Showing posts with label ಉಪಯುಕ್ತ ಸಲಹೆ. Show all posts
Showing posts with label ಉಪಯುಕ್ತ ಸಲಹೆ. Show all posts

Saturday, 10 February 2024

ಹೆಚ್ಚು ಕಾಲ ಬದುಕಬೇಕೆಂಬ ಆಸೆ ನಿಮ್ಮದಾಗಿದ್ದರೆ ಪ್ರತಿದಿನ ಇದನ್ನು ತಿಂದರೆ ಸಾಕು! am...


Health Tips: ಹೆಚ್ಚು ಕಾಲ ಬದುಕಲು ಯುವಜನತೆ ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು


ಒಬ್ಬ ವ್ಯಕ್ತಿಯು ತನ್ನ ಆಹಾರವನ್ನು ಸರಿಯಾಗಿ ಅಗಿಯುವಾಗ ಅದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯ ಸುಧಾರಿಸಿ ವಯಸ್ಸನ್ನು ಹೆಚ್ಚಿಸುತ್ತದೆ.


ಈಗಂತೂ ವಯಸ್ಸಿನ ಯಾವುದೇ ಇತಿಮಿತಿಗಳಲ್ಲದೇ ಹಾರ್ಟ್‌ಅಟ್ಯಾಕ್‌ (Heart Attack), ಬಿಪಿ, ಶುಗರ್‌ನಂತಹ ಮಾರಕ ಕಾಯಿಲೆಗಳಿಗೆ ಯುವ ಜನತೆ ತುತ್ತಾಗುತ್ತಿದ್ದಾರೆ. ಹೀಗಾಗಿ ನಮಗೇನು ಆಗುತ್ತೆ ನಾವಿನ್ನೂ ಯುವಕರು ಅನ್ನೋದನ್ನು ತಲೆಯಿಂದ ತೆಗೆದು ಹಾಕಿ ಆರೋಗ್ಯದ ಕಡೆ ಮತ್ತು ಆರೋಗ್ಯಕರ ಅಭ್ಯಾಸಗಳತ್ತ (Health Care) ಗಮನ ನೀಡಿ. ಇಂದು ರಾಷ್ಟ್ರೀಯ ಯುವ ದಿನದಂದು, ಈ ವಿಶೇಷ ದಿನದಂದು ಜಡ ಜೀವನವನ್ನು ಬದಿಗೊತ್ತಿ ಸಕ್ರಿಯ ಜೀವನ ನಡೆಸಲು ಮತ್ತು ದೀರ್ಘಾಯುಷ್ಯವನ್ನು ಪಡೆಯಲು ಅಳವಡಿಸಿಕೊಳ್ಳಬೇಕಾದ 8 ದೈನಂದಿನ ಅಭ್ಯಾಸಗಳತ್ತ (Habits) ಗಮನಹರಿಸುವ ಮೂಲಕ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುವ ಬಗ್ಗೆ ಪ್ರತಿಜ್ಞೆ ಮಾಡೋಣ.



ದೀರ್ಘಾಯುಷ್ಯಕ್ಕಾಗಿ ಯುವಜನತೆ ಕೈಗೊಳ್ಳಬಹುದಾದ 8 ಅಭ್ಯಾಸಗಳು

ಆಹಾರವನ್ನು ಅಗೆದು-ಜಗಿದು ತಿನ್ನಿ: ಕೆಲವರು ಕಣ್ಣುಮುಚ್ಚು ಬಿಡುವುದರಲ್ಲಿ ಊಟ ಮಾಡಿ ಮುಗಿಸಿರುತ್ತಾರೆ. ಇದು ನಿಜಕ್ಕೂ ಕೆಟ್ಟ ಅಭ್ಯಾಸ. ಆಹಾರವನ್ನು ಅಗೆದು-ಜಗಿದು ನಿಧಾನವಾಗಿ ತಿನ್ನುವುದು ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.

ಒಬ್ಬ ವ್ಯಕ್ತಿಯು ತನ್ನ ಆಹಾರವನ್ನು ಸರಿಯಾಗಿ ಅಗಿಯುವಾಗ ಅದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯ ಸುಧಾರಿಸಿ ವಯಸ್ಸನ್ನು ಹೆಚ್ಚಿಸುತ್ತದೆ.



ಒತ್ತಡ ನಿಭಾಯಿಸಿ: ಹೆಚ್ಚಿನ ಒತ್ತಡವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಬಿಡುಗಡೆಗೆ ಕಾರಣವಾಗುತ್ತದೆ. ಹೆಚ್ಚಿನ ಒತ್ತಡವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಕುಗ್ಗಿಸುತ್ತದೆ.

ಈ ಬೆಳವಣಿಗೆ ನಮ್ಮನ್ನು ಹಲವಾರು ರೋಗಗಳಿಗೆ ಗುರಿಯಾಗಿಸುತ್ತದೆ. ಆದ್ದರಿಂದ, ಹೆಚ್ಚು ಕಾಲ ಬಾಳಿ ಬದುಕಲು ಒತ್ತಡವನ್ನು ನಿಭಾಯಿಸುವ ಕಲೆ ಕಲಿತುಕೊಳ್ಳಿ.


ಆರೋಗ್ಯಕರ ಆಹಾರ: ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಅಳವಡಿಸಿಕೊಳ್ಳುವುದು ದೀರ್ಘಾವಧಿಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ನಿರ್ಣಾಯಕವಾಗಿದೆ.

ಸಾಂರ್ಭಿಕ ಚಿತ್ರ

ಹೀಗಾಗಿ ಆಹಾರದಲ್ಲಿ ಯಥೇಚ್ಛವಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ನೇರ ಪ್ರೋಟೀನ್‌ಗಳನ್ನು ಸೇರಿಸಿಕೊಳ್ಳಿ. ಆದಷ್ಟು ನಿಮ್ಮ ಆಹಾರದಿಂದ ಸಕ್ಕರೆಗಳು, ಅನಾರೋಗ್ಯಕರ ಕೊಬ್ಬುಗಳು ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಮಿತಿಗೊಳಿಸಿ.

ನಿಯಮಿತ ದೈಹಿಕ ಚಟುವಟಿಕೆ: ನಿಯಮಿತ ವ್ಯಾಯಾಮವು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವುದರ ಜೊತೆ ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುತ್ತದೆ. ಹೆಚ್ಚಿನ ಪ್ರಯೋಜನ ಪಡೆಯಲು ಶಕ್ತಿ ತರಬೇತಿ ವ್ಯಾಯಾಮಗಳೊಂದಿಗೆ ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ಏರೋಬಿಕ್ ಚಟುವಟಿಕೆ ಅಥವಾ 75 ನಿಮಿಷಗಳ ಹುರುಪಿನ-ತೀವ್ರತೆಯ ಚಟುವಟಿಕೆ ಮಾಡಿ.


ಮಾನಸಿಕ ಯೋಗಕ್ಷೇಮ: ಯೋಗಕ್ಷೇಮ ಮತ್ತು ದೀರ್ಘಾಯುಷ್ಯದಲ್ಲಿ ಮಾನಸಿಕ ಆರೋಗ್ಯವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಮಾನಸಿಕ ಆರೋಗ್ಯಕ್ಕೆ ಮಾರಕವಾಗಿರುವ ಒತ್ತಡವನ್ನು ನಿಭಾಯಿಸುವ ನತಂತ್ರಗಳನ್ನು ಅಭ್ಯಾಸ ಮಾಡಿ.

ಜೊತೆಗೆ ನಿಮಗೆ ಸಂತೋಷ ಮತ್ತು ವಿಶ್ರಾಂತಿ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಧ್ಯಾನ, ಸಾವಧಾನತೆ, ಯೋಗ, ಹವ್ಯಾಸಗಳಂತಹ ಸ್ವಯಂ-ಆರೈಕೆಗೆ ಆದ್ಯತೆ ನೀಡಿ.


ತೂಕ ನಿರ್ವಹಣೆ: ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಮುಖ್ಯವಾಗಿದೆ. ಅಧಿಕ ತೂಕ, ವಿಶೇಷವಾಗಿ ಸೊಂಟದ ಸುತ್ತ ಬರುವ ಬೊಜ್ಜು ಹೃದ್ರೋಗ, ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ.

ಆದ್ದರಿಂದ ಆರೋಗ್ಯಕರ ತೂಕವನ್ನು ಸಾಧಿಸಲು ಮತ್ತು ನಿರ್ವಹಿಸಲು ಆರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಮೇಲೆ ಕೇಂದ್ರೀಕರಿಸಿ.


ಡ್ರೈಪ್ರೂಟ್ಸ್‌ ಸೇವಿಸಿ: ಬಾದಾಮಿ, ವಾಲ್‌ನಟ್‌ಗಳಂತಹ ಬೀಜಗಳು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅವು ಪೋಷಕಾಂಶಗಳಿಂದ ಕೂಡಿರುವುದಲ್ಲದೆ ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದು ಮೆಮೊರಿ ನಷ್ಟದ ಅಪಾಯವನ್ನು ಕಡಿಮೆ ಮಾಡಲು ಮತ್ತು ಮೆದುಳಿನ ಅರಿವಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಹಾನಿಕಾರಕ ಅಭ್ಯಾಸಗಳನ್ನು ತಪ್ಪಿಸಿ:

ನಿಮ್ಮ ಆರೋಗ್ಯ ಮತ್ತು ದೀರ್ಘಾಯುಷ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಧೂಮಪಾನ, ಅತಿಯಾದ ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯಂತಹ ಅಭ್ಯಾಸಗಳನ್ನು ತಪ್ಪಿಸಿ.

ಧೂಮಪಾನ ಶ್ವಾಸಕೋಶದ ಹಾನಿಗೆ, ಮದ್ಯಪಾನ ಲಿವರ್‌ ಹಾನಿಗೆ ಕೊಲೆಸ್ಟ್ರಾಲ್‌ ಹೃದಯದ ಕಾಯಿಲೆಗೆ ಕಾರಣವಾಗಿವೆ. ಆದ್ದರಿಂದ ಈ ಹಾನಿಕಾರಕ ಅಭ್ಯಾಸಗಳನ್ನು ತಪ್ಪಿಸಿ.

Tuesday, 9 January 2024

ಅರ್ಥಾಲಂಕಾರಗಳು ಹಳಗನ್ನಡ ಸಾಹಿತ್ಯ ಅಲಂಕಾರ ಅರ್ಥ, ವಿಧಗಳು & ಉದಾಹರಣೆಗಳು Alankar...

ಅಲಂಕಾರಗಳು: ಅರ್ಥಾಲಂಕಾರ (Alankaragalu: Arthaalankara)
ಅರ್ಥಾಲಂಕಾರಗಳು; ೧.೪ ಉಪಮಾಲಂಕಾರ; ೧.೫ ರೂಪಕಾಲಂಕಾರ; ೧.೬ ಅರ್ಥಾಂತರನ್ಯಾಸಾಲಂಕಾರ ...
Alankaragalu Kannada Grammar
ಅರ್ಥಾಲಂಕಾರಗಳು · ಉಪಮಾಲಂಕಾರ · ದೀಪಕಾಲಂಕಾರ · ರೂಪಕಾಲಂಕಾರ · ಉತ್ಪ್ರೇಕ್ಷಾಲಂಕಾರ · ಅರ್ಥಾಂತರನ್ಯಾಸ ಅಲಂಕಾರ · ಅತಿಶಯೋಕ್ತಿ ಅಲಂಕಾರ · ಶ್ಲೇಷಾಲಂಕಾರ
ಅರ್ಥಾಲಂಕಾರಗಳು : ಅರ್ಥದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು. ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ - ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳು.

ವಾಸ್ತವವಾಗಿ ಅಲಂಕಾರವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

೧.ಅಲಂಕಾರ ಪ್ರಸ್ಥಾನ : ಒಂದು ಕಾವ್ಯದಲ್ಲಿ ಅಲಂಕಾರವೇ ಪ್ರಮುಖವಾಗಿರುವುದು.

೨.ಶಬ್ದಾಲಂಕಾರಗಳು : ಶಬ್ದಗಳ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು. (ಬಲ್ಲವನೇ ಬಲ್ಲ ಬೆಲ್ಲದ ರುಚಿಯ) ಇದರಲ್ಲಿ ಪ್ರಮುಖವಾಗಿ ಅನುಪ್ರಾಸ , ಯಮಕ ಮತ್ತು ಚಿತ್ರಕವಿತ್ವಗಳ ಬಗ್ಗೆ ಹೇಳಲಾಗುತ್ತದೆ.

೩.ಅರ್ಥಾಲಂಕಾರಗಳು : ಅರ್ಥದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು.  ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ - ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳು.

  • ಯಮಕ : ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದ, ಒಂದು ಪದ್ಯದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎನ್ನುತ್ತಾರೆ.

          ಉ.ದಾ –

          ‘ಬರಹೇಳ್ ನಿಕುಂಭನಂ ಶುಂಭನಂ ಜಂಭನಂ
           ಬರಹೇಳ್ ಸಬಲನಂ ಪ್ರಬಲನಂ ಸುಬಲನಂ
           ಬರಹೇಳ್ ಮಾಹ ನಂಭನಂ’

  • ದೀಪಕಾಲಂಕಾರ - ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳು ಒಂದೇ ಎಂದು ವರ್ಣಿಸುವುದು

          ಉದಾ-

         ‘ಗಿಳಿಮರಿ ನೆರೆಯದ ನಂದನ ವಳಿಸಿಸು ವಿಹರಿಸು ಪೂಗಳ ಕಳವರದಿಂ

         ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ’

                ಮೇಲಿನ ಉದಾಹರಣೆಯಲ್ಲಿ  ‘ ಗಿಳಿ ಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ ಇವೆಲ್ಲವೂ ಅಪ್ರಸ್ತುತ                     ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ’.

  • ರೂಪಕ ಅಲಂಕಾರ – ಉಪಮೇಯ(ಹೋಲಿಸಿ ಕೊಳ್ಳುವ ವಸ್ತು) , ಉಪಮಾನ(ಹೋಲಿಕೆ ಮಾಡುವ ವಸ್ತು) ಎರಡೂ ಒಂದೇ ಎಂದು ವರ್ಣಿಸುವುದು.

           ಉ.ದಾ -

           ‘ಸೀತೆಯ ಮುಖ ಕಮಲ’ ಉಪಮೇಯ = ಸೀತೆಯ ಮುಖ. ಉಪಮಾನ = ಕಮಲ

  • ದೃಷ್ಟಾಂತ ಅಲಂಕಾರ - ಎರಡು ಬೇರೆಬೇರೆ ವಾಕ್ಯಗಳು ಅರ್ಥ ದಿಂದ ಒಂದಕ್ಕೊಂದು ಬಿಂಬದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ

           ಉದಾ -

             ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ

            'ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು

More Kannada Grammar ಕನ್ನಡ ವ್ಯಾಕರಣ Questions #kannadagrammar #competitiveexams #competitive

Friday, 29 December 2023

ರಾಷ್ಟ್ರಕವಿ ಕುವೆಂಪು ವಿಶ್ವ ಮಾನವ ಸಂದೇಶ – ಪಂಚಮಂತ್ರ – ಸಪ್ತ ಸೂತ್ರ

 ಇಂದು (ಡಿ.29) ‘ದಾರ್ಶನಿಕ ಕವಿ’ ಕುವೆಂಪು (ಕೆ.ವಿ. ಪುಟ್ಟಪ್ಪ) ಜನ್ಮದಿನ. ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣ್ಕೆಯನ್ನೂ ವೈಚಾರಿಕತೆಯನ್ನೂ ಬಿತ್ತಿದ ಮಹಾಚೇತನ ಕುವೆಂಪು ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದರು. ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…

ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…


“ಮರ್ತ್ಯಜೀವನದ ತಾಟಸ್ಥ್ಯಮಂ ಕಡೆಕಡೆದು
ಶ್ರದ್ಧೆ ಸಂದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷಗಳಂ
ಕೆರಳಿಸುವ ಶತಶತ ಮತಂಗಳಂ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕಂಗಳೋಲ್,
ಜೋಲ್ವ ಜಿಹ್ವೆಯೊಳತಿ ಭಯಾನಕಂ-!”
ಅಭಿಷೇಕ ವಿರಾಡ್ ದರ್ಶನಂ – ೧೪೭-೧೫೨ | ಶ್ರೀರಾಮಾಯಣದರ್ಶನಂ, ಶ್ರೀ ಸಂಪುಟ. ಸಂ.೧೩

kuvempu

ವಿಶ್ವಮಾನವ ಸಂದೇಶ

ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.

ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ!

ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ!

ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’

ಪಂಚಮಂತ್ರ

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ – ಈ ಪ೦ಚಮ೦ತ್ರ ಇನ್ನು ಮು೦ದಿನ ದೃಷ್ಟಿಯಾಗಬೇಕಾಗಿದೆ. ಅ೦ದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆ೦ಶಿಕ ದೃಷ್ಟಿಯಿ೦ದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅ೦ತಹ ಭಾವನೆ ಅ೦ತಹ ದೃಷ್ಟಿ ಬರಿಯ ಯಾವುದೋ ಒ೦ದು ಜಾತಿಗೆ, ಮತಕ್ಕೆ, ಗು೦ಪಿಗೆ, ಒ೦ದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗು೦ಪುಗಾರಿಕೆಗೆ೦ದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿಸ್ವಾತ೦ತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸ೦ಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾದಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.

ಸಪ್ತಸೂತ್ರ

  1. “ಮನುಷ್ಯಜಾತಿ ತಾನೊ೦ದೆ ವಲ೦” ಎ೦ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
  2. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸ೦ಪೂರ್ಣವಾಗಿ ತೊಲಗಿಸಬೇಕು. ಅ೦ದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ, ಅ೦ತ್ಯಜ, ಷಿಯಾ, ಸುನ್ನಿ, ಕ್ಯಾಥೊಲಿಕ್, ಪ್ರಾಟಿಸ್ಟ೦ಟ್, ಸಿಕ್, ನಿರ೦ಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
  3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ದತಿಯನ್ನು ಸ೦ಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
  4. ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
  5. ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
  6. ಮತ ಗು೦ಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒ೦ದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕ೦ಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅ೦ದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸ೦ಖ್ಯೆಯ ಮತಗಳಿರುವ೦ತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗು೦ಪುಕಟ್ಟಿ ಜಗಳ ಹಚ್ಚುವ೦ತಾಗಬಾರದು.
  7. ಯಾವ ಒ೦ದು ಗ್ರ೦ಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರ೦ಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.







Thursday, 30 November 2023

ಸೋಲೇ ಉತ್ತಮ ಬದುಕಿಗೆ ಮಾರ್ಗದರ್ಶಿ | ಸೋಲು ಸಾವಲ್ಲ ಗೆಲುವು ಸುಖವಲ್ಲ Motivation ...

ಸೋಲೆಂಬುದು ಏನಿದ್ದರೂ ಅಲ್ಪ ವಿರಾಮವಷ್ಟೆ. ಸೋಲಿನಾಚೆಗೂ ಒಂದು ಬದುಕು ಕಾದಿದೆ, ಅದು ಕೇವಲ ಉತ್ತಮ ಕೆಲಸ ದೊರಕಿಸಿಕೊಳ್ಳುವುದು - ಅಂಕ ಗಳಿಸುವುದು ಮಾತ್ರವಲ್ಲ.

Wednesday, 22 November 2023

Tuesday, 21 November 2023

ನುಡಿಮುತ್ತುಗಳು : ಭಾವನೆಗಳು, ಆಲೋಚನೆಗಳು ಇಲ್ಲದೆ ಮನುಷ್ಯನ ಮನಸ್ಸಿಗೆ..!


ಭಾವನೆಗಳು, ಆಲೋಚನೆಗಳು ಇಲ್ಲದೆ ಮನುಷ್ಯನ ಮನಸ್ಸಿಗೆ ಅಸ್ತಿತ್ವವೇ ಇರುವುದಿಲ್ಲ" -ಪೂರ್ಣಚಂದ್ರ ತೇಜಸ್ವಿ ಭಾವನೆಗಳು ಕೈಮೀರಿಹೋದಾಗ ಅವು ನಮಗೆ ಅಪಾರವಾದ ತೊಂದರೆಯನ್ನು ತರುತ್ತವೆ.

Monday, 20 November 2023

ಈ ರೋಗಿಗಳು ಮಾವಿನಹಣ್ಣನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬೇಡಿ!

ಮಾವಿನಹಣ್ಣು ಕೇವಲ ರುಚಿಕರವಾದ ಹಣ್ಣಲ್ಲ, ಅವು ಉತ್ಕರ್ಷಣ ನಿರೋಧಕಗಳು, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಎದುರಾಗುವ ಸಮಸ್ಯೆಗಳಿಂದಲೂ ರಕ್ಷಣೆ ನೀಡುವ ಸಾಮರ್ಥ್ಯ ಇದಕ್ಕಿದೆ. ಸಾಮಾನ್ಯವಾಗಿ ಮಾವಿನ ಹಣ್ಣುಗಳು ಆ ಋತುವಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ನೀವು ಮಾವಿನ ಹಣ್ಣಿನ ಪ್ರಿಯರೇ? ಮಾವಿನ ಸೀಸನ್ ಪ್ರಾರಂಭವಾದಾಗ ನೀವು ಪ್ರತಿದಿನ ಮಾವಿನ ಹಣ್ಣನ್ನು ಸವಿಯುತ್ತೀರಾ? ಹಾಗಾದರೆ ಈ ವಿಚಾರವನ್ನು ನೀವು ತಿಳಿದಿರಲೇಬೇಕು. ಅನೇಕ ಮಾವು ಪ್ರಿಯರು ಮಾವಿನಹಣ್ಣು ತಿನ್ನುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ನೀವು ಈ ತಪ್ಪುಗಳನ್ನು ತಪ್ಪಿಸಿದರೆ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಹಾಗಾದರೆ ಮಾವಿನಹಣ್ಣು ತಿನ್ನುವಾಗ ಮಾಡಬಾರದ ತಪ್ಪುಗಳು ಯಾವುವು ಎಂಬುದನ್ನು ಈಗ ನೋಡೋಣ.

Thursday, 2 July 2020

ನಿಂತುಕೊಂಡೇ ನೀರು ಸೇವಿಸುವ ಅದೆಷ್ಟೋ ಮಂದಿಗೆ ಈ ಘೋರ ಸತ್ಯ ತಿಳಿದಿಲ್ಲ., ವೈದ್ಯಲೋಕ ಹೇಳಿದ ಭಯಂಕರ ಸತ್ಯ ಇದು.!

ಮಾನವನ ದೇಹದ 75 ಪ್ರತಿಶತ ಭಾಗ ನೀರಿನಿಂದ ಮಾಡಲ್ಪಟ್ಟಿದೆ ಎಂದು ವಿಜ್ಞಾನ ಹೇಳುತ್ತದೆ, ನೀರು ನಮ್ಮ ದೇಹಕ್ಕೆ ಅತೀ ಅವಶ್ಯಕ, ದೇಹದ ಶೇ 75ರಷ್ಟು ಭಾಗದಲ್ಲಿ ನೀರಿರುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ನೀರು ಕುಡಿಯುವುದರಿಂದ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದು, ದೇಹದಲ್ಲಿನ ನೀರು ರಕ್ತ ಸಂಚಾರವನ್ನು ಹೆಚ್ಚಿಸುವುದಲ್ಲದೆ ಆಹಾರದಿಂದ ಪಡೆದಿರುವಂತಹ ಪ್ರಮುಖ ಪೋಷಕಾಂಶಗಳನ್ನು ವಿವಿಧ ಅಂಗಾಂಗಗಳು ಹಾಗೂ ಕೋಶಗಳಿಗೆ ತಲುಪಿಸುವಂತಹ ಕೆಲಸವನ್ನು ನೀರು ಮಾಡುತ್ತದೆ. 
Water Purifier A Safeguard Initiative To A Healthy Life | Blogging ...
ಸಾಮಾನ್ಯ ಸ್ಥಿತಿಯಲ್ಲಿ ಇದು 71% ರಷ್ಟಿರುತ್ತದೆ, ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿ ಬೇಕೇ ಬೇಕು ಮತ್ತು ನೀರಿಲ್ಲದ ಪರಿಸ್ಥಿತಿಯನ್ನು ನಿರ್ಜಲೀಕರಣ ಎಂದು ಕರೆಯಲಾಗುತ್ತದೆ ಹಾಗೂ ಈ ಸ್ಥಿತಿಯಲ್ಲಿ ದೇಹದ ಪ್ರಮುಖ ಅಂಗಗಳಿಗೆ ನೀರಿನ ಪೂರೈಕೆಯಾಗದೇ ಇವು ಒಣಗತೊಡಗುತ್ತವೆ ಮತ್ತು ಪ್ರತಿ ಅಂಗಾಂಶ ಕಾರ್ಯನಿರ್ವಹಿಸಲು ನೀರು ಬೇಕು.
Hyper Hydration : Can you benefit? - BodyWorx Physiotherapy
ಜೀವಕೋಶದ ಹಂತದಲ್ಲಿ ನೀರನ್ನು ಬಳಸಿಕೊಂಡು ಆರೋಗ್ಯ ಕಾಪಾಡುತ್ತದೆ ಅಷ್ಟೇ ಅಲ್ಲದೆ ರಕ್ತದ ಮೂಲಕ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಕೊಂಡೊಯ್ಯಲೂ ನೀರು ಬೇಕು ಆದರೆ ಎಷ್ಟೋ ಜನರಿಗೆ ನೀರು ಕುಡಿಯುವ ಸರಿಯಾದ ವಿಧಾನವೇ ತಿಳಿದಿಲ್ಲ. ಬಹಳ ಜನರಿಗಿರುವ ಒಂದು ಕೆಟ್ಟ ಹವ್ಯಾಸ ಎಂದರೆ ಅದು ನಿಂತುಕೊಂಡು ನೀರು ಕುಡಿಯುವುದು ಆದರೆ ವಿಜ್ಞಾನದ ಹಲವು ಸಂಶೋಧನೆಗಳ ಪ್ರಕಾರ ನಿಂತುಕೊಂಡು ನೀರು ಕುಡಿಯುವುದು ದೇಹಕ್ಕೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಹಾಗಾದರೆ ನಿಂತುಕೊಂಡು ನೀರು ಕುಡಿಯುವುದರಿಂದ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ನಿಂತುಕೊಂಡು ನೀರು ಕುಡಿಯುತ್ತಿದ್ದರೆ ಇಂದೇ ಅದನ್ನ ನಿಲ್ಲಿಸುವುದು ಬಹಳ ಒಳ್ಳೆಯದು.
Ways In Which You're Drinking Water Wrong - Boldsky.com
ಹೌದು ತಜ್ಞರು ಹೇಳುವ ಪ್ರಕಾರ ನಾವು ನಿಂತು ನೀರು ಕುಡಿಯಲೇ ಬಾರದು ಇದರಿಂದ ದೇಹಕ್ಕೆ ಬಹಳ ಅಪಾಯಗಳಾಗಬಹುದು. ನಿಂತು ನೀರು ಕುಡಿಯುವುದರಿಂದ ಜೀರ್ಣದ ಸಮಸ್ಯೆ ಎದುರಾಗಬಹುದು ಮತ್ತು ನರಮಂಡಲದಲ್ಲಿ ಒತ್ತಡ ಹೆಚ್ಚಾಗುತ್ತದೆ ಹಾಗೆ ಹೃದಯ ಹಾಗೂ ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದಲ್ಲ. ಇನ್ನು ನಿಂತುಕೊಂಡು ನೀರು ಕುಡಿಯುವಾಗ ಅನ್ನನಾಳದ ಮೂಲಕ ನೀರು ವೇಗವಾಗಿ ಸಾಗುವುದರಿಂದ ಅನ್ನನಾಳಕ್ಕೆ ಹಾನಿಯಾಗುತ್ತದೆ. ನಿಂತುಕೊಂಡು ಈ ರೀತಿ ನೀರನ್ನು ಕುಡಿಯುವುದರಿಂದ ನಿಮ್ಮ ಬಾಯಾರಿಕೆ ತಣಿಯುವುದಿಲ್ಲ ಮತ್ತು ನೀರು ನೇರವಾಗಿ ಹಾದು ಹೋಗುವುದರಿಂದ ಅಗತ್ಯವಿರುವ ಪೋಷಕಾಂಶಗಳು ಮತ್ತು ಜೀವಸತ್ವಗಳು ಯಕೃತ್ತು ಮತ್ತು ಜೀರ್ಣಾಂಗವ್ಯೂಹವನ್ನು ತಲುಪುವುದಿಲ್ಲ.

ಕೇವಲ ವಿಜ್ಞಾನ ಮಾತ್ರವಲ್ಲ ನಮ್ಮ ಆಯುರ್ವೇದ ಶಾಸ್ತ್ರದಲ್ಲೂ ಕೂಡ ನಿಂತುಕೊಂಡು ನೀರು ಕುಡಿಯುವುದನ್ನು ಅಪಾಯ ಎಂದು ಸೂಚಿಸಲಾಗಿದೆ. ನಿಂತು ನೀರು ಕುಡಿದಾಗ ರಭಸವಾಗಿ ಗಂಟಲಿನಿಂದ ಇಳಿಯುವ ನೀರು ಅನ್ನನಾಳ ಹಾಗೂ ಹೊಟ್ಟೆ ಕೂಡುವ ಸ್ಥಳದಲ್ಲಿ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ ಇದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ಹೊಟ್ಟೆ ನೋವು ಬರಬಹುದು. ನೀರು ಒಮ್ಮೆಲೆ ದೇಹ ಸೇರಿದರೆ ಕಿಡ್ನಿಗೆ ಕೆಲಸದ ಒತ್ತಡ ಉಂಟಾಗಿ ನೀರನ್ನು ಸರಿಯಾಗಿ ಸೋಸಲು ಆಗುವುದಿಲ್ಲ ಮತ್ತು ಇದರಿಂದ ಕಿಡ್ನಿಗೆ ಹಾನಿಯಾಗಬಹುದು.

ಸ್ನೇಹಿತರೆ ನೀವು ಸಾಧ್ಯವಾದಷ್ಟು ದಣಿವಾದಾಗ ಅಥವಾ ಬಾಯಾರಿಕೆಯಾದಾಗ ಆತುರದಲ್ಲಿ ನೀರು ಕುಡಿಯಬೇಡಿ ಮತ್ತು ನಿಧಾನವಾಗಿ ಕುಳಿತುಕೊಂಡು ನೀರನ್ನು ಕುಡಿಯಿರಿ ಇದರಿಂದ ದೇಹಕ್ಕೆ ಬಹಳ ಒಳ್ಳೆಯದು.

ಅಳುವುದರಿಂದ ನಮಗಾಗುವ ಪ್ರಯೋಜನ ಕೇಳಿದರೆ ಶಾಕ್ ಆಗ್ತೀರಾ, ತುಂಬಾ ಜನರಿಗೆ ಅಳುವಿನ ರಹಸ್ಯ ಗೊತ್ತಿಲ್ಲ..!

ಅಳು ಹುಟ್ಟಿನಿಂದಲೇ ನಮ್ಮ ಸಂಗಾತಿ, ನಾವು ಮಕ್ಕಳಾಗಿದ್ದಾಗ ನಮ್ಮ ಭಾವನಾತ್ಮಕ, ಶಾರೀರಿಕ ಅವಶ್ಯಕತೆಗಳಿಗಾಗಿ ಅಳುತ್ತಿದ್ದೆವು, ಇನ್ನು ಭಾವನಾತ್ಮಕ ಕಣ್ಣೀರು ಉಕ್ಕಿ ಬರಲು ಅನೇಕ ಕಾರಣಗಳಿವೆ. ದುಃಖ, ನಿರಾಶೆ, ದೈಹಿಕ ಅಥವಾ ಮಾನಸಿಕ ವೇದನೆ ಇವೆಲ್ಲಾ ನಾವು ಕಣ್ಣೀರಿಡುವಂತೆ ಮಾಡುತ್ತವೆ, 
ಮಹಿಳೆಯರು ವರ್ಷಕ್ಕೆ ಎಷ್ಟು ಬಾರಿ ...
ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ಬರಿಸುತ್ತವೆ, ಆದರೆ ಇವು ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ, ನಿಮಗೆ ಗೊತ್ತಿರಲು ಸಾಧ್ಯವಿಲ್ಲ ಅಳುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಅಮೆಕದ ವಿಜ್ಞಾನಿಗಳು ನಡೆಸಿದ ಹಲವು ಸಂಶೋಧನೆಗಳು ಈ ಬಗ್ಗೆ ಸತ್ಯ ಹೇಳಿದೆ. ಹಾಗಾದರೆ ಅಳುವುದರಿಂದ ದೇಹದಕ್ಕೆ ಆಗುವ ಲಾಭಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಮತ್ತೆ ಮತ್ತೆ ಅಳುವುದೂ ಒಂದು ಮನೋರೋಗ
ಹೌದು ಅಳುವುದರಿಂದ ಈ ಐದು ಅರೋಗ್ಯ ಸಮಸ್ಯೆಯನ್ನು ದೂರಮಾಡಬಹುದು ಎಂದು ಈ ಅಧ್ಯಯನ ತಿಳಿಸಿದೆ, ಸಮಾಜವು ಸಾಮಾನ್ಯವಾಗಿ ಅಳುವುದನ್ನು ದೌರ್ಬಲ್ಯದ ಸಂಕೇತವಾಗಿ ನೋಡುತ್ತದೆ ಆದರೆ ನೀವು ಅಳಬೇಕು ಎಂದು ನಿಮಗೆ ಅನಿಸಿದರೆ ನಿಮ್ಮ ಕಣ್ಣೀರನ್ನು ತಡೆಹಿಡಿಯಬೇಡಿ ಮತ್ತು ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಳುವಿನ ಈ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಹೆಚ್ಚು ಸ್ಟ್ರೆಸ್ ಅಥವಾ ಒತ್ತಡದ ಸಂದರ್ಭದಲ್ಲಿ ಅಳುವುದು ಬಹಳ ಒಳ್ಳೆಯು ಎನ್ನಬಹುದು, ಒತ್ತಡದ ಸಂದರ್ಭದಲ್ಲಿ ಕಣ್ಣೀರು ಸುರಿಸುವುದರಿಂದ ರಿಲ್ಯಾಕ್ಸ್ ಆಗಬಹುದು ಎಂದು ಸಂಶೋಧನೆ ತಿಳಿಸಿದೆ ಮತ್ತು ಆ ಕ್ಷಣಕ್ಕೆ ಇದರ ಪರಿಣಾಮ ತಿಳಿಯದಿದ್ದರೂ ಸ್ವಲ್ಪ ಸಮಯದ ನಂತರ ದೇಹ ವಿಶ್ರಾಂತಿ ಪಡೆಯಲು ಅಳು ಸಹಕಾರಿ.
ಸಂಶೋಧಕರ ಪ್ರಕಾರ ಅಳುವುದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು (ಪಿಎನ್‌ಎಸ್) ಸಕ್ರಿಯಗೊಳಿಸುತ್ತದೆ, ಸಕ್ರಿಯಗೊಳಿಸಿದಾಗ ಪಿಎನ್ಎಸ್ ಮೆದುಳಿನ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ಎರಡನೆಯದಾಗಿ ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಹೃದಯಾಘಾತ, ಹೃದಯ ವೈಫಲ್ಯ, ಬುದ್ಧಿಮಾಂದ್ಯತೆ ಮತ್ತು ಮೂತ್ರಪಿಂಡದ ವೈಫಲ್ಯದಂತಹ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಆದರೆ ಒಳ್ಳೆಯ ಸುದ್ದಿ ಏನೆಂದರೆ ಹಲವಾರು ಅಧ್ಯಯನಗಳ ಪ್ರಕಾರ, ಅಳುವುದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅಳುವುದು ನಾಡಿಯನ್ನು ಸ್ಥಿರಗೊಳಿಸುತ್ತದೆ. ಮೂರನೆಯದಾಗಿ ಸಂಶೋಧನೆಗಳ ಪ್ರಕಾರ ಭಾವನಾತ್ಮಕವಾಗಿ ಬರುವಂತಹ ಕಣ್ಣೀರಿನಲ್ಲಿ ಕೆಲವೊಂದು ವಿಷಕಾರಿ ಅಂಶಗಳು ಇರುತ್ತದೆ ಇದರಿಂದ ಅಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.
Sandhyadeepa…. – ಪುಟ 127 – ನೆನಪು ...
ಇಷ್ಟೇ ಅಲ್ಲದೆ ಅಳುವಾಗ ನಿಮ್ಮ ಕಣ್ಣಿನಿಂದ ಹರಿಯುವ ಕಣ್ಣೀರು ಕಣ್ಣುಗಳಿಂದ ಹೊಗೆ ಮತ್ತು ಧೂಳಿನಂತಹ ಅಂಶಗಳನ್ನು ತೆಗೆದುಹಾಕುತ್ತದೆ, ಇದರಿಂದಾಗಿ ಹಗುರವಾದ ಮನಸ್ಥಿತಿ ಉಂಟಾಗುತ್ತದೆ. ನಾಲ್ಕನೆಯದಾಗಿ ಅಳುವುದರಿಂದ ಸಿಗುವ ಮತ್ತೊಂದು ಉಪಯೋಗ ಎಂದರೆ ಅಳುವ ಮತ್ತೊಂದು ಆರೋಗ್ಯ ಲಾಭವೆಂದರೆ ಅದು ಕಣ್ಣಿಗೆ ತೇವಾಂಶವನ್ನು ನೀಡುತ್ತದೆ, ಅಳುವುದರಿಂದ ಕಣ್ಣು ಒಣಗುವುದು, ಕೆಂಪಾಗುವುದು ಮತ್ತು ತುರಿಕೆಯನ್ನು ತಡೆಯುವಲ್ಲಿ ಸಹಕರಿಸುತ್ತದೆ. ಕೊನೆಯದಾಗಿ ನೋವನ್ನು ಕಡಿಮೆ ಮಾಡಲು ಅಳು ಸಹಕಾರಿ ಎಂದು ಸಂಶೋಧನೆ ಹೇಳುತ್ತದೆ, ನಾವು ದೈಹಿಕವಾಗಿ ನೋವಲ್ಲಿದ್ದಾಗ ಕೂಡ ಕೆಲವೊಮ್ಮೆ ಕಣ್ಣೀರು ಹೊರಬರುತ್ತದೆ ಮತ್ತು ನೋವು ಸಂವೇದನೆಯನ್ನು ಕಡಿಮೆ ಮಾಡುವ ದೇಹದ ವಿಧಾನ ಇದು. ಹೀಗೆ ಅಳುವುದಂದ ಕಣ್ಣೀರು ಸುರಿಸುವುದರಿಂದ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ಗಳು ಬಿಡುಗಡೆಯಾಗುತ್ತವೆ. ಇವುಗಳು ಮನಸ್ಸನ್ನು ಹಗುರಗೊಳಿಸಿ ಮನಸ್ಥಿತಿಯನ್ನು ಸುಧಾರಿಸುತ್ತದೆ, ದಯವಿಟ್ಟು ಈ ಉತ್ಮ ವಿಷಯವನ್ನು ಎಲ್ಲರಿಗು ತಿಳಿಸುವ ಜವಾಬ್ದಾರಿ ನಿಮ್ಮದು.

ಹೀಗೆ ಮಾಡಿದ್ರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು
ಜೀವನದಲ್ಲಿ ಎಂದಿಗೂ ಕಿಡ್ನಿ ಸಮಸ್ಯೆ ಕಾಡಬಾರದು ಎಂದರೆ ಹೀಗೆ ಮಾಡಿ

Wednesday, 1 July 2020

ಫೇಸ್‌ ಬುಕ್‌, ಇ-ಮೇಲ್ ಗಳಲ್ಲಿ ಮರೆತೂ ಈ ರೀತಿಯ ಪಾಸ್‌ ವರ್ಡ್ ಗಳನ್ನು ಬಳಸಬೇಡಿ.!

ಜಗತ್ತಿನ 100 ಅತಿ ಕೆಟ್ಟ ಪಾಸ್‍ ವರ್ಡ್‍ಗಳಲ್ಲಿ ಮೊದಲ ಸ್ಥಾನ ಯಾವುದಕ್ಕೆ ಎಂದು ಕೇಳಿದರೆ ಉತ್ತರ ಸುಲಭ, ಅದು '123456'. ಇನ್ನು ಅದಕ್ಕೆ ಕಾಂಪಿಟಿಟರ್ ಎಂದರೆ ಪಾಸ್‍ವರ್ಡ್. ಅದೇರೀ.. 'PASSWORD' ಎಂಬ ಪಾಸ್‍ ವರ್ಡು.
Password Hacker Online | How To Hack Password
ವಿಚಿತ್ರ ಹಾಗೂ ವಿಶೇಷ ಎಂದರೆ ಕಳೆದ ಹಲವು ವರ್ಷಗಳಿಂದಲೂ ಇವೆರಡೇ ಅತಿಕೆಟ್ಟ ಪಾಸ್‍ವರ್ಡ್‍ಗಳಲ್ಲಿ 1 ಮತ್ತು 2ನೇ ಸ್ಥಾನದಲ್ಲಿರುವುದು.
ನೆನಪಿಟ್ಟುಕೊಳ್ಳಲು ಸುಲಭವಾಗಲಿ ಎಂದು ಬಹಳಷ್ಟು ಜನ ಈ ಪಾಸ್‍ವರ್ಡ್‍ಗಳನ್ನು ಬಳಸುತ್ತಾರೆ. ಆದರೆ ಇಂಥ ಪಾಸ್‍ವರ್ಡ್ ಗಳಿದ್ದಾಗ ಹ್ಯಾಕ್ ಮಾಡುವವರಿಗೂ ಸುಲಭವಾಗುತ್ತದೆ ಎಂಬುದನ್ನು ಮರೆಯಬಾರದು. ಯಾವುದೇ ಕಾರಣಕ್ಕೆ ಈ ಪದಗಳನ್ನು, ನಿಮ್ಮ ಅಥವಾ ಸಾಮಾನ್ಯವಾಗಿ ಬಳಸುವ ಯಾವುದೇ ಹೆಸರನ್ನು ಪಾಸ್‍ವರ್ಡ್ ಆಗಿ ಬಳಸಬಾರದು. 
How to Build an SSH Password Cracker in Java
ಬಳಸಲೇಬಾರದಂತಹ ಅತಿ ಕೆಟ್ಟ 25 ಪಾಸ್ ವರ್ಡ್ ಗಳ ಪಟ್ಟಿ ಇಲ್ಲಿದೆ.
1) 123456
2) password
3) 123456789
4) 12345678
5) 12345
6) 111111
7) 1234567
8) sunshine
9) qwerty
10) iloveyou
11) princess
12) admin
13) welcome
14) 666666
15) abc123
16) football
17) 123123
18) monkey
19) 654321
20) [email protected]#$%^&*
21) charlie
22) aa123456
23) donald
24) password1
25) qwerty123


Monday, 29 June 2020

ಬೇಗ ನೆನಪಿನ ಶಕ್ತಿ ಕಳೆದುಕೊಳ್ಳುವುದು ಯಾವುದರಿಂದ ಗೊತ್ತ ,ಆದಷ್ಟು ಇವುಗಳಿಂದ ದೂರವಿರಿ..!

ನಮ್ಮ ದೇಹದ ಪ್ರತಿಯೊಂದು ಅಂಗವನ್ನು ನಿಯಂತ್ರಣ ಮಾಡುವುದು ಮೆದುಳು. ಯಾವ ಅಂಗ ಏನು ಕಾರ್ಯ ಮಾಡಬೇಕೆಂದು ಮೆದುಳು ಸಂದೇಶ ನೀಡುತ್ತಿರುತ್ತದೆ. ಆದರೆ ಈ ಮೆದುಳಿನ ಸಾಮರ್ಥ್ಯವನ್ನು ನಾವೇ ನಮ್ಮ ಕೆಲವೊಂದು ಅಭ್ಯಾಸಗಳಿಂದಾಗಿ ಕಡಿಮೆ ಮಾಡುತ್ತಾ ಹೋಗುತ್ತೇವೆ. ಅದರಲ್ಲೂ ಈ ರೀತಿಯ ಅಭ್ಯಾಸಗಳಿದ್ದರೆ ಮೆದುಳಿನ ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸಗಳನ್ನು ಬಿಡುವುದೇ ಒಳ್ಳೆಯದು.
Fibromyalgia Memory Loss and Other Cognitive Difficulties
ಅತೀಯಾಗಿ ಸಿಹಿ ತಿಂಡಿ ತಿನ್ನುವುದು: ಸಕ್ಕರೆಯಂಶ ಅಧಿಕವಿರುವ ತಿಂಡಿ ಅಥವಾ ಟೀ/ಕಾಫಿ ಕುಡಿಯುವುದು ಆರೋಗ್ಯಕ್ಕೆ ಮಾತ್ರವಲ್ಲ ಮೆದುಳಿಗೂ ಒಳ್ಳೆಯದಲ್ಲ. ಸಕ್ಕರೆಯಂಶ ಅಧಿಕವಾದಂತೆ ನಮ್ಮ ದೇಹದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ಮೆದುಳಿಗೆ ಪೋಷಕಾಂಶದ ಕೊರತೆ ಉಂಟಾಗಿ ನೆನಪಿನ ಶಕ್ತಿ ಕುಂದುವುದು.
ನಿದ್ದೆ ಕಡಿಮೆ ಮಾಡುವುದು: ಸರಿಯಾದ ಸಮಯಕ್ಕೆ ನಿದ್ದೆ ಮಾಡದೇ ಫೋನ್‌, ಇಂಟರ್ನೆಟ್‌ನಲ್ಲಿ ಕಾಲ ಕಳೆಯುವುದರಿಂದ ನೆನಪಿನ ಶಕ್ತಿ ಕುಂದುವುದು, ನೆನಪಿರಲಿ.
ಬ್ರೇಕ್‌ ಪಾಸ್ಟ್‌ ಮಾಡದೇ ಇರುವುದು ಡಯಟ್‌ ಹೆಸರಿನಲ್ಲಿ ಬೆಳಗಿನ ಬ್ರೇಕ್‌ಫಾಸ್ಟ್‌ ಮಾಡದೆ ಇದ್ದರೆ ನೆನಪಿನ ಶಕ್ತಿ ಕಡಿಮೆಯಗುವುದು.
Memory Loss: symptoms, causes, treatment, medicine, prevention ...
ತಲೆಯವರೆಗೆ ಹೊದಿಕೆ ಹೊದ್ದುಕೊಂಡು ನಿದ್ದೆ ಮಾಡುವುದು, ಇದರಿಂದ ನಮ್ಮ ಮೆದುಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆ ಆಗುವುದಿಲ್ಲ. ಈ ಅಭ್ಯಾಸವಿದ್ದರೆ ಇವತ್ತಿನಿಂದಲೇ ಬಿಡಲು ಟ್ರೈ ಮಾಡಿ.
ಅತೀಯಾಗಿ ತಿನ್ನುವುದು: ನಮ್ಮ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ಆಹಾರವನ್ನು ತಿನ್ನಬೇಕು. ಬಾಯಿ ಚಪಲಕ್ಕೆ ಬಿದ್ದು ಅಧಿಕ ತಿನ್ನುವುದರಿಂದ ಮೈತೂಕ ಹೆಚ್ಚುವುದು, ಇದರಿಂದ ರಕ್ತ ಸಂಚಲ ಸರಾಗವಾಗಿ ನಡೆಯದೆ ಮೆದುಳಿನ ಸಾಮರ್ಥ್ಯ ಕಡಿಮೆಯಾಗುವುದು.
ಅತೀ ಕಡಿಮೆ ಮಾತು: ನಮ್ಮ ಮೆದುಳಿನ ಸ್ನಾಯುಗಳಿಗೆ ವ್ಯಾಯಾಮ ದೊರೆಯಬೇಕೆಂದರೆ ನಾವು ಮಾತನಾಡಬೇಕು. ಯೋಚನೆ ಮಾಡುತ್ತಾ ಇರುವುದರಿಂದ, ಮಾತನಾಡುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚುವುದು.



Tuesday, 23 June 2020

ಚೆಂಡು ಹೂವಿನ ಆರೋಗ್ಯ & ಸೌಂದರ್ಯ ಲಾಭಗಳು ಗೊತ್ತಾದ್ರೆ ಆಶ್ಚರ್ಯಗೊಳ್ತಿರಾ..!

ಮಾರಿಗೋಲ್ಡ್ ಎಂದು ಕರೆಯಲ್ಪಡುವ ಚಂಡು ಹೂವು ದುರ್ಗೆಗೆ ಅರ್ಪಿಸುವುದರಿಂದ ಹಿಡಿದು ದಸರಾ, ದೀಪಾವಳಿಯಲ್ಲಿ ಮನೆಯ ಅಲಂಕಾರದವರೆಗೆ ಬಳಕೆಯಾಗುತ್ತದೆ. ಪಾಕಶಾಲೆಯಲ್ಲಿ ಇದರ ಬಳಕೆಯನ್ನು ತಿಳಿಯೋಣ.
  • ಚೆಂಡು ಹೂ ಪಿತ್ತ ಮತ್ತು ಕಫ ದೋಷವನ್ನು ಸಮತೋಲನ ಮಾಡುತ್ತದೆ. ಇನ್ನು ಸ್ನಾಯುವಿನ ನೋವು ಮತ್ತು ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಈ ಹೂವಿನ ಎಲೆಯ ಪೇಸ್ಟ್ ಅನ್ನು ನೋವಿನ ಮೇಲೆ ಹಚ್ಚಬೇಕು. 
  • ಇದು ಉರಿಯೂತ ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಅಸ್ತಮಾ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.


  • ಎಲೆಯ ಪೇಸ್ಟ್ ಅನ್ನು ಬೆಣ್ಣೆ ಅಥವಾ ಎಣ್ಣೆಯಲ್ಲಿ ಹುರಿಯಲಾಗುತ್ತದೆ ಮತ್ತು ಮುಟ್ಟಿನ ಅವಧಿಯಲ್ಲಿ ಅಗುವ ಹೆಚ್ಚಿನ ರಕ್ತಸ್ರಾವವನ್ನು ನಿಲ್ಲಿಸಲು ಇದನ್ನು ಸೇವಿಸಲಾಗುತ್ತದೆ.
  • ಎಲೆಯ ತಾಜಾ ರಸವನ್ನು ಮೂಗಿಗೆ ಬಿಡಲಾಗುತ್ತದೆ. ಉರಿ ಮೂತ್ರ ವಿಸರ್ಜನೆಗೆ ಚಿಕಿತ್ಸೆ ನೀಡಲು ಎಲೆ ಮತ್ತು ಹೂವುಗಳ ದ್ರಾವಣವನ್ನು ಬಳಸಲಾಗುತ್ತದೆ.
  • ಮೊಡವೆ ಗುಳ್ಳೆಗಳಿಗೆ ಮತ್ತು ಬಿಸಿಲಿನ ಬೇಗೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸುತ್ತಾರೆ.

Monday, 22 June 2020

ರೋಗನಿರೋದಕ ಶಕ್ತಿಯನ್ನು ಹೆಚ್ಚಿಸಲು ಇದನ್ನ ತಿನ್ನಿ

ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ...

ಮಳೆಗಾಲದ ಈ ಸಂದರ್ಭದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಎಂದರೆ ಬಲು ಬೋರು. ಏನಾದರೂ ತಿನ್ನುತ್ತಲೇ ಇರಬೇಕು ಅನಿಸುತ್ತದೆ. ಮನೆಯಲ್ಲಿ ತಿನ್ನಲು ಎನು ಇಲ್ದಿದ್ದಾಗ ಬೆಲ್ಲವನ್ನೋ, ಶೇಖರಿಸಿಟ್ಟ ಕಡಲೆಯನ್ನೋ ತಿನ್ನುತ್ತಿರುತ್ತೇವೆ. ನಾವು ಸಮಯ ಕಳೆಯಲು ತಿನ್ನುವ ಇವುಗಳಲ್ಲಿ ನಮಗೆ ಗೊತ್ತಿಲ್ಲದ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತವೆ.
ಮನೆಯಲ್ಲೇ ಮಾಡಿ ಕುಡಿಯಿರಿ ರೋಗ ನಿರೋಧಕ ...
ಇವುಗಳಲ್ಲಿ ಕೊರೊನಾ ಸಮಯದಲ್ಲಿ ಬಹುಮುಖ್ಯವಾಗಿ ಗಮನ ಹರಿಸಲೇಬೇಕಾದ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವ ಗುಣ ಅಡಗಿರುತ್ತದೆ.
ಬೆಲ್ಲ ತಿಂದರೆ ಎಷ್ಟೊಂದು ಲಾಭ | KANNADA KING
ಬೆಲ್ಲ ಅಂದ್ರೆ ಸಾಕು ಚಿಕ್ಕ ಮಕ್ಕಳಂತೂ ಯಾವಾಗಲೂ ತಿನ್ನುತ್ತಿರುತ್ತಾರೆ. ಬೆಲ್ಲ ಮತ್ತು ಕಡಲೆ ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ತಿನ್ನುವ ತಿನಿಸುಗಳು. ಇದು ತಿನ್ನುವುದು ಆರೋಗ್ಯಕ್ಕೂ ಕೂಡ ಒಳ್ಳೆಯದು.
ಬೆಲ್ಲ ಕಡಲೆ ಎರಡನ್ನು ಚಳಿಗಾಲದಲ್ಲಿ ...
ಬೆಲ್ಲ ಮತ್ತು ಕಡಲೆಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದರ ಸೇವನೆಯಿಂದ ರಕ್ತ ಹೀನತೆ ತಪ್ಪಿಸಬಹುದು. ಹುರಿದ ಕಡಲೆಯಲ್ಲಿ ಕಬ್ಬಿಣಾಂಶದ ಜೊತೆಗೆ ಪ್ರೊಟೀನ್ ಕೂಡ ಇರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

ನಮ್ಮ ದೇಹದಲ್ಲಿ ಆಯಾಸ ಮತ್ತು ದೌರ್ಬಲ್ಯ ಕಂಡುಬಂದಾಗ ಕಬ್ಬಿಣಾಂಶ ಭರಿತ ಆಹಾರಗಳನ್ನು ತೆಗೆದುಕೊಳ್ಳಬೇಕು. ಕಡಲೆ ಮತ್ತು ಬೆಲ್ಲದ ಸೇವನೆ ನಮ್ಮನ್ನು ರಕ್ತ ಹೀನತೆಯಿಂದ ರಕ್ಷಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಹಾಗೂ ಪೌಷ್ಟಿಕಾಂಶವನ್ನು ಒದಗಿಸುತ್ತದೆ.

ದೇಹದ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ಮನೆಮದ್ದು..! How to Gain body weight.. Simply tips
14 ದಿನ ಏಲಕ್ಕಿ ನೀರು ಕುಡಿದರೆ ಏನಾಗುತ್ತದೆ ಗೊತ್ತಾ? ದೇಹದಲ್ಲಾಗುವುದು ಅದ್ಭುತ ಬದಲಾವಣೆ..!

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...