Friday, 10 July 2020
Friday, 3 July 2020
27 ವರ್ಷಗಳ ನಂತರ ಈಗ ಶನಿದೇವನ ಕೃಪಾಕಟಾಕ್ಷದಿಂದ ಈ ನಾಲ್ಕು ರಾಶಿಗಳಿಗೆ ಅದೃಷ್ಟವೋ ಅದೃಷ್ಟ ನಿಮ್ಮದು ಪರೀಕ್ಷಿಸಿ.


Wednesday, 1 July 2020
ಶ್ರೀ_ವಿಷ್ಣುಸಹಸ್ರನಾಮ
Wednesday, 24 June 2020
ಶ್ರೀ ಗಣೇಶ ಶ್ಲೋಕಗಳು
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಅಥವಾ
ಓಂ ನಮೋ ವಿಘ್ನೇಶ್ವರಾಯ ನಮಃ
– ಏನೇ ಒಂದು ಹೊಸ (embarking on anything new) ಕೆಲಸ/ಕಾರ್ಯ (ಪರೀಕ್ಷೆ, ಹೊಸ ಮನೆ, ಮದುವೆ, interview ) ಶುರು ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿ.
ಗಣೇಶ ಗಾಯತ್ರಿ ಮಂತ್ರ:
ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಅಥವಾ
ಓಂ ತತ್ಪುರುಶ್ಯಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
********************
ಶ್ರೀ ಗಜಮುಖನ ಶ್ಲೋಕಗಳು :
ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ
*******************
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್
****************************
ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ.
***********************
ಗಣಾನಾಂ ತ್ವಂ ಗಣಪತಿ ಗಂ ಹವಾಮಹೇ
ಕವಿಂ ಕವೀನಾಂ ಉಪಮಸ್ರ ವಸ್ತಮಂ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆನಶ್ರುನ್ವನ್ನ ಊತಿಭಿ ಸೀದ ಸಾದನಂ
************************
ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ
ಜನಕ: ಶಂಕರೋ ದೇವಃ, ತಮ್ ವಂದೇ ಕುಂಜರಾನನಂ
********************************
ಗಜವಕ್ತ್ರಂ ಸುರ-ಶ್ರೇಷ್ಟಂ
ಕರ್ಣ ಚಾಮರ ಭೂಷಿತಾಂ
ಪಾಶಾಂಕುಶ ಧರಂ ದೇವಂ
ವಂದೆಹಂ ಗಣನಾಯಕಂ
****************
ಏಕದಂತಂ ಮಹಾಕಾಯಂ ತಪ್ತಕಾಜ್ಞ್ಚಂಸಂನಿಭಮ್
ಲಂಬೋದರಂ ವಿಶಾಲಾಕ್ಷo ವಂದೆಹಂ ಗಣನಾಯಕಂ
*******************************
ಏಕದಂತಂ ಮಹಕಾಯಂ
ಲಂಬೋದರ ಗಜಾನನಂ
ವಿಘ್ನ ನಾಶಕರ್ಮ ದೇವಂ
ಹೇರಮ್ಬಂ ಪ್ರಾಣ ಮಾಮ್ಯಹಂ
*******************
ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ
*******************************
ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ
***************************
೧೬ ಶ್ರೀ ಗಣೇಶನ ನಾಮಗಳು:
೧. ಓಂ ಸುಮುಖಾಯ ನಮಃ
೨. ಓಂ ಏಕದಂತಾಯ ನಮಃ
೩. ಓಂ ಕಪಿಲಾಯ ನಮಃ
೪. ಓಂ ಗಜಕರ್ಣಾಯ ನಮಃ
೫. ಓಂ ಲಂಬೋಧರಾಯ ನಮಃ
೬. ಓಂ ವಿಕಟಾಯ ನಮಃ
೭. ಓಂ ವಿಘ್ನರಾಜಾಯ ನಮಃ
೮. ಓಂ ಗಣಾಧಿಪಾಯ ನಮಃ
೯. ಓಂ ಧೂಮಕೇತವೆ ನಮಃ
೧೦. ಓಂ ಗಣಾಧ್ಯಕ್ಷಾಯ ನಮಃ
೧೧. ಓಂ ಬಾಲಚಂದ್ರಾಯ ನಮಃ
೧೨. ಓಂ ಗಜಾನನಾಯ ನಮಃ
೧೩. ಓಂ ವಕ್ರತುಂಡಾಯ ನಮಃ
೧೪. ಓಂ ಸೂರ್ಪಕರ್ಣಾಯ ನಮಃ
೧೫. ಓಂ ಹೇರಮ್ಭಾಯ ನಮಃ
೧೬. ಓಂ ಸ್ಕಂದಪೂರ್ವಜಾಯ ನಮಃ
೧೬ ನಾಮಗಳೊಂದಿಗೆ ಶ್ರೀ ಗಣೇಶನಿಗೆ ಪ್ರಾಥನೆ:
ಸುಮುಖಶ್ಚ ಏಕದನ್ತಶ್ಚ ಕಪಿಲೋ ಗಜಕರ್ಣಕ:
ಲಂಬೋದರಶ್ಚ ವಿಕಟ: ವಿಘ್ನರಾಜೋ ವಿನಾಯಕ:
ಧೂಮಕೆತುರ್ ಗಣಾಧಕ್ಷ್ಯೋ ಬಾಲಚಂದ್ರೋ ಗಜಾನನ:
ವಕ್ರತುಂಡ: ಸೂರ್ಪಕರ್ಣ: ಹೇರಂಭ: ಸ್ಕಂದಪೂರ್ವಜ:
ಶ್ರೀ ಗಣೇಶ ದ್ವಾದಶನಾಮ ಸ್ತೋತ್ರ:
ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
ಭಕ್ತವಾಸಂ ಸ್ಮರೆನಿತ್ಯಂ ಅಯುರ್ಕಾಮರ್ಥ ಸಿದ್ಧಯೇ ೧
ಪ್ರಥಮಂ ವಕ್ರತುಂದಮ್ಚ ಏಕದಂತಂ ದ್ವಿತಿಯಕಂ
ತ್ರುತಿಯಂ ಕ್ರಿಷ್ಣಪಿನ್ಗಕಾಶಂ ಗಜವಕ್ರಂ ಚತುರ್ಥಕಂ ೨
ಲಂಬೋದರಂ ಪಂಚಮಂಚ ಶಷ್ಟಂ ವಿಕಟಮೇವಚ
ಸಪ್ತಮಂ ವಿಘ್ನರಾಜಮ್ಚ ಧೂಮ್ರವರ್ಣಂ ತಥಾಷ್ಟಕಂ ೩
ನವಮಂ ಬಾಲಚಂದ್ರಮ್ಚ ದಶಮಂತು ವಿನಾಯಕಂ
ಏಕದಶಂ ಗಣಪತಿಂ ದ್ವಾದಶಂತು ಗಜಾನನಂ ೪
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯ: ಪಠೇನ್ ನರಃ
ನಚವಿಘ್ನ ಭಯಂ ತಸ್ಯ ಸರ್ವಸಿಧಿಕರಂ ಪ್ರಭೋ ೫
*******************************
ಶ್ರೀ ವಿಘ್ನೇಶ್ವರ ಅಷ್ಟೋತ್ತರ ಶತನಾಮಾವಳಿ:
೧. ಓಂ ಗಜಾನನಾಯ ನಮಃ
೨. ಓಂ ಗಣಾಧ್ಯಾಕ್ಷಯ ನಮಃ
೩.ಓಂ ವಿಘ್ನರಾಜಾಯ ನಮಃ
೪. ಓಂ ವಿನಾಕಯ ನಮಃ
೫. ಓಂ ದ್ವೈಮಾತುರಾಯ ನಮಃ
೬. ಓಂ ದ್ವಿಮುಖಾಯ ನಮಃ
೭. ಓಂ ಪ್ರಮುಖಾಯ ನಮಃ
೮. ಓಂ ಸುಮುಖಾಯ ನಮಃ
೯. ಓಂ ಕ್ರುತಿನೆ ನಮಃ
೧೦. ಓಂ ಸುಪ್ರ-ದೀಪಾಯ ನಮಃ
೧೧. ಓಂ ಸುಖ – ನಿಧಯೇ ನಮಃ
೧೨. ಓಂ ಸುರ- ಅಧ್ಯಕ್ಷಾಯ ನಮಃ
೧೩. ಓಂ ಸುರ- ರಿಘ್ನಯ ನಮಃ
೧೪. ಓಂ ಮಹಾಗಣಪತಯೇ ನಮಃ
೧೫. ಓಂ ಮನ್ಯಾಯ ನಮಃ
೧೬. ಓಂ ಮಹಾಕಳಾಯ ನಮಃ
೧೭. ಓಂ ಮಹಾಬಲಾಯ ನಮಃ
೧೮. ಓಂ ಹೇರಮ್ಬಾಯ ನಮಃ
೧೯. ಓಂ ಲಂಬ- ಜಟರಾಯ ನಮಃ
೨೦. ಓಂ ಹಸ್ವಗ್ರಿವಾಯ ನಮಃ
೨೧. ಓಂ ಮಹೋದರಾಯ ನಮಃ
೨೨. ಓಂ ಮದೊತ್ಕತಾಯ ನಮಃ
೨೩. ಓಂ ಮಹಾವೀರಾಯ ನಮಃ
೨೪. ಓಂ ಮಂತ್ರಿನೆ ನಮಃ
೨೫. ಓಂ ಮಂಗಳ-ಸ್ವರೂಪಾಯ ನಮಃ
೨೬. ಓಂ ಪ್ರಮೊದಾಯ ನಮಃ
೨೭. ಓಂ ಪ್ರದನಾಯ ನಮಃ
೨೮. ಓಂ ಪ್ರಾಘ್ಯ್ನಾಯ ನಮಃ
೨೯. ಓಂ ವಿಘ್ನಕತ್ರೆ ನಮಃ
೩೦. ಓಂ ವಿಘ್ನಹಂತ್ರೆ ನಮಃ
೩೧. ಓಂ ವಿಶ್ವ-ನೇತ್ರಾಯ ನಮಃ
೩೨. ಓಂ ವಿರಾತ್ಪತಯೇ ನಮಃ
೩೩. ಓಂ ಶ್ರೀಪತಯೇ ನಮಃ
೩೪. ಓಂ ವಾಕ್ಪತಯೇ ನಮಃ
೩೫. ಓಂ ಶ್ರುಂಗರಿನೆ ನಮಃ
೩೬. ಓಂ ಆಶ್ರಿತ -ವಾತ್ಸಲ್ಯ ನಮಃ
೩೭. ಓಂ ಶಿವಪ್ರಿಯಾಯ ನಮಃ
೩೮. ಓಂ ಶೀಘ್ರ-ಕಾರಿಣೆ ನಮಃ
೩೯. ಓಂ ಶಾಶ್ವತಾಯ ನಮಃ
೪೦. ಓಂ ಬಲಾಯ ನಮಃ
೪೧. ಓಂ ಬಲೋಧಿತಾಯ ನಮಃ
೪೨. ಓಂ ಭಾವಾತ್ಮಜಾಯ ನಮಃ
೪೩. ಓಂ ಪುರಾಣ-ಪುರುಷಾಯ ನಮಃ
೪೪. ಓಂ ಪೂಷ್ನೆ ನಮಃ
೪೫. ಓಂ ಪುಷ್ಕರೋಚಿತ್ತಯ ನಮಃ
೪೬. ಓಂ ಅಗ್ರಗನ್ಯಾಯ ನಮಃ
೪೭. ಓಂ ಅಗ್ರಪುಜ್ಯಾಯ ನಮಃ
೪೮. ಓಂ ಅಗ್ರಗಾಮಿನೆ ನಮಃ
೪೯. ಓಂ ಮಂತ್ರಕ್ರುತೈ ನಮಃ
೫೦. ಓಂ ಚಾಮಿಕರ-ಪ್ರಭಾಯ ನಮಃ
೫೧. ಓಂ ಸರ್ವಾಯ ನಮಃ
೫೨. ಓಂ ಸರ್ವೋಪಸ್ಯಾಯ ನಮಃ
೫೩. ಓಂ ಸರ್ವಕರ್ತ್ರೆ ನಮಃ
೫೪. ಓಂ ಸರ್ವ-ನೇತ್ರಾಯ ನಮಃ
೫೫. ಓಂ ಸರ್ವ-ಸಿದ್ಧಿಪ್ರದಾಯ ನಮಃ
೫೬. ಓಂ ಸರ್ವ-ಸಿದ್ಧಯೇ ನಮಃ
೫೭. ಓಂ ಪಂಚ-ಹಸ್ತಾಯ ನಮಃ
೫೮. ಓಂ ಪಾರ್ವತೀ-ನದನಾಯ ನಮಃ
೫೯. ಓಂ ಪ್ರಭವೆ ನಮಃ
೬೦. ಓಂ ಕುಮಾರ-ಗುರವೇ ನಮಃ
೬೧. ಓಂ ಅಕ್ಶೋಭ್ಯಾಯಾ ನಮಃ
೬೨. ಓಂ ಕುಂಜರ-ಸುರ-ಭಂಜನಾಯ ನಮಃ
೬೩. ಓಂ ಪ್ರಮೋದ್-ಆಪ್ತ-ನಯನಾಯ ನಮಃ
೬೪. ಓಂ ಮೋದಕ-ಪ್ರಿಯಾಯ ನಮಃ
೬೫. ಓಂ ಕಾಂತಿಮತೆ ನಮಃ
೬೬. ಓಂ ಧ್ರುತಿಮತೆ ನಮಃ
೬೭. ಓಂ ಕಾಮಿನೆ ನಮಃ
೬೮. ಓಂ ಕವಿದ್ಧಪ್ರಿಯಾಯ ನಮಃ
೬೯. ಓಂ ಬ್ರಹ್ಮಚಾರಿಣೇ ನಮಃ
೭೦. ಓಂ ಬ್ರಹ್ಮರೂಪಿಣೇ ನಮಃ
೭೧. ಓಂ ಬ್ರಹ್ಮ-ವಿಧ್ಯಾಧಿ -ಪಾಯ ನಮಃ
೭೨. ಓಂ ಜಿಷ್ಣವೆ ನಮಃ
೭೩. ಓಂ ವಿಷ್ಣುಪ್ರಿಯಾಯ ನಮಃ
೭೪. ಓಂ ಭಕ್ತ-ಜೀವಿತಾಯ ನಮಃ
೭೫. ಓಂ ಜಿತಮನ್ಮತಾಯ ನಮಃ
೭೬. ಓಂ ಇಷ್ವರ್ಯಕರನಾಯ ನಮಃ
೭೭. ಓಂ ಜಾಯಸೆ ನಮಃ
೭೮. ಓಂ ಯಕ್ಷಕಿನ್ನೆರ-ಸೇವಿತಯ ನಮಃ
೭೯. ಓಂ ಗಂಗಾ-ಸುತಾಯ ನಮಃ
೮೦. ಓಂ ಗಣಧಿಸ್ಹಾಯ ನಮಃ
೮೧. ಓಂ ಗಂಭೀರ -ನಿನದಯ ನಮಃ
೮೨. ಓಂ ವಟವೆ ನಮಃ
೮೩. ಓಂ ಅಭಿಷ್ಟ-ವರಾದಾಯ ನಮಃ
೮೪. ಓಂ ಜ್ಯೋತಿಷೆ ನಮಃ
೮೫. ಓಂ ಭಕ್ತ -ನಿಧಯೇ ನಮಃ
೮೬. ಓಂ ಭಾವ -ಗಮ್ಯಾಯ ನಮಃ
೮೭. ಓಂ ಮಂಗಳಪ್ರದಾಯ ನಮಃ
೮೮. ಓಂ ಅವ್ಯಕ್ತಾಯ ನಮಃ
೮೯. ಓಂ ಅಪ್ರಕೃತ-ಪರಕ್ರಮಾಯ ನಮಃ
೯೦. ಓಂ ಸತ್ಯಧರ್ಮಿಣೇ ನಮಃ
೯೧. ಓಂ ಸಖ್ಯೆ ನಮಃ
೯೨. ಓಂ ಸರಸಂ-ಭುನಿ-ಧಯೇ ನಮಃ
೯೩. ಓಂ ಮಹೇಶಾಯ ನಮಃ
೯೪. ಓಂ ದಿವ್ಯಂಗಾಯ ನಮಃ
೯೫. ಓಂ ಮನಿಕಿನ್ಕಿನಿ-ಮೆಖನಾಯ ನಮಃ
೯೬. ಓಂ ಸಮಸ್ತ -ದೈವತಾಯ ನಮಃ
೯೭. ಓಂ ಸಹಿಷ್ಣವೆ ನಮಃ
೯೮. ಓಂ ಸತತೋದ್-ದಿತಾಯ ನಮಃ
೯೯. ಓಂ ವಿಘತಕಾರಿನೆ ನಮಃ
೧೦೦. ಓಂ ವಿಶ್ವ -ದ್ರುಷೆ ನಮಃ
೧೦೧. ಓಂ ವಿಶ್ವ-ರಕ್ಷಕ್ರುತೆ ನಮಃ
೧೦೨. ಓಂ ಕಲ್ಯಾಣ-ಗುರುವೇ ನಮಃ
೧೦೩. ಓಂ ಉನ್ಮತ್ತ-ವೆಶಾಯ ನಮಃ
೧೦೪. ಓಂ ಅವರ -ಜಜಿತೆ ನಮಃ
೧೦೫. ಓಂ ಸಮಸ್ತ -ಜಗದ್ಧರಾಯ ನಮಃ
೧೦೬. ಓಂ ಸರ್ವಿಶ್ವರ್ಯಾಯ ನಮಃ
೧೦೭. ಓಂ ಅಕ್ರಂತ-ಚಿದಕ್ -ಚಿತ್ರ-ಪ್ರಭವೆ ನಮಃ
೧೦೮. ಓಂ ಶ್ರೀವಿಘ್ನೇಶ್ವರಾಯ ನಮಃ
************************
Wednesday, 3 June 2020
ಜೂ. 5ರಂದು ಚಂದ್ರಗ್ರಹಣ: ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ.?

2020ರಲ್ಲಿ ಸಂಭವಿಸುತ್ತಿರುವ ಎರಡನೇ ಚಂದ್ರಗ್ರಹಣ ಇದು. ಮೊದಲನೆಯದು ಜನವರಿ 10ರಂದು ಸಂಭವಿಸಿತ್ತು. ಜುಲೈ 5 ಮತ್ತು ನವೆಂಬರ್ 29ರಂದು ಇನ್ನೆರಡು ಚಂದ್ರಗ್ರಹಣಗಳು ಸಂಭವಿಸಲಿವೆ.
ಈ ನಾಲ್ಕೂ ಗ್ರಹಣಗಳ ಪೈಕಿ ಜೂನ್ 5ರ ಗ್ರಹಣ ಕರ್ನಾಟಕವೂ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ಗೋಚರಿಸುತ್ತದೆ. ನವೆಂಬರ್ 29ರ ಗ್ರಹಣ ಕೂಡ ಭಾಗಶಃ ಗೋಚರಿಸುವಂತಹದ್ದು. ಆದರೆ ಇದೆಲ್ಲವೂ ಆ ಸಂದರ್ಭದಲ್ಲಿ ಇರುವ ಶುಭ್ರ ವಾತಾವರಣ, ಮೋಡ ಮುಸುಕಿದ ಆಕಾಶ ಇದೆಲ್ಲದರ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
Tuesday, 2 June 2020
ಮಂಗಳಮುಖಿಯರಿಗೆ ಯಾವತ್ತೂ ಮರೆತೂ ಈ ವಸ್ತುಗಳನ್ನು ದಾನವಾಗಿ ನೀಡಬಾರದು.!
ಇಷ್ಟೇ ಅಲ್ಲದೆ ಇವರಿಗೆ ಯಾವ ವಸ್ತುಗಳನ್ನು ದಾನವಾಗಿ ನೀಡಬಾರದು ಎಂದು ಕೂಡ ಹೇಳಲಾಗಿದೆ ಮತ್ತು ಈ ವಸ್ತುಗಳನ್ನು ಭಿಕ್ಷೆಯಾಗಿ ಕೊಟ್ಟರೆ ಖಂಡಿತ ನಿಮ್ಮನ್ನು ದರಿದ್ರತನ, ನಷ್ಟ, ದುರಾದ್ರಷ್ಟ ಬೆನ್ನಟ್ಟುತ್ತದೆ. ಇನ್ನು ವಸ್ತುಗಳನ್ನ ದಾನವಾಗಿ ಮಂಗಳಮುಖಿಯರಿಗೆ ನೀಡುವುದರಿಂದ ನೀವು ಜಿನಲ್ಲಿ ಅನೇಕ ರೀತಿಯ ತಿಒಂದರೆಗಳನ್ನ ಎದುರಿಸಬೇಕಾಗುತ್ತದೆ ಹಾಗೆ ನಿಮ್ಮ ಜೀವನದಲ್ಲಿ ಏಳಿಗೆ ಆಗುವುದಿಲ್ಲ. ಹಾಗಿದ್ದರೆ ದಾರಿಯಲ್ಲಿ ಮಂಗಳಮುಖಿಯರಿಗೆ ಯಾವ ವಸ್ತುಗಳನ್ನು ದಾನವಾಗಿ ನೀಡಬಾರದು ಗೊತ್ತಾ ಒಮ್ಮೆ ತಿಳಿಯಿರಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹಬ್ಬದ ಸಮಯದಲ್ಲಿ ಮನೆಯ ಹಳೆಯ ವಸ್ತುಗಳನ್ನು ಹಾಗು ಬಳಸದ ವಸ್ತುಗಳನ್ನು ದಾನ ಮಾಡುವ ಅಭ್ಯಾಸ ಹಲವು ಜನರಿಗೆ ಇದೆ, ಸ್ನೇಹಿತರೆ ಇದು ಒಳ್ಳೆಯ ಅಭ್ಯಾಸ ಆದರೆ ನೆನೆಪಿಡಿ ಮಂಗಳಮುಖಿಯರಿಗೆ ಯಾವತ್ತೂ ಕೂಡ ಪಾತ್ರೆಗಳನ್ನು ದಾನವಾಗಿ ನೀಡಬೇಡಿ.
ಹೌದು ಮಂಗಳಮುಖಿಯರಿಗೆ ಪಾತ್ರೆಗಳನ್ನ ದಾನವಾಗಿ ನೀಡುವುದರಿಂದ ನಿಮ್ಮ ಕುಟುಂಬದಲ್ಲಿ ಅಶಾಂತಿ, ಜಗಳ, ಕಲಹಕ್ಕೆ ಕಾರಣವಾಗುತ್ತದೆ, ಕುಟುಂಬದ ಸದಸ್ಯರಲ್ಲಿ ಮನಸ್ತಾಪ ಮತ್ತು ಕುಟುಂಬದ ಅಭಿವೃದ್ಧಿಗೆ ದೋಷವಾಗುತ್ತದೆ. ಇಷ್ಟೇ ಅಲ್ಲದೆ ಇವರಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಕೂಡ ನೀಡುವುದು ತಪ್ಪಾಗುತ್ತದೆ ಇದರಿಂದ ಮನೆಯ ಸದಸ್ಯರಿಗೆ ಯಾವುದಾದರು ರೋಗ ಅಥವಾ ಅರೋಗ್ಯ ಹದಗೆಡುವ ಸಮಸ್ಯೆಗಳು ಪದೇ ಪದೇ ಎದುರಾಗಬಹುದು, ಇದು ಕುಟುಂಬದ ಪ್ರಗತಿಗೆ ಅಡ್ಡಿಯಾಗುತ್ತದೆ. ಹಾಗೆಯೆ ಮನೆಯಲ್ಲಿನ ಪೊರಕೆಯನ್ನು ಲಕ್ಷ್ಮಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಮನೆಗೆ ಬರುವ ಮಂಗಳಮುಖಿಯರಿಗೆ ಇದನ್ನು ನೀಡಬೇಡಿ ಮತ್ತು ಇದನ್ನು ಮಾಡುವುದರಿಂದ ನೀವು ಲಕ್ಷ್ಮಿಯ ವಾಸಸ್ಥಾನವನ್ನು ನಿಮ್ಮ ಮನೆಯಿಂದ ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ ಮತ್ತು ತೊಂದರೆಯ ಜೀವನವನ್ನು ನಡೆಸಬೇಕಾಗುತ್ತದೆ ಹಾಗೆ ಹಣಕಾಸಿನ ವಿಚಾರದಲ್ಲಿ ಒಮ್ಮೊಮ್ಮೆ ನೀವೂ ಕೂಡ ಎಷ್ಟೇ ಹಣವಿದ್ದರೂ ಒಮ್ಮೊಮ್ಮೆ ಸಂದಿಗ್ದ ಪರಿಸ್ಥಿತಿಗೆ ತಲುಪುವಿರಿ.
ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ಶನಿವಾರ ದಿನ ದಾನ ಮಾಡಲಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಮತ್ತು ಇದು ಮನೆಯ ಬಡತನ ಮತ್ತು ದುರದೃಷ್ಟವನ್ನು ತೆಗೆದುಹಾಕುತ್ತದೆ. ಆದರೆ ಮನೆಗೆ ಬರುವ ಮಂಗಳಮುಖಿಯರಿಗೆ ಎಂದಿಗೂ ತೈಲವನ್ನು ದಾನ ಮಾಡಬಾರದು ಎಂಬುದು ನಿಮಗೆಲ್ಲರಿಗೂ ತಿಳಿದಿಲ್ಲ, ಹೌದು ಸ್ನೇಹಿತರೆ ಹೀಗೆ ಮಾಡಿದರೆ ದುಃಖ ಮತ್ತು ಬಡತನವು ನಿಮ್ಮ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತದೆ, ಸ್ನೇಹಿತರೆ ಈ ಎಲ್ಲಾ ವಸ್ತುಗಳನ್ನ ನೀವು ಮಂಗಮುಖಿಯರಿಗೆ ದಾನ ಮಾಡುವುದರಿಂದ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಸ್ವಲ್ಪ ಜಾಗ್ರತೆ.

ಈ 5 ರಾಶಿಯವರಿಗೆ ಒಲಿದು ಬಂದ ರಾಜ ಯೋಗ ಯಾವ ರಾಶಿಯವರಿಗೆ ಗೊತ್ತಾ..!



Monday, 1 June 2020
ಜೂನ್ ಎಂಟರಿಂದ ದೇವಾಲಯಗಳು ಆರಂಭ ಆದರೆ ಈ ಎಂಟು ನಿಯಮಗಳನ್ನು ಪಾಲಿಸಲೇಬೇಕು
ಕೊರೊನಾ ಲಾಕ್ಡೌನ್ 5.0ನಲ್ಲಿ ಕೇಂದ್ರ ಸರ್ಕಾರವು ದೇವಾಲಯ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಜೂನ್ 8ರಿಂದ ದೇವಾಲಯ ತೆರೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಎಂಟು ಸೂತ್ರಗಳನ್ನು ಹೊರಡಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದೆ. ಸರ್ಕಾರವು ಮುಂಬರುವ ದಿನಗಳಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಬಹುದು. ಹೀಗಾಗಿ ದೇವಾಲಯಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕಿದೆ ಎಂದು ತಿಳಿಸಿದೆ.
ಎಂಟು ನಿಯಮಗಳು ಏನು?
1. ನಿತ್ಯ ಸ್ವಚ್ಛತೆ ಜೊತೆಗೆ ಒಳಗೆ-ಹೊರಗೆ ಡಿಸ್ ಇನ್ಫೆಕ್ಟರ್ ಸಿಂಪಡಣೆ ಕಡ್ಡಾಯ.
2. ಭದ್ರತಾ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ದೇವಾಲಯದ ಖರ್ಚಿನಲ್ಲೇ ನೇಮಿಸಿ.
3. ದೇವಾಲಯದ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ, ಒಳಾಂಗಣದಲ್ಲಿ ಅರ್ಚಕರಿಗೆ ಮಾಸ್ಕ್ ವಿನಾಯಿತಿ.
4. ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ, ಸ್ಯಾನಿಟೈಸರ್ ಹಾಕಿದ ನಂತರವೇ ದೇವಸ್ಥಾನಕ್ಕೆ ಎಂಟ್ರಿ.
5. ಥರ್ಮಲ್ ಸ್ಕ್ರೀನಿಂಗ್ನಲ್ಲಿ ಜ್ವರ ಪತ್ತೆಯಾದರೆ ದೇವಸ್ಥಾನಕ್ಕೆ ನೋ ಎಂಟ್ರಿ.
6. ಮಾಸ್ಕ್ ಧರಿಸದ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶವಿಲ್ಲ.
7. ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್, ಲೈನ್ ರೂಪಿಸುವುದು ಕಡ್ಡಾಯ.
8. ದೇವಸ್ಥಾನದ ಶೌಚಾಲಯ ಆಗಾಗ ಸ್ವಚ್ಛಗೊಳಿಸಿ, ಅಗತ್ಯ ಡಿಸ್ ಇನ್ಫೆಂಕಟರ್ ಸಿಂಪಡಿಸಬೇಕು.
ಕಾಲುಂಗುರ ಬಿಪಿ ಕಂಟ್ರೋಲ್ ಮಾಡುತ್ತೆ ಅಂದರೆ ಶಾಕ್ ಆಗ್ತೀರಾ.!
ಬೆಳ್ಳಿ ಕಾಲುಂಗುರದ ಆರೋಗ್ಯಕಾರಿ ಪ್ರಯೋಜನಗಳು: ಭೂಮಿಯಿಂದ ಧ್ರುವೀಯ ಶಕ್ತಿಯನ್ನು ಹೀರಿಕೊಂಡು ದೇಹದಲ್ಲಿ ಹಾದು ಹೋಗಲು ಬೆಳ್ಳಿ ನೆರವಾಗುತ್ತದೆ. ದೇಹದಲ್ಲಿ ಇದು ಅನೇಕ ಬದಲಾವಣೆಗಳನ್ನು ತರುತ್ತದೆ. ಕಾಲುಂಗುರ ಹಾಕುವ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ.
ಈ ಬೆರಳಿಗೆ ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ಮಹಿಳೆಯರ ಋತುಚಕ್ರ ಸಮಸ್ಯೆತಡೆಯಬಹುದು. ಇದರಿಂದ ಪಿರಿಯಡ್ಸ್ ಸರಿಯಾಗಿ ಆಗುತ್ತದೆ. ಕಾಲುಂಗುರ ಹಾಕುವುದರಿಂದ ರಕ್ತ ಸಂಚಾರ ಸಮಪರ್ಕಗೊಂಡು, ಗರ್ಭಕೋಶವನ್ನು ಆರೋಗ್ಯವಾಗಿಡಬಹುದು.ಕಾಲಿನ ಕೆಲವು ನರಗಳು ಉತ್ತೇಜನಗೊಳ್ಳುತ್ತದೆ. ಇದರಿಂದ ಸಂತಾನೋತ್ಪತ್ತಿಯೂ ಚೆನ್ನಾಗಿರುತ್ತದೆ.
ಕಾಲುಂಗುರದಿಂದ ಬೆರಳಿನ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಅಲ್ಲಿರುವ ನರದ ಮೇಲೆ ಪ್ರೆಷರ್ ಬಿದ್ದು, ದೇಹಕ್ಕೆ ಮಸಾಜ್ ಸಿಕ್ಕಿಂತಾಗುತ್ತದೆ. ಇದು ಹಲವು ಸ್ತ್ರೀ ಸಂಬಂಧಿ ರೋಗಗಳಿಗೂ ರಾಮಬಾಣ. ದೇಹದ ಎಲ್ಲಾ ಅಂಗಾಗಳನ್ನೂ ರಿಫ್ರೆಶ್ ಆಗಲು ಕಾಲುಂಗುರ ಧರಿಸುವುದು ಉತ್ತಮ. ಕಾಲುಂಗುರ ಧರಿಸುವುದರಿಂದ ಮಹಿಳೆಯ ಹೊಟ್ಟೆಯಲ್ಲಿರುವ ಮಗುವೂ ಆರೋಗ್ಯವಾಗಿ ಬೆಳವಣಿಗೆಯಾಗುತ್ತದೆ.ಕಾಲುಂಗುರ ನಕರಾತ್ಮಕತೆ ನಿವಾರಿಸುತ್ತದೆ. ಇದು ಗರ್ಭಿಣಿಯರು ಮಾನಸಿಕವಾಗಿ ಆರೋಗ್ಯದಿಂದಿರಲು ಸಹಕರಿಸುತ್ತೆ.
ಬೆಳ್ಳಿ ವಸ್ತು ದೇಹವನ್ನು ತಂಪಾಗಿರಿಸುತ್ತವೆ. ಇದನ್ನು ಧರಿಸುವುದರಿಂದ ಪೊಸಿಟಿವ್ ಎನರ್ಜಿ ದೇಹದಲ್ಲಿ ಸಂಚಾರವಾಗುತ್ತದೆ. ಬ್ಲಡ್ ಪ್ರೆಶರ್ ಸಮಸ್ಯೆ ನಿರಾಳವಾಗಲು ಬೆಳ್ಳಿ ಕಾಲುಂಗುರ ನೆರವಾಗುತ್ತದೆ. ಬೆಳ್ಳಿ ಕಾಲುಂಗುರ ಇಷ್ಟೆಲ್ಲ ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ಕೆಲವು ಸಂಶೋಧನಾ ಅಧ್ಯಯನ ತಿಳಿಸಿದೆ.
Sunday, 31 May 2020
ಒದ್ದೆ ಬಟ್ಟೆಯನ್ನುಟ್ಟು ದೇವಾಲಯ ಪ್ರದಕ್ಷಣೆ ಮಾಡಿದರೆ ಏನು ಲಾಭ ಗೊತ್ತಾ


ನಿಮ್ಮ ಅದೃಷ್ಟವನ್ನು ಆಶ್ಚರ್ಯಕರವಾಗಿ ದ್ವಿಗುಣಗೊಳಿಸುತ್ತದೆ ಈ ಒಂದು ಫೋಟೋ
ಅದೃಷ್ಟವೆನ್ನುವುದು ನಮ್ಮ ಕರ್ಮ ಮತ್ತು ಜೀವನಕ್ಕೆ ಸಂಬಂಧಿಸಿದ್ದು. ಮನುಷ್ಯನಿಗೆ ಅದೃಷ್ಟವಿದ್ದಾಗ ಎಲ್ಲವನ್ನೂ ಸಾಧಿಸುತ್ತಾನರ, ಗಳಿಸುತ್ತಾನೆ. ಒಳ್ಳೆಯ ಕೆಲಸಗಳು ಉತ್ತಮ ಫಲಿತಾಂಶಗಳನ್ನು ನೀಡಿದರೆ, ಕಠಿಣ ಪರಿಶ್ರಮ ಹಾಗು ಒಳ್ಳೆಯ ಅಭ್ಯಾಸಗಳು ಅದೃಷ್ಟವನ್ನು ನೀಡುತ್ತವೆ. ನಿತ್ಯಜೀವನದಲ್ಲಿ ಪ್ರತಿದಿನ ಈ ನಿಯಮಗಳನ್ನು ಅಳವಡಿಸಿಕೊಂಡರೆ ನೀವು ಉನ್ನತಸ್ಥಾನವನ್ನು ಪಡೆಯಬಹುದು. ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಕೆಲವು ಜ್ಯೋತಿಷ್ಯ ಸಲಹೆಗಳು ಇಲ್ಲಿವೆ ನೋಡಿ
Thursday, 19 December 2019
ರಾಮಸೇತುವನ್ನು ನಿರ್ಮಿಸಲು ಯಾವ ಟೆಕ್ನಾಲಜಿ ಬಳಸಿದ್ದರು ಗೊತ್ತೆ? ರಾಮನ ಅಸ್ತಿತ್ವಕ್ಕೆ ಸಾಕ್ಷಿ
ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ಆದರೆ ಕೆಲವು ಬುದ್ಧಿ ಜೀವಿಗಳು ಈ ರಾಮಾಯಣವನ್ನು ಕೇವಲ ಇದೊಂದು ಮಹಾಕಾವ್ಯ ರಾಮ ಒಬ್ಬ ಕಾಲ್ಪನಿಕ ಮಾತ್ರ ಅದಲ್ಲದೆ ರಾಮ ಸೇತುವೆಯೂ ಮಾನವ ನಿರ್ಮಿತವಲ್ಲ ಇದೊಂದು ಕಾಲ್ಪನಿಕ ಎಂದು ಬೊಬ್ಬೆ ಇಡುತ್ತಿದ್ದ ಕೆಲವರಿಗೆ ಸರಿಯಾಗಿಯೇ ಉತ್ತರ ದೊರಕಿದೆ!!
ರಾಮಸೇತುವಿನ ಅಸ್ತಿತ್ವದ ಕುರಿತ ಪ್ರಶ್ನೆಗೊಂದು ಸಿಹಿ ಉತ್ತರ ಸಿಕ್ಕಿದೆ. ಸದ್ಯ ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುದಲ್ಲ. ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಸಾರಿದ್ದಾರೆ. ಈ ಬಗ್ಗೆ ಅಮೆರಿಕದ ಡಿಸ್ಕವರಿ ಕಮ್ಯುನಿ ಕೇಷನ್ನ ಸೈನ್ಸ್ ಚಾನೆಲ್ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದ್ದು, ಇದರಲ್ಲಿ ರಾಮಸೇತುವಿನ ಅಸ್ತಿತ್ವದ ಕುರಿತಂತೆ ವೈಜ್ಞಾನಿಕ ಉತ್ತರಗಳನ್ನು ಪಡೆಯಲಾಗಿದೆ.
ಮಾನವ ನಿರ್ಮಿತವೇ?
ಸೇತುವೆ ಮಾನವ ನಿರ್ಮಿತವೇ ಎಂಬ ಬಗ್ಗೆ ಹಿಂದಿನಿಂದಲೂ ವಾದ ವಿವಾದಗಳಿವೆ. ಇಲ್ಲಿನ ಮರಳಿನ ಪಟ್ಟಿ ನೈಸರ್ಗಿಕ. ಆದರೆ ಇದರ ಕೆಳಗಿರುವ ಸಾಮಗ್ರಿ ನೈಸರ್ಗಿಕವಲ್ಲ ಎಂದು ಸಾಕ್ಷ್ಯಚಿತ್ರದ ಪೆÇ್ರೀಮೋದಲ್ಲಿ ನಿರೂಪಕರು ಹೇಳುತ್ತಾರೆ. ಅಷ್ಟೇ ಅಲ್ಲ, ಇಲ್ಲಿನ ಮರಳಿನ ಪಟ್ಟಿಯ ಕೆಳಗಿರುವ ಕಲ್ಲುಗಳು 7 ಸಾವಿರ ವರ್ಷಗಳ ಹಿಂದಿನದು ಮತ್ತು ಇತರ ಪ್ರದೇಶದಲ್ಲಿನ ಮರಳಿನ ಪಟ್ಟಿ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು ಎಂದು ಸೌತರ್ನ್ ಆರೆಗಾನ್ ಯೂನಿವರ್ಸಿಟಿ ವಿಜ್ಞಾನಿ ಚೆಲ್ಸಿಯಾ ರೋಸ್ ಹೇಳಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ ಏನು ಮಾಡ್ತಿದೆ?
ಅಮೆರಿಕದ ವಿಜ್ಞಾನಿಗಳು ಹಾಗೂ ಸಂಸ್ಥೆಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದರೆ, ಭಾರತೀಯ ಪುರಾತತ್ವ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಭಾರತೀಯರಲ್ಲಿ ಉಂಟಾಗಿದೆ. ಇದೇ ಪ್ರಶ್ನೆಯನ್ನು ಸಚಿವೆ ಸ್ಮತಿ ಇರಾನಿಗೂ ಜನರು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ, ಕಳೆದ ಮಾರ್ಚ್ನಲ್ಲೇ ಐತಿಹಾಸಿಕ ಸಂಶೋಧನೆಯ ಭಾರತೀಯ ಕೌನ್ಸಿಲ್ ಈ ಸಂಬಂಧ ಸಾಗರದಾಳದ ಅಧ್ಯಯನ ನಡೆಸಲು ನಿರ್ಧರಿಸಿತ್ತು. ಅಷ್ಟೇ ಅಲ್ಲ, ಇದರ ವರದಿ ನವೆಂಬರ್ನಲ್ಲೇ ಬರಬೇಕಿತ್ತು. ಆದರೆ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಅಲೋಕ್ ತ್ರಿಪಾಠಿ ಹೇಳುವಂತೆ ಈ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಇದಕ್ಕಾಗಿ ಕೆಲವು ಪೂರ್ವ ತಯಾರಿ ಪ್ರಗತಿಯಲ್ಲಿದೆ.
ರಾಮಸೇತು ಮಾನವ ನಿರ್ಮಿಸಿದ್ದು ಎಂದು ಇದುವರೆಗೆ ಹೇಳುತ್ತಲೇ ಬರಲಾಗಿತ್ತು. ಆದರೆ ಕೆಲವು ಸರಕಾರಗಳು ಒಪ್ಪಿರಲಿಲ್ಲ. ಈಗ ಡಿಸ್ಕವರಿ ಚಾನೆಲ್ ವೈಜ್ಞಾನಿಕವಾಗಿ ಉತ್ತರ ಕಂಡುಕೊಂಡಿದೆ. ಹೀಗಾಗಿ ನೆಲದೊಳಗೆ ಹುದುಗಿಹೋಗಿರುವ ಸರಸ್ವತಿ, ಮಹಾಭಾರತದ ಸ್ಥಳಗಳು, ದ್ವಾರಕಾ ಸಹಿತ 34 ನಗರಗಳನ್ನೂ ಹುಡುಕಬೇಕಿದೆ ಎಂದು ಕೆಲವು ಟ್ವಿಟಿಗರು ಆಗ್ರಹಿಸಿದ್ದಾರೆ. ಸದ್ಯದಲ್ಲೇ ರಾಮಸೇತು ಇರುವ ಸ್ಥಳಕ್ಕೆ ಹೋಗುವುದಾಗಿ ಬಿಜೆಪಿ ನಾಯಕ ಸುಬ್ರಹ್ಮಣ್ಯಸ್ವಾಮಿ ಹೇಳಿದ್ದಾರೆ.
ಕೆಲ ಬುದ್ಧಿಜೀವಿಗಳ ಪಾಲಿಗೆ ರಾಮಾಯಣವೆಂಬುದು ಕಂತೆಗಳ ಬೊಂತೆಯಾದರೂ ಅದರ ಕರ್ತೃವಾದ ವಾಲ್ಮೀಕಿಯ ಜಾತಿಯನ್ನು ಅವರು ಶೋಷಿತ ದ್ರಾವಿಡ ರಿಲಿಜನ್ನಿನ ಕೆಟೆಗರಿಯಲ್ಲಿ ದಾಖಲಿಸುವುದರಿಂದ ಒಂದು ಉತ್ತಮ ಕಾವ್ಯದ ಕರ್ತೃವಾಗಿ ವಾಲ್ಮೀಕಿ ವಾಸ್ತವವಾಗಿ ಅಸ್ತಿತ್ವದಲ್ಲಿರುವದು ಬುದ್ಧಿಜೀವಿಗಳಿಗೆ ಅನಿವಾರ್ಯ. ಆದ್ದರಿಂದ ವಾಲ್ಮೀಕಿ ಜಯಂತಿಯನ್ನು ಇವರೆಂದೂ ವಿರೋಧಿಸುವುದಿಲ್ಲ. ಹಾಗೆಯೇ ಮನುವಿನ ಅಸ್ತಿತ್ವಕ್ಕೂ ಹಿಸ್ಟಾರಿಕಲ್ ದಾಖಲೆಗಳಿರದಿದ್ದರೂ, ಇಲ್ಲಿನ ಜನರನ್ನು ಶೋಷಿಸಲು ಮನುಸ್ಮೃತಿಯನ್ನು ಬರೆದುಕೊಂಡರು ಎಂಬುದನ್ನು ಸಾಧಿಸಲು, ಕಥೆಗಳು ಹೇಳುವ, ಇಡೀ ಭೂಮಿಗೆ ಅಧಿಪತಿಯಾಗಿದ್ದನೆಂದು ಹೇಳುವ ಮನುವು ವಾಸ್ತವದಲ್ಲಿ ಇದ್ದ ಹಾಗೂ ಮನುಸ್ಮೃತಿಯನ್ನು ಇಡೀ ಸಮಾಜದ ಮೇಲೆ ಹೇರಿದ ಎಂದು ಬುದ್ಧಿಜೀವಿಗಳು ಹೇಳಬೇಕಾಗಿರುವುದು ಇವರಿಗೆ ಅನಿವಾರ್ಯ.
ಹೊಸಯುಗದ ಚಿಂತಕರಾದ ನಾವು ಈ ಬುದ್ಧಿಜೀವಿಗಳ ಪೌರಾಣಿಕ ಪಾತ್ರಗಳ ಕುರಿತ ಸಂಶೋಧನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು? ನಾವು ಬುದ್ಧಿಜೀವಿಗಳು ಒಡ್ಡುವ ವಾದಗಳನ್ನು ವಿರೋಧಾಭಾಸಗಳ ಸಮೇತ ಪಟ್ಟಿ ಮಾಡಬೇಕು. ಮುನ್ನೂರು ವರ್ಷಗಳ ಹಿಂದೆ ಬ್ರಿಟಿಷರು ಬೇಯಿಸಿಟ್ಟು ಹೋದ ಆರ್ಯ-ದ್ರಾವಿಡವೆಂಬ ಹಳಸಲು ಸಿದ್ಧಾಂತ, ಪೆÇ್ರಟೆಸ್ಟಂಟ್ ಹಾಗೂ ಕ್ಯಾಥೋಲಿಕ ಕ್ರಿಶ್ಚಿಯನ್ ಥಿಯಾಲಜಿಗಳಿಗೆ ಅನುಗುಣವಾಗಿ ಇವರು ಹೇಳುತ್ತಿರುವ ಹೊಸ ಸಂಶೋಧನೆಗಳನ್ನು ಹೊಂದಿಸಿ ಸಮಂಜಸವಾಗಿ ವಿವರಿಸಬೇಕು. ಇವರ ಹೊಸ ಸಂಶೋಧನೆಗಳು ಅದೇ ಬಿದ್ದು ಹೋದ ಹಳೆಯ ಥಿಯರಿಯ ಹೊಸ ರೂಪವಷ್ಟೇ ಹೊರತು ಇನ್ನೇನೂ ಅಲ್ಲ ಎನ್ನುವುದನ್ನು ತೋರಿಸಬೇಕು.
ಬುದ್ಧಿಜೀವಿಗಳು ಪಶ್ಚಿಮದಲ್ಲಿ ಆದ ಪೆÇ್ರಟೆಸ್ಟಂಟ್ ಕ್ರಿಶ್ಚಿಯಾನಿಟಿಯನ್ನೇ ವೈಚಾರಿಕತೆಯೆಂಬ ಹೊಸ ಹೆಸರಿನಲ್ಲಿ ಮಾರಲು ಯತ್ನಿಸುತ್ತಿದ್ದಾರೆ ಹಾಗೂ ಅವರ ಸಂಶೋಧನೆಗಳು ಆರ್ಯ-ದ್ರಾವಿಡವೆಂಬ ಹಳಸಲು ಸಿದ್ಧಾಂತದ ಮೇಲೆ ಅವರೇ ಕಟ್ಟಿಕೊಂಡಿರುವ ಹೆಲ್ಯುಸಿನೇಶನ್ನಿನ ಮುಂದುವರೆದ ಭಾಗವಾಗಿವೆ ಅಷ್ಟೇ. ಅವರು ಸದ್ಯಕ್ಕೆ ದ್ರಾವಿಡ ರಿಲಿಜನ್ನೆಂಬ ಅಸ್ತಿತ್ವದಲ್ಲೇ ಇಲ್ಲದ ರಿಲಿಜನ್ನೊಂದರ ಪ್ರೀಸ್ಟುಗಳಂತೆ ವರ್ತಿಸುತ್ತಿದ್ದಾರೆ. ಇದು ವೈಚಾರಿಕತೆಯೂ ಅಲ್ಲ ಹಾಗೂ ಇವರ ಪೂರ್ವಗ್ರಹಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೇಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ, ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು. ರಾಮನನ್ನು ನಂಬಿದವರಿಗೆ ಎಂದೂ ತೊಂದರೆ ಯಾಗದು…
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
ಸಂಧಿಗಳು ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. “ ಊರು ಊರು” ಎಂಬೆರಡು ಶಬ್ದಗಳನ್ನು ‘ ಊರೂರು ' ಎಂದು ಕೂಡಿಸಿಯೇ ಮಾತನಾಡುತ್ತ...
-
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳ...


