ-ಪ್ರಭಾಯ ನಮಃ
೫೧. ಓಂ  ಸರ್ವಾಯ ನಮಃ

೫೨. ಓಂ ಸರ್ವೋಪಸ್ಯಾಯ ನಮಃ
೫೩. ಓಂ ಸರ್ವಕರ್ತ್ರೆ ನಮಃ
೫೪. ಓಂ ಸರ್ವ-ನೇತ್ರಾಯ ನಮಃ
೫೫. ಓಂ ಸರ್ವ-ಸಿದ್ಧಿಪ್ರದಾಯ ನಮಃ
೫೬. ಓಂ ಸರ್ವ-ಸಿದ್ಧಯೇ ನಮಃ
೫೭. ಓಂ ಪಂಚ-ಹಸ್ತಾಯ ನಮಃ
೫೮. ಓಂ ಪಾರ್ವತೀ-ನದನಾಯ ನಮಃ
೫೯. ಓಂ ಪ್ರಭವೆ ನಮಃ
೬೦. ಓಂ ಕುಮಾರ-ಗುರವೇ ನಮಃ
೬೧. ಓಂ ಅಕ್ಶೋಭ್ಯಾಯಾ  ನಮಃ
೬೨. ಓಂ  ಕುಂಜರ-ಸುರ-ಭಂಜನಾಯ ನಮಃ
೬೩. ಓಂ  ಪ್ರಮೋದ್-ಆಪ್ತ-ನಯನಾಯ ನಮಃ
೬೪. ಓಂ ಮೋದಕ-ಪ್ರಿಯಾಯ ನಮಃ
೬೫. ಓಂ ಕಾಂತಿಮತೆ ನಮಃ
೬೬. ಓಂ ಧ್ರುತಿಮತೆ ನಮಃ
೬೭. ಓಂ ಕಾಮಿನೆ ನಮಃ
೬೮. ಓಂ ಕವಿದ್ಧಪ್ರಿಯಾಯ ನಮಃ
೬೯. ಓಂ ಬ್ರಹ್ಮಚಾರಿಣೇ ನಮಃ
೭೦. ಓಂ ಬ್ರಹ್ಮರೂಪಿಣೇ ನಮಃ
೭೧. ಓಂ ಬ್ರಹ್ಮ-ವಿಧ್ಯಾಧಿ -ಪಾಯ ನಮಃ
೭೨. ಓಂ ಜಿಷ್ಣವೆ ನಮಃ

೭೩. ಓಂ ವಿಷ್ಣುಪ್ರಿಯಾಯ ನಮಃ
೭೪. ಓಂ ಭಕ್ತ-ಜೀವಿತಾಯ ನಮಃ
೭೫. ಓಂ ಜಿತಮನ್ಮತಾಯ ನಮಃ
೭೬. ಓಂ ಇಷ್ವರ್ಯಕರನಾಯ ನಮಃ
೭೭. ಓಂ ಜಾಯಸೆ ನಮಃ
೭೮. ಓಂ ಯಕ್ಷಕಿನ್ನೆರ-ಸೇವಿತಯ ನಮಃ
೭೯. ಓಂ ಗಂಗಾ-ಸುತಾಯ ನಮಃ
೮೦. ಓಂ ಗಣಧಿಸ್ಹಾಯ ನಮಃ
೮೧. ಓಂ ಗಂಭೀರ -ನಿನದಯ ನಮಃ
೮೨. ಓಂ ವಟವೆ ನಮಃ
೮೩. ಓಂ ಅಭಿಷ್ಟ-ವರಾದಾಯ ನಮಃ
೮೪. ಓಂ ಜ್ಯೋತಿಷೆ ನಮಃ
೮೫. ಓಂ ಭಕ್ತ -ನಿಧಯೇ ನಮಃ
೮೬. ಓಂ ಭಾವ -ಗಮ್ಯಾಯ ನಮಃ
೮೭. ಓಂ ಮಂಗಳಪ್ರದಾಯ ನಮಃ
೮೮. ಓಂ ಅವ್ಯಕ್ತಾಯ ನಮಃ
೮೯. ಓಂ ಅಪ್ರಕೃತ-ಪರಕ್ರಮಾಯ ನಮಃ
೯೦. ಓಂ ಸತ್ಯಧರ್ಮಿಣೇ ನಮಃ
೯೧. ಓಂ ಸಖ್ಯೆ ನಮಃ
೯೨. ಓಂ ಸರಸಂ-ಭುನಿ-ಧಯೇ ನಮಃ
೯೩. ಓಂ ಮಹೇಶಾಯ ನಮಃ
೯೪. ಓಂ ದಿವ್ಯಂಗಾಯ ನಮಃ
೯೫. ಓಂ ಮನಿಕಿನ್ಕಿನಿ-ಮೆಖನಾಯ ನಮಃ
೯೬. ಓಂ ಸಮಸ್ತ -ದೈವತಾಯ ನಮಃ
೯೭. ಓಂ ಸಹಿಷ್ಣವೆ ನಮಃ
೯೮. ಓಂ ಸತತೋದ್-ದಿತಾಯ ನಮಃ
೯೯. ಓಂ ವಿಘತಕಾರಿನೆ ನಮಃ
೧೦೦. ಓಂ ವಿಶ್ವ -ದ್ರುಷೆ ನಮಃ
೧೦೧. ಓಂ ವಿಶ್ವ-ರಕ್ಷಕ್ರುತೆ ನಮಃ
೧೦೨. ಓಂ ಕಲ್ಯಾಣ-ಗುರುವೇ ನಮಃ
೧೦೩. ಓಂ ಉನ್ಮತ್ತ-ವೆಶಾಯ ನಮಃ
೧೦೪. ಓಂ ಅವರ -ಜಜಿತೆ ನಮಃ
೧೦೫. ಓಂ ಸಮಸ್ತ -ಜಗದ್ಧರಾಯ  ನಮಃ
೧೦೬. ಓಂ  ಸರ್ವಿಶ್ವರ್ಯಾಯ ನಮಃ
೧೦೭. ಓಂ ಅಕ್ರಂತ-ಚಿದಕ್ -ಚಿತ್ರ-ಪ್ರಭವೆ ನಮಃ
೧೦೮. ಓಂ ಶ್ರೀವಿಘ್ನೇಶ್ವರಾಯ  ನಮಃ

************************

Wednesday, 3 June 2020

ಜೂ. 5ರಂದು ಚಂದ್ರಗ್ರಹಣ: ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ.?

ಈ ವರ್ಷದ ಎರಡನೇ ಚಂದ್ರಗ್ರಹಣ ಜೂನ್ 5ರಂದು ಸಂಭವಿಸಲಿದೆ. ಅಂದು ರಾತ್ರಿ 11.15ಕ್ಕೆ ಆರಂಭವಾಗಲಿರುವ ಗ್ರಹಣ ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. ಅಂದರೆ ಈ ಗ್ರಹಣದ ಒಟ್ಟು ಅವಧಿ ಮೂರು ಗಂಟೆ 19 ನಿಮಿಷ. ಯೂರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕದ ಕೆಲ ಭಾಗಗಳಲ್ಲಿ ಇದು ಗೋಚರಿಸಲಿದೆ. 12.54ಕ್ಕೆ ಅದು ತನ್ನ ಪೂರ್ಣ ಸ್ವರೂಪದಲ್ಲಿ ಗೋಚರಿಸುತ್ತದೆ ಎಂದು ಖಭೌತ ವಿಜ್ಞಾನಿಗಳು ಹೇಳಿದ್ದಾರೆ.

ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್ ...

2020ರಲ್ಲಿ ಸಂಭವಿಸುತ್ತಿರುವ ಎರಡನೇ ಚಂದ್ರಗ್ರಹಣ ಇದು. ಮೊದಲನೆಯದು ಜನವರಿ 10ರಂದು ಸಂಭವಿಸಿತ್ತು. ಜುಲೈ 5 ಮತ್ತು ನವೆಂಬರ್ 29ರಂದು ಇನ್ನೆರಡು ಚಂದ್ರಗ್ರಹಣಗಳು ಸಂಭವಿಸಲಿವೆ.

july lunar eclipse 2019: ಈ ವರ್ಷದ ಚಂದ್ರಗ್ರಹಣ ...

ಈ ನಾಲ್ಕೂ ಗ್ರಹಣಗಳ ಪೈಕಿ ಜೂನ್ 5ರ ಗ್ರಹಣ ಕರ್ನಾಟಕವೂ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ಗೋಚರಿಸುತ್ತದೆ. ನವೆಂಬರ್ 29ರ ಗ್ರಹಣ ಕೂಡ ಭಾಗಶಃ ಗೋಚರಿಸುವಂತಹದ್ದು. ಆದರೆ ಇದೆಲ್ಲವೂ ಆ ಸಂದರ್ಭದಲ್ಲಿ ಇರುವ ಶುಭ್ರ ವಾತಾವರಣ, ಮೋಡ ಮುಸುಕಿದ ಆಕಾಶ ಇದೆಲ್ಲದರ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.



Tuesday, 2 June 2020

ಮಂಗಳಮುಖಿಯರಿಗೆ ಯಾವತ್ತೂ ಮರೆತೂ ಈ ವಸ್ತುಗಳನ್ನು ದಾನವಾಗಿ ನೀಡಬಾರದು.!

ಮಂಗಳಮುಖಿಯರು ಕೂಡ ನಮ್ಮ ಸಮಾಜದ ಒಂದು ಭಾಗವಾಗಿದ್ದಾರೆ, ಆದರೆ ಎಷ್ಟೋ ಮಂದಿ ಇಂದು ಅವರಿಗೆ ಸಲ್ಲಬೇಕಾದ ಸ್ಥಾನಮಾನ ನೀಡಲು ಒಪ್ಪಿಕೊಳ್ಳುವುದಿಲ್ಲ ಮತ್ತು ಅವರನ್ನು ಕೀಳಾಗಿ ಅಥವಾ ಕೆಟ್ಟ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿರಲಿ ಹಿಂದೊಂದು ದಿನ ಅಂದರೆ ಪುರಾಣ ಕಾಲದಲ್ಲಿಯೂ ಕೂಡ ಮಂಗಳಮುಖಿಯರಿಗೆ ಉತ್ತಮ ಸ್ಥಾನ ನೀಡಲಾಗಿತ್ತು, ಶಾಸ್ತ್ರಗಳ ಪಕಾರ ಮಂಗಳಮುಖಿಯರಿಗೆ ದಾನ ಮಾಡುವುದರಿಂದ ಭಗವಾನ್ ವಿಷ್ಣುವಿನ ಕ್ರಪೆ ಸಿಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ವಿಷ್ಣುವಿನ ಆಶೀರ್ವಾದ ಮತ್ತು ಗ್ರಹಗಳ ಸಂಚಾರದಲ್ಲಿ ಸಿಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.


ಇಷ್ಟೇ ಅಲ್ಲದೆ ಇವರಿಗೆ ಯಾವ ವಸ್ತುಗಳನ್ನು ದಾನವಾಗಿ ನೀಡಬಾರದು ಎಂದು ಕೂಡ ಹೇಳಲಾಗಿದೆ ಮತ್ತು ಈ ವಸ್ತುಗಳನ್ನು ಭಿಕ್ಷೆಯಾಗಿ ಕೊಟ್ಟರೆ ಖಂಡಿತ ನಿಮ್ಮನ್ನು ದರಿದ್ರತನ, ನಷ್ಟ, ದುರಾದ್ರಷ್ಟ ಬೆನ್ನಟ್ಟುತ್ತದೆ. ಇನ್ನು ವಸ್ತುಗಳನ್ನ ದಾನವಾಗಿ ಮಂಗಳಮುಖಿಯರಿಗೆ ನೀಡುವುದರಿಂದ ನೀವು ಜಿನಲ್ಲಿ ಅನೇಕ ರೀತಿಯ ತಿಒಂದರೆಗಳನ್ನ ಎದುರಿಸಬೇಕಾಗುತ್ತದೆ ಹಾಗೆ ನಿಮ್ಮ ಜೀವನದಲ್ಲಿ ಏಳಿಗೆ ಆಗುವುದಿಲ್ಲ. ಹಾಗಿದ್ದರೆ ದಾರಿಯಲ್ಲಿ ಮಂಗಳಮುಖಿಯರಿಗೆ ಯಾವ ವಸ್ತುಗಳನ್ನು ದಾನವಾಗಿ ನೀಡಬಾರದು ಗೊತ್ತಾ ಒಮ್ಮೆ ತಿಳಿಯಿರಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹಬ್ಬದ ಸಮಯದಲ್ಲಿ ಮನೆಯ ಹಳೆಯ ವಸ್ತುಗಳನ್ನು ಹಾಗು ಬಳಸದ ವಸ್ತುಗಳನ್ನು ದಾನ ಮಾಡುವ ಅಭ್ಯಾಸ ಹಲವು ಜನರಿಗೆ ಇದೆ, ಸ್ನೇಹಿತರೆ ಇದು ಒಳ್ಳೆಯ ಅಭ್ಯಾಸ ಆದರೆ ನೆನೆಪಿಡಿ ಮಂಗಳಮುಖಿಯರಿಗೆ ಯಾವತ್ತೂ ಕೂಡ ಪಾತ್ರೆಗಳನ್ನು ದಾನವಾಗಿ ನೀಡಬೇಡಿ.

ಮಂಗಳಮುಖಿ ಇದಕ್ಕೆ ಅಸ್ತು ಎಂದ್ರೆ ...

ಹೌದು ಮಂಗಳಮುಖಿಯರಿಗೆ ಪಾತ್ರೆಗಳನ್ನ ದಾನವಾಗಿ ನೀಡುವುದರಿಂದ ನಿಮ್ಮ ಕುಟುಂಬದಲ್ಲಿ ಅಶಾಂತಿ, ಜಗಳ, ಕಲಹಕ್ಕೆ ಕಾರಣವಾಗುತ್ತದೆ, ಕುಟುಂಬದ ಸದಸ್ಯರಲ್ಲಿ ಮನಸ್ತಾಪ ಮತ್ತು ಕುಟುಂಬದ ಅಭಿವೃದ್ಧಿಗೆ ದೋಷವಾಗುತ್ತದೆ. ಇಷ್ಟೇ ಅಲ್ಲದೆ ಇವರಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಕೂಡ ನೀಡುವುದು ತಪ್ಪಾಗುತ್ತದೆ ಇದರಿಂದ ಮನೆಯ ಸದಸ್ಯರಿಗೆ ಯಾವುದಾದರು ರೋಗ ಅಥವಾ ಅರೋಗ್ಯ ಹದಗೆಡುವ ಸಮಸ್ಯೆಗಳು ಪದೇ ಪದೇ ಎದುರಾಗಬಹುದು, ಇದು ಕುಟುಂಬದ ಪ್ರಗತಿಗೆ ಅಡ್ಡಿಯಾಗುತ್ತದೆ. ಹಾಗೆಯೆ ಮನೆಯಲ್ಲಿನ ಪೊರಕೆಯನ್ನು ಲಕ್ಷ್ಮಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಮನೆಗೆ ಬರುವ ಮಂಗಳಮುಖಿಯರಿಗೆ ಇದನ್ನು ನೀಡಬೇಡಿ ಮತ್ತು ಇದನ್ನು ಮಾಡುವುದರಿಂದ ನೀವು ಲಕ್ಷ್ಮಿಯ ವಾಸಸ್ಥಾನವನ್ನು ನಿಮ್ಮ ಮನೆಯಿಂದ ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ ಮತ್ತು ತೊಂದರೆಯ ಜೀವನವನ್ನು ನಡೆಸಬೇಕಾಗುತ್ತದೆ ಹಾಗೆ ಹಣಕಾಸಿನ ವಿಚಾರದಲ್ಲಿ ಒಮ್ಮೊಮ್ಮೆ ನೀವೂ ಕೂಡ ಎಷ್ಟೇ ಹಣವಿದ್ದರೂ ಒಮ್ಮೊಮ್ಮೆ ಸಂದಿಗ್ದ ಪರಿಸ್ಥಿತಿಗೆ ತಲುಪುವಿರಿ.



ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ಶನಿವಾರ ದಿನ ದಾನ ಮಾಡಲಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಮತ್ತು ಇದು ಮನೆಯ ಬಡತನ ಮತ್ತು ದುರದೃಷ್ಟವನ್ನು ತೆಗೆದುಹಾಕುತ್ತದೆ. ಆದರೆ ಮನೆಗೆ ಬರುವ ಮಂಗಳಮುಖಿಯರಿಗೆ ಎಂದಿಗೂ ತೈಲವನ್ನು ದಾನ ಮಾಡಬಾರದು ಎಂಬುದು ನಿಮಗೆಲ್ಲರಿಗೂ ತಿಳಿದಿಲ್ಲ, ಹೌದು ಸ್ನೇಹಿತರೆ ಹೀಗೆ ಮಾಡಿದರೆ ದುಃಖ ಮತ್ತು ಬಡತನವು ನಿಮ್ಮ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತದೆ, ಸ್ನೇಹಿತರೆ ಈ ಎಲ್ಲಾ ವಸ್ತುಗಳನ್ನ ನೀವು ಮಂಗಮುಖಿಯರಿಗೆ ದಾನ ಮಾಡುವುದರಿಂದ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಸ್ವಲ್ಪ ಜಾಗ್ರತೆ.

ಮೈಸೂರಿನಲ್ಲಿ ಕಂಡ ಮಂಗಳಮುಖಿ ಅಸಲಿಯೋ ...

ಈ 5 ರಾಶಿಯವರಿಗೆ ಒಲಿದು ಬಂದ ರಾಜ ಯೋಗ ಯಾವ ರಾಶಿಯವರಿಗೆ ಗೊತ್ತಾ..!



2020 ರಲ್ಲಿ ಈ ಐದು ರಾಶಿಯವರಿಗೆ ಕೂಡಿ ...
ಜಾತಕನ ಜನ್ಮ ಯಾವ ಲಗ್ನದಲ್ಲಿ ಆಗಿದೆ ಎಂಬುವುದರ ಮೇಲೆ ಅವನ ರಾಜಯೋಗವನ್ನು ನಿರ್ಣಯಿಸಬಹುದು.
ಮೀನ: ಲಗ್ನ ಮೀನವಾಗಿ ಲಗ್ನದಲ್ಲಿ ಚಂದ್ರನಿದ್ದು ಶನಿ, ಕುಜ ಮತ್ತು ಸೂರ್ಯರು ಕುಂಭ, ಮಕರ, ಮತ್ತು ಸಿಂಹರಾಶಿಗಳಲ್ಲಿ ಕ್ರಮವಾಗಿದ್ದರೆ, ಈ ವಿೂನ ಲಗ್ನದಲ್ಲಿ ಹುಟ್ಟಿದವನು ಭೂಪಾಲಕನಾಗುತ್ತಾನೆ.
ಈ 5 ರಾಶಿಯವರಿಗೆ ಒಲಿದು ಬಂದ ರಾಜ ಯೋಗ ಯಾವ ...
ಮೇಷ : ಲಗ್ನ ಮೇಷವಾಗಿ ಮೇಷದಲ್ಲಿ ಅಂಗಾರಕನೂ, ಚತುರ್ಥಸ್ಥಾನವಾದ ಕರ್ಕಾಟಕದಲ್ಲಿ ಗುರುವೂ ಇದ್ದರೆ ಜಾತಕನು ಭೂಪಾಲಕನಾಗುತ್ತಾನೆ.
ಕರ್ಕಾಟಕ: ಲಗ್ನ ಕರ್ಕಾಟಕವಾಗಿ ಲಗ್ನದಲ್ಲಿ ಗುರುವಿದ್ದು, ರಾಜ್ಯ ಸ್ಥಾನವಾದ ಮೇಷದಲ್ಲಿ ಅಂಗಾರಕನಿದ್ದರೂ, ಅಥವಾ ಅದೇ ಕರ್ಕಾಟಕ ಲಗ್ನವಾಗಿ ಲಗ್ನದಲ್ಲಿ ಗುರುವೂ, ದಶಮ ಅಥವಾ ಮೇಷದಲ್ಲಿ ರವಿಯೂ, ಏಕಾದಶ ಅಥವಾ ವೃಷಭದಲ್ಲಿ ಚಂದ್ರ, ಬುಧ, ಶುಕ್ರರಿದ್ದರೂ ಕಾತಕನು ಪರಾಕ್ರಮಶಾಲಿಯಾದ ಭೂಪಾಲಕನಾಗುತ್ತಾನೆ.
ಇಂದು ಮಧ್ಯರಾತ್ರಿಯಿಂದ ಈ ಐದು ...
ಮಕರ: ಲಗ್ನ ಮಕರವಾಗಿ ಲಗ್ನದಲ್ಲಿ ಶನಿಯೂ, ಚತುರ್ಥ ಅಥವಾ ಮೇಷದಲ್ಲಿ ಅಂಗಾರಕನೂ, ಷಷ್ಠ ಅಥವಾ ಮಿಥುನದಲ್ಲಿ ಬುಧನೂ, ಸಪ್ತಮಸ್ಥಾನವಾದ ಕಟಕದಲ್ಲಿ ಚಂದ್ರನೂ, ಅಷ್ಟಮವಾದ ಸಿಂಹದಲ್ಲಿ ರವಿಯೂ, ದಶಮಸ್ಥಾನ ಅಥವಾ ತುಲಾದಲ್ಲಿ ಶುಕ್ರನೂ ಇದ್ದರೆ ಜಾತಕನು ಕೀರ್ತಿವಂತನಾದ ರಾಜನಾಗುತ್ತಾನೆ.
ಕನ್ಯಾ: ಕನ್ಯಾಲಗ್ನವಾಗಿ ಲಗ್ನದಲ್ಲಿ ಬುಧನೂ, ದಶಮಸ್ಥಾನವಾದ ಮಿಥುನದಲ್ಲಿ ಶುಕ್ರನೂ, ಸಪ್ತಮ ಅಥವಾ ವಿೂನದಲ್ಲಿ ಗುರು ಚಂದ್ರರೂ, ಪಂಚಮ ಅಂದರೆ ಮಕರದಲ್ಲಿ ಅಂಗಾರಕ ಶನಿಗಳೂ ಇದ್ದಾಗ ಜನಿಸಿದವನು ಶತ್ರುಗಳಿಗೆ ಭಯಂಕರನಾದ ರಾಜನಾಗುವನು.

Monday, 1 June 2020

ಜೂನ್ ಎಂಟರಿಂದ ದೇವಾಲಯಗಳು ಆರಂಭ ಆದರೆ ಈ ಎಂಟು ನಿಯಮಗಳನ್ನು ಪಾಲಿಸಲೇಬೇಕು

ಕೊರೊನಾ ಲಾಕ್ಡೌನ್ 5.0ನಲ್ಲಿ ಕೇಂದ್ರ ಸರ್ಕಾರವು ದೇವಾಲಯ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಜೂನ್ 8ರಿಂದ ದೇವಾಲಯ ತೆರೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಎಂಟು ಸೂತ್ರಗಳನ್ನು ಹೊರಡಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದೆ. ಸರ್ಕಾರವು ಮುಂಬರುವ ದಿನಗಳಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಬಹುದು. ಹೀಗಾಗಿ ದೇವಾಲಯಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕಿದೆ ಎಂದು ತಿಳಿಸಿದೆ.


ಎಂಟು ನಿಯಮಗಳು ಏನು?


1. ನಿತ್ಯ ಸ್ವಚ್ಛತೆ ಜೊತೆಗೆ ಒಳಗೆ-ಹೊರಗೆ ಡಿಸ್ ಇನ್ಫೆಕ್ಟರ್ ಸಿಂಪಡಣೆ ಕಡ್ಡಾಯ.


2. ಭದ್ರತಾ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ದೇವಾಲಯದ ಖರ್ಚಿನಲ್ಲೇ ನೇಮಿಸಿ.


3. ದೇವಾಲಯದ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ, ಒಳಾಂಗಣದಲ್ಲಿ ಅರ್ಚಕರಿಗೆ ಮಾಸ್ಕ್ ವಿನಾಯಿತಿ.


4. ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ, ಸ್ಯಾನಿಟೈಸರ್ ಹಾಕಿದ ನಂತರವೇ ದೇವಸ್ಥಾನಕ್ಕೆ ಎಂಟ್ರಿ.


5. ಥರ್ಮಲ್ ಸ್ಕ್ರೀನಿಂಗ್ನಲ್ಲಿ ಜ್ವರ ಪತ್ತೆಯಾದರೆ ದೇವಸ್ಥಾನಕ್ಕೆ ನೋ ಎಂಟ್ರಿ.


6. ಮಾಸ್ಕ್ ಧರಿಸದ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶವಿಲ್ಲ.


7. ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್, ಲೈನ್ ರೂಪಿಸುವುದು ಕಡ್ಡಾಯ.


8. ದೇವಸ್ಥಾನದ ಶೌಚಾಲಯ ಆಗಾಗ ಸ್ವಚ್ಛಗೊಳಿಸಿ, ಅಗತ್ಯ ಡಿಸ್ ಇನ್ಫೆಂಕಟರ್ ಸಿಂಪಡಿಸಬೇಕು.

ಕಾಲುಂಗುರ ಬಿಪಿ ಕಂಟ್ರೋಲ್ ಮಾಡುತ್ತೆ ಅಂದರೆ ಶಾಕ್‌ ಆಗ್ತೀರಾ.!

ಕಾಲುಂಗುರವನ್ನು ಬರಿ ಸಂಪ್ರಾಧ್ಯಾಕವಾಗಿ ಹಾಕಿಕೊಳ್ಳೋದು ಅಲ್ಲ, ಇದರಲ್ಲಿದೆ ಹತ್ತಾರು ಆರೋಗ್ಯಕಾರಿ ಉಪಯೋಗಗಳು. ಪ್ರತಿ ಮದುವೆಯಾದ ಹೆಣ್ಣು ಮಕ್ಕಳು ಕಾಲುಂಗುರವನ್ನು ಧರಿಸಿರುತ್ತಾರೆ ಹಾಗು ಇತ್ತೀಚಿನ ಜೀವನ ಶೈಲಿಗೆ ಕಳವರು ಕಾಲುಂಗುರ ಧರಿಸದೇ ಇರಬಹುದು ಆದ್ರೆ ಈ ವಿಚಾರ ತಿಳಿದ ಮೇಲೆ ತಪ್ಪದೆ ಬಳಸುತ್ತಾರೆ ಅನ್ಸತ್ತೆ.


ಬೆಳ್ಳಿ ಕಾಲುಂಗುರದ ಆರೋಗ್ಯಕಾರಿ ಪ್ರಯೋಜನಗಳು: ಭೂಮಿಯಿಂದ ಧ್ರುವೀಯ ಶಕ್ತಿಯನ್ನು ಹೀರಿಕೊಂಡು ದೇಹದಲ್ಲಿ ಹಾದು ಹೋಗಲು ಬೆಳ್ಳಿ ನೆರವಾಗುತ್ತದೆ. ದೇಹದಲ್ಲಿ ಇದು ಅನೇಕ ಬದಲಾವಣೆಗಳನ್ನು ತರುತ್ತದೆ. ಕಾಲುಂಗುರ ಹಾಕುವ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ.

ಈ ಬೆರಳಿಗೆ ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ಮಹಿಳೆಯರ ಋತುಚಕ್ರ ಸಮಸ್ಯೆತಡೆಯಬಹುದು. ಇದರಿಂದ ಪಿರಿಯಡ್ಸ್ ಸರಿಯಾಗಿ ಆಗುತ್ತದೆ. ಕಾಲುಂಗುರ ಹಾಕುವುದರಿಂದ ರಕ್ತ ಸಂಚಾರ ಸಮಪರ್ಕಗೊಂಡು, ಗರ್ಭಕೋಶವನ್ನು ಆರೋಗ್ಯವಾಗಿಡಬಹುದು.ಕಾಲಿನ ಕೆಲವು ನರಗಳು ಉತ್ತೇಜನಗೊಳ್ಳುತ್ತದೆ. ಇದರಿಂದ ಸಂತಾನೋತ್ಪತ್ತಿಯೂ ಚೆನ್ನಾಗಿರುತ್ತದೆ.


ಕಾಲುಂಗುರದಿಂದ ಬೆರಳಿನ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಅಲ್ಲಿರುವ ನರದ ಮೇಲೆ ಪ್ರೆಷರ್ ಬಿದ್ದು, ದೇಹಕ್ಕೆ ಮಸಾಜ್ ಸಿಕ್ಕಿಂತಾಗುತ್ತದೆ. ಇದು ಹಲವು ಸ್ತ್ರೀ ಸಂಬಂಧಿ ರೋಗಗಳಿಗೂ ರಾಮಬಾಣ. ದೇಹದ ಎಲ್ಲಾ ಅಂಗಾಗಳನ್ನೂ ರಿಫ್ರೆಶ್ ಆಗಲು ಕಾಲುಂಗುರ ಧರಿಸುವುದು ಉತ್ತಮ. ಕಾಲುಂಗುರ ಧರಿಸುವುದರಿಂದ ಮಹಿಳೆಯ ಹೊಟ್ಟೆಯಲ್ಲಿರುವ ಮಗುವೂ ಆರೋಗ್ಯವಾಗಿ ಬೆಳವಣಿಗೆಯಾಗುತ್ತದೆ.ಕಾಲುಂಗುರ ನಕರಾತ್ಮಕತೆ ನಿವಾರಿಸುತ್ತದೆ. ಇದು ಗರ್ಭಿಣಿಯರು ಮಾನಸಿಕವಾಗಿ ಆರೋಗ್ಯದಿಂದಿರಲು ಸಹಕರಿಸುತ್ತೆ.

ಬೆಳ್ಳಿ ವಸ್ತು ದೇಹವನ್ನು ತಂಪಾಗಿರಿಸುತ್ತವೆ. ಇದನ್ನು ಧರಿಸುವುದರಿಂದ ಪೊಸಿಟಿವ್‌ ಎನರ್ಜಿ ದೇಹದಲ್ಲಿ ಸಂಚಾರವಾಗುತ್ತದೆ. ಬ್ಲಡ್‌ ಪ್ರೆಶರ್‌ ಸಮಸ್ಯೆ ನಿರಾಳವಾಗಲು ಬೆಳ್ಳಿ ಕಾಲುಂಗುರ ನೆರವಾಗುತ್ತದೆ. ಬೆಳ್ಳಿ ಕಾಲುಂಗುರ ಇಷ್ಟೆಲ್ಲ ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ಕೆಲವು ಸಂಶೋಧನಾ ಅಧ್ಯಯನ ತಿಳಿಸಿದೆ.

Sunday, 31 May 2020

ಒದ್ದೆ ಬಟ್ಟೆಯನ್ನುಟ್ಟು ದೇವಾಲಯ ಪ್ರದಕ್ಷಣೆ ಮಾಡಿದರೆ ಏನು ಲಾಭ ಗೊತ್ತಾ

ಒದ್ದೆ ಬಟ್ಟೆಯನ್ನು ಧರಿಸಿ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡಲು ಒಂದು ವೈಜ್ಞಾನಿಕ ಕಾರಣ ಇದೆ. ನಾವು ನೋಡಿರಬಹುದು ದೇವಾಲಯದಲ್ಲಿ ದೇವರ ದರ್ಶನ ಪಡೆದ ನಂತರ ದೇವಾಲಯವನ್ನು ಪ್ರದಕ್ಷಿಣೆ ಹಾಕುತ್ತೇವೆ ಅದರಲ್ಲೂ ಹೆಚ್ಚಿನ ಮಂದಿ ದೇವಾಲಯದಲ್ಲಿ ಯಾವುದಾದರೂ ನದಿ ಹೊಳೆ ಇದ್ದರೆ ಅಲ್ಲಿ ಮುಳುಗಿ ಹಾಗೆ ಒದ್ದೆ ಬಟ್ಟೆಯಲ್ಲಿ ಬಂದು ದೇವಾಲಯವನ್ನು ಪ್ರದಕ್ಷಿಣೆ ಮಾಡುತ್ತಾರೆ ಹೀಗೆ ಮಾಡುವುದು ಏಕೆ ಎಂಬುದು ನಿಮಗೆ ತಿಳಿದಿಲ್ಲ ಅಂದ್ರೆ ತಿಳಿಯೋಣ. ಭಕ್ತಾದಿಗಳು ದೇವರ ಕೃಪೆಯನ್ನು ಪಡೆಯಲು ಎಷ್ಟೆಲ್ಲ ರೀತಿಯ ಪೂಜೆ ಹರಕೆಗಳನ್ನು ಮಾಡುತ್ತಾರೆ ಅಲ್ಲವೇ, ದೇವರು ತನ್ನ ಭಕ್ತರಿಂದ ಇಚ್ಚಿಸುವುದು ಒಂದೇ ಅದು ಭಕ್ತಾದಿಗಳ ಶುದ್ದ ಭಕ್ತಿ. ಅವರ ಮಾನಸಿಕ ಶುದ್ಧತೆಯನ್ನು ಮಾತ್ರ. ಹಾಗಾಗಿ ದೇವರ ಕೃಪೆ ಪಡೆಯಲು ಹೋದಾಗ ಪ್ರತಿಯೊಬ್ಬರೂ ಕೂಡಾ ಮಾನಸಿಕವಾಗಿ ದೈಹಿಕವಾಗಿ ಶುದ್ಧತೆಯನ್ನು ಹೊಂದಿರಬೇಕು.
ಹಾಗೆಯೇ ನಾವು ಒದ್ದೆ ಬಟ್ಟೆಯನ್ನೂ ಧರಿಸಿದಾಗ ನಮ್ಮ ಮನಸ್ಸು ಪೂರ್ಣವಾಗಿ ನಮ್ಮ ಹಿಡಿತದಲ್ಲಿ ಏಕಾಗ್ರತೆಯಿಂದ ಕೂಡಿರುತ್ತದೆ ಮನಸ್ಸು ಭಕ್ತಿಭಾವದಲ್ಲಿ ಮುಳುಗಿರಲು ತಣ್ಣೀರು ಸ್ನಾನ, ಒದ್ದೆ ಬಟ್ಟೆಗಳು ಸಹಕಾರಿ ಆಗುತ್ತದೆ. ನಮ್ಮ ಹಿಂದಿನ ಜನತೆ ಮಾಡಿರುವ ಶಾಸ್ತ್ರ ಎಂಬುದರಲ್ಲಿ ಸತ್ಯದನಡೆ, ನುಡಿಗಳು, ವರ್ತನೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಆಚರಿಸುವ ನಂಬಿಕೆಗಳು, ವೈಚಾರಿಕತೆಯ ಬಗ್ಗೆ ತಿಳಿಸುತ್ತದೆ. ಹಿಂದಿನ ಕಾಲದಲ್ಲಿ ಮಾಡಿರುವ ಶಾಸ್ತ್ರದಲ್ಲಿ ನೈಜತೆ, ವಾಸ್ತವಿಕತೆ ಹಾಗೂ ಸಕಾರಾತ್ಮಕ ಚಿಂತನೆಗಳಿಂದ ಕೂಡಿರುತ್ತದೆ, ಹೀಗೆ ನಮ್ಮ ಸಂಪ್ರದಾಯ ಬಹಳ ಉನ್ನತವಾಗಿದೆ. ಹಾಗೆಯೇ ವೈಜ್ಞಾನಿಕವಾಗಿ ನೋಡುವುದಾದರೆ ಒದ್ದೆ ಬಟ್ಟೆ ಧರಿಸಿ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಹಲವರು ರೀತಿಯ ಲಾಭಗಳು ನಮಗೆ ಸಿಗುತ್ತವೆ ಅವುಗಳು ದೇವರ ದರ್ಶನವನ್ನ ಪಡೆದು ಕೊಳ್ಳಲು ಹೋಗುವ ಮೊದಲು ಅಲ್ಲೇ ಇರುವ ಕಲ್ಯಾಣಿ, ಕೊಳ ಅಥವಾ ನದಿಗಳಲ್ಲಿ ಸ್ನಾನ ಮಾಡುವುದು ಒಂದು ವಾಡಿಕೆ.
ನಾವು ಸೇವನೆ ಮಾಡುವ ಆಹಾರ ಜೀರ್ಣವಾದ ನಂತರ ಉಳಿದಿರುವ ಕಲ್ಮಶಗಳು ಅನೇಕ ಬಾರಿ ದೇಹದಲ್ಲಿ ಉಳಿದು ಬಿಟ್ಟು ಮಲಬದ್ಧತೆಗೆ ದಾರಿ ಮಾಡಿಕೊಡುತ್ತದೆ, ಈ ರೀತಿಯಲ್ಲಿ ಅಜೀರ್ಣ ಉಂಟಾಗಲು ಕಾರಣ ಏನೆಂದರೆ ನಾವು ಸೇವಿಸಿದ ಆಹಾರ ಸಕ್ರಮವಾಗಿ ಜೀರ್ಣ ಆಗದಿರುವುದು, ಹಾಗಾಗಿ ನಾವು ದೇವಸ್ಥಾನಕ್ಕೆ ಭೇಟಿ ನೀಡುವ ಸಮಯದಲ್ಲಿ ಮಡಿ ಎನ್ನುವ ಹೆಸರಿನಲ್ಲಿ ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ನಮ್ಮ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ, ಜೊತೆಗೆ ಒದ್ದೆ ಬಟ್ಟೆಯನ್ನೂ ಧರಿಸಿಕೊಂಡು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುವುದರಿಂದ ಆರೋಗ್ಯ ಕೂಡಾ ಸುಧಾರಿಸುತ್ತದೆ ಹಾಗಾಗಿ ದೇವಾಲಯದಲ್ಲಿ ಒದ್ದೆ ಬಟ್ಟೆ ಧರಿಸಿ ದೇವಾಲಯದ ಪ್ರದಕ್ಷಿಣೆ ಮಾಡುತ್ತಾರೆ ಜೊತೆಗೆ ತಮ್ಮ ಮನಸಿನ ಕೋರಿಕೆ ಬಹುಬೇಗನೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಉಪಯುಕ್ತ ಲೇಖನ ನಿಮಗೆ ಇಷ್ಟ ಆಗಿದ್ರೆ ಮರೆಯದೇ ಶೇರ್ ಮಾಡಿರಿ.

ಒದ್ದೆ ಬಟ್ಟೆಯನ್ನುಟ್ಟು ದೇವಾಲಯ ಪ್ರದಕ್ಷಣೆ ಮಾಡಿದರೆ ಏನು ಲಾಭ ಗೊತ್ತಾ

ನಿಮ್ಮ ಅದೃಷ್ಟವನ್ನು ಆಶ್ಚರ್ಯಕರವಾಗಿ ದ್ವಿಗುಣಗೊಳಿಸುತ್ತದೆ ಈ ಒಂದು ಫೋಟೋ

ಅದೃಷ್ಟವೆನ್ನುವುದು ನಮ್ಮ ಕರ್ಮ ಮತ್ತು ಜೀವನಕ್ಕೆ ಸಂಬಂಧಿಸಿದ್ದು. ಮನುಷ್ಯನಿಗೆ ಅದೃಷ್ಟವಿದ್ದಾಗ ಎಲ್ಲವನ್ನೂ ಸಾಧಿಸುತ್ತಾನರ, ಗಳಿಸುತ್ತಾನೆ. ಒಳ್ಳೆಯ ಕೆಲಸಗಳು ಉತ್ತಮ ಫಲಿತಾಂಶಗಳನ್ನು ನೀಡಿದರೆ, ಕಠಿಣ ಪರಿಶ್ರಮ ಹಾಗು ಒಳ್ಳೆಯ ಅಭ್ಯಾಸಗಳು ಅದೃಷ್ಟವನ್ನು ನೀಡುತ್ತವೆ. ನಿತ್ಯಜೀವನದಲ್ಲಿ ಪ್ರತಿದಿನ ಈ ನಿಯಮಗಳನ್ನು ಅಳವಡಿಸಿಕೊಂಡರೆ ನೀವು ಉನ್ನತಸ್ಥಾನವನ್ನು ಪಡೆಯಬಹುದು. ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಕೆಲವು ಜ್ಯೋತಿಷ್ಯ ಸಲಹೆಗಳು ಇಲ್ಲಿವೆ ನೋಡಿ


Thursday, 19 December 2019

ರಾಮಸೇತುವನ್ನು ನಿರ್ಮಿಸಲು ಯಾವ ಟೆಕ್ನಾಲಜಿ ಬಳಸಿದ್ದರು ಗೊತ್ತೆ? ರಾಮನ ಅಸ್ತಿತ್ವಕ್ಕೆ ಸಾಕ್ಷಿ

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ಆದರೆ ಕೆಲವು ಬುದ್ಧಿ ಜೀವಿಗಳು ಈ ರಾಮಾಯಣವನ್ನು ಕೇವಲ ಇದೊಂದು ಮಹಾಕಾವ್ಯ ರಾಮ ಒಬ್ಬ ಕಾಲ್ಪನಿಕ ಮಾತ್ರ ಅದಲ್ಲದೆ ರಾಮ ಸೇತುವೆಯೂ ಮಾನವ ನಿರ್ಮಿತವಲ್ಲ ಇದೊಂದು ಕಾಲ್ಪನಿಕ ಎಂದು ಬೊಬ್ಬೆ ಇಡುತ್ತಿದ್ದ ಕೆಲವರಿಗೆ ಸರಿಯಾಗಿಯೇ ಉತ್ತರ ದೊರಕಿದೆ!!


ರಾಮಸೇತು ರಹಸ್ಯ..! / Mystery behind Rama Sethu..! - YouTube



ರಾಮಸೇತುವಿನ ಅಸ್ತಿತ್ವದ ಕುರಿತ ಪ್ರಶ್ನೆಗೊಂದು ಸಿಹಿ ಉತ್ತರ ಸಿಕ್ಕಿದೆ. ಸದ್ಯ ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುದಲ್ಲ. ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಸಾರಿದ್ದಾರೆ. ಈ ಬಗ್ಗೆ ಅಮೆರಿಕದ ಡಿಸ್ಕವರಿ ಕಮ್ಯುನಿ ಕೇಷನ್‍ನ ಸೈನ್ಸ್ ಚಾನೆಲ್ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದ್ದು, ಇದರಲ್ಲಿ ರಾಮಸೇತುವಿನ ಅಸ್ತಿತ್ವದ ಕುರಿತಂತೆ ವೈಜ್ಞಾನಿಕ ಉತ್ತರಗಳನ್ನು ಪಡೆಯಲಾಗಿದೆ.



ಮಾನವ ನಿರ್ಮಿತವೇ?


ಸೇತುವೆ ಮಾನವ ನಿರ್ಮಿತವೇ ಎಂಬ ಬಗ್ಗೆ ಹಿಂದಿನಿಂದಲೂ ವಾದ ವಿವಾದಗಳಿವೆ. ಇಲ್ಲಿನ ಮರಳಿನ ಪಟ್ಟಿ ನೈಸರ್ಗಿಕ. ಆದರೆ ಇದರ ಕೆಳಗಿರುವ ಸಾಮಗ್ರಿ ನೈಸರ್ಗಿಕವಲ್ಲ ಎಂದು ಸಾಕ್ಷ್ಯಚಿತ್ರದ ಪೆÇ್ರೀಮೋದಲ್ಲಿ ನಿರೂಪಕರು ಹೇಳುತ್ತಾರೆ. ಅಷ್ಟೇ ಅಲ್ಲ, ಇಲ್ಲಿನ ಮರಳಿನ ಪಟ್ಟಿಯ ಕೆಳಗಿರುವ ಕಲ್ಲುಗಳು 7 ಸಾವಿರ ವರ್ಷಗಳ ಹಿಂದಿನದು ಮತ್ತು ಇತರ ಪ್ರದೇಶದಲ್ಲಿನ ಮರಳಿನ ಪಟ್ಟಿ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು ಎಂದು ಸೌತರ್ನ್ ಆರೆಗಾನ್ ಯೂನಿವರ್ಸಿಟಿ ವಿಜ್ಞಾನಿ ಚೆಲ್ಸಿಯಾ ರೋಸ್ ಹೇಳಿದ್ದಾರೆ.


ರಾಮಸೇತು hashtag on Twitter


ಭಾರತೀಯ ಪುರಾತತ್ವ ಇಲಾಖೆ ಏನು ಮಾಡ್ತಿದೆ?


ಅಮೆರಿಕದ ವಿಜ್ಞಾನಿಗಳು ಹಾಗೂ ಸಂಸ್ಥೆಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದರೆ, ಭಾರತೀಯ ಪುರಾತತ್ವ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಭಾರತೀಯರಲ್ಲಿ ಉಂಟಾಗಿದೆ. ಇದೇ ಪ್ರಶ್ನೆಯನ್ನು ಸಚಿವೆ ಸ್ಮತಿ ಇರಾನಿಗೂ ಜನರು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ, ಕಳೆದ ಮಾರ್ಚ್‍ನಲ್ಲೇ ಐತಿಹಾಸಿಕ ಸಂಶೋಧನೆಯ ಭಾರತೀಯ ಕೌನ್ಸಿಲ್ ಈ ಸಂಬಂಧ ಸಾಗರದಾಳದ ಅಧ್ಯಯನ ನಡೆಸಲು ನಿರ್ಧರಿಸಿತ್ತು. ಅಷ್ಟೇ ಅಲ್ಲ, ಇದರ ವರದಿ ನವೆಂಬರ್‍ನಲ್ಲೇ ಬರಬೇಕಿತ್ತು. ಆದರೆ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಅಲೋಕ್ ತ್ರಿಪಾಠಿ ಹೇಳುವಂತೆ ಈ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಇದಕ್ಕಾಗಿ ಕೆಲವು ಪೂರ್ವ ತಯಾರಿ ಪ್ರಗತಿಯಲ್ಲಿದೆ.


ರಾಮಸೇತು ಮಾನವ ನಿರ್ಮಿಸಿದ್ದು ಎಂದು ಇದುವರೆಗೆ ಹೇಳುತ್ತಲೇ ಬರಲಾಗಿತ್ತು. ಆದರೆ ಕೆಲವು ಸರಕಾರಗಳು ಒಪ್ಪಿರಲಿಲ್ಲ. ಈಗ ಡಿಸ್ಕವರಿ ಚಾನೆಲ್ ವೈಜ್ಞಾನಿಕವಾಗಿ ಉತ್ತರ ಕಂಡುಕೊಂಡಿದೆ. ಹೀಗಾಗಿ ನೆಲದೊಳಗೆ ಹುದುಗಿಹೋಗಿರುವ ಸರಸ್ವತಿ, ಮಹಾಭಾರತದ ಸ್ಥಳಗಳು, ದ್ವಾರಕಾ ಸಹಿತ 34 ನಗರಗಳನ್ನೂ ಹುಡುಕಬೇಕಿದೆ ಎಂದು ಕೆಲವು ಟ್ವಿಟಿಗರು ಆಗ್ರಹಿಸಿದ್ದಾರೆ. ಸದ್ಯದಲ್ಲೇ ರಾಮಸೇತು ಇರುವ ಸ್ಥಳಕ್ಕೆ ಹೋಗುವುದಾಗಿ ಬಿಜೆಪಿ ನಾಯಕ ಸುಬ್ರಹ್ಮಣ್ಯಸ್ವಾಮಿ ಹೇಳಿದ್ದಾರೆ.


ಪವಿತ್ರ ರಾಮಸೇತು ಧ್ವಂಸಗೊಳಿಸಲ್ಲ ...


ಕೆಲ ಬುದ್ಧಿಜೀವಿಗಳ ಪಾಲಿಗೆ ರಾಮಾಯಣವೆಂಬುದು ಕಂತೆಗಳ ಬೊಂತೆಯಾದರೂ ಅದರ ಕರ್ತೃವಾದ ವಾಲ್ಮೀಕಿಯ ಜಾತಿಯನ್ನು ಅವರು ಶೋಷಿತ ದ್ರಾವಿಡ ರಿಲಿಜನ್ನಿನ ಕೆಟೆಗರಿಯಲ್ಲಿ ದಾಖಲಿಸುವುದರಿಂದ ಒಂದು ಉತ್ತಮ ಕಾವ್ಯದ ಕರ್ತೃವಾಗಿ ವಾಲ್ಮೀಕಿ ವಾಸ್ತವವಾಗಿ ಅಸ್ತಿತ್ವದಲ್ಲಿರುವದು ಬುದ್ಧಿಜೀವಿಗಳಿಗೆ ಅನಿವಾರ್ಯ. ಆದ್ದರಿಂದ ವಾಲ್ಮೀಕಿ ಜಯಂತಿಯನ್ನು ಇವರೆಂದೂ ವಿರೋಧಿಸುವುದಿಲ್ಲ. ಹಾಗೆಯೇ ಮನುವಿನ ಅಸ್ತಿತ್ವಕ್ಕೂ ಹಿಸ್ಟಾರಿಕಲ್ ದಾಖಲೆಗಳಿರದಿದ್ದರೂ, ಇಲ್ಲಿನ ಜನರನ್ನು ಶೋಷಿಸಲು ಮನುಸ್ಮೃತಿಯನ್ನು ಬರೆದುಕೊಂಡರು ಎಂಬುದನ್ನು ಸಾಧಿಸಲು, ಕಥೆಗಳು ಹೇಳುವ, ಇಡೀ ಭೂಮಿಗೆ ಅಧಿಪತಿಯಾಗಿದ್ದನೆಂದು ಹೇಳುವ ಮನುವು ವಾಸ್ತವದಲ್ಲಿ ಇದ್ದ ಹಾಗೂ ಮನುಸ್ಮೃತಿಯನ್ನು ಇಡೀ ಸಮಾಜದ ಮೇಲೆ ಹೇರಿದ ಎಂದು ಬುದ್ಧಿಜೀವಿಗಳು ಹೇಳಬೇಕಾಗಿರುವುದು ಇವರಿಗೆ ಅನಿವಾರ್ಯ.


ಹೊಸಯುಗದ ಚಿಂತಕರಾದ ನಾವು ಈ ಬುದ್ಧಿಜೀವಿಗಳ ಪೌರಾಣಿಕ ಪಾತ್ರಗಳ ಕುರಿತ ಸಂಶೋಧನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು? ನಾವು ಬುದ್ಧಿಜೀವಿಗಳು ಒಡ್ಡುವ ವಾದಗಳನ್ನು ವಿರೋಧಾಭಾಸಗಳ ಸಮೇತ ಪಟ್ಟಿ ಮಾಡಬೇಕು. ಮುನ್ನೂರು ವರ್ಷಗಳ ಹಿಂದೆ ಬ್ರಿಟಿಷರು ಬೇಯಿಸಿಟ್ಟು ಹೋದ ಆರ್ಯ-ದ್ರಾವಿಡವೆಂಬ ಹಳಸಲು ಸಿದ್ಧಾಂತ, ಪೆÇ್ರಟೆಸ್ಟಂಟ್ ಹಾಗೂ ಕ್ಯಾಥೋಲಿಕ ಕ್ರಿಶ್ಚಿಯನ್ ಥಿಯಾಲಜಿಗಳಿಗೆ ಅನುಗುಣವಾಗಿ ಇವರು ಹೇಳುತ್ತಿರುವ ಹೊಸ ಸಂಶೋಧನೆಗಳನ್ನು ಹೊಂದಿಸಿ ಸಮಂಜಸವಾಗಿ ವಿವರಿಸಬೇಕು. ಇವರ ಹೊಸ ಸಂಶೋಧನೆಗಳು ಅದೇ ಬಿದ್ದು ಹೋದ ಹಳೆಯ ಥಿಯರಿಯ ಹೊಸ ರೂಪವಷ್ಟೇ ಹೊರತು ಇನ್ನೇನೂ ಅಲ್ಲ ಎನ್ನುವುದನ್ನು ತೋರಿಸಬೇಕು.


ರಾಮಸೇತು - YouTube


ಬುದ್ಧಿಜೀವಿಗಳು ಪಶ್ಚಿಮದಲ್ಲಿ ಆದ ಪೆÇ್ರಟೆಸ್ಟಂಟ್ ಕ್ರಿಶ್ಚಿಯಾನಿಟಿಯನ್ನೇ ವೈಚಾರಿಕತೆಯೆಂಬ ಹೊಸ ಹೆಸರಿನಲ್ಲಿ ಮಾರಲು ಯತ್ನಿಸುತ್ತಿದ್ದಾರೆ ಹಾಗೂ ಅವರ ಸಂಶೋಧನೆಗಳು ಆರ್ಯ-ದ್ರಾವಿಡವೆಂಬ ಹಳಸಲು ಸಿದ್ಧಾಂತದ ಮೇಲೆ ಅವರೇ ಕಟ್ಟಿಕೊಂಡಿರುವ ಹೆಲ್ಯುಸಿನೇಶನ್ನಿನ ಮುಂದುವರೆದ ಭಾಗವಾಗಿವೆ ಅಷ್ಟೇ. ಅವರು ಸದ್ಯಕ್ಕೆ ದ್ರಾವಿಡ ರಿಲಿಜನ್ನೆಂಬ ಅಸ್ತಿತ್ವದಲ್ಲೇ ಇಲ್ಲದ ರಿಲಿಜನ್ನೊಂದರ ಪ್ರೀಸ್ಟುಗಳಂತೆ ವರ್ತಿಸುತ್ತಿದ್ದಾರೆ. ಇದು ವೈಚಾರಿಕತೆಯೂ ಅಲ್ಲ ಹಾಗೂ ಇವರ ಪೂರ್ವಗ್ರಹಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.


ರಾಮಸೇತು hashtag on Twitter


ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೇಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ, ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು. ರಾಮನನ್ನು ನಂಬಿದವರಿಗೆ ಎಂದೂ ತೊಂದರೆ ಯಾಗದು…


Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...