Showing posts with label ಆಶ್ಚರ್ಯಕರ ಮಾಹಿತಿ. Show all posts
Showing posts with label ಆಶ್ಚರ್ಯಕರ ಮಾಹಿತಿ. Show all posts
Wednesday, 29 November 2023
Sunday, 19 November 2023
101 ಜನಪ್ರಿಯ ಒಗಟುಗಳು Popular riddles in Kannada
ಒಗಟುಗಳು
ಜನಪದ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಪ್ರಕಾರ (ರಿಡ್ಲ್). ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಹೆಸರಗಳೂ ಉಂಟು. ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು, ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ. ಒಗಟಿನಲ್ಲಿ ಎರಡು ಸದೃಶವಸ್ತುಗಳಿರಬೇಕು ಒಂದು ಉಪಮಾನ, ಮತ್ತೊಂದು ಉಪಮೇಯ. ಇಲ್ಲಿ ಉಪಮಾನ ವಾಚ್ಯವಾಗಿರುತ್ತದೆ; ಉಪಮೇಯ ಅಸ್ಪಷ್ಟವಾಗಿ ರಹಸ್ಯವಾಗಿರುತ್ತದೆ. ಅದನ್ನು ಒಗಟೆಯ ಕರ್ತೃ ಬಹಳ ಜಾಣ್ಮೆಯಿಂದ ಬಚ್ಚಿಟ್ಟಿರುತ್ತಾನೆ. ಉಪಮಾನದ ಆಧಾರದಿಂದ ಉಪಮೇಯವನ್ನು ಪತ್ತೆಮಾಡಬೇಕಾಗುತ್ತದೆ. ಇದು ಬುದ್ಧಿಶಕ್ತಿಯ ಪರೀಕ್ಷೆಗೊಂದು ಒಳ್ಳೆಯ ಒರೆಗಲ್ಲು.
೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ- ಕಣ್ಣು
೨. ಕಾಸಿನ ಕುದುರೆಗೆ ಬಾಲದ ಲಗಾಮು- ಸೂಜಿ ದಾರ
೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ- ಗಿಳಿ
೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?- ಮೂಗು, ಬಾಯಿ
೫. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?- ಮೊಟ್ಟೆ
೬. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು?- ಕೋಳಿ
೭. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?- ರೈಲು
೮. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ- ಗಡಿಯಾರ
೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ- ಕಲ್ಲಂಗಡಿ ಹಣ್ಣು
೧೦. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ-ತೆಂಗು
೧೨. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ-ನೀರು
೧೩.ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ.-ದಾರಿ
೧೪. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು.-ಯುಗಾದಿ
೧೫. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .-ಬದನೆಕಾಯಿ.
೧೬. ಸಾಗರ ಪುತ್ರ ,ಸಾರಿನ ಮಿತ್ರ.-ಉಪ್ಪು
೧೭. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ.-ಅಕ್ಕಿ
೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.-ನವಿಲು.
೧೯. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.-ನದಿ
೨೦. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.- ಕೋಳಿ
೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.- ಮೂಗುಬೊಟ್ಟು
೨೨. ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.-ನೆರಳು
೨೩. ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ-ಗಾಣ
೨೪. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ-ಶ್ಯಾವಿಗೆ
೨೫. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು-ತೆಂಗಿನಕಾಯಿ
೨೬. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ-ತಂಬೂರಿ
೨೭. ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ-ಕಪ್ಪೆ
೨೮. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪೊರಕೆ
೨೯. ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು-ಉಪ್ಪು
೩೦. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?-ನಕ್ಷೆ
೩೧. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ.- ಅನ್ನದ ಅಗುಳು.
೩೨. ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.-ಸಾಬೂನು.
೩೩. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು.-ಬದನೆಕಾಯಿ.
೩೪. ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ.-ನೀರು
೩೫. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು ಇಲ್ಲ ,ನೀರು ಇಲ್ಲ.-ಎಣ್ಣೆ ದೀಪ.
೩೬. ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.-ಬಾಳೆ ಹಣ್ಣು.
೩೭. ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.-ಕನ್ನಡಿ
೩೮. ಅಕ್ಕ ಪಕ್ಕ ಚದುರಂಗ ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ .ಇದು ಏನು?-ದತ್ತುರಿಯ ಮುಳ್ಳು.
೩೯. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು ,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-ಕಮಲ.
೪೦. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ.-ಗಿರಣಿ
೪೧. ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.-ದುಡ್ಡು.
೪೨. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.-ಸಗಣಿ.
೪೩. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ.- ಗರಗಸ.
೪೪. ಕಡ್ಲೆ ಕಾಳಷ್ಟು ಹಿಂಡಿ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.-ಹಲ್ಲುಪುಡಿ.
೪೫. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.-ಗಡಿಗೆಮಜ್ಜಿಗೆ.
೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ .-ರೊಟ್ಟಿ, ದೋಸೆ
೪೭. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ-ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ
೪೮. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.-ಕಣ್ಣು.
೪೯. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.-ಬೆಣ್ಣೆ ಉಂಡೆ.
೫೦.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.-ಅಂಗಿ.
೫೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ
೫೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶ, ನಕ್ಷತ್ರ
೫೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲು
೫೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಬಾಳೆ ಹಣ್ಣು
೫೫. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ- ಬಳೆ
೫೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
೫೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ- ಹುಣಸೇಹಣ್ಣು
೫೮. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ
೫೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
೬೦. ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ-ಮಳೆ
೬೧. ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ-ಕೀರ್ತಿ
೬೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-ಕಣ್ಣು
೬೩ ಅಕ್ಕನ ಮೇಲೆ ಛತ್ರಿ- ರೆಪ್ಪೆ
೬೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು-ತೆಂಗಿನ ಕಾಯಿ
೬೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-ಕಣ್ಣು
೬೬.ಅಮ್ಮನ ಆಕಾಶವಾಣಿ ನಾನು-ಮಗು
೬೭. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
೬೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು
೬೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-ಕಣ್ಣು
೭೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
೭೧. ನೀನಿಲ್ಲದೆ ಊಟವಿಲ್ಲ- ಉಪ್ಪು
೭೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
೭೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
೭೪. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ-ಹೇನು ಕೂದಲು
೭೫. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-ಬೆಂಕಿ,ಬಾಣಲೆ, ದೋಸೆ
೭೬ . ಒಂದು ಮನೆಗೆ ಒಂದೇ ತೊಲೆ-ತಲೆ
೭೭. ಕಂದ ಬಂದ ಕೊಂದ ತಂದ-ಶ್ರೀ ರಾಮ ಚಂದ್ರ
೭೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ-ಭೂಪಟ
೭೯. ಚಿಕ್ಕಕ್ಕನಿಗೆ ಪುಕ್ಕುದ್ದ-ಸೌಟು
೮೦. ಎರಡು ಮನೆಗೆ ಒಂದೇ ದೂಲ-ಮೂಗು
೮೧. ನೀರಿರೋತಾವ ನಿಲ್ಲಲೇ ಕೋಣ-ಚಪ್ಪಲಿ
೮೨. ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ-ನೆರಳು
೮೩. ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ-ಮನುಷ್ಯನ ಹುಟ್ಟು ಮಗು
೮೪. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು ಹೇಳಿ -ಸುಣ್ಣ
೮೫. ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ -ದೀಪ
೮೬. ಹೋಗುತ್ತಾ, ಬರುತ್ತಾ ಇರುವುದು ಎರಡು,ಹೋದ ಮೇಲೆ ಬರಲಾರವು ಎರಡು-ಸಿರಿತನ-ಬಡತನ, ಪ್ರಾಣ -ಬಡತನ
೮೭. ಒಂದು ಹಸ್ತಕ್ಕೆ ನೂರೆಂಟು ಬೆರಳು-ಬಾಳೆಗೊನೆ
೮೮. ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ -ಜರಡಿ
೮೯. ಎಂದರೆ ತೆರಿತಾವ, ಅಪ್ಪ ಎಂದರೆ ಮುಚ್ಚುತಾವ-ಬಾಯಿ
೯೦. ದಾಸ್ ಬುರುಡೆ ದೌಲಥ ಬುರುಡೆ, ಲೋಕಕ್ಕೆಲ್ಲ ಎರಡೇ ಬುರುಡೆ-ಸೂರ್ಯ , ಚಂದ್ರ
೯೧. ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ -ಅಡಿಕೆ ಮರ
೯೨.ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ-ಧ್ವಜ
೯೩. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು?-ತಾರೆಗಳು
೯೪. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು ,ಇದು ಏನು?-ಛತ್ರಿ
೯೫. ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ-ನೊಣ
೯೬. ಒಂಟಿಕಾಲಿನ ಕುಂಟ. ನಾನ್ಯಾರು?-ಬುಗರಿ
೯೭. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ-ಇಲಿ
೯೮. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ-ಕಳ್ಳಿ
೯೯. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-ಶ್ರೀಗಂಧ
೧೦೦. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು-ಪರಂಗಿ ಹಣ್ಣು
೧೦೧.ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ
೧೦೨. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ-ಕಿವಿ
೧೦೩. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ-ರೊಟ್ಟಿ
೧೦೪. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
೧೦೫. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ-ಬಾಳೆಲೆ
೧೦೬. ಎರಡು ಬಾವಿಗಳ ನಡುವೆಯೊಂದು ಸೇತುವೆ-ಮೂಗು
೧೦೭. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ-ಕೋಟು ಅಂಗಿ
೧೦೮. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು -ವಿಷ
೧೦೯ . ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ
೧೧೦.ಹೋಗೋದು ಮುಳುಗೋದು ತರೋದು ಏನು?-ಬಿಂದಿಗೆ
೧೧೧. ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ-ಕೋಳಿ
೧೧೨. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ-ವರ್ಷ
೧೧೩. ಗುಂಡಾಕಾರ ಮೈಯೆಲ್ಲಾ ತೂತು-ದೋಸೆ
೧೧೪.ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ-ಚಿಮಿಣಿ
೧೧೫. ಒಂದು ಮರ , ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ-ಆಕಾಶ ನಕ್ಷತ್ರ ಚಂದ್ರ
೧೧೬. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು-ಏಲಕ್ಕಿ
೧೧೭. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-ತಾರೆ
೧೧೮. ಲಟಪಟ ಲೇಡಿಗೆ ಒಂದೇ ಕಣ್ಣು-ಸೂಜಿ
೧೧೯. ಹಸಿರು ಕೋಲಿಗೆ ಮುತ್ತಿನ ತುರಾಯಿ-ಜೋಳದ ತೆನೆ
೧೨೦. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ-ನಾಲಿಗೆ
೧೨೧. ಸೂಜಿ ಸಣ್ಣಕಾಗೆ ಬಣ್ಣ -ಕೂದಲು
೧೨೨. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?-ನೆನಪು
೧೨೩. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ-ನುಸಿ
೧೨೪. ಊರಿಗೆಲ್ಲ ಒಂದೇ ಕಂಬಳಿ-ಆಕಾಶ
೧೨೫. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ-ಕುಂಕುಮ
೧೨೬. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-ಬೈತಲೆ
೧೨೭. ಒಂದು ಬತ್ತಿ ಮನೆಯೆಲ್ಲ ಬೆಳಕು-ಸೂರ್ಯ
೧೨೮.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ -ಗಾಳಿ
೧೨೯. ಕಣ್ಣಿಗೆ ಹತ್ತಿರ ಕಾಲಿಗೆ ದೂರ-ಬೆಟ್ಟ
೧೩೦. ಊಟಕ್ಕೆ ಮೊದಲು ನಾನು ಅಂತ ಬರುತ್ತೆ -ಬಾಳೆ ಎಲೆ , ತಟ್ಟೆ
೧೩೧. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ-ಮಾವು
೧೩೨. ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-ಬೆಕ್ಕು
೧೩೩. ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ-ಕಪ್ಪೆ
೧೩೪. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು-ಸುಣ್ಣ
೧೩೫. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ-ದೀಪ
೧೩೬. ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ-ಚಪ್ಪಲಿ
೧೩೭. ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು-ನದಿ
೧೩೮. ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ-ಮೇಡು
೧೩೯. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ-ಆಕಾಶ
೧೪೦. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ-ಜೋಳದ ದಂಟು
೧೪೧. ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು?-ಸಾಲಿಗ್ರಾಮ
೧೪೨. ಕರಿ ಹುಡುಗನಿಗೆ ಬಿಳಿ ಟೋಪಿ -ಹೆಂಡದ ಮಡಿಕೆ
೧೪೩. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು,ಇದನ್ನು ನೋಡಲು ಜನ ಕಾದಿಹರು-ನಾಣ್ಯ
೧೪೪. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ.-ತಿಗಣೆ
೧೪೫. ಕುದುರೆ ಬಾಲದಿಂದ ನೀರು ಕುಡಿಯುತ್ತದೆ-ಹೇನು
೧೪೬. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು.-ಸೀತ ಫಲ
೧೪೭. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-ಕಣ್ಣು
೧೪೮. ಮನೆ ಮೇಲೆ ಮಲ್ಲಿಗೆ ಹೂವು.-ಮಂಜು
೧೪೯. ಹಾರಿದರೆ ಹನುಮಂತ ಕೂಗಿದರೆ ಶಂಖ.-ಕಪ್ಪೆ
೧೫೦. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು.-ಸುಣ್ಣ
೧೫೧.ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ.-ಪೋಸ್ಟ್ ಕಾರ್ಡ್
೧೫೨. ಬಿಳಿ ಕುದುರೆಗೆ ಹಸಿರು ಬಾಲ.-ಮೂಲಂಗಿ
೧೫೩. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-ಕುಂಕುಮ
೧೫೪. ಬರೋದ ಕಂಡು ಕೈ ಒಡ್ತಾರೆ.-ಬಸ್
೧೫೫. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು-ಹುಂಜ
೧೫೬. ಹಸಿರು ಮುಖಕ್ಕೆ ವಿಪರೀತ ಕೋಪ , ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?-ಮೆಣಸಿನಕಾಯಿ
೧೫೭. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು-ಬೆಳ್ಳುಳ್ಳಿ
೧೫೮. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?-ನಕ್ಷತ್ರ
೧೫೯.ಹಗ್ಗ ಹಾಸಿದೆ ಕೋಣ ಮಲಗಿದೆ-ಕುಂಬಳಕಾಯಿ, ಬಳ್ಳಿ
೧೬೦. ನನ್ನ ಕಂಡರೆ ಎಲ್ಲರು ಓದೀತಾರೆ -ಚೆಂಡು
೧೬೧. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ
೧೬೨. ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ-ಕಣ್ಣು.
೧೬೩. ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ನಾನು ಯಾರು-ಗಾಂಧೀಜಿ
೧೬೪. ಬಾಯಲ್ಲಿ ಹಲ್ಲಿಲ್ಲ, ಮಯಲ್ಲಿ ಶಕ್ತಿ ಇಲ್ಲ , ತಲೆಯಲ್ಲಿ ಕೂದಲಿಲ್ಲ , ಆದ್ರೂ ಎಲ್ರುನ್ನು ಕಾಡತಿನಿ ನಾನ್ಯಾರು.-ಸೊಳ್ಳೆ
೧೬೫. ಅಕ್ಷರಗಳಿದ್ದರೂ ಪುಸ್ತಕವಲ್ಲ,ಸಿಂಹವಿದ್ದರೂ ಅರಣ್ಯವಲ್ಲ,ದುಂಡಾಗಿದ್ದರೂ ಚಕ್ರವಲ್ಲ,ನಾನ್ಯಾರು.-ನಾಣ್ಯ
೧೬೬. ಗಂಟೆ ಹೊಡೆಯುತ್ತಾನೆ ಪೂಜಾರಿ ಅಲ್ಲ, PAPER ಅರಿಯುತ್ತಾನೆ ಆದರೆ ಹುಚ್ಚುನೂ ಅಲ್ಲ, ಹಣ ಕೇಳುತ್ತಾನೆ ಭಿಕ್ಷುಕ ಅಲ್ಲ -ಕಂಡಕ್ಟರ್
೧೬೯. ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆತುಂಬ-ದೀಪದ ಬೆಳಕು
೧೭೦. ಕಾಲಿಲ್ಲದೆ ನಡೆಯುವುದು ಬಾಯಿಲ್ಲದೆ ನುಡಿಯುವುದು ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು-ನದಿ
೧೭೧. ಚೋಟುದ್ದ ಹುಡುಗಿಗೆ ಮಾರುದ್ದ ಜಡೆ - ಸೂಜಿ ದಾರ
೧೭೨. ಊರುಂಟು ಜನರಿಲ್ಲ ನದಿಯುಂಟು ನೀರಿಲ್ಲ - ಭೂಪಟ.
೧೭೩. ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ : ಹುರಳಿಕಾಯಿ
೧೭೪. ಬಿಳಿಯ ಹೊಲದಲ್ಲಿ ಕರಿ ಕಾಳು ಕೈಯಲ್ಲಿ ಬಿತ್ತುತ್ತಾರೆ ಬಾಯಲ್ಲಿ ಏತ್ತುತ್ತಾರೆ ನಾನು ಯಾರು : ಪುಸ್ತಕ ಮತ್ತು ಅಕ್ಷರಗಳು
೧೭೫. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? : ಭಾರತ
೧೭೬. ನಾಲ್ಕು ಕಂಬಗಳುಂಟು ದೇವಾಲಯವಲ್ಲ; ಎರಡು ಮೊರಗಳುಂಟು ಕೇರಲಾಗುವುದಿಲ್ಲ; ಒಂದು ಕಹಳೆಯುಂಟು ಊದಲಾಗುವುದಿಲ್ಲ; ಹಾಗಾದರೆ ನಾನು ಯಾರು? : ಆನೆ
೧೭೭. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? : ಭಾರತ
೧೭೮. ಕರಿ ಕಂಬ್ಳಿ ನೆಂಟ, ಸರೊತ್ತಿನಲ್ಲಿ ಹೊಂಟ, ಅವನ್ಯಾರು? : ಹೆಗ್ಗಣ
೧೭೯. ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ : ದೀಪ / ಹಣತೆ
೧೮೦. ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ,. ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ. ಬಲ್ಲವರು ಹೇಳಿ ಸರ್ವಜ್ಞ”-ಸುಣ್ಣದ ಕಲ್ಲು!
Friday, 10 July 2020
ಪುರುಷರ ಲೈಂ-ಗಿಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ಸಿಂಪಲ್ ವಿಧಾನ..!
ವಿಶೇಷವಾಗಿ ವಯಸ್ಸು 40 ದಾಟಿದ ನಂತರ ಕೆಲಸದ ಒತ್ತಡ, ಅನಾರೋಗ್ಯವು ಲೈಂ-ಗಿಕ ಸಮಸ್ಯೆಯನ್ನು ಹೆಚ್ಚಿಸಬಹುದು. ಆದರೆ ಪುರುಷರು ಉತ್ತಮ ಜೀವನಶೈಲಿ ಜತೆ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಲೈಂ-ಗಿಕ ಸಮಸ್ಯೆಗಳ ವಿರುದ್ಧ ಹೋರಾಡಬಹುದು.

ಬೀಟ್ರೂಟ್: ಪುರುಷರಲ್ಲಿ ಲೈಂ-ಗಿಕ ಕಾರ್ಯಕ್ಷ ಮತೆಯನ್ನು ಹೆಚ್ಚಿಸುವ ಶಕ್ತಿ ಬೀಟ್ರೂಟ್ಗೆ ಇದೆ. ನಿತ್ಯ ಬೀಟ್ರೂಟ್ ರಸ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಿಮಿರುವಿಕೆಯ ಸಮಸ್ಯೆಯನ್ನು ಇದು ನಿವಾರಿಸಲಿದೆ.
ಮೆಣಸು: ಲೈಂ-ಗಿಕ ಜೀವನವನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಮೆಣಸು ಇರಲಿ. ಸ್ನಾಯುಗಳು, ಹೃದಯ, ಸೇರಿದಂತೆ ಲೈಂ-ಗಿಕ ಅಂಗಗಳಿಗೆ ಉತ್ತಮ ರಕ್ತದ ಹರಿವನ್ನು ಒದಗಿಸುತ್ತದೆ.
ಬ್ರಕೋಲಿ: ಅತ್ಯಂತ ಆರೋಗ್ಯಪೂರ್ಣವಾದದ್ದು ಬ್ರಕೋಲಿ. ಇದು ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ.

ಡಾರ್ಕ್ ಚಾಕೊಲೇಟ್: ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ. ಈ ಮೂಲಕ ರಕ್ತ ಪರಿಚಲನೆ ಸುಧಾರಿಸಬಹುದು. ಇದು ಲೈಂ-ಗಿಕತೆಯನ್ನು ಉತ್ತೇಜಿಸುತ್ತದೆ ಕೂಡ.
ಮೆಂತ್ಯೆ: ಜೀರ್ಣ ಸಂಬಂಧಿ ಸಮಸ್ಯೆಗಳನ್ನು ಸರಾಗಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಲೈಂ-ಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಯಾವುದೇ ಆಹಾರದ ಮೂಲಕ ಸೇವಿಸಬಹುದು.
ದಾಳಿಂಬೆ: ಟೆಸ್ಟೋಸ್ಟೇರೋನ್ ಹಾರ್ಮೋನ್ ಪ್ರಮಾಣವನ್ನು ಇದು ಹೆಚ್ಚಿಸುತ್ತದೆ. ಮೂಡನ್ನು ಉತ್ತೇಜಿಸುವುದರ ಜತೆ ರಕ್ತ ಸಂಚಾರ ಸರಾಗವಾಗುವಂತೆ ಮಾಡುತ್ತದೆ.
ಕಲ್ಲಂಗಡಿ: 40 ವರ್ಷದ ನಂತರ ಪುರುಷರು ತಮ್ಮ ಲೈಂ-ಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಇದರಿಂದ ಉದ್ರೇಕ ಸಮಸ್ಯೆಯಿಂದ ಮುಕ್ತರಾಗಬಹುದು.
Thursday, 2 July 2020
ನಿಂತುಕೊಂಡೇ ನೀರು ಸೇವಿಸುವ ಅದೆಷ್ಟೋ ಮಂದಿಗೆ ಈ ಘೋರ ಸತ್ಯ ತಿಳಿದಿಲ್ಲ., ವೈದ್ಯಲೋಕ ಹೇಳಿದ ಭಯಂಕರ ಸತ್ಯ ಇದು.!
ಮಾನವನ ದೇಹದ 75 ಪ್ರತಿಶತ ಭಾಗ ನೀರಿನಿಂದ ಮಾಡಲ್ಪಟ್ಟಿದೆ ಎಂದು ವಿಜ್ಞಾನ ಹೇಳುತ್ತದೆ, ನೀರು ನಮ್ಮ ದೇಹಕ್ಕೆ ಅತೀ ಅವಶ್ಯಕ, ದೇಹದ ಶೇ 75ರಷ್ಟು ಭಾಗದಲ್ಲಿ ನೀರಿರುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ನೀರು ಕುಡಿಯುವುದರಿಂದ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದು, ದೇಹದಲ್ಲಿನ ನೀರು ರಕ್ತ ಸಂಚಾರವನ್ನು ಹೆಚ್ಚಿಸುವುದಲ್ಲದೆ ಆಹಾರದಿಂದ ಪಡೆದಿರುವಂತಹ ಪ್ರಮುಖ ಪೋಷಕಾಂಶಗಳನ್ನು ವಿವಿಧ ಅಂಗಾಂಗಗಳು ಹಾಗೂ ಕೋಶಗಳಿಗೆ ತಲುಪಿಸುವಂತಹ ಕೆಲಸವನ್ನು ನೀರು ಮಾಡುತ್ತದೆ.

ಸಾಮಾನ್ಯ ಸ್ಥಿತಿಯಲ್ಲಿ ಇದು 71% ರಷ್ಟಿರುತ್ತದೆ, ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿ ಬೇಕೇ ಬೇಕು ಮತ್ತು ನೀರಿಲ್ಲದ ಪರಿಸ್ಥಿತಿಯನ್ನು ನಿರ್ಜಲೀಕರಣ ಎಂದು ಕರೆಯಲಾಗುತ್ತದೆ ಹಾಗೂ ಈ ಸ್ಥಿತಿಯಲ್ಲಿ ದೇಹದ ಪ್ರಮುಖ ಅಂಗಗಳಿಗೆ ನೀರಿನ ಪೂರೈಕೆಯಾಗದೇ ಇವು ಒಣಗತೊಡಗುತ್ತವೆ ಮತ್ತು ಪ್ರತಿ ಅಂಗಾಂಶ ಕಾರ್ಯನಿರ್ವಹಿಸಲು ನೀರು ಬೇಕು.
ಜೀವಕೋಶದ ಹಂತದಲ್ಲಿ ನೀರನ್ನು ಬಳಸಿಕೊಂಡು ಆರೋಗ್ಯ ಕಾಪಾಡುತ್ತದೆ ಅಷ್ಟೇ ಅಲ್ಲದೆ ರಕ್ತದ ಮೂಲಕ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಕೊಂಡೊಯ್ಯಲೂ ನೀರು ಬೇಕು ಆದರೆ ಎಷ್ಟೋ ಜನರಿಗೆ ನೀರು ಕುಡಿಯುವ ಸರಿಯಾದ ವಿಧಾನವೇ ತಿಳಿದಿಲ್ಲ. ಬಹಳ ಜನರಿಗಿರುವ ಒಂದು ಕೆಟ್ಟ ಹವ್ಯಾಸ ಎಂದರೆ ಅದು ನಿಂತುಕೊಂಡು ನೀರು ಕುಡಿಯುವುದು ಆದರೆ ವಿಜ್ಞಾನದ ಹಲವು ಸಂಶೋಧನೆಗಳ ಪ್ರಕಾರ ನಿಂತುಕೊಂಡು ನೀರು ಕುಡಿಯುವುದು ದೇಹಕ್ಕೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಹಾಗಾದರೆ ನಿಂತುಕೊಂಡು ನೀರು ಕುಡಿಯುವುದರಿಂದ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ನಿಂತುಕೊಂಡು ನೀರು ಕುಡಿಯುತ್ತಿದ್ದರೆ ಇಂದೇ ಅದನ್ನ ನಿಲ್ಲಿಸುವುದು ಬಹಳ ಒಳ್ಳೆಯದು.

ಹೌದು ತಜ್ಞರು ಹೇಳುವ ಪ್ರಕಾರ ನಾವು ನಿಂತು ನೀರು ಕುಡಿಯಲೇ ಬಾರದು ಇದರಿಂದ ದೇಹಕ್ಕೆ ಬಹಳ ಅಪಾಯಗಳಾಗಬಹುದು. ನಿಂತು ನೀರು ಕುಡಿಯುವುದರಿಂದ ಜೀರ್ಣದ ಸಮಸ್ಯೆ ಎದುರಾಗಬಹುದು ಮತ್ತು ನರಮಂಡಲದಲ್ಲಿ ಒತ್ತಡ ಹೆಚ್ಚಾಗುತ್ತದೆ ಹಾಗೆ ಹೃದಯ ಹಾಗೂ ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದಲ್ಲ. ಇನ್ನು ನಿಂತುಕೊಂಡು ನೀರು ಕುಡಿಯುವಾಗ ಅನ್ನನಾಳದ ಮೂಲಕ ನೀರು ವೇಗವಾಗಿ ಸಾಗುವುದರಿಂದ ಅನ್ನನಾಳಕ್ಕೆ ಹಾನಿಯಾಗುತ್ತದೆ. ನಿಂತುಕೊಂಡು ಈ ರೀತಿ ನೀರನ್ನು ಕುಡಿಯುವುದರಿಂದ ನಿಮ್ಮ ಬಾಯಾರಿಕೆ ತಣಿಯುವುದಿಲ್ಲ ಮತ್ತು ನೀರು ನೇರವಾಗಿ ಹಾದು ಹೋಗುವುದರಿಂದ ಅಗತ್ಯವಿರುವ ಪೋಷಕಾಂಶಗಳು ಮತ್ತು ಜೀವಸತ್ವಗಳು ಯಕೃತ್ತು ಮತ್ತು ಜೀರ್ಣಾಂಗವ್ಯೂಹವನ್ನು ತಲುಪುವುದಿಲ್ಲ.
ಕೇವಲ ವಿಜ್ಞಾನ ಮಾತ್ರವಲ್ಲ ನಮ್ಮ ಆಯುರ್ವೇದ ಶಾಸ್ತ್ರದಲ್ಲೂ ಕೂಡ ನಿಂತುಕೊಂಡು ನೀರು ಕುಡಿಯುವುದನ್ನು ಅಪಾಯ ಎಂದು ಸೂಚಿಸಲಾಗಿದೆ. ನಿಂತು ನೀರು ಕುಡಿದಾಗ ರಭಸವಾಗಿ ಗಂಟಲಿನಿಂದ ಇಳಿಯುವ ನೀರು ಅನ್ನನಾಳ ಹಾಗೂ ಹೊಟ್ಟೆ ಕೂಡುವ ಸ್ಥಳದಲ್ಲಿ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ ಇದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ಹೊಟ್ಟೆ ನೋವು ಬರಬಹುದು. ನೀರು ಒಮ್ಮೆಲೆ ದೇಹ ಸೇರಿದರೆ ಕಿಡ್ನಿಗೆ ಕೆಲಸದ ಒತ್ತಡ ಉಂಟಾಗಿ ನೀರನ್ನು ಸರಿಯಾಗಿ ಸೋಸಲು ಆಗುವುದಿಲ್ಲ ಮತ್ತು ಇದರಿಂದ ಕಿಡ್ನಿಗೆ ಹಾನಿಯಾಗಬಹುದು.
ಸ್ನೇಹಿತರೆ ನೀವು ಸಾಧ್ಯವಾದಷ್ಟು ದಣಿವಾದಾಗ ಅಥವಾ ಬಾಯಾರಿಕೆಯಾದಾಗ ಆತುರದಲ್ಲಿ ನೀರು ಕುಡಿಯಬೇಡಿ ಮತ್ತು ನಿಧಾನವಾಗಿ ಕುಳಿತುಕೊಂಡು ನೀರನ್ನು ಕುಡಿಯಿರಿ ಇದರಿಂದ ದೇಹಕ್ಕೆ ಬಹಳ ಒಳ್ಳೆಯದು.
Wednesday, 1 July 2020
ಫೇಸ್ ಬುಕ್, ಇ-ಮೇಲ್ ಗಳಲ್ಲಿ ಮರೆತೂ ಈ ರೀತಿಯ ಪಾಸ್ ವರ್ಡ್ ಗಳನ್ನು ಬಳಸಬೇಡಿ.!
ಜಗತ್ತಿನ 100 ಅತಿ ಕೆಟ್ಟ ಪಾಸ್ ವರ್ಡ್ಗಳಲ್ಲಿ ಮೊದಲ ಸ್ಥಾನ ಯಾವುದಕ್ಕೆ ಎಂದು ಕೇಳಿದರೆ ಉತ್ತರ ಸುಲಭ, ಅದು '123456'. ಇನ್ನು ಅದಕ್ಕೆ ಕಾಂಪಿಟಿಟರ್ ಎಂದರೆ ಪಾಸ್ವರ್ಡ್. ಅದೇರೀ.. 'PASSWORD' ಎಂಬ ಪಾಸ್ ವರ್ಡು.

ವಿಚಿತ್ರ ಹಾಗೂ ವಿಶೇಷ ಎಂದರೆ ಕಳೆದ ಹಲವು ವರ್ಷಗಳಿಂದಲೂ ಇವೆರಡೇ ಅತಿಕೆಟ್ಟ ಪಾಸ್ವರ್ಡ್ಗಳಲ್ಲಿ 1 ಮತ್ತು 2ನೇ ಸ್ಥಾನದಲ್ಲಿರುವುದು.
ನೆನಪಿಟ್ಟುಕೊಳ್ಳಲು ಸುಲಭವಾಗಲಿ ಎಂದು ಬಹಳಷ್ಟು ಜನ ಈ ಪಾಸ್ವರ್ಡ್ಗಳನ್ನು ಬಳಸುತ್ತಾರೆ. ಆದರೆ ಇಂಥ ಪಾಸ್ವರ್ಡ್ ಗಳಿದ್ದಾಗ ಹ್ಯಾಕ್ ಮಾಡುವವರಿಗೂ ಸುಲಭವಾಗುತ್ತದೆ ಎಂಬುದನ್ನು ಮರೆಯಬಾರದು. ಯಾವುದೇ ಕಾರಣಕ್ಕೆ ಈ ಪದಗಳನ್ನು, ನಿಮ್ಮ ಅಥವಾ ಸಾಮಾನ್ಯವಾಗಿ ಬಳಸುವ ಯಾವುದೇ ಹೆಸರನ್ನು ಪಾಸ್ವರ್ಡ್ ಆಗಿ ಬಳಸಬಾರದು.

ಬಳಸಲೇಬಾರದಂತಹ ಅತಿ ಕೆಟ್ಟ 25 ಪಾಸ್ ವರ್ಡ್ ಗಳ ಪಟ್ಟಿ ಇಲ್ಲಿದೆ.
1) 123456
2) password
3) 123456789
4) 12345678
5) 12345
6) 111111
7) 1234567
8) sunshine
9) qwerty
10) iloveyou
11) princess
12) admin
13) welcome
14) 666666
15) abc123
16) football
17) 123123
18) monkey
19) 654321
20) [email protected]#$%^&*
21) charlie
22) aa123456
23) donald
24) password1
25) qwerty123
ಬಿಗ್ ಬ್ರೇಕಿಂಗ್.. ಕೊರೊನಾಕ್ಕೆ ಆಯುರ್ವೆದ ಚಿಕಿತ್ಸೆ ಸಕ್ಸಸ್: ಬೆಂಗಳೂರಲ್ಲಿ ಕ್ಲಿನಿಕಲ್ ಟ್ರಯಲ್ ಯಶಸ್ವಿ.!
ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ಮಹಾಮಾರಿಗೆ ಭಾರತೀಯ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೆದದಿಂದ ಪರಿಹಾರ ಸಾಧ್ಯ ಎಂಬುದು ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ನಿಂದ ದೃಢಪಟ್ಟಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದ್ದು, ಕೇವಲ 9 ದಿನದಲ್ಲಿ ಎಲ್ಲರೂ ಗುಣಮುಖರಾಗಿ ನೆಗೆಟಿವ್ ವರದಿಯೊಂದಿಗೆ ಮನೆಗೆ ತೆರಳಿದ್ದಾರೆ. ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ ನೇತೃತ್ವದಲ್ಲಿ ನಡೆದ ಈ ಯಶಸ್ಸಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.
ಅತಿ ಕಡಿಮೆ ದರ
ಕರೊನಾ ಗುಣಪಡಿಸಲು ಲಕ್ಷಾಂತರ ರೂ. ವೆಚ್ಚವಾಗುತ್ತಿರುವುದರ ನಡುವೆಯೇ ಆಯುರ್ವೆದ ಕ್ಲಿನಿಕಲ್ ಟ್ರಯಲ್ನಲ್ಲಿ ಪುಡಿಗಾಸಲ್ಲೇ ಸೋಂಕಿತರು ಗುಣಮುಖರಾಗಿದ್ದಾರೆ. ಒಬ್ಬ ರೋಗಿಗೆ ಕನಿಷ್ಠ 60 ರೂ. ನಿಂದ 180 ರೂ.ನಲ್ಲಿ ಚಿಕಿತ್ಸೆ ನೀಡಲಾಗಿದೆ. ಟ್ರಯಲ್ನಲ್ಲಿ ಭಾಗವಹಿಸಿದವರ ಪೈಕಿ ಒಬ್ಬರು ಕ್ಷಯರೋಗದಿಂದ(ಟಿಬಿ) ಬಳಲುತ್ತಿದ್ದರು. ಹೃದ್ರೋಗ ಸಮಸ್ಯೆ, ಮಧುಮೇಹ ಹೊಂದಿದವರೆಲ್ಲರೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕ್ಲಿನಿಕಲ್ ಟ್ರಯಲ್ ಕುರಿತು ಪ್ರತಿಕ್ರಿಯೆಗೆ ಡಾ. ಗಿರಿಧರ ಕಜೆ ಲಭ್ಯವಾಗಿಲ್ಲ. ಇದೀಗ ನಡೆದಿರುವ ಯಶಸ್ವಿ ಪ್ರಯೋಗದ ಆಧಾರದಲ್ಲಿ ಆಯುರ್ವೆದ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ (ಆರ್ಜಿಯುಎಚ್ಎಸ್) ಕುಲಪತಿ ಡಾ. ಎಸ್. ಸಚ್ಚಿದಾನಂದ ಅವರಿಗೆ ಸರ್ಕಾರ ತಿಳಿಸಿದೆ.
ಗುಣಲಕ್ಷಣಗಳುಳ್ಳ ಸೋಂಕಿತರು
ಕರೊನಾ ಸೋಂಕು ತಗುಲಿದ್ದರೂ ಶೇ.90 ಜನರಲ್ಲಿ ಯಾವುದೇ ಗುಣಲಕ್ಷಣಗಳು ಇರುವುದಿಲ್ಲ. ಈ ಪೈಕಿ ಅನೇಕರಲ್ಲಿ ಯಾವುದೇ ಔಷಧದ ಅವಶ್ಯಕತೆಯೂ ಇಲ್ಲದಂತೆ ಅಥವಾ ಸಾಮಾನ್ಯ ಔಷಧದಿಂದಲೇ ಗುಣಮುಖರಾಗುತ್ತಾರೆ. ಆದರೆ ಇನ್ನುಳಿದ ಶೇ.10 ಜನರಲ್ಲಿ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆಯಂತಹ ಗುಣಲಕ್ಷಣಗಳಿರುತ್ತವೆ. ಇವರಲ್ಲಿ ಕಿಡ್ನಿ, ಹೃದಯ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಮಧುಮೇಹದಂತಹ ಸಮಸ್ಯೆಗಳುಳ್ಳವರಾದರೆ (ಕೋ ಮಾರ್ಬಿಡ್) ಕರೊನಾದಿಂದ ಗುಣಮುಖವಾಗುವ ಸಾಧ್ಯತೆ ಕಡಿಮೆಯಾಗುತ್ತ ಸಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ನಲ್ಲಿ ಭಾಗಿಯಾಗಿದ್ದ ಎಲ್ಲ 10 ಸೋಂಕಿತರೂ ಗುಣಲಕ್ಷಣಗಳುಳ್ಳ ಹಾಗೂ ಕೋಮಾರ್ಬಿಡ್ ಸ್ಥಿತಿಯಲ್ಲಿದ್ದವರಾದ್ದರಿಂದ ಔಷಧ ಎಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
ಆಯುರ್ವೆದಕ್ಕೆ ಹಳೆಯದು
ಸಾಂಕ್ರಾಮಿಕ ರೋಗಗಳ ನಿರ್ವಹಣೆ ಆಯುರ್ವೆದಕ್ಕೆ ಹೊಸತಲ್ಲ ಎಂದು ಸಿಟಿಆರ್ಐಗೆ ನೀಡಿರುವ ವಿವರಣೆಯಲ್ಲಿ ಸಂಶೋಧಕರು ತಿಳಿಸಿದ್ದಾರೆ. ಪ್ರಾಚೀನ ವಿಜ್ಞಾನಿ, ಋಷಿಗಳು ಸಾಂಕ್ರಾಮಿಕ ರೋಗಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಿ ದ್ದಾರೆ. ಚರಕ, ಸಾಂಕ್ರಾಮಿಕ ರೋಗಗಳನ್ನು ಜನಪದೋಧ್ವಂಸ ಎಂಬ ಶೀರ್ಷಿಕೆಯಡಿ ಹಾಗೂ ಶುಶ್ರುತ, ಔಪಸರ್ಗಿಕ ರೋಗ ಎಂಬ ಶೀರ್ಷಿಕೆಯಡಿ ವಿವರಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿಕ್ಟೋರಿಯಾದಲ್ಲಿ ಸಂಶೋಧನೆ
ಭಾರತದ ಅನೇಕ ಆಯುರ್ವೆದ ವೈದ್ಯರು ಕರೊನಾಗೆ ತಮ್ಮ ಬಳಿ ಔಷಧವಿರುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನಿಯಮಾವಳಿಯಂತೆ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ವಿಧಾನದಂತೆ ವೈಜ್ಞಾನಿಕವಾಗಿ ಯಾವುದೇ ಸಂಶೋಧನೆ ದೃಢಪಟ್ಟಿರಲಿಲ್ಲ.

ಬೆಂಗಳೂರಿನ ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರಿಗೆ ಪ್ರಯೋಗಾತ್ಮಕ ಚಿಕಿತ್ಸೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಐಸಿಎಂಆರ್ ಅಧೀನದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಸಂಶೋಧನೆಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. ಡಾ. ಗಿರಿಧರ ಕಜೆ ಮುಖ್ಯ ಸಂಶೋಧಕರಾದರೆ, ವಿಕ್ಟೋರಿಯಾ ಆಸ್ಪತ್ರೆಯ ಡಾ. ಸಿ.ಆರ್. ಜಯಂತಿ ಸಹ-ಸಂಶೋಧಕಿಯಾಗಿದ್ದರು.
Monday, 29 June 2020
ಚೀನಾ ಯೋಧರ ತೊಡೆಮುರಿ ಕಟ್ಟಲು ಭಾರತದ ಘಾತಕ್ ಕಮ್ಯಾಂಡ್ಗಳ ನಿಯೋಜನೆಯಾಗಿದೆ.! ಈ ಕಮ್ಯಾಂಡ್ಗಳು ಹೇಗಿರಲಿವೆ ಗೊತ್ತಾ?
ಇಂಡೋ-ಚೀನಾ ಗಡಿ ಭಾಗದಲ್ಲಿ ಉಭಯ ದೇಶಗಳ ನಡುವೆ ತಲೆದೋರಿರುವ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ ಸೇನಾಪಡೆಗಳ ಜಮಾವಣೆ ಹೆಚ್ಛಾಗುತ್ತಿದ್ದು ಕದನ ಕಾರ್ಮೋಡಗಳು ದಟ್ಟವಾಗಿವೆ.

ಗಡಿ ಸರಹದ್ದಿನಲ್ಲಿ ಪದೇ ಪದೇ ತಗಾದೆಯ ಕಿರುಕುಳ ನೀಡುತ್ತಿರುವ ಚೀನಾ ಸೇನಾಪಡೆಗೆ ಬಿಸಿ ಮುಟ್ಟಿಸಲು ಸಜ್ಜಾಗಿರುವ ಭಾರತೀಯ ಸೇನೆಗೆ ನೆರವಾಗಲು ವಿಶೇಸ ಪರಿಣಿತಿ ಪಡೆದಿರುವ ಪಡೆಗಳನ್ನು ಲಡಾಕ್ನ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ನಿಯೋಜಿಸಲಾಗಿದೆ.
ಲಡಾಕ್ ಗೆಡಿಯಲ್ಲಿರುವ ಚೀನಿ ಯೋಧರಿಗೆ ಸಮರ ಕಲೆಗಳ ಬಗ್ಗೆ ವಿಶೇಷ ತರಬೇತಿ ನೀಡಲು 20 ಮಾರ್ಷಲ್ ಆಟ್ರ್ಸ್ ಎಕ್ಸ್ಪರ್ಟ್ಗಳನ್ನು ಚೀನಾ ರವಾನಿಸಿ ಟ್ರೈನಿಂಗ್ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವು ಘಾತಕ್ ಪಡೆಯ ವಿಶೇಷ ಕಮ್ಯಾಂಡೋಗಳನ್ನು ಟಿಬೆಟ್ ಸರಹದ್ದಿನಲ್ಲಿ ನಿಯೋಜಿಸಿ ಚೀನಾದ ಪಿಎಲ್ಎ ಸೇನೆಗೆ ದೊಡ್ಡ ಆಘಾತ ನೀಡಲು ಸಜ್ಜಾಗಿದೆ.
ಭಾರತದ ವಿಶೇಷ ಸೇನಾ ಪಡೆಗಳೊಂಅಮೆರಿಕ ಸೇನಾಪಡೆಗಳು ಈಗ ರಂಗಪ್ರವೇಶಿಸಿರುವುದರಿಂದ ಚೀನಾದ ಯೋಧರು ಹೆದರಿ ಕಂಗಲಾಗಿದ್ದಾರೆ. ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರು ನಡುವೆ ಭುಗಿಲೆದ್ದ ಹಿಂಸಾತ್ಮಕ ಸಂಘರ್ಷದ ನಂತರ ಗಡಿ ಭಾಗದಲ್ಲಿ ಭಾರತ-ಚೀನಾದ ಭಾರೀ ಸಂಖ್ಯೆಯ ಹೋಧರು ಮತ್ತು ಅಗಾಧ ಯುದ್ಧಾಸ್ತ್ರಗಳು ಜಮಾವಣೆಗೊಂಡು ಯುದ್ದದ ಕಾರ್ಮೋಡಗಳು ದಟ್ಟವಾಗಿವೆ.

ಇದೇ ಸಂದರ್ಭದಲ್ಲಿ ಅಮೆರಿಕ ಸೇನಾಪಡೆ ಭಾರತದ ಬೆನ್ನಿಗೆ ನಿಂತಿರುವುದು ಚೀನಾ ಕಂಪಿಸುವಂತಾಗಿದೆ. ಉಭಯ ದೇಶಗಳ ನಡುವಣ ಉನ್ನತ ಸೇನಾಧಿಕಾರಿಗಳ ನಡುವಣ ಒಪ್ಪಂದದಂತೆಕೆಲವು ಸೂಕ್ಷ್ಮ ಪ್ರದೇಶಗಳಿಂದ ಹಿಂದಕ್ಕೆ ಸರಿಯುವ ಬದಲು ಚೀನಾ ತನ್ನ ಸೈನಿಕರು ಮತ್ತು ಯುದ್ಧಾಸ್ತ್ರಗಳ ಜಮಾವಣೆ ಮುಂದುವರಿಸಿ ಗಡಿಯಲ್ಲಿ ಮತ್ತೆ ಖ್ಯಾತೆ ತೆಗೆದಿದೆ.
ಇದಕ್ಕೆ ಪ್ರತಿಯಾಗಿ ಚೀನಾಗೆ ತಿರುಗೇಟು ನೀಡಲು ಭಾರತವೂ ಸಜ್ಜಾಗಿದ್ದು, ಭಾರೀ ಪ್ರಮಾಣದ ಯೋಧರು ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಗಡಿಯಲ್ಲಿ ಮತ್ತೆ ಕದನ ಕಾರ್ಮೋಡಗಳು ಕವಿದಿವೆ. ಭಾರತಕ್ಕೆ ಅನೇಕ ದೇಶಗಳು ಬೆಂಬಲ ನೀಡಿದ್ದು, ಅಮೆರಿಕ ಸೇನೆಯನ್ನು ಭಾರತದ ನೆರವಿಗೆ ರವಾನಿಸಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜೂನ್ 15ರಂದು 20 ಭಾರತೀಯ ಯೋಧರು ಹುತ್ಮಾತರಾದ ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಈಗಲೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಸೈನಿಕರು ಮತ್ತು ಯುದ್ಧಾಸ್ತ್ರಗಳು ಜಮಾವಣೆಗೊಂಡಿವೆ. ಭಾರತದ ಮೂರು ಸಶಸ್ತ್ರ ಪಡೆಗಳಾದ ಅರ್ಮಿ, ನೇವಿ ಮತ್ತು ಏರ್ಫೆರ್ಪೋರ್ಸ್ ಈಗ ಚೀನಾವನ್ನು ಸುತ್ತುವರಿದಿರುವುದು ಕಮ್ಯೂನಿಸ್ಟ್ ರಾಷ್ಟ್ರಕ್ಕೆ ನಡುಕ ಉಂಆಂತಗಿದೆ.
ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೋಧರು ಗಡಿಯಲ್ಲಿ ದುಸ್ಸಾಹಸಕ್ಕೆ ಮುಂದಾದರೆ ಮುಲಾಜಿಲ್ಲದೇ ದಿಟ್ಟ ಪ್ರತ್ಯುತ್ತರ ನೀಡಲು ಭಾರತೀಯ ಸೇನಾಪಡೆಗಳಿಗೆ ಕೇಂದ್ರ ಸರ್ಕಾರ ಪೂರ್ಣಾಧಿಕಾರ ನೀಡಿದ್ದು, ಕಮ್ಯೂನಿಸ್ಟ್ ದೇಶದ ಸೈನಿಕರಿಗೆ ತಕ್ಕ ಪಾಠ ಕಲಿಸಲು ಭಾರತದ ಮೂರು ಸಶಸ್ತ್ರಪಡೆಗಳು ಸರ್ವ ಸನ್ನದ್ಧವಾಗಿವೆ.

ಭಾರತ ಸೇನಾ ಪಡೆಯ ಅಗಾಧ ಬಲ, ಅಮೆರಿಕ ಸೇನೆ ಬೆಂಬಲ ಮತ್ತು ಇತರ ದೇಶಗಳು ಭಾರತಕ್ಕೆ ನೀಡುತ್ತಿರುವ ಸಾಥ್ನಿಂದ ಚೀನಿ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಒಳಗೊಳಗೆ ಕಂಪಿಸುತ್ತಿದ್ದಾರೆ
ಟಿಕ್ ಟಾಕ್ ಸಹಿತ ಕೇಂದ್ರ ಬ್ಯಾನ್ ಮಾಡಿರುವ 59 ಚೈನೀಸ್ ಆಯಪ್ ಗಳ ಪಟ್ಟಿ ಇಲ್ಲಿದೆ ನೋಡಿ..!
ಚೀನಾ ಮತ್ತು ಭಾರತ ನಡುವೆ ಗಡಿ ಗದ್ದಲ ಮುಂದುವರೆದಿರುವಂತೆಯೇ ಚೀನಾಕ್ಕೆ ಕೆಂದ್ರ ಸರಕಾರ ದೊಡ್ಡದೊಂದು ಶಾಕ್ ನೀಡಿದೆ.

ಭಾರತದ ಮೊಬೈಲ್ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಮತ್ತು ಖಾಸಗಿತನಕ್ಕೆ ಅಪಾಯ ಉಂಟುಮಾಡುತ್ತಿದೆ ಎಂಬ ಕಾರಣದಿಂದ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳನ್ನು ಕೇಂದ್ರ ಸರಕಾರ ನಿಷೇಧಿಸಿ ಇಂದು ಆದೇಶ ಹೊರಡಿಸಿದೆ.
ದೇಶಾದ್ಯಂತ ಯುವಜನರಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದ್ದ ವಿಡಿಯೋ ಶೇರಿಂಗ್ ಆಯಪ್ ಆಗಿರುವ ಟಿಕ್ ಟಾಕ್ ಸಹ ಈ ನಿಷೇಧಿತ ಆಯಪ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.
ಡೇಟಾವನ್ನು ತಿರುಗಿಸುವ ಮತ್ತು ಗೌಪ್ಯತೆ ಸಮಸ್ಯೆಗಳಿರುವ ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಟಿಕ್ ಟೋಕ್ ಸೇರಿದಂತೆ 59 ಚೀನಾದ ಆಯಪ್ಗಳ ನಿಷೇಧವನ್ನು ಸರ್ಕಾರ ಪ್ರಕಟಿಸಿದೆ. ಯುವಕರಲ್ಲಿ ಜನಪ್ರಿಯವಾಗಿರುವ ಟಿಕ್ಟಾಕ್ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದು, ಚೀನಾ ಮತ್ತು ಯುಎಸ್ ನಂತರದ ಸ್ಥಾನದಲ್ಲಿದೆ. 2020 ರ ಮೊದಲ ತ್ರೈಮಾಸಿಕದಲ್ಲಿ 1.5 ಬಿಲಿಯನ್ ಗಡಿ ದಾಟಿದ ಕೂಡಲೇ ಟಿಕ್ಟಾಕ್ 2 ಬಿಲಿಯನ್ ಗಡಿ ದಾಟಿದೆ. 2 ಬಿಲಿಯನ್ಗಳಲ್ಲಿ, ಭಾರತವು 611 ಮಿಲಿಯನ್ಗಿಂತಲೂ ಹೆಚ್ಚು ಡೌನ್ಲೋಡ್ಗಳನ್ನು ಹೊಂದಿರುವ ಅತಿದೊಡ್ಡ ಹಿಂಬಾಲಕರನ್ನು ಹೊಂದಿದೆ.

ಸರ್ಕಾರವು ನಿಷೇಧಿಸಿರುವ ಅಪ್ಲಿಕೇಶನ್ಗಳ ಪಟ್ಟಿ ಇಲ್ಲಿದೆ:
TikTok
Shareit
Kwai
UC Browser
Baidu map
Shein
Clash of Kings
DU battery saver
Helo
Likee
YouCam makeup
Mi Community
CM Browers
Virus Cleaner
APUS Browser
ROMWE
Club Factory
Newsdog
Beutry Plus
WeChat
UC News
QQ Mail
Weibo
Xender
QQ Music
QQ Newsfeed
Bigo Live
SelfieCity
Mail Master
Parallel Space
Mi Video Call Xiaomi
WeSync
ES File Explorer
Viva Video QU Video Inc
Meitu
Vigo Video
New Video Status
DU Recorder
Vault- Hide
Cache Cleaner DU App studio
DU Cleaner
DU Browser
Hago Play With New Friends
Cam Scanner
Clean Master Cheetah Mobile
Wonder Camera
Photo Wonder
QQ Player
We Meet
Sweet Selfie
Baidu Translate
Vmate
QQ International
QQ Security Center
QQ Launcher
U Video
V fly Status Video
Mobile Legends
DU Privacy
Shareit
Kwai
UC Browser
Baidu map
Shein
Clash of Kings
DU battery saver
Helo
Likee
YouCam makeup
Mi Community
CM Browers
Virus Cleaner
APUS Browser
ROMWE
Club Factory
Newsdog
Beutry Plus
UC News
QQ Mail
Xender
QQ Music
QQ Newsfeed
Bigo Live
SelfieCity
Mail Master
Parallel Space
Mi Video Call Xiaomi
WeSync
ES File Explorer
Viva Video QU Video Inc
Meitu
Vigo Video
New Video Status
DU Recorder
Vault- Hide
Cache Cleaner DU App studio
DU Cleaner
DU Browser
Hago Play With New Friends
Cam Scanner
Clean Master Cheetah Mobile
Wonder Camera
Photo Wonder
QQ Player
We Meet
Sweet Selfie
Baidu Translate
Vmate
QQ International
QQ Security Center
QQ Launcher
U Video
V fly Status Video
Mobile Legends
DU Privacy
Sunday, 28 June 2020
ಉಪ್ಪು ಬಳಸಿ ಶೈನಿಂಗ್ ಆಕರ್ಷಕ ಕೂದಲು ಬೆಳೆಸಿಕೊಳ್ಳಿ..!

ದುಬಾರಿ ಶಾಂಪೂ ಮತ್ತು ಇತರ ಕೂದಲ ಉತ್ಪನ್ನಗಳು ನಿಮ್ಮ ಹಣವನ್ನು ಪೋಲು ಮಾಡುತ್ತಿದ್ದರೆ ಇಲ್ಲಿದೆ ಕೆಲವು ಸಲಹೆಗಳು. ಆರೋಗ್ಯಕರವಾದ ಕೂದಲನ್ನು ಪಡೆಯಲು ಬೇಕಾದ ಅಗ್ಗದ ರಹಸ್ಯ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ. ನಿಮಗೆ ಇದನ್ನು ನಂಬಲು ಅಸಾಧ್ಯ ಎಂದೆನಿಸಿದರೂ ಇದು ನಿಜ. ಆದು ಬೇರೇನಲ್ಲಾ ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವ ಉಪ್ಪು. ನಿಮ್ಮ ಕೂದಲಿನ ಆರೋಗ್ಯ ಹೆಚ್ಚಿಸಲು ಉಪ್ಪು ಸಹಾಯಕ ಎಂಬುದು ನಿಜ.
ತಲೆಹೊಟ್ಟಿಗೆ ಇರುವ ಮುಖ್ಯವಾದ ಕಾರಣ ಎಂದರೆ ಕೂದಲಿನ ಬುಡದಲ್ಲಿರುವ ಡೆಡ್ ಸ್ಕಿನ್ ಒಣಗಿ ಫ್ಲೆಕ್ಸ್ ಆಗಿ ಉದುರುವುದು. ತಲೆಯಲ್ಲಿ ಆರ್ದ್ರತೆ ಮತ್ತು ಶಿಲೀಂಧ್ರ ಕೂಡ ತಲೆಹೊಟ್ಟು ಹೆಚ್ಚುವಂತೆ ಮಾಡುತ್ತದೆ.ಅಡುಗೆಗೆ ಬಳಸುವ ಉಪ್ಪು ಕೂದಲಿನಲ್ಲಿ ಹೆಚ್ಚಾದ ಎಣ್ಣೆ ಅಂಶ ಮತ್ತು ಆರ್ಧ್ರತೆಯನ್ನು ತಡೆಯುವುದರ ಜೊತೆಗೆ ತಲೆಹೊಟ್ಟನ್ನು ಕೂಡ ನಿವಾರಿಸುತ್ತದೆ. ಉಪ್ಪು ನೀರನ್ನು ನಿಮ್ಮ ಕೂದಲಿಗೆ ಸಿಂಪಡಿಸಿ ನಿಧಾನವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಕೂದಲನ್ನು ಯಾವಾಗಲೂ ವಾಶ್ ಮಾಡುವಂತೆ ತಲೆಗೆ ಸ್ನಾನ ಮಾಡಿ ಮತ್ತು ಇದರ ಅನುಕೂಲವನ್ನು ನೋಡಿ.
ಕೂದಲು ಉದುರುವಿಕೆ ಸಾಮನ್ಯವಾಗಿ ಎಲ್ಲರಲ್ಲಿ ಕಂಡು ಬರುವ ಸಮಸ್ಯೆ. ರಾಸಾಯನಿಕ ಉತ್ಪನ್ನಗಳನ್ನು ಒಳಗೊಂಡಿರುವ ಶಾಂಪೂ ಬಳಸುವುದರಿಂದ ಕೂದಲು ಹೊಳಪನ್ನು ಕಳೆದುಕೊಳ್ಳುತ್ತದೆ. ಶಾಂಪೂವಿನ ಜೊತೆಗೆ ಸ್ವಲ್ಪ ಉಪ್ಪನ್ನು ಬಳಸುವುದರಿಂದ ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ.
ಇದು ಕೂದಲು ದಪ್ಪವಾಗಿ ಕಾಣುವುದು ಮಾತ್ರವಲ್ಲ,ದಟ್ಟವಾಗಿ ಬೆಳೆಯಲು ಕೂಡ ಸಹಕರಿಸುತ್ತದೆ. ನಿಮಗೆ ಬೇಕಾದಷ್ಟು ಶಾಂಪೂವನ್ನು ತೆಗೆದುಕೊಂಡು ಅದರ ಅರ್ಧದಷ್ಟು ಉಪ್ಪನ್ನು ಬೆರೆಸಿ. ನಿಧಾನವಾಗಿ ಮಸಾಜ್ ಮಾಡಿ ಅದನ್ನು ಸ್ವಲ್ಪ ಹೊತ್ತು ಹಾಗೇ ಬಿಟ್ಟುಬಿಡಿ. ನಂತರ ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ.
ಕೂದಲು ಜಿಡ್ಡುಗಟ್ಟುವುದನ್ನು ತಡೆಯಲು ಪ್ರತಿ ಎರಡು ದಿನಕ್ಕೊಮ್ಮೆ ತಲೆಗೆ ಸ್ನಾನ ಮಾಡಬೇಕಾಗಿ ಬರುತ್ತಿದೆಯೇ? ಹಾಗಿದ್ದರೆ ಉಪ್ಪು ನಿಮ್ಮ ಸಹಾಯಕ್ಕೆ ಬರಬಹುದು. ಆರೋಗ್ಯಕರ ಕೂದಲನ್ನು ಪಡೆಯಲು ಎಣ್ಣೆ ಬಳಸುವುದು ಅಗತ್ಯ ಆದರೆ ವಿಪರೀತ ಎಣ್ಣೆಯಂಶ ಕೂಡ ಮುಜುಗರ ಉಂಟು ಮಾಡುತ್ತದೆ. ತಲೆ ಬುಡದಲ್ಲಿ ಸೆಬಾಸಿಯಸ್ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಎಣ್ಣೆ ಅಂಶವನ್ನು ಉಪ್ಪು ತಡೆಯುತ್ತದೆ. ಇದರಿಂದ ನಿಮ್ಮ ಕೂದಲಿನ ಗುಣಮಟ್ಟ ಸುಧಾರಿಸುತ್ತದೆ.
ಸೀ ಸಾಲ್ಟ್ ರಕ್ತ ಸಂಚಾರವನ್ನು ಸರಾಗಗೊಳಿಸಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಒಂದು ರೀತಿಯ ಉಪ್ಪು. ಇದರಲ್ಲಿರುವ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಬ್ರೋಮೈಡ್, ಸಲ್ಫಾರ್, ಜಿಂಕ್, ಕ್ಲೋರೈಡ್ ಇವುಗಳು ಕೂದಲಿನ ಬೆಳವಣಿಗೆ ಹೆಚ್ಚಿಸಿ ಬಲಯುತವಾಗಿಸುತ್ತದೆ. ಈ ಎಲ್ಲಾ ರೀತಿಯಲ್ಲಿ ಉಪ್ಪನ್ನು ಬಳಸುವುದರಿಂದ ಕೂದಲು ಬೆಳೆಯಲು ಅನುಕೂಲವಾಗುತ್ತದೆ. ಅಡುಗೆ ಮನೆಯಲ್ಲಿ ದೊರೆಯುವ ಈ ಉಪ್ಪನ್ನು ಬಳಸಿ ಮತ್ತು ಇದರಿಂದಾಗುವ ಮ್ಯಾಜಿಕ್ ನೋಡಿ.
Subscribe to:
Posts (Atom)
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
ಸಂಧಿಗಳು ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. “ ಊರು ಊರು” ಎಂಬೆರಡು ಶಬ್ದಗಳನ್ನು ‘ ಊರೂರು ' ಎಂದು ಕೂಡಿಸಿಯೇ ಮಾತನಾಡುತ್ತ...
-
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳ...