Showing posts with label ನಾಟಿ ಮದ್ಧು. Show all posts
Showing posts with label ನಾಟಿ ಮದ್ಧು. Show all posts

Sunday, 11 February 2024

ಹೊಕ್ಕಳಿಗೆ ಈ ತೈಲ ಹಾಕಿದ್ರೆ ಅಮೋಘ ಫಲಿತಾಂಶ ಕಾಣಬಹುದು


ಮಲಗೋ ಮುನ್ನ ಹೊಕ್ಕಳಿಗೆ ಎಣ್ಣೆ ಹಚ್ಚಿ ಹೀಗೆ ಮಾಡಿದ್ರೆ ಸಾಕು; ಸಿಗುತ್ತೆ ನಾನಾ ಆರೋಗ್ಯ ಪ್ರಯೋಜನ!

ಹೊಕ್ಕಳಿಗೆ ನೀವು ಯಾವುದೇ ರೀತಿಯ ಎಣ್ಣೆಯನ್ನು ಬಳಸಬಹುದು. ಕೊಬ್ಬರಿ ಎಣ್ಣೆ, ತುಪ್ಪ, ಕ್ಯಾಸ್ಟರ್ ಆಯಿಲ್ ಮುಂತಾದ ವಿವಿಧ ರೀತಿಯ ಎಣ್ಣೆಗಳನ್ನು ಮಲಗುವ ಮುನ್ನ ಹೊಕ್ಕುಳ ಭಾಗಕ್ಕೆ ಹಚ್ಚಿ ಮಲಗುವ ಮುನ್ನ ಚೆನ್ನಾಗಿ ಮಸಾಜ್ ಮಾಡುವುದರಿಂದ ನಮಗೆ ಹಲವಾರು ಲಾಭಗಳು ಸಿಗುತ್ತವೆ.

ಮಲಗುವ ಮುನ್ನ ನಮ್ಮ ಹೊಟ್ಟೆ ಮತ್ತು ಹೊಕ್ಕುಳ ಭಾಗಕ್ಕೆ ಎಣ್ಣೆ ಹಚ್ಚುವುದು ಪುರಾತನ ಕಾಲದಿಂದಲೂ ರೂಢಿಯಲ್ಲಿದೆ. ಈ ಪ್ರಾಚೀನ ಅಭ್ಯಾಸವು ನಿಜವಾಗಿಯೂ ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಆಧುನಿಕ ಔಷಧವು ಸಾಬೀತು ಪಡಿಸಿದೆ.


ಇದಕ್ಕಾಗಿ ನೀವು ಯಾವುದೇ ರೀತಿಯ ಎಣ್ಣೆಯನ್ನು ಬಳಸಬಹುದು. ಕೊಬ್ಬರಿ ಎಣ್ಣೆ, ತುಪ್ಪ, ಕ್ಯಾಸ್ಟರ್ ಆಯಿಲ್ ಮುಂತಾದ ವಿವಿಧ ರೀತಿಯ ಎಣ್ಣೆಗಳನ್ನು ಮಲಗುವ ಮುನ್ನ ಹೊಕ್ಕುಳ ಭಾಗಕ್ಕೆ ಹಚ್ಚಿ ಮಲಗುವ ಮುನ್ನ ಚೆನ್ನಾಗಿ ಮಸಾಜ್ ಮಾಡುವುದರಿಂದ ನಮಗೆ ಹಲವಾರು ಲಾಭಗಳು ಸಿಗುತ್ತವೆ.
News18 Kannada

ಪ್ರತಿದಿನ ರಾತ್ರಿ ಮಲಗುವ ಮುನ್ನ ಇದನ್ನು ನಿಯಮಿತವಾಗಿ ಮಾಡುವುದರಿಂದ ನಮ್ಮ ತ್ವಚೆಯ ಆರೋಗ್ಯ ಹೆಚ್ಚುವುದಲ್ಲದೇ ಇಡೀ ದೇಹದ ಆರೋಗ್ಯವೂ ಹೆಚ್ಚುತ್ತದೆ. ಹೀಗಾಗಿ, ಇದು ನಮ್ಮ ದೇಹದಲ್ಲಿನ ನರಮಂಡಲದ ಹಾನಿಗಳನ್ನು ಸರಿಪಡಿಸುತ್ತದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

News18 Kannada
ಮಲಗುವ ಮುನ್ನ ಮೂರರಿಂದ ಏಳು ಹನಿ ತುಪ್ಪ ಮತ್ತು ತೆಂಗಿನೆಣ್ಣೆಯನ್ನು ಹೊಕ್ಕುಳ ಭಾಗಕ್ಕೆ ಹಚ್ಚಿ ಸುಮಾರು ಅರ್ಧ ಇಂಚು ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಕಣ್ಣುಗಳಲ್ಲಿನ ಶುಷ್ಕತೆ ನಿವಾರಣೆಯಾಗಿ ದೃಷ್ಟಿ ಹೆಚ್ಚುತ್ತದೆ.
News18 Kannada
ಮೂರರಿಂದ ಏಳು ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿ ಮತ್ತು ಮಲಗುವ ಮೊದಲು ಹೊಟ್ಟೆಯ ಪೂರ್ತಿ ಮಸಾಜ್ ಮಾಡಿ. ಇದು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

News18 Kannada
ಮೂರರಿಂದ ಏಳು ಹನಿ ಕ್ಯಾಸ್ಟರ್ ಆಯಿಲ್ ಅನ್ನು ಮಲಗುವ ಮೊದಲು ಹೊಕ್ಕುಳಿಗೆ ಹಚ್ಚಿ, ಅರ್ಧ ಇಂಚಿನವರೆಗೆ ಹರಡಿ ಮಸಾಜ್ ಮಾಡಿ. ಇದು ಮೊಣಕಾಲು ನೋವು, ಕೀಲು ನೋವು, ಕಾಲು ನೋವು ಇತ್ಯಾದಿಗಳನ್ನು ಗುಣಪಡಿಸುತ್ತದೆ. ಅಲ್ಲದೇ ದೇಹದ ಎಲ್ಲಾ ಮೂಳೆಗಳು ಬಲಗೊಳ್ಳುತ್ತವೆ.
News18 Kannada
ಮಲಗುವ ಮುನ್ನ ಹೊಕ್ಕಳಿಗೆ ಮೂರ್ನಾಲ್ಕು ಹನಿ ಬೇವಿನ ಎಣ್ಣೆಯನ್ನು ಹಚ್ಚಿ ಅರ್ಧ ಇಂಚು ಚೆನ್ನಾಗಿ ಮಸಾಜ್ ಮಾಡುವುದರಿಂದ ಮುಖದಲ್ಲಿರುವ ಮೊಡವೆಗಳು ನಿವಾರಣೆಯಾಗಿ ಚರ್ಮ ಕಾಂತಿಯುತವಾಗಿರುತ್ತದೆ. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ ಖಂಡಿತವಾಗಿಯೂ ಪ್ರಯೋಜನಗಳನ್ನು ತರುತ್ತದೆ ಎಂದು ಹಲವರು ಹೇಳುತ್ತಾರೆ.





Hair Fall Control: ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ 5 ಸಿಂಪಲ್‌ ಸಲಹೆ ಪಾಲಿಸಿ


Hair Fall Control: ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ 5 ಸಿಂಪಲ್‌ ಸಲಹೆ ಪಾಲಿಸಿ



ಕೂದಲು ಉದುರುವುದು ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದು ಹೆಣ್ಣುಮಕ್ಕಳನ್ನು ಮಾತ್ರವಲ್ಲ, ಗಂಡುಮಕ್ಕಳನ್ನು ಕಾಡುತ್ತಿದೆ. ಹಾಗಾದ್ರೆ ಕೂದಲು ಉದುರುವ ಸಮಸ್ಯೆ ಥಟ್ಟಂತ ನಿಲ್ಲಬೇಕು ಅಂದ್ರೆ ಏನು ಮಾಡಬಹುದು? ಇಲ್ಲಿದೆ ಪರಿಹಾರ

ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ 5 ಸಿಂಪಲ್‌ ಸಲಹೆ ಪಾಲಿಸಿ
ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ 5 ಸಿಂಪಲ್‌ ಸಲಹೆ ಪಾಲಿಸಿ



ಋತುಮಾನಗಳು ಬದಲಾದಂತೆ ಚರ್ಮ ಹಾಗೂ ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ಚಳಿಗಾಲ ಬಂತೆಂದರೆ ಕೂದಲು ಉದುರುವ ಸಮಸ್ಯೆ ಹೆಚ್ಚು ಕಾಡುತ್ತದೆ. ಇತ್ತೀಚೆಗಂತೂ ನೀರು, ಕಲುಷಿತ ವಾತಾವರಣ, ಆಹಾರಗಳ ಕಾರಣದಿಂದ ಎಲ್ಲಾ ವಯೋಮಾನದವರಲ್ಲೂ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ಪ್ರತಿದಿನ ಅಲ್ಪಸ್ವಲ್ಪ ಕೂದಲು ಉದುರಿದರೆ ತೊಂದರೆಯಿಲ್ಲ, ಆದರೆ ಪ್ರತಿದಿನ ರಾಶಿ ರಾಶಿ ಕೂದಲು ಉದುರುತಿದ್ರೆ ಯಾರಿಗೆ ಬೇಸರ ಆಗೊಲ್ಲ ಹೇಳಿ. ಆದರೆ ಖಂಡಿತ ಈ ಸಮಸ್ಯೆಗೆ ಪರಿಹಾರವಿದೆ. ಅಲ್ಲದೆ ಈ ಪರಿಹಾರವು ಆದಷ್ಟು ಬೇಗ ನಿಮ್ಮಲ್ಲಿ ಕೂದಲು ಉದುರುವ ಸಮಸ್ಯೆ ಸರಿ ಹೋಗುವಂತೆ ಮಾಡುತ್ತದೆ. ಹಾಗಾದ್ರೆ ಅದೇನು ಅಂತಹ ಪರಿಹಾರ ಅಂತ ಯೋಚನೆ ಮಾಡ್ತಾ ಇದೀರಾ? ಮುಂದೆ ಓದಿ

ಸಮತೋಲಿತ ಡಯೆಟ್‌

ಕೂದಲು ಉದುರುವುದು ಥಟ್‌ ಅಂತ ನಿಲ್ಲಬೇಕು ಅಂದ್ರೆ ನೀವು ಮೊದಲು ಮಾಡಬೇಕಿರುವುದು ಸಮತೋಲಿತ ಆಹಾರ ಸೇವಿಸುವುದು. ಪೋಷಕಾಂಶ ಸಮೃದ್ಧ ಆಹಾರ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದು. ಕಬ್ಬಿಣಾಂಶ, ವಿಟಮಿನ್ ಎ ಮತ್ತು ಡಿ, ಸತುವಿನ ಅಂಶದ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ. ವಿವಿಧ ಬಗೆಯ ಹಣ್ಣು, ತರಕಾರಿ, ಲೀನ್‌ ಪ್ರೊಟೀನ್‌, ಧಾನ್ಯಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಇದರೊಂದಿಗೆ ಪಾಲಕ್‌, ಮೊಟ್ಟೆ, ಒಣಹಣ್ಣುಗಳು, ಮೀನು ಇವುಗಳ ಸೇವನೆಯು ಬಹಳ ಅವಶ್ಯ. ಇವುಗಳಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ.

ಎಸೆನ್ಷಿಯಲ್‌ ಆಯಿಲ್‌ ಮಸಾಜ್‌

ಸಾರಭೂತ ತೈಲವನ್ನು ಹಚ್ಚಿ ಕೂದಲ ಬುಡಕ್ಕೆ ಚೆನ್ನಾಗಿ ಮಸಾಜ್‌ ಮಾಡುವುದರಿಂದ ಕೂದಲಿನ ಫಾಲಿಕಲ್‌ಗಳಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಇದು ಕೂದಲವನ್ನು ಪೋಷಿಸಿ, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಆಲಿವ್‌ ಎಣ್ಣೆ ಇವುಗಳಲ್ಲಿ ಯಾವುದಾದರೂ ಒಂದು ಎಣ್ಣೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಲ್ಯಾವೆಂಡರ್‌ ಎಣ್ಣೆ, ರೋಸ್ಮರಿ ಅಥವಾ ಪೆಪ್ಪರ್‌ಮಿಂಟ್‌ ಆಯಿಲ್‌ ಸೇರಿಸಿ. ಇದನ್ನು ಬಿಸಿ ಮಾಡಿ, ಉಗುರು ಬೆಚ್ಚಗಿನ ಎಣ್ಣೆಯನ್ನು ನೆತ್ತಿಯ ಬುಡಕ್ಕೆ ಮಸಾಜ್‌ ಮಾಡಿ. ನಂತರ 30 ಗಂಟೆ ಬಿಟ್ಟು ತಲೆಸ್ನಾನ ಮಾಡಿ.

ರಾಸಾಯನಿಕಗಳ ಬಳಕೆ ತಕ್ಷಣಕ್ಕೆ ನಿಲ್ಲಿಸಿ

ರಾಸಾಯನಿಕ ಅಂಶಗಳಿರುವ ಯಾವುದೇ ಶಾಂಪೂ, ಕಂಡೀಷನರ್‌ ಅಥವಾ ಕೂದಲಿನ ಉತ್ಪನ್ನಗಳ ಅತಿಯಾದ ಬಳಕೆಯು ಕೂದಲು ಉದುರುವಿಕೆಯನ್ನು ಹೆಚ್ಚಿಸಬಹುದು. ಸೌಮ್ಯತರದ ಸಲ್ಫೇಟ್‌ ಮುಕ್ತ ಉತ್ಪನ್ನಗಳನ್ನು ಬಳಸುವುದು ಸೂಕ್ತ. ಇದರೊಂದಿಗೆ ಸ್ಟ್ರೇಟ್‌ನಿಂಗ್‌, ಕರ್ಲಿಂಗ್‌ ಐರನ್‌ನಂತಹ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಬಿಸಿಯು ಕೂದಲ ಹಾನಿಯನ್ನು ಇನ್ನಷ್ಟು ಹೆಚ್ಚು ಮಾಡಬಹುದು. ಅತಿಯಾದ ಶಾಖದಿಂದ ಕೂದಲು ಬುಡದಿಂದಲೇ ದುರ್ಬಲವಾಗಬಹುದು ಎಚ್ಚರ.

ಲೋಳೆಸರದ ತಿರುಳು

ಅಲೊವೆರಾ ಜೆಲ್‌ ಕೂದಲು ಚರ್ಮದ ಉರಿಯೂತವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಇದು ಕೂದಲು ಉದುರುವುದನ್ನು ತಡೆಯಲು ಬೆಸ್ಟ್‌. ತಾಜಾ ಲೋಳೆಸರ ತಿರುಳನ್ನು ಕೂದಲಿನ ಬುಡಕ್ಕೆ ಹಚ್ಚಿ, ಇದನ್ನು 45 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಿನ ನೀರಿನಿಂದ ಸೌಮ್ಯತರ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಅಲೊವೆರಾ ಕೂದಲಿನ ಬುಡದಲ್ಲಿ ಪಿಎಚ್‌ ಲೆವೆಲ್‌ ನಿಯಂತ್ರಣದಲ್ಲಿ ಇರಲು ಸಹಾಯ ,ಆಡುತ್ತದೆ. ಆ ಮೂಲಕ ಉರಿಯೂತವನ್ನು ನಿವಾರಿಸಿ, ಕೂದಲು ಉದುರುವುದನ್ನು ತಡೆಯುತ್ತದೆ.

ಸರಿಯಾದ ಕ್ರಮದಲ್ಲಿ ಕೂದಲ ನಿರ್ವಹಣೆ

ಕೂದಲು ಉದುರುವುದನ್ನು ನಿಲ್ಲಿಸಲು ಸರಿಯಾದ ಕ್ರಮದಲ್ಲಿ ಕೂದಲ ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಕೂದಲಿಗೆ ಹೊಂದುವ ಶಾಂಪೂವಿನಿಂದ ನಿರಂತರ ತಲೆಸ್ನಾನ, ಕೂದಲ ತೇವಾಂಶ ಕಾಪಾಡಿಕೊಳ್ಳಲು ಕಂಡಿಷನರ್‌ ಬಳಸುವುದು, ಒದ್ದೆ ಕೂದಲು ಬಾಚುವಾಗ ಅಗಲ ಹಲ್ಲಿನ ಬಾಚಣಿಗೆ ಬಳಸುವುದು ಈ ಎಲ್ಲವೂ ಮುಖ್ಯವಾಗುತ್ತದೆ. ಕೂದಲನ್ನು ಗಾಳಿಗೆ ಹರಡಿ ಆರಿಸುವುದು ಉತ್ತಮ ವಿಧಾನ. ಕೂದಲನ್ನು ಸೌಮ್ಯತರದ ರಬ್ಬರ್‌ ಬೆಂಡ್‌ಗಳಿಂದ ಜುಟ್ಟು ಹಾಕಿ. ಟೈಟ್‌ ಆಗಿ ಕೂದಲಿಗೆ ಜುಟ್ಟು ಹಾಕುವುದು ಅಪಾಯ.

ಆದರೆ ಒಂದು ವಿಚಾರ ನೆನಪಿರಲಿ ಕೂದಲು ಉದುರುವುದನ್ನು ನಿಲ್ಲಿಸಲು ಒಂದೆರಡು ದಿನಗಳಲ್ಲಿ ಖಂಡಿತ ಸಾಧ್ಯವಿಲ್ಲ. ಆದರೆ ಮೇಲೆ ತಿಳಿಸಿದ ಮಾರ್ಗಗಳನ್ನು ಚಾಚೂ ತಪ್ಪದೇ ಪಾಲಿಸುವುದರಿಂದ ಖಂಡಿತ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಸಲಹೆಗಳನ್ನು ಪಾಲಿಸಿದ ಮೇಲೂ ನಿರಂತರವಾಗಿ ಕೂದಲು ಉದುರುತ್ತಿದ್ದರೆ ಅದಕ್ಕೆ ಬೇರೆ ಆರೋಗ್ಯ ಸಮಸ್ಯೆಗಳೂ ಕಾರಣವಿರಬಹುದು. ಹಾಗಾಗಿ ತಜ್ಞ ವೈದ್ಯರನ್ನು ಕಾಣುವುದು ಉತ್ತಮ.







Friday, 9 February 2024

ಹೊಟ್ಟೆಯ ಅಲ್ಸರ್ ಸಮಸ್ಯೆಯನ್ನು ಈ ಮನೆಮದ್ದು ಮೂಲಕ ಸುಲಭವಾಗಿ ಪರಿಹರಿಸಬಹುದು! Stomac...


Stomach Ulcer: ಎದೆ ಉರಿ ಇದೆಯಾ? ಹೊಟ್ಟೆ ಹುಣ್ಣಿನ ಬಗ್ಗೆ ಇರಲಿ ಎಚ್ಚರ, ಇಲ್ಲಿದೆ ಕೆಲವು ಮನೆಮದ್ದುಗಳು





ಹೊಟ್ಟೆಯ ಹುಣ್ಣುಗಳನ್ನು ಸುಲಭವಾಗಿ ಗುಣಪಡಿಸಬಹುದು. ಆದರೂ ಸಹ ಸರಿಯಾದ ಚಿಕಿತ್ಸೆ ನೀಡದೇ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ಪೆಪ್ಟಿಕ್ ಅಲ್ಸರ್ ಇದ್ದವರಿಗೆ ವೈದ್ಯರು 10 ದಿನಗಳವರೆಗೆ ಔಷಧ ನೀಡುತ್ತಾರೆ. ಎಲೆಕೋಸು ಹುಣ್ಣುಗಳನ್ನು ಗುಣಪಡಿಸುತ್ತದೆ.



ಹೊಟ್ಟೆಯಲ್ಲಿ (Stomach) ಉಂಟಾಗುವ ಹುಣ್ಣುಗಳನ್ನು (Ulcer) ಗ್ಯಾಸ್ಟ್ರಿಕ್ ಅಲ್ಸರ್ (Gastric Ulcer) ಎಂದು ಕರೆಯುತ್ತಾರೆ. ಇವು ಹೊಟ್ಟೆಯ ಒಳಪದರದಲ್ಲಿ ಉಂಟಾಗುವ ನೋವಿನ (Pain) ಹುಣ್ಣುಗಳಾಗಿವೆ. ಇದು ಒಂದು ರೀತಿಯ ಪೆಪ್ಟಿಕ್ ಹುಣ್ಣು. ಪೆಪ್ಟಿಕ್ ಹುಣ್ಣುಗಳು ಹೊಟ್ಟೆ ಮತ್ತು ಸಣ್ಣ ಕರುಳು ಮತ್ತು ಅನ್ನನಾಳದ ಒಳಪದರದ ಮೇಲೆ ಉಂಟಾಗುತ್ತವೆ. ಜೀರ್ಣಕಾರಿ ರಸದಿಂದ ನಿಮ್ಮ ಹೊಟ್ಟೆಯನ್ನು ರಕ್ಷಿಸುವ ಲೋಳೆಯ ದಪ್ಪ ಪದರವು ಕುಗ್ಗಿದಾಗ ಹೊಟ್ಟೆಯ ಹುಣ್ಣು ಉಂಟಾಗುತ್ತದೆ. ಹೊಟ್ಟೆಯ ಹುಣ್ಣುಗಳು ಮುಖ್ಯವಾಗಿ ಬ್ಯಾಕ್ಟೀರಿಯಂ ಹೆಲಿಕೋಬ್ಯಾಕ್ಟರ್ ಪೈಲೋರಿ (H. ಪೈಲೋರಿ) ಸೋಂಕಿನಿಂದ ಅಥವಾ ಆಸ್ಪಿರಿನ್, ಐಬುಪ್ರೊಫೇನ್ ಅಥವಾ ನ್ಯಾಪ್ರೋಕ್ಸೆನ್‌ನಂತಹ ಉರಿಯೂತದ ಔಷಧಗಳ ದೀರ್ಘಾವಧಿಯ ಬಳಕೆಯಿಂದ ಉಂಟಾಗುತ್ತವೆ.



ಹೊಟ್ಟೆಯಲ್ಲಿ ಹುಣ್ಣುಗಳಿದ್ದರೆ ಏನು ಮಾಡಬೇಕು?

ಹೊಟ್ಟೆಯ ಹುಣ್ಣುಗಳನ್ನು ಸುಲಭವಾಗಿ ಗುಣಪಡಿಸಬಹುದು. ಆದರೂ ಸಹ ಸರಿಯಾದ ಚಿಕಿತ್ಸೆ ನೀಡದೇ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ಪೆಪ್ಟಿಕ್ ಅಲ್ಸರ್ ಇದ್ದವರಿಗೆ ವೈದ್ಯರು 10 ದಿನಗಳವರೆಗೆ ಔಷಧ ನೀಡುತ್ತಾರೆ.

ಇದು ಮುಖ್ಯವಾಗಿ PPI ಗಳು (ಪ್ರೋಟಾನ್  ಪಂಪ್ ಇನ್ಹಿಬಿಟರ್ಗಳು), ಕ್ಲಾರಿಥ್ರೊಮೈಸಿನ್ ಮತ್ತು ಅಮೋಕ್ಸಿಸಿಲಿನ್ ಗುಂಪಿನ ಔಷಧವಾಗಿದೆ. ಅದು ಆಮ್ಲದ ಪರಿಣಾಮ ಕಡಿಮೆ ಮಾಡುತ್ತದೆ. ಮನೆಯಲ್ಲಿ ಮನೆಮದ್ದುಗಳ ಮೂಲಕ ಪೆಪ್ಟಿಕ್ ಅಲ್ಸರ್ ನ್ನು ತೊಡೆದು ಹಾಕಬಹುದು. ಅವುಗಳ ಬಗ್ಗೆ ಇಲ್ಲಿ ನೋಡೋಣ.

ಪೆಪ್ಟಿಕ್ ಅಲ್ಸರ್ ಲಕ್ಷಣಗಳು

ಹೊಟ್ಟೆಯಲ್ಲಿ ಮಂದ ನೋವು, ತೂಕ ಇಳಿಕೆ, ಆಹಾರ ಸೇವನೆ ಮಾಡಲಾಗದಿರುವುದು, ಊತ, ಹೊಟ್ಟೆ ತುಂಬಿದ ಭಾವನೆ, ಬೆಲ್ಚಿಂಗ್ ಅಥವಾ ಆಮ್ಲೀಯತೆ, ಎದೆಯುರಿ, ರಕ್ತಹೀನತೆ, ಡಾರ್ಕ್, ಟಾರಿ ಮಲ, ರಕ್ತಸಿಕ್ತ ವಾಂತಿ,


ಅಲ್ಸರ್ಗೆ ರಾಮಬಾಣ - ಎಲೆಕೋಸು ರಸ

ಅಧ್ಯಯನದ ಪ್ರಕಾರ ಎಲೆಕೋಸು ಹುಣ್ಣುಗಳನ್ನು ಗುಣಪಡಿಸುತ್ತದೆ. ಹುಣ್ಣುಗಳಿಗೆ ಇದು ಜನಪ್ರಿಯ ಮತ್ತು ನೈಸರ್ಗಿಕ ಚಿಕಿತ್ಸೆ. ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು ಪ್ರತಿಜೀವಕಗಳು ಲಭ್ಯವಾಗುವ ದಶಕಗಳ ಮೊದಲು ಇದನ್ನು ವೈದ್ಯರು ಬಳಸುತ್ತಿದ್ದರು.

ಎಲೆಕೋಸು ರಸವು ಹೊಟ್ಟೆಯ ಹುಣ್ಣುಗಳನ್ನು ತಡೆಗೆ ಮತ್ತು ಗುಣಪಡಿಸುವ ಸಂಯುಕ್ತಗಳನ್ನು ಹೊಂದಿದೆ. ಎಲೆಕೋಸು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ರಕ್ಷಣಾತ್ಮಕ ಗುಣಗಳನ್ನು ಹೊಂದಿದೆ.

ಬಳಸುವುದು ಹೇಗೆ

ಎಲೆಕೋಸು ರಸ ತಯಾರಿಸಿ. ಪ್ರತಿದಿನ 1 ಕಪ್ ರಸ ಸೇವಿಸಿ. ಇದು ಹುಣ್ಣುಗಳ ನಿವಾರಣೆಗೆ ತುಂಬಾ ಪ್ರಯೋಜನಕಾರಿ.

ಹುಣ್ಣು ಗುಣಪಡಿಸಲು ಏನು ತಿನ್ನಬೇಕು - ಜೇನುತುಪ್ಪ

ಜೇನುತುಪ್ಪವು ಉತ್ಕರ್ಷಣ ನಿರೋಧಕ-ಭರಿತ ಆಹಾರ. ವಿವಿಧ ಆರೋಗ್ಯ ಪ್ರಯೋಜನ ನೀಡುತ್ತದೆ. ಈ ಕಿಣ್ವವು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉತ್ಪಾದಿಸುತ್ತದೆ. ಇದು ಹುಣ್ಣು ಉಂಟು ಮಾಡುವ ಬ್ಯಾಕ್ಟೀರಿಯಾ ಹೆಲಿಕೋಬ್ಯಾಕ್ಟರ್ ಪೈಲೋರಿ ವಿರುದ್ಧ ಹೋರಾಡುತ್ತದೆ. ಅಲ್ಲದೇ ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಕಣ್ಣಿನ ಆರೋಗ್ಯ, ಹೃದ್ರೋಗ ಮತ್ತು ಪಾರ್ಶ್ವವಾಯು ತಡೆಗೆ ಸಹಕಾರಿ.

ಬಳಸುವುದು ಹೇಗೆ

ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಬೆರೆಸಿ ಮಿಶ್ರಣ ತಯಾರಿಸಿ. ದಿನಕ್ಕೆರಡು ಬಾರಿ ಸೇವಿಸಿ. ಇದು ಅಲ್ಸರ್ ಸಮಸ್ಯೆ ನಿವಾರಣೆ ಮಾಡುತ್ತದೆ.
ಬೆಳ್ಳುಳ್ಳಿ ಹುಣ್ಣುಗಳಿಗೆ ನೈಸರ್ಗಿಕ ಔಷಧ

ಒಂದು ಅಧ್ಯಯನದ ಪ್ರಕಾರ, ಬೆಳ್ಳುಳ್ಳಿ ಅಲಿಸಿನ್ ಎಂಬ ಸಂಯುಕ್ತ ಹೊಂದಿದೆ. ಇದು ಪ್ರಬಲವಾದ ಆಂಟಿಮೈಕ್ರೊಬಿಯಲ್ ಗುಣಲಕ್ಷಣ ಹೊಂದಿದೆ. ಇದು ಹೆಲಿಕೋಬ್ಯಾಕ್ಟರ್ ಪೈಲೋರಿ ವಿರುದ್ಧ ಹೋರಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಪೆಪ್ಟಿಕ್ ಹುಣ್ಣು ಉಂಟು ಮಾಡುತ್ತವೆ. ಇದು ಹುಣ್ಣುಗಳಾಗದಂತೆ ತಡೆಯುತ್ತದೆ. ಹುಣ್ಣು ಗುಣ ಪಡಿಸುತ್ತದೆ.

ಬಳಸುವುದು ಹೇಗೆ

ಪ್ರತಿದಿನ 2-3 ಎಸಳು ಬೆಳ್ಳುಳ್ಳಿ ತರಕಾರಿಗೆ ಹಾಕಿ ಸೇವಿಸಿ. ಪ್ರತಿದಿನ 1 ಲವಂಗ ಮತ್ತು ಬೆಳ್ಳುಳ್ಳಿ ಜಗಿಯುವುದು ಪ್ರಯೋಜನಕಾರಿ.

ಮೂಲದಿಂದ ಹುಣ್ಣು ತೊಡೆದು ಹಾಕುವುದು ಹೇಗೆ?  

ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಸಂಯುಕ್ತವು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಇದು ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಇದು ರಕ್ತನಾಳಗಳ ಕಾರ್ಯ ಸುಧಾರಿಸಲು ಮತ್ತು ಉರಿಯೂತ ಮತ್ತು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.

Thursday, 30 November 2023

ನೈಸರ್ಗಿಕವಾಗಿ ಕೂದಲ ಉತ್ತಮ ಬೆಳವಣಿಗೆಗಾಗಿ ಈ ಆಹಾರ ಸೇವಿಸಿ..! Hair Growth: ಕೂದಲು...

ಕೆಟ್ಟ ಜೀವನಶೈಲಿಯಿಂದ ಹೆಚ್ಚಿನ ಜನರು ಕೂದಲಿನ ಬೆಳವಣಿಗೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. ಇದರ ಹಿಂದಿನ ಅಸಲಿ ಕಾರಣ ನಿಮ್ಮ ಆಹಾರ  

ಕೂದಲ ಬೆಳವಣಿಗೆಗೆ ಈ ಮಾಂತ್ರಿಕ ತೈಲಗಳು ಸೂಕ್ತವಾಗಿ ಬರುವುದು ಹೀಗಿರುವಾಗ! ನಿಮ್ಮ ಕೂದಲಿಗೆ ಬಲವಾದ, ಆರೋಗ್ಯಕರ ಮತ್ತು ಹೊಳೆಯುವ ಸಲುವಾಗಿ ..

Wednesday, 22 November 2023

Health Tips : ಏಳು ಮಹಾರೋಗಕ್ಕೆ ರಾಮಬಾಣ ಈ ನುಗ್ಗೆ ಸೊಪ್ಪು..!

ನುಗ್ಗೆ ಸೊಪ್ಪಿನ ಸೇವನೆಯು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ನುಗ್ಗೆ ಸೊಪ್ಪಿನ ಹೆಚ್ಚು ಸೇವನೆ ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದೇಹದ ತೂಕ ಇಳಿಸುವ ಕ್ರಿಯೆ ನುಗ್ಗೆ ಸೊಪ್ಪು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸನೀರಿಗೆ ನುಗ್ಗೆ ಸೊಪ್ಪಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ದೇಹದ ತೂಕ ಇಳಿಯುತ್ತದೆ.

Friday, 10 July 2020

ಪಪ್ಪಾಯಿ ಎಲೆಯಲ್ಲಿದೆ ಕ್ಯಾನ್ಸರ್ ಓಡಿಸೋ ಶಕ್ತಿ..! papaya leaves - a powerful c...

ಪುರುಷರ ಲೈಂ-ಗಿಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ಸಿಂಪಲ್ ವಿಧಾನ..!

ವಿಶೇಷವಾಗಿ ವಯಸ್ಸು 40 ದಾಟಿದ ನಂತರ ಕೆಲಸದ ಒತ್ತಡ, ಅನಾರೋಗ್ಯವು ಲೈಂ-ಗಿಕ ಸಮಸ್ಯೆಯನ್ನು ಹೆಚ್ಚಿಸಬಹುದು. ಆದರೆ ಪುರುಷರು ಉತ್ತಮ ಜೀವನಶೈಲಿ ಜತೆ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಲೈಂ-ಗಿಕ ಸಮಸ್ಯೆಗಳ ವಿರುದ್ಧ ಹೋರಾಡಬಹುದು.
ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಇಲ್ಲಿದೆ ಔಷಧಿ
ಬೀಟ್‌ರೂಟ್‌: ಪುರುಷರಲ್ಲಿ ಲೈಂ-ಗಿಕ ಕಾರ್ಯಕ್ಷ ಮತೆಯನ್ನು ಹೆಚ್ಚಿಸುವ ಶಕ್ತಿ ಬೀಟ್‌ರೂಟ್‌ಗೆ ಇದೆ. ನಿತ್ಯ ಬೀಟ್‌ರೂಟ್‌ ರಸ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಿಮಿರುವಿಕೆಯ ಸಮಸ್ಯೆಯನ್ನು ಇದು ನಿವಾರಿಸಲಿದೆ.
ಮೆಣಸು: ಲೈಂ-ಗಿಕ ಜೀವನವನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಮೆಣಸು ಇರಲಿ. ಸ್ನಾಯುಗಳು, ಹೃದಯ, ಸೇರಿದಂತೆ ಲೈಂ-ಗಿಕ ಅಂಗಗಳಿಗೆ ಉತ್ತಮ ರಕ್ತದ ಹರಿವನ್ನು ಒದಗಿಸುತ್ತದೆ.
ಬ್ರಕೋಲಿ: ಅತ್ಯಂತ ಆರೋಗ್ಯಪೂರ್ಣವಾದದ್ದು ಬ್ರಕೋಲಿ. ಇದು ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದು ಟೆಸ್ಟೋಸ್ಟೆರಾನ್‌ ಮಟ್ಟವನ್ನು ಹೆಚ್ಚಿಸುತ್ತದೆ.
ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುವ ...
ಡಾರ್ಕ್‌ ಚಾಕೊಲೇಟ್‌: ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್‌ ಅನ್ನು ಕಡಿಮೆಗೊಳಿಸುತ್ತದೆ. ಈ ಮೂಲಕ ರಕ್ತ ಪರಿಚಲನೆ ಸುಧಾರಿಸಬಹುದು. ಇದು ಲೈಂ-ಗಿಕತೆಯನ್ನು ಉತ್ತೇಜಿಸುತ್ತದೆ ಕೂಡ.
ಮೆಂತ್ಯೆ: ಜೀರ್ಣ ಸಂಬಂಧಿ ಸಮಸ್ಯೆಗಳನ್ನು ಸರಾಗಗೊಳಿಸುವ ಸಾಮರ್ಥ್ಯ‌ವನ್ನು ಹೊಂದಿದೆ. ಅಲ್ಲದೆ ಲೈಂ-ಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಯಾವುದೇ ಆಹಾರದ ಮೂಲಕ ಸೇವಿಸಬಹುದು.
ದಾಳಿಂಬೆ: ಟೆಸ್ಟೋಸ್ಟೇರೋನ್‌ ಹಾರ್ಮೋನ್‌ ಪ್ರಮಾಣವನ್ನು ಇದು ಹೆಚ್ಚಿಸುತ್ತದೆ. ಮೂಡನ್ನು ಉತ್ತೇಜಿಸುವುದರ ಜತೆ ರಕ್ತ ಸಂಚಾರ ಸರಾಗವಾಗುವಂತೆ ಮಾಡುತ್ತದೆ.
ಕಲ್ಲಂಗಡಿ: 40 ವರ್ಷದ ನಂತರ ಪುರುಷರು ತಮ್ಮ ಲೈಂ-ಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಇದರಿಂದ ಉದ್ರೇಕ ಸಮಸ್ಯೆಯಿಂದ ಮುಕ್ತರಾಗಬಹುದು.


Friday, 3 July 2020

ಕಫ, ಗಂಟಲು ಬಾಧೆ ಮತ್ತು ಮಂಡಿ ನೋವು ಜೀವನದಲ್ಲಿ ಮತ್ತೆ ಯಾವತ್ತೂ ಬರಬಾರದು ಅಂದ್ರೆ ಈ ನಾಟಿಮದ್ದು ರಾಮಬಾಣ

ಗಂಟಲು ನೋವು ಕಫ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ಮನೆಮದ್ದು. ಇದನ್ನು  ಹೇಗೆ ಬಳಸಬೇಕು ಗೊತ್ತಾ. 
ಒಂದೇ ದಿನದಲ್ಲಿ ಶೀತ, ಕೆಮ್ಮು, ಕಫ ...
ಗಂಟಲು ನೋವು ಇದ್ದರೆ ನೀರಿಗೆ ಅರ್ಧ ಹೋಳು ನಿಂಬೆ ರಸ ಒಂದು ಚಮಚ ಸೈಂಧವ ಉಪ್ಪು ಮತ್ತು ಒಂದು ಚಮಚ ಸಾಸಿವೆಯನ್ನು ಹಾಕಿ 10 ನಿಮಿಷ ಕುದಿಸಿ. ಬೆಚ್ಚಗಾದ ನಂತರ ಈ ನೀರನ್ನು ಬಾಯಿಗೆ ಹಾಕಿ ಗಾರ್ಗಲ್‌ ಮಾಡಿದರೆ ನೋವು ಬೇಗ ಶಮನವಾಗುತ್ತದೆ.
ಮಕ್ಕಳಿಗೆ ಒಣ ಕೆಮ್ಮು ಬರದ ಹಾಗೇ ತಡೆಯಲು ...

ಒಂದು ಚಮಚ ಹಳದಿ ಸಾಸಿವೆ ಪೇಸ್ಟ್‌ ಅನ್ನು ಸೇವಿಸಿ ಮೇಲೆ ಬಿಸಿ ನೀರು ಕುಡಿದರೆ ಸ್ನಾಯು ಸೆಳೆತ ನಿವಾರಣೆಯಾಗುತ್ತದೆ. ಮಂಡಿ ನೋವಿದ್ದರೆ ಒಂದು ಕಪ್‌ ಸಾಸಿವೆಯನ್ನು ಬಿಸಿ ನೀರಲ್ಲಿ ಕಲಸಿ ಬಟ್ಟೆ ಮೇಲೆ ಲೇಪಿಸಿ ಅದನ್ನು ನೋವಿರುವ ಮಂಡಿಗಳಿಗೆ ಕಟ್ಟಿದರೆ ನೋವು ಬೇಗ ಕಡಿಮೆಯಾಗುತ್ತದೆ.

ಕರಿ ಸಾಸಿವೆ ಬೀಜವನ್ನು ನೀರಿನೊಂದಿಗೆ ಪೇಸ್ಟ್‌ ಮಾಡಿ ಹುಳುಕಡ್ಡಿ ಆದ ಚರ್ಮದ ಮೇಲೆ ದಿನಕ್ಕೆ 3 ರಿಂದ 4 ಬಾರಿ ಲೇಪಿಸಿದರೆ ಹುಳುಕಡ್ಡಿ ಸಮಸ್ಯೆ ನಿವಾರಣೆಯಾಗುತ್ತದೆ. ಹೆಚ್ಚು ಸಮಯ ನಿಂತು ಕೆಲಸ ಮಾಡಿ ಪಾದಗಳ ನೋವಿದ್ದರೆ ಸಾಸಿವೆ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಆ ನೀರಲ್ಲಿ ಎರಡು ಕಾಲುಗಳನ್ನು ಇಟ್ಟುಕೊಂಡರೆ ನೋವು ಬೇಗ ಕಡಿಮೆಯಾಗುತ್ತದೆ.
ಎದೆಯಲ್ಲಿ ಕಫ ಹೆಚ್ಚು ಕಟ್ಟಿದ್ದರೆ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಎದೆ ಮತ್ತು ಬೆನ್ನಿಗೆ ಮಸಾಜ್‌ ಮಾಡಿದರೆ ಕಫ ಕರಗಿ ದಮ್ಮು, ಕೆಮ್ಮು ಶಮನವಾಗುತ್ತದೆ.

ಮಕ್ಕಳು ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ ಹಳದಿ ಸಾಸಿವೆಯನ್ನು ಹುರಿದು ಪುಡಿ ಮಾಡಿ. ಅರ್ಧ ಚಮಚ ಪುಡಿಯನ್ನು ಒಂದು ಲೋಟ ಬಿಸಿ ಹಾಲಿಗೆ ಹಾಕಿ ಕಲಸಿ ಮಲಗುವ ಮುಂಚೆ ಮಕ್ಕಳಿಗೆ ಕುಡಿಸಿದರೆ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುವುದು ಕಡಿಮೆಯಾಗುತ್ತದೆ.

Thursday, 2 July 2020

ನಿಂತುಕೊಂಡೇ ನೀರು ಸೇವಿಸುವ ಅದೆಷ್ಟೋ ಮಂದಿಗೆ ಈ ಘೋರ ಸತ್ಯ ತಿಳಿದಿಲ್ಲ., ವೈದ್ಯಲೋಕ ಹೇಳಿದ ಭಯಂಕರ ಸತ್ಯ ಇದು.!

ಮಾನವನ ದೇಹದ 75 ಪ್ರತಿಶತ ಭಾಗ ನೀರಿನಿಂದ ಮಾಡಲ್ಪಟ್ಟಿದೆ ಎಂದು ವಿಜ್ಞಾನ ಹೇಳುತ್ತದೆ, ನೀರು ನಮ್ಮ ದೇಹಕ್ಕೆ ಅತೀ ಅವಶ್ಯಕ, ದೇಹದ ಶೇ 75ರಷ್ಟು ಭಾಗದಲ್ಲಿ ನೀರಿರುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ನೀರು ಕುಡಿಯುವುದರಿಂದ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದು, ದೇಹದಲ್ಲಿನ ನೀರು ರಕ್ತ ಸಂಚಾರವನ್ನು ಹೆಚ್ಚಿಸುವುದಲ್ಲದೆ ಆಹಾರದಿಂದ ಪಡೆದಿರುವಂತಹ ಪ್ರಮುಖ ಪೋಷಕಾಂಶಗಳನ್ನು ವಿವಿಧ ಅಂಗಾಂಗಗಳು ಹಾಗೂ ಕೋಶಗಳಿಗೆ ತಲುಪಿಸುವಂತಹ ಕೆಲಸವನ್ನು ನೀರು ಮಾಡುತ್ತದೆ. 
Water Purifier A Safeguard Initiative To A Healthy Life | Blogging ...
ಸಾಮಾನ್ಯ ಸ್ಥಿತಿಯಲ್ಲಿ ಇದು 71% ರಷ್ಟಿರುತ್ತದೆ, ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿ ಬೇಕೇ ಬೇಕು ಮತ್ತು ನೀರಿಲ್ಲದ ಪರಿಸ್ಥಿತಿಯನ್ನು ನಿರ್ಜಲೀಕರಣ ಎಂದು ಕರೆಯಲಾಗುತ್ತದೆ ಹಾಗೂ ಈ ಸ್ಥಿತಿಯಲ್ಲಿ ದೇಹದ ಪ್ರಮುಖ ಅಂಗಗಳಿಗೆ ನೀರಿನ ಪೂರೈಕೆಯಾಗದೇ ಇವು ಒಣಗತೊಡಗುತ್ತವೆ ಮತ್ತು ಪ್ರತಿ ಅಂಗಾಂಶ ಕಾರ್ಯನಿರ್ವಹಿಸಲು ನೀರು ಬೇಕು.
Hyper Hydration : Can you benefit? - BodyWorx Physiotherapy
ಜೀವಕೋಶದ ಹಂತದಲ್ಲಿ ನೀರನ್ನು ಬಳಸಿಕೊಂಡು ಆರೋಗ್ಯ ಕಾಪಾಡುತ್ತದೆ ಅಷ್ಟೇ ಅಲ್ಲದೆ ರಕ್ತದ ಮೂಲಕ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಕೊಂಡೊಯ್ಯಲೂ ನೀರು ಬೇಕು ಆದರೆ ಎಷ್ಟೋ ಜನರಿಗೆ ನೀರು ಕುಡಿಯುವ ಸರಿಯಾದ ವಿಧಾನವೇ ತಿಳಿದಿಲ್ಲ. ಬಹಳ ಜನರಿಗಿರುವ ಒಂದು ಕೆಟ್ಟ ಹವ್ಯಾಸ ಎಂದರೆ ಅದು ನಿಂತುಕೊಂಡು ನೀರು ಕುಡಿಯುವುದು ಆದರೆ ವಿಜ್ಞಾನದ ಹಲವು ಸಂಶೋಧನೆಗಳ ಪ್ರಕಾರ ನಿಂತುಕೊಂಡು ನೀರು ಕುಡಿಯುವುದು ದೇಹಕ್ಕೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಹಾಗಾದರೆ ನಿಂತುಕೊಂಡು ನೀರು ಕುಡಿಯುವುದರಿಂದ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ನಿಂತುಕೊಂಡು ನೀರು ಕುಡಿಯುತ್ತಿದ್ದರೆ ಇಂದೇ ಅದನ್ನ ನಿಲ್ಲಿಸುವುದು ಬಹಳ ಒಳ್ಳೆಯದು.
Ways In Which You're Drinking Water Wrong - Boldsky.com
ಹೌದು ತಜ್ಞರು ಹೇಳುವ ಪ್ರಕಾರ ನಾವು ನಿಂತು ನೀರು ಕುಡಿಯಲೇ ಬಾರದು ಇದರಿಂದ ದೇಹಕ್ಕೆ ಬಹಳ ಅಪಾಯಗಳಾಗಬಹುದು. ನಿಂತು ನೀರು ಕುಡಿಯುವುದರಿಂದ ಜೀರ್ಣದ ಸಮಸ್ಯೆ ಎದುರಾಗಬಹುದು ಮತ್ತು ನರಮಂಡಲದಲ್ಲಿ ಒತ್ತಡ ಹೆಚ್ಚಾಗುತ್ತದೆ ಹಾಗೆ ಹೃದಯ ಹಾಗೂ ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದಲ್ಲ. ಇನ್ನು ನಿಂತುಕೊಂಡು ನೀರು ಕುಡಿಯುವಾಗ ಅನ್ನನಾಳದ ಮೂಲಕ ನೀರು ವೇಗವಾಗಿ ಸಾಗುವುದರಿಂದ ಅನ್ನನಾಳಕ್ಕೆ ಹಾನಿಯಾಗುತ್ತದೆ. ನಿಂತುಕೊಂಡು ಈ ರೀತಿ ನೀರನ್ನು ಕುಡಿಯುವುದರಿಂದ ನಿಮ್ಮ ಬಾಯಾರಿಕೆ ತಣಿಯುವುದಿಲ್ಲ ಮತ್ತು ನೀರು ನೇರವಾಗಿ ಹಾದು ಹೋಗುವುದರಿಂದ ಅಗತ್ಯವಿರುವ ಪೋಷಕಾಂಶಗಳು ಮತ್ತು ಜೀವಸತ್ವಗಳು ಯಕೃತ್ತು ಮತ್ತು ಜೀರ್ಣಾಂಗವ್ಯೂಹವನ್ನು ತಲುಪುವುದಿಲ್ಲ.

ಕೇವಲ ವಿಜ್ಞಾನ ಮಾತ್ರವಲ್ಲ ನಮ್ಮ ಆಯುರ್ವೇದ ಶಾಸ್ತ್ರದಲ್ಲೂ ಕೂಡ ನಿಂತುಕೊಂಡು ನೀರು ಕುಡಿಯುವುದನ್ನು ಅಪಾಯ ಎಂದು ಸೂಚಿಸಲಾಗಿದೆ. ನಿಂತು ನೀರು ಕುಡಿದಾಗ ರಭಸವಾಗಿ ಗಂಟಲಿನಿಂದ ಇಳಿಯುವ ನೀರು ಅನ್ನನಾಳ ಹಾಗೂ ಹೊಟ್ಟೆ ಕೂಡುವ ಸ್ಥಳದಲ್ಲಿ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ ಇದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ಹೊಟ್ಟೆ ನೋವು ಬರಬಹುದು. ನೀರು ಒಮ್ಮೆಲೆ ದೇಹ ಸೇರಿದರೆ ಕಿಡ್ನಿಗೆ ಕೆಲಸದ ಒತ್ತಡ ಉಂಟಾಗಿ ನೀರನ್ನು ಸರಿಯಾಗಿ ಸೋಸಲು ಆಗುವುದಿಲ್ಲ ಮತ್ತು ಇದರಿಂದ ಕಿಡ್ನಿಗೆ ಹಾನಿಯಾಗಬಹುದು.

ಸ್ನೇಹಿತರೆ ನೀವು ಸಾಧ್ಯವಾದಷ್ಟು ದಣಿವಾದಾಗ ಅಥವಾ ಬಾಯಾರಿಕೆಯಾದಾಗ ಆತುರದಲ್ಲಿ ನೀರು ಕುಡಿಯಬೇಡಿ ಮತ್ತು ನಿಧಾನವಾಗಿ ಕುಳಿತುಕೊಂಡು ನೀರನ್ನು ಕುಡಿಯಿರಿ ಇದರಿಂದ ದೇಹಕ್ಕೆ ಬಹಳ ಒಳ್ಳೆಯದು.

Wednesday, 1 July 2020

ಭಾರೀ ಬೇಡಿಕೆ ಉಂಟಾಗಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳು.!


ಕೊರೋನಾ ಸೋಂಕಿನ ಭಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕಿತರು ನಾನಾ ಆಸ್ಪತ್ರೆಗಳಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕೊರೋನಾ ಬಾರದಂತೆ ತಡೆಯೋದು ಹೇಗೆ? ಸೋಂಕು ಇಲ್ಲದವರು ವೈರಸ್ ತಮ್ಮ ಹತ್ತಿರಕ್ಕೂ ಬಾರದಂತೆ ತಡೆಯೋಕೆ ಮಾರ್ಗಗಳಿವೆಯಾ? ಇದೆ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು. ಯಾವೆಲ್ಲಾ ಗಿಡಮೂಲಿಕೆಗಳು, ಹಣ್ಣು, ತರಕಾರಿಗಳು ಈ ವಿಚಾರದಲ್ಲಿ ಆರೋಗ್ಯಕ್ಕೆ ಸಹಕಾರಿ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ...
ಕೋವಿಡ್ ಮಣಿಸಲು ಆಯುರ್ವೇದ‌ ಔಷಧ ಪ್ರಯೋಗ ...

ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಯಾವ ಕಾಯಿಲೆಯೂ ನಮ್ಮನ್ನು ಬಾಧಿಸುವುದಿಲ್ಲ. ಅದರಲ್ಲೂ ಕೊರೋನಾ ವೈರಸ್ ಸೋಂಕಂತೂ ಹತ್ತಿರಕ್ಕೂ ಸುಳಿಯುವುದಿಲ್ಲ. ಹಾಗಾಗಿ, ಕೊರೋನಾದಿಂದ ಬಚಾವಾಗಬೇಕು ಎಂದರೆ ಮೊದಲು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಾನಾ ಔಷಧಿಗಳಿವೆ. ತಮ್ಮ ಹತ್ತಿರದವರು ಯಾರಿಗೂ ಕೊರೋನಾ ಇಲ್ಲದಿದ್ದರೂ ನಮ್ಮ ರೋಗ ನಿರೋಧಕ ಶಕ್ತಿ ಉತ್ತಮ ಮಾಡಿಕೊಳ್ಳುವುದರ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ಕೊರೋನಾ ಕಾಡುವ ಚಾನ್ಸೇ ಇಲ್ಲವಾಗುತ್ತದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಅರಿಶಿನ, ಮೆಣಸಿನಕಾಳು, ಅಮೃತಬಳ್ಳಿ ಮುಂತಾದ ಒಂದಷ್ಟು ಪದಾರ್ಥಗಳು ದೊಡ್ಡ ಮಟ್ಟಿಗೆ ಪ್ರಯೋಜನಕಾರಿಯಾಗಬಲ್ಲವು. ಪ್ರತಿದಿನ ಶುಂಠಿ, ತುಳಸಿ ಮುಂತಾದ ವಸ್ತುಗಳನ್ನು ಕಷಾಯದ ರೂಪದಲ್ಲಿ ಬಳಸುವುದು ಕೂಡ ಅತ್ಯುತ್ತಮ ಪರಿಹಾರ. ಮನೆ ಮತ್ತು ಸುತ್ತಲಿನ ಸ್ಥಳದ ಸ್ವಚ್ಛತೆ ಕಾಪಾಡಿಕೊಳ್ಳುವುದರ ಬಗ್ಗೆಯೂ ಗಮನ ಹರಿಸಬೇಕು. ಧೂಳು, ಕಲುಷಿತ ವಾತಾವರಣ, ತಣ್ಣಗಿನ ನೀರು ಮತ್ತು ಆಹಾರಗಳಿಂದ ದೂರವಿರಬೇಕು. ಫ್ರೆಶ್ ಆಗಿ ತಯಾರಿಸಿದ ಆಹಾರವನ್ನು ಬಿಸಿಯಾಗಿಯೇ ಸೇವಿಸಬೇಕು. ಬೀದಿ ಬದಿಯ ಆಹಾರಗಳನ್ನು ಸೇವಿಸಲೇಬಾರದು. ದಾಳಿಂಬೆ, ಕಿತ್ತಳೆ, ಮೂಸಂಬಿ, ಸೇಬು ಮುಂತಾದ ಹಣ್ಣುಗಳು ಕೂಡ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಕೊರೊನಾಗೆ ಆಯುರ್ವೇದ ಔಷಧ ಕಂಡು ಹಿಡಿದೆ ...
ಮನೆಯಲ್ಲೇ ಇರುವ ನಾನಾ ಸಾಮಗ್ರಿಗಳು ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಕಾಯಿಲೆಗಳು ಯಾವುದೇ ಪ್ರಭಾವ ಬೀರದಂತೆ ತಡೆಯುತ್ತವೆ. ಅದರಲ್ಲೂ ಅಮೃತ ಬಳ್ಳಿ, ಶುಂಠಿ, ಅರಿಶಿನ ಮತ್ತು ಕಾಳು ಮೆಣಸು ವೈರಸ್​ಗಳನ್ನು ಕೊಲ್ಲುವ ಶಕ್ತಿ ಹೊಂದಿರುತ್ತವೆ. ಇದೆಲ್ಲದರ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸೂಕ್ತ ಆಹಾರ ಕೂಡ ನಿಮ್ಮ ದಿನಚರಿಯಲ್ಲಿ ಇರಬೇಕು. ಆಗ ದೇಹ ಎಲ್ಲ ಬಗೆಯ ಸೋಂಕಿನ ವಿರುದ್ಧ ಹೋರಾಡಲು ಸಜ್ಜಾಗಿರುತ್ತದೆ.

ಬಿಗ್‌ ಬ್ರೇಕಿಂಗ್.. ಕೊರೊನಾಕ್ಕೆ ಆಯುರ್ವೆದ ಚಿಕಿತ್ಸೆ ಸಕ್ಸಸ್: ಬೆಂಗಳೂರಲ್ಲಿ ಕ್ಲಿನಿಕಲ್ ಟ್ರಯಲ್ ಯಶಸ್ವಿ.!

ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ಮಹಾಮಾರಿಗೆ ಭಾರತೀಯ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೆದದಿಂದ ಪರಿಹಾರ ಸಾಧ್ಯ ಎಂಬುದು ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್​ನಿಂದ ದೃಢಪಟ್ಟಿದೆ. 
Coronavirus Treatment: India will soon do the clinical trials of ...
ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದ್ದು, ಕೇವಲ 9 ದಿನದಲ್ಲಿ ಎಲ್ಲರೂ ಗುಣಮುಖರಾಗಿ ನೆಗೆಟಿವ್ ವರದಿಯೊಂದಿಗೆ ಮನೆಗೆ ತೆರಳಿದ್ದಾರೆ. ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ ನೇತೃತ್ವದಲ್ಲಿ ನಡೆದ ಈ ಯಶಸ್ಸಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.
ಎರಡೇ ಮಾತ್ರೆ ಬಳಕೆ: ಕ್ಲಿನಿಕಲ್ ಟ್ರಯಲ್​ಗೆ ಸಿಟಿಆರ್​ಐನಲ್ಲಿ ನೋಂದಣಿ ಮಾಡಿಕೊಂಡಿರುವ ದಾಖಲೆ ವಿಜಯವಾಣಿಗೆ ಲಭ್ಯವಾಗಿದೆ. ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳನ್ನು ಸೋಂಕಿತರಿಗೆ ನೀಡಲಾಗಿತ್ತು. ಜೂ.7ರಿಂದ ಜೂ.25ರವರೆಗೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. 23 ವರ್ಷದಿಂದ 65 ವರ್ಷದವರೆಗಿನ ಸೋಂಕಿತರು ಟ್ರಯಲ್​ಗೆ ಒಳಪಟ್ಟಿದ್ದು, ಎಲ್ಲರೂ ಸೋಂಕಿನ ಗುಣಲಕ್ಷಣ ಹೊಂದಿದ್ದರು. ಅದಾಗಲೇ ನೀಡುತ್ತಿದ್ದ ಅಲೋಪತಿ ಚಿಕಿತ್ಸೆ ಜತೆಗೆ ಆಯುರ್ವೆದ ಟ್ರಯಲ್ ನಡೆಸಲಾಗಿದ್ದು, ಕೇವಲ 2ರಿಂದ 4 ದಿನದಲ್ಲಿ ಸೋಂಕಿನ ಗುಣಲಕ್ಷಣಗಳು ಸಂಪೂರ್ಣ ಮಾಯವಾಗಿವೆ. 3 ರಿಂದ 9 ದಿನದ ಅವಧಿಯಲ್ಲಿ ಎಲ್ಲ ಸೋಂಕಿತರ ಕರೊನಾ ಪರೀಕ್ಷೆ ನೆಗೆಟಿವ್ ಬಂದಿದೆ. ಯಾವ ಸೋಂಕಿತರೂ ಮುಂದಿನ ಹಂತಕ್ಕೆ (ಸಾಮಾನ್ಯದಿಂದ ಗಂಭೀರ ಹಂತಕ್ಕೆ) ಹೋಗದೆ ಗುಣಮುಖರಾಗಿದ್ದು, ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಎಂಬುದು ತಿಳಿದು ಬಂದಿದೆ. ಈ ವಿಚಾರ ಸೋಮವಾರ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚೆಯಾಗಿರುವುದಾಗಿ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
Ayurveda-tested immunity practices to follow during the ...
ಅತಿ ಕಡಿಮೆ ದರ
ಕರೊನಾ ಗುಣಪಡಿಸಲು ಲಕ್ಷಾಂತರ ರೂ. ವೆಚ್ಚವಾಗುತ್ತಿರುವುದರ ನಡುವೆಯೇ ಆಯುರ್ವೆದ ಕ್ಲಿನಿಕಲ್ ಟ್ರಯಲ್​ನಲ್ಲಿ ಪುಡಿಗಾಸಲ್ಲೇ ಸೋಂಕಿತರು ಗುಣಮುಖರಾಗಿದ್ದಾರೆ. ಒಬ್ಬ ರೋಗಿಗೆ ಕನಿಷ್ಠ 60 ರೂ. ನಿಂದ 180 ರೂ.ನಲ್ಲಿ ಚಿಕಿತ್ಸೆ ನೀಡಲಾಗಿದೆ. ಟ್ರಯಲ್​ನಲ್ಲಿ ಭಾಗವಹಿಸಿದವರ ಪೈಕಿ ಒಬ್ಬರು ಕ್ಷಯರೋಗದಿಂದ(ಟಿಬಿ) ಬಳಲುತ್ತಿದ್ದರು. ಹೃದ್ರೋಗ ಸಮಸ್ಯೆ, ಮಧುಮೇಹ ಹೊಂದಿದವರೆಲ್ಲರೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕ್ಲಿನಿಕಲ್ ಟ್ರಯಲ್ ಕುರಿತು ಪ್ರತಿಕ್ರಿಯೆಗೆ ಡಾ. ಗಿರಿಧರ ಕಜೆ ಲಭ್ಯವಾಗಿಲ್ಲ. ಇದೀಗ ನಡೆದಿರುವ ಯಶಸ್ವಿ ಪ್ರಯೋಗದ ಆಧಾರದಲ್ಲಿ ಆಯುರ್ವೆದ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ (ಆರ್​ಜಿಯುಎಚ್​ಎಸ್) ಕುಲಪತಿ ಡಾ. ಎಸ್. ಸಚ್ಚಿದಾನಂದ ಅವರಿಗೆ ಸರ್ಕಾರ ತಿಳಿಸಿದೆ.
ಗುಣಲಕ್ಷಣಗಳುಳ್ಳ ಸೋಂಕಿತರು
ಕರೊನಾ ಸೋಂಕು ತಗುಲಿದ್ದರೂ ಶೇ.90 ಜನರಲ್ಲಿ ಯಾವುದೇ ಗುಣಲಕ್ಷಣಗಳು ಇರುವುದಿಲ್ಲ. ಈ ಪೈಕಿ ಅನೇಕರಲ್ಲಿ ಯಾವುದೇ ಔಷಧದ ಅವಶ್ಯಕತೆಯೂ ಇಲ್ಲದಂತೆ ಅಥವಾ ಸಾಮಾನ್ಯ ಔಷಧದಿಂದಲೇ ಗುಣಮುಖರಾಗುತ್ತಾರೆ. ಆದರೆ ಇನ್ನುಳಿದ ಶೇ.10 ಜನರಲ್ಲಿ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆಯಂತಹ ಗುಣಲಕ್ಷಣಗಳಿರುತ್ತವೆ. ಇವರಲ್ಲಿ ಕಿಡ್ನಿ, ಹೃದಯ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಮಧುಮೇಹದಂತಹ ಸಮಸ್ಯೆಗಳುಳ್ಳವರಾದರೆ (ಕೋ ಮಾರ್ಬಿಡ್) ಕರೊನಾದಿಂದ ಗುಣಮುಖವಾಗುವ ಸಾಧ್ಯತೆ ಕಡಿಮೆಯಾಗುತ್ತ ಸಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕ್ಲಿನಿಕಲ್ ಟ್ರಯಲ್​ನಲ್ಲಿ ಭಾಗಿಯಾಗಿದ್ದ ಎಲ್ಲ 10 ಸೋಂಕಿತರೂ ಗುಣಲಕ್ಷಣಗಳುಳ್ಳ ಹಾಗೂ ಕೋಮಾರ್ಬಿಡ್ ಸ್ಥಿತಿಯಲ್ಲಿದ್ದವರಾದ್ದರಿಂದ ಔಷಧ ಎಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
ಆಯುರ್ವೆದಕ್ಕೆ ಹಳೆಯದು
ಸಾಂಕ್ರಾಮಿಕ ರೋಗಗಳ ನಿರ್ವಹಣೆ ಆಯುರ್ವೆದಕ್ಕೆ ಹೊಸತಲ್ಲ ಎಂದು ಸಿಟಿಆರ್​ಐಗೆ ನೀಡಿರುವ ವಿವರಣೆಯಲ್ಲಿ ಸಂಶೋಧಕರು ತಿಳಿಸಿದ್ದಾರೆ. ಪ್ರಾಚೀನ ವಿಜ್ಞಾನಿ, ಋಷಿಗಳು ಸಾಂಕ್ರಾಮಿಕ ರೋಗಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಿ ದ್ದಾರೆ. ಚರಕ, ಸಾಂಕ್ರಾಮಿಕ ರೋಗಗಳನ್ನು ಜನಪದೋಧ್ವಂಸ ಎಂಬ ಶೀರ್ಷಿಕೆಯಡಿ ಹಾಗೂ ಶುಶ್ರುತ, ಔಪಸರ್ಗಿಕ ರೋಗ ಎಂಬ ಶೀರ್ಷಿಕೆಯಡಿ ವಿವರಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿಕ್ಟೋರಿಯಾದಲ್ಲಿ ಸಂಶೋಧನೆ
ಭಾರತದ ಅನೇಕ ಆಯುರ್ವೆದ ವೈದ್ಯರು ಕರೊನಾಗೆ ತಮ್ಮ ಬಳಿ ಔಷಧವಿರುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನಿಯಮಾವಳಿಯಂತೆ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ವಿಧಾನದಂತೆ ವೈಜ್ಞಾನಿಕವಾಗಿ ಯಾವುದೇ ಸಂಶೋಧನೆ ದೃಢಪಟ್ಟಿರಲಿಲ್ಲ. 
ಬೆಂಗಳೂರಿನ ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರಿಗೆ ಪ್ರಯೋಗಾತ್ಮಕ ಚಿಕಿತ್ಸೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಐಸಿಎಂಆರ್ ಅಧೀನದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಸಂಶೋಧನೆಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. ಡಾ. ಗಿರಿಧರ ಕಜೆ ಮುಖ್ಯ ಸಂಶೋಧಕರಾದರೆ, ವಿಕ್ಟೋರಿಯಾ ಆಸ್ಪತ್ರೆಯ ಡಾ. ಸಿ.ಆರ್. ಜಯಂತಿ ಸಹ-ಸಂಶೋಧಕಿಯಾಗಿದ್ದರು.

Monday, 15 June 2020

ಯಾವುದೇ ಲಕ್ಷಣವಿಲ್ಲದೇ ನಿಮಗೆ ಕೊರೊನಾ ಬಂದಿರಬಹುದು ಎಚ್ಚರ..!

ಕೋವಿಡ್‌ ಸೋಂಕು ಪೀಡಿತರಲ್ಲಿ ಕೆಲವರಿಗೆ ಯಾವುದೇ ರೋಗಲಕ್ಷಣಗಳಿಲ್ಲ ಎನ್ನುವ ಸುದ್ದಿ ಕೇಳಿರಬಹುದು. ಇದು ನಿಜ. ಜಗತ್ತಿನ ಶೇ.40ರಿಂದ ಶೇ.45ರಷ್ಟು ರಷ್ಟು ಮಂದಿಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಕೋವಿಡ್‌ ಸೋಂಕು ದೃಢಪಟ್ಟಿದೆ.


ಹೀಗೆ ಕೋವಿಡ್‌ ರೋಗಲಕ್ಷಣಗಳಿಲ್ಲದೇ ಇರುyವುದು ಅಪಾಯಕಾರಿ ಎಂದು ಸಂಶೋಧನೆಯೊಂದು ಹೇಳಿದೆ.


Coronavirus causes: ಪ್ರಾಣವನ್ನೇ ತೆಗೆಯುವ ...

ಕೋವಿಡ್‌ ರೋಗಲಕ್ಷಣವಿಲ್ಲದಲ್ಲಿ ಅದು ಮನುಷ್ಯನ ದೇಹವನ್ನು ಇನ್ನಷ್ಟು ಹಾನಿ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಅಮೆರಿಕಾದ ಎರಿಕ್‌ ಟೊಪೊಲ್‌ ಮತ್ತು ಸಕ್ರಿಪ್ಸ್‌ ರಿಸರ್ಚ್‌ ಟ್ರಾನ್ಸ್‌ಲೇಷನಲ್‌ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ದತ್ತಾಂಶಗಳನ್ನು ಕಲೆ ಹಾಕಿ ಸಂಶೋಧನೆ ನಡೆಸಿದ್ದಾರೆ. ಈ ವರದಿಯನ್ನು ಆಯನಲ್ಸ್‌ ಆಫ್ ಇಂಟರ್ನಲ್‌ ಮೆಡಿಸಿನ್ಸ್‌ನಲ್ಲಿ ಪ್ರಕಟಿಸಲಾಗಿದೆ. ಸೋಂಕಿನ ಲಕ್ಷಣವಿಲ್ಲದವರೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿಸಲು ಕಾರಣವಾಗುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.



ಇದರೊಂದಿಗೆ ಸಾರ್ವತ್ರಿಕವಾಗಿ ಜನರನ್ನು ಪರೀಕ್ಷೆಗೊಳಪಡಿಸುವುದು, ಸೋಂಕಿನ ಮೂಲವನ್ನು ಗುರುತಿಸುವ, ಸಂಪರ್ಕಿತರನ್ನು ಗುರುತಿಸುವ ಕ್ರಮಗಳು ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಬಲ್ಲವು ಎಂದು ಹೇಳಲಾಗಿದೆ.


coronavirus in iraq: ಕೊರೊನಾ ಅಂಕಿಅಂಶಗಳನ್ನು ...

ಸಂಶೋಧನ ಲೇಖನದಲ್ಲಿ ಕೋವಿಡ್‌ ಪರೀಕ್ಷೆಯ ಪ್ರಾಮುಖ್ಯ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ರೋಗ ಲಕ್ಷಣಗಳು ಇಲ್ಲದಿದ್ದರೆ ಅದು ಅತ್ಯಂತ ಅಪಾಯಕಾರಿ. ಇದಕ್ಕಾಗಿ ಪರೀಕ್ಷೆಯ ಮಹತ್ವವನ್ನು ಹೇಳಲಾಗಿದೆ ಎಂದು ಸಂಶೋಧಕರೊಬ್ಬರು ಹೇಳಿದ್ದಾರೆ.


ಈ ಸಂಶೋಧನೆಗಾಗಿ ವಿಶ್ವದ 16 ದೇಶಗಳ ವಿವಿಧ ಪರೀಕ್ಷಾ ಕೇಂದ್ರಗಳಿಂದ ದತ್ತಾಂಶಗಳನ್ನು ಪಡೆದುಕೊಳ್ಳಲಾಗಿದೆ. ಜತೆಗೆ ನರ್ಸಿಂಗ್‌ ಹೋಂಗಳು, ಹಡಗಿನಲ್ಲಿ ಕೆಲಸ ಮಾಡುವವರು, ಜೈಲುಗಳಲ್ಲಿದ್ದವರ ಕುರಿತ ದತ್ತಾಂಶಗಳನ್ನೂ ಪಡೆದುಕೊಂಡು ಕೋವಿಡ್‌ ರೋಗ ಲಕ್ಷಣ ರಹಿತವಾಗಿರುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲದಿರುವ ಕೋವಿಡ್‌ ಪೀಡಿತರು ಸಾಮಾನ್ಯವಾಗಿ ಕಂಡು ಬಂದಿದ್ದಾರೆ ಎಂದು ಹೇಳಲಾಗಿದೆ.



ಇನ್ನು ಅಮೆರಿಕಾವೊಂದರಲ್ಲೇ ನಾಲ್ಕು ರಾಜ್ಯಗಳ 3 ಸಾವಿರ ಕೈದಿಗಳ ಮಾಹಿತಿ ಕಲೆಹಾಕಲಾಗಿದ್ದು, ಇವರಲ್ಲಿ ಶೇ.96ರಷ್ಟು ಮಂದಿ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ಸಂಶೋಧನೆ ಹೇಳಿದೆ.


ಹೀಗೆ ಯಾವುದೇ ರೋಗ ಲಕ್ಷಣಗಳಿಲ್ಲದವರು ಕೂಡ 14 ದಿನಗಳಿಗೂ ಹೆಚ್ಚಿನ ಅವಧಿಯಲ್ಲಿ ಸೋಂಕನ್ನು ಇತರರಿಗೆ ಹರಡಬಲ್ಲರು. ಇನ್ನು ದೇಹದಲ್ಲಿ ವೈರಸ್‌ ವೃದ್ಧಿಯ ಪ್ರಮಾಣ ರೋಗ ಲಕ್ಷಣ ಇರುವವರಲ್ಲೂ, ಇಲ್ಲದವರಲ್ಲೂ ಸಾಮಾನ್ಯವಾಗಿ ಒಂದೇ ರೀತಿ ಇರಬಹುದು ಎನ್ನಲಾಗಿದೆ.


ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ ...

ಅಲ್ಲದೇ ಸಂಶೋಧನೆ ವೇಳೆ ರೋಗ ಲಕ್ಷಣವಿಲ್ಲದೇ ಇರುವವರನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಗಿದ್ದು ಅವರ ಶ್ವಾಸಕೋಶದ ಕೆಲಸಗಳು ಅಸಮರ್ಪಕವಾಗಿರುವುದು ಕಂಡುಬಂದಿದೆ.


ಇಂತಹ ಸಮಸ್ಯೆಗಳನ್ನು ತಪ್ಪಿಸಲು ಎಲ್ಲರನ್ನೂ ಪರೀಕ್ಷೆಗೊಳಪಡಿಸುವುದು ಮತ್ತು ಒಂದು ನಿಗದಿತ ಕಾಲಾವಧಿಯಲ್ಲಿ ಮತ್ತೆ ಮತ್ತೆ ಪರೀಕ್ಷೆ ನಡೆಸಬೇಕಾದ ಅನಿವಾರ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.


Wednesday, 3 June 2020

ಕಿವಿಯಲ್ಲಿ ಈರುಳ್ಳಿ ತುಂಡು ಇಟ್ಟುಕೊಂಡು ಮಲಗಿದರೆ ಅದ್ಭುತ ಚಮತ್ಕಾರ

ಈ ಒಂದು ಟಿಪ್ಸ್ ಪಾಲಿಸಿದರೆ ನಿಮಗೆ ಯಾವತ್ತು ಕಿವಿಗೆ ಸಂಬಂಧಪಟ್ಟ ಸಮಸ್ಯೆಗಳು ಬರೋದಿಲ್ಲ. ಈ ಒಂದೇ ಒಂದು ಟಿಪ್ಸ್ ನಿಮ್ಮ ಕಿವಿಯ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತೆ. ಕಿವಿಯಲ್ಲಿ ಈರುಳ್ಳಿ ತುಂಡನ್ನು ಇಟ್ಟುಕೊಂಡು ಮಲಗಿದರೆ ಅಧ್ಬುತ ಚಮತ್ಕಾರ ಕಾಣಬಹುದು ಅದು ಏನು ಗೊತ್ತಾ ತಿಳಿಯಲು ಈ ಲೇಖನ ಓದಿ. ನೀವು ರಾತ್ರಿಯಲ್ಲಿ ನಿಮ್ಮ ಕಿವಿಯಲ್ಲಿ ಈರುಳ್ಳಿಯ ಒಂದು ತುಂಡು ಹಾಕಿಕೊಂಡು ಮಲಗಿದಾಗ ಏನಾಗುತ್ತದೆ ನಿಮಗೆ ಗೊತ್ತಾ? 



ಈರುಳ್ಳಿಯನ್ನು ಅನೇಕ ವಿಷಯಗಳಿಗೆ ಬಳಸಬಹುದು ಈರುಳ್ಳಿ ತಿನ್ನುವುದರ ಜೊತೆಗೇ ಅದನ್ನು ಅಡಿಗೆ ರುಚಿಯಂತೆ ಬಳಸುವರು. ಕಿವಿಯಲ್ಲಿನ ಅನೇಕ ಖಾಯಿಲೆಗಳನ್ನು ರಕ್ಷಣೆ ಪಡೆಯಲು ಈರುಳ್ಳಿಯನ್ನು ರಾತ್ರಿ ಸಮಯದಲ್ಲಿ ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಶೀತ ಕೆಮ್ಮು ಜ್ವರ ಮುಂತಾದ ಅನೇಕ ಖಾಯಿಲೆಗಳಿಂದ ರಕ್ಷಿಸಲು ಈರುಳ್ಳಿ ಪ್ರಯೋಜನಕಾರಿ ಆಗಿದೆ. ಕಿವಿಯಲ್ಲಿ ಈರುಳ್ಳಿಯ ಸಣ್ಣ ಖಾಂಡಗಳ ಇಡುವುದರ ಮೂಲಕ ಅನೇಕ ರೋಗಗಳಿಂದ ಮುಕ್ತ ಗೊಳಿಸಬಹುದು. ನೀವು ಕಿವಿ ನೋವಿನಿಂದ ಬಳಲುತ್ತಿದ್ದರೆ ಈ ಈರುಳ್ಳಿ ಅದರ ಮೇಲೆ ರಾಮ ಬಾಣದಂತೆ ಪರಿಹಾರ ನೀಡುವುದು.



ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿ ಒಳ ಭಾಗವನ್ನು ತೆಗೆದುಕೊಳ್ಳಬೇಕು ರಾತ್ರಿಯಲ್ಲಿ ನಿದ್ದೆ ಮಾಡುವ ಮೊದಲು ಕಿವಿಯ ತೆರೆದ ಪರದೆಯ ಮೇಲೆ ಈರುಳ್ಳಿಯ ಒಳ ಭಾಗವನ್ನು ಇರಿಸಿ ಬೆಳಗ್ಗೆ ಏಳುವ ಮುಂಚೆ ನಿಮ್ಮ ಕಿವಿಯ ನೋವು ಮಾಯವಾಗುವುದು ನಿಶ್ಚಿತ. ಈ ಪರಿಹಾರವನ್ನು ನೈಸರ್ಗಿಕವಾಗಿ ಬಳಸಲಾಗುತ್ತದೆ ಮತ್ತು ರಾತ್ರಿಯಲ್ಲಿ ಆಗುವ ಅನೇಕ ಕಿವಿಯ ವಿಧದ ನೋವು ಮತ್ತು ಉರಿಯನ್ನು ದೂರ ಗೊಳಿಸುತ್ತದೆ. ಈರುಳ್ಳಿ ಪಾಸ್ಫೇರಿಕ್ ಆಮ್ಲವನ್ನು ಹೊಂದಿರುತ್ತದೆ ಇದು ಯಾವುದೇ ರೀತಿಯ ಕಿವಿಯ ನೋವನ್ನು ಅಥವಾ ಉರಿತವನ್ನು ಹೊಡೆದೋಡಿಸುತ್ತೆ. ನಿಮ್ಮ ಕಿವಿಯಲ್ಲಿ ತೀವ್ರವಾದ ನೋವನ್ನೂ ಹೊಂದಿದ್ದರೆ ಅಥವಾ ಕಿವಿಯಲ್ಲಿ ಸಾಕಷ್ಟು ಪ್ರಮಾಣದ ಕಸ ತುಂಬಿದ್ದರೆ ನೀವು ಈ ಪ್ರಕಾರವಾಗಿ ಎಲ್ಲ ಸಮಸ್ಯೆಗಳಿಗೆ ತಡೆ ಹಾಕಬಹುದು. ಈರುಳ್ಳಿಯಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಪಾಸ್ಪರಿಕ್ ಆಸಿಡ್ ನಿಮ್ಮ ಕಿವಿಗಳನ್ನು ಸ್ವಚ್ಚವಾಗಿ ಮತ್ತು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ. ಇದು ಯಾವುದೇ ರೀತಿಯ ಸಮಸ್ಯೆಯ ವಿರುದ್ಧ ಪ್ರತಿರೋಧ ಶಕ್ತಿಯಂತೆ ಕಾರ್ಯವನ್ನು ಮಾಡುವುದು.



ಇದು ಅಗ್ಗದ ಮತ್ತು ಸುಲಭ ಪರಿಹಾರದ ಮಾರ್ಗವಾಗಿದೆ. ನಿಮ್ಮ ಮನೆಯಲ್ಲಿ ನೀವು ಅದನ್ನು ಸುಲಭವಾಗಿ ಬಳಸಬಹುದು ಮತ್ತು ಕಿವಿಯ ಸಮಸ್ಯೆಗೆ ಆಸ್ಪತ್ರೆಗೆ ಕೊಡುವ ಸಂಧರ್ಭ ಬರುವುದಿಲ್ಲ. ಆದರೆ ಒಂದೇ ಒಂದು ಸಮಸ್ಯೆ ಎದುರಿಸಬೇಕಾಗಿ ಬರುವುದು ಅದು ಏನೆಂದರೆ ನೀವು ರಾತ್ರಿ ಪೂರ್ತಿ ಈರುಳ್ಳಿಯ ವಾಸನೆ ಸಹಿಸಿಕೊಳ್ಳಬೇಕು ಅಷ್ಟೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಉಪಯುಕ್ತ ಅನಿಸಿದರೆ ದಯವಿಟ್ಟು ಇದನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಬಂಧುಗಳಿಗೆ ತಿಳಿಸಿರಿ ಹಾಗೂ ಈ ಆರೋಗ್ಯಕರ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ಶೇರ್ ಮಾಡಿರಿ.

ಪ್ರತಿದಿನ ಕ್ಯಾರೆಟ್ ಸೇವಿಸಿ‌ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಿ.

ನೈಸರ್ಗಿಕವಾಗಿ ಸಿಹಿ ಮತ್ತು ರುಚಿಕರವಾಗಿರುವ ಕ್ಯಾರೆಟ್ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವಾಗುವ ತರಕಾರಿ. ಏಕೆಂದರೆ ಇದನ್ನು ಬೇಯಿಸದೇ ಹಾಗೆಯೇ ಹಸಿಯಾಗಿ ಕೂಡ ಸೇವಿಸಬಹುದಾದಂತಹ ಮತ್ತು ಅತ್ಯಂತ ಹೆಚ್ಚಿನ ರೀತಿಯ ಪೌಷ್ಟಿಕಾಂಶವನ್ನು ಹೊಂದಿರುವಂತದ್ದಾಗಿದೆ. ಇದನ್ನು ಎಲ್ಲಾ ದೇಶದಲ್ಲಿಯೂ ಬೆಳೆಯುತ್ತಾರೆ.

Carrots Nutrition, Health Benefits, Recipes and Carrot Juice - Dr. Axe

ಇದರಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಯಥೇಚ್ಛವಾಗಿದ್ದು, ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುವುದಲ್ಲದೇ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕ್ಯಾರೋಟಿನ್ ಅಂಶವು ಆಯಂಟಿಆಕ್ಸಿಡೆಂಟ್ ಗುಣವನ್ನು ಹೊಂದಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

Scientists Identify Gene Linked to Thinness – Unique to People ...


ಕ್ಯಾರೆಟ್ ನಲ್ಲಿ ಸುಲಭವಾಗಿ ಕರಗಬಲ್ಲ ಫೈಬರ್ ಅಂಶವೂ ಇರುವುದರಿಂದ ಜೀರ್ಣಕ್ರಿಯೆಯಲ್ಲಿ ಸಕ್ಕರೆ ಮತ್ತು ಪಿಷ್ಟದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕರಗದೇ ಇರುವ ಫೈಬರ್ ಕೂಡ ಇದೆ. ಅದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಮಾತ್ರ ಅಲ್ಲಾ ಅದರ ಎಲೆಗಳನ್ನು ಸಹ ತಿನ್ನಬಹುದು. ಈ ಎಲೆಗಳು ಪ್ರೋಟೀನ್, ವಿಟಮಿನ್ಸ್, ಖನಿಜಾಂಶಗಳಿಂದ ಸಮೃದ್ಧವಾಗಿದ್ದು ಪ್ರತ್ಯೇಕ ರುಚಿಯನ್ನು ಹೊಂದಿದೆ.

ಪ್ರತಿದಿನ ಕ್ಯಾರೆಟ್ ಸೇವಿಸಿ‌ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಿ.

ನೈಸರ್ಗಿಕವಾಗಿ ಸಿಹಿ ಮತ್ತು ರುಚಿಕರವಾಗಿರುವ ಕ್ಯಾರೆಟ್ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವಾಗುವ ತರಕಾರಿ. ಏಕೆಂದರೆ ಇದನ್ನು ಬೇಯಿಸದೇ ಹಾಗೆಯೇ ಹಸಿಯಾಗಿ ಕೂಡ ಸೇವಿಸಬಹುದಾದಂತಹ ಮತ್ತು ಅತ್ಯಂತ ಹೆಚ್ಚಿನ ರೀತಿಯ ಪೌಷ್ಟಿಕಾಂಶವನ್ನು ಹೊಂದಿರುವಂತದ್ದಾಗಿದೆ. ಇದನ್ನು ಎಲ್ಲಾ ದೇಶದಲ್ಲಿಯೂ ಬೆಳೆಯುತ್ತಾರೆ.


Carrots Nutrition, Health Benefits, Recipes and Carrot Juice - Dr. Axe


ಇದರಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಯಥೇಚ್ಛವಾಗಿದ್ದು, ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುವುದಲ್ಲದೇ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕ್ಯಾರೋಟಿನ್ ಅಂಶವು ಆಯಂಟಿಆಕ್ಸಿಡೆಂಟ್ ಗುಣವನ್ನು ಹೊಂದಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.


Scientists Identify Gene Linked to Thinness – Unique to People ...



ಕ್ಯಾರೆಟ್ ನಲ್ಲಿ ಸುಲಭವಾಗಿ ಕರಗಬಲ್ಲ ಫೈಬರ್ ಅಂಶವೂ ಇರುವುದರಿಂದ ಜೀರ್ಣಕ್ರಿಯೆಯಲ್ಲಿ ಸಕ್ಕರೆ ಮತ್ತು ಪಿಷ್ಟದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕರಗದೇ ಇರುವ ಫೈಬರ್ ಕೂಡ ಇದೆ. ಅದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಮಾತ್ರ ಅಲ್ಲಾ ಅದರ ಎಲೆಗಳನ್ನು ಸಹ ತಿನ್ನಬಹುದು. ಈ ಎಲೆಗಳು ಪ್ರೋಟೀನ್, ವಿಟಮಿನ್ಸ್, ಖನಿಜಾಂಶಗಳಿಂದ ಸಮೃದ್ಧವಾಗಿದ್ದು ಪ್ರತ್ಯೇಕ ರುಚಿಯನ್ನು ಹೊಂದಿದೆ.


ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿ ಎಸಳು ತಿಂದ್ರೆ ಏನಾಗುತ್ತೆ ಗೊತ್ತಾ? Useful Info

ಸ್ನೇಹಿತರೇ ಸಾಮಾನ್ಯವಾಗಿ ನಾವು ದಿನನಿತ್ಯ ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಎಷ್ಟೊಂದು ಉಪಯೋಗಗಳಿವೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಆದರೆ ಸಾಮಾನ್ಯವಾಗಿ ಅಡುಗೆ ಮಾಡುವಾಗ ಬಳಸುವಂಥ ಎಲ್ಲ ಪದಾರ್ಥಗಳಲ್ಲೂ ಕೂಡ ಒಂದಲ್ಲ ಒಂದು ರೀತಿಯ ದಂತಹ ವೈಜ್ಞಾನಿಕ ಕಾರಣಗಳನ್ನು ಇಟ್ಟುಕೊಂಡು ನಾವು ಅವುಗಳನ್ನು ಬಳಸುತ್ತೇವೆ ಅಂತಂದೆ ಒಂದು ಪ್ರಮುಖವಾದ ಪದಾರ್ಥ ಎಂದರೆ ಬೆಳ್ಳುಳ್ಳಿ.

ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ದಿನನಿತ್ಯ ಅಡುಗೆಯಲ್ಲಿ ಬಳಸುವುದು ಸಾಮಾನ್ಯವಾಗಿದೆ ಅದೇ ಈ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದಾಗಿ ಏನೆಲ್ಲ ಉಪಯೋಗಗಳಿವೆ ಎಂಬುದು ನಮಗೆ ತಿಳಿದಿರುವುದಿಲ್ಲ ಅದರ ಬಗ್ಗೆ ಈ ದಿನ ನಾನು ನಿಮಗೆ ಮಾಹಿತಿಯನ್ನು ನೀಡುತ್ತೇನೆ ಅದು ಕೇವಲ ಒಂದೇ ಒಂದು ಎಸಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದಾಗಿ ಏನೆಲ್ಲಾ ಉಪಯೋಗಗಳಿವೆ ಗೊತ್ತೇ. ಸ್ನೇಹಿತರೆ ಇದು ಸಾಮಾನ್ಯವಾಗಿ ಹತ್ತಾರು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಅದರ ಜೊತೆಯಲ್ಲಿ ನಮ್ಮನ್ನು ಕಾಡುವಂತಹ ಅನೇಕ ಕಾಯಿಲೆಗಳು ಮತ್ತು ಗುಪ್ತ ಸಮಸ್ಯೆಗಳನ್ನು ಇದು ದೂರಮಾಡುತ್ತದೆ ಪ್ರಕೃತಿದತ್ತವಾದ ಬೆಳ್ಳುಳ್ಳಿ ಯಿಂದಾಗಿ ಯಾವುದೇ ರೀತಿಯಾದಂತ ಅಡ್ಡ ಪರಿಣಾಮ ಇಲ್ಲ ಎಂಬುದು ನಮಗೆ ತಿಳಿದಿದೆ.

ಈ ಬೆಳ್ಳುಳ್ಳಿಯನ್ನು ದಿನನಿತ್ಯ ಆಹಾರದಲ್ಲಿ ಸೇವಿಸುವುದರಿಂದ ರುಚಿ ಕೂಡ ಹೆಚ್ಚಾಗುತ್ತದೆ ಮತ್ತು ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ ಪ್ರತಿದಿನ ಒಂದೇ ಒಂದು ಹೆಸಳು ಸೇವಿಸುವುದರಿಂದಾಗಿ ಅನೇಕ ರೀತಿಯ ಚಮತ್ಕಾರ ಉಂಟಾಗುತ್ತದೆ ಬೆಳಗ್ಗೆ ತಿಂಡಿ ತಿನ್ನುವುದಕ್ಕಿಂತ ಮುಂಚೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆ್ಯಂಟಿ ಬಯೋಟಿಕ್ ಅಗಿ ಬೆಳ್ಳುಳ್ಳಿ ಕೆಲಸ ಮಾಡುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ದಂತಹ ಸಂಶಯವಿಲ್ಲ ಮತ್ತು ಬೆಳ್ಳುಳ್ಳಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದೇ ರೀತಿಯಾದಂತಹ ಬ್ಯಾಕ್ಟೀರಿಯಾಗಳು ನಮ್ಮ ಹೊಟ್ಟೆಯಲ್ಲಿ ಇರದ ರೀತಿಯಲ್ಲಿ ನೋಡಿಕೊಳ್ಳಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

 



ಬೆಳಗ್ಗೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ ಮತ್ತು ಕರುಳು ಸಕ್ರಿಯವಾಗಿ ಕೆಲಸವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದೊಂದು ರಾಮಬಾಣದಂತೆ ಕೆಲಸ ಮಾಡುತ್ತದೆ ಅಸ್ತಮಾ ನಿಮೋನಿಯಾದಂತಹ ಕಾಯಿಲೆಗಳ ವಿರುದ್ಧ ಇದು ಕೆಲಸವನ್ನು ನಿರ್ವಹಿಸುತ್ತದೆ. ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ಹೃದಯ ಸಂಬಂಧಿ ಹೊಟ್ಟೆಗೆ ಸಂಬಂಧಿಸಿದಂತೆ ಮತ್ತು ಹೃದಯಕ್ಕೆ ಸಂಬಂಧಿಸಿದಂತಹ ಕಾಯಿಲೆಗಳಿಂದ ನಮ್ಮನ್ನು ದೂರ ಇಡುತ್ತದೆ. ಉಸಿರಾಡಲು ಕಷ್ಟವಾಗುತ್ತದೆ ಮತ್ತು ಚರ್ಮ ಸುಕ್ಕಾಗುತ್ತದೆ ಇವುಗಳಿಗೆಲ್ಲ ಪರಿಹಾರವನ್ನು ಇದು ಒದಗಿಸುತ್ತದೆ.


ಸಾಮಾನ್ಯವಾಗಿ ವ್ಯಕ್ತಿಗಳಿಗೆ ಇರುವಂತಹ ಗುಪ್ತ ಕಾಯಿಲೆಗಳಿಂದ ಮುಕ್ತಿಯನ್ನು ಬೆಳ್ಳುಳ್ಳಿ ಉಪಯೋಗಿಸುವುದರಿಂದ ಪಡೆಯಬಹುದು ಮತ್ತು ಇದು ಅತಿ ಹೆಚ್ಚಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಒಂದೇ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಇಷ್ಟೊಂದು ಉಪಯೋಗ ಇದೆ ಎಂದ ಮೇಲೆ ಒಂದು ಬಾರಿ ಪ್ರಯತ್ನಿಸುವುದರಲ್ಲಿ ತಪ್ಪು ಇಲ್ಲ ಆದರೆ ಬೆಳ್ಳುಳ್ಳಿಯನ್ನು ತಿಂದರೆ ತಲೆನೋವು ಬರುತ್ತದೆ ಎಂಬುವವರು ಇದನ್ನು ಸೇವಿಸದೆ ದೂರ ಇರುವುದು ಉತ್ತಮ ಧನ್ಯವಾದಗಳು ಶುಭ ದಿನ.



 

Monday, 1 June 2020

ನರ ದೌರ್ಬಲ್ಯವನ್ನು ನಿವಾರಿಸುವ ಜೊತೆಗೆ, ವೀರ್ಯವನ್ನು ವೃದ್ಧಿಸುವ ಹಲಸಿನಹಣ್ಣು.!

ನರ ದೌರ್ಬಲ್ಯವನ್ನು ನಿವಾರಿಸುವ ಜೊತೆಗೆ ...
ಸಾಮಾನ್ಯವಾಗಿ ಕೆಲವೊಂದು ಹಣ್ಣುಗಳನ್ನು ಪ್ರತಿದಿನ ತಿನ್ನುತ್ತಿರುತ್ತೇವೆ ಆದ್ರೆ, ಅವುಗಳಿಂದ ನಮ್ಮ ದೇಹಕ್ಕೆ ಸಿಗುವಂತ ಆರೋಗ್ಯಕಾರಿ ಲಾಭಗಳನ್ನು ತಿಳಿದುಕೊಂಡಿರುವುದಿಲ್ಲ. ಹಲಸಿನ ಹಣ್ಣು ಸೇವನೆಯಿಂದ ಎಷ್ಟೊಂದು ಲಾಭವಿದೆ ಅನ್ನೋದನ್ನ ಒಮ್ಮೆ ತಿಳಿದುಕೊಳ್ಳಿ.

ಹಲಸಿನ ಹಣ್ಣಿನ ತೊಳೆಗಳನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಎನರ್ಜಿ ಜೊತೆಗೆ ಬಲ ವೃದ್ಧಿಯಾಗುತ್ತದೆ, ಹಾಗು ನರಗಳ ದೌರ್ಬಲ್ಯ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ಹಲಸಿನ ಹಣ್ಣು ತಿನ್ನೋದ್ರಿಂದ ವೀರ್ಯಾಣು ವೃದ್ಧಿಯಾಗುತ್ತದೆ.

ಇರುಳುಗಣ್ಣು ಸಮಸ್ಯೆ ಇದ್ರೆ ಹಲಸಿನ ಹಣ್ಣು ತಿನ್ನೋದ್ರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಇನ್ನು ಹಲವು ಆರೋಗ್ಯಕಾರಿ ಅಂಶಗಳನ್ನು ಹಲಸಿನ ಹಣ್ಣು ಹೊಂದಿದೆ. ಇದರ ಸೇವನೆ ಮಿತವಾಗಿರಲಿ ಅತಿಯಾಗಿ ತಿಂದರೆ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಹಲಸಿನ ಹಣ್ಣಿನ ಉಪಯೋಗಗಳು ನಿಮಗೆ ಇಷ್ಟ ಆಗಿದ್ದಲ್ಲಿ ಬೇರೆಯವರಿಗೂ ಕೂಡ ತಿಳಿಸಿ ಇದರ ಲಾಭಗಳನ್ನು ಪಡೆದು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲಿ.

ನರ ದೌರ್ಬಲ್ಯವನ್ನು ನಿವಾರಿಸುವ ಜೊತೆಗೆ, ವೀರ್ಯವನ್ನು ವೃದ್ಧಿಸುವ ಹಲಸಿನಹಣ್ಣು.!

ಸಾಮಾನ್ಯವಾಗಿ ಕೆಲವೊಂದು ಹಣ್ಣುಗಳನ್ನು ಪ್ರತಿದಿನ ತಿನ್ನುತ್ತಿರುತ್ತೇವೆ ಆದ್ರೆ, ಅವುಗಳಿಂದ ನಮ್ಮ ದೇಹಕ್ಕೆ ಸಿಗುವಂತ ಆರೋಗ್ಯಕಾರಿ ಲಾಭಗಳನ್ನು ತಿಳಿದುಕೊಂಡಿರುವುದಿಲ್ಲ. ಹಲಸಿನ ಹಣ್ಣು ಸೇವನೆಯಿಂದ ಎಷ್ಟೊಂದು ಲಾಭವಿದೆ ಅನ್ನೋದನ್ನ ಒಮ್ಮೆ ತಿಳಿದುಕೊಳ್ಳಿ.


ಹಲಸಿನ ಹಣ್ಣಿನ ತೊಳೆಗಳನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಎನರ್ಜಿ ಜೊತೆಗೆ ಬಲ ವೃದ್ಧಿಯಾಗುತ್ತದೆ, ಹಾಗು ನರಗಳ ದೌರ್ಬಲ್ಯ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ಹಲಸಿನ ಹಣ್ಣು ತಿನ್ನೋದ್ರಿಂದ ವೀರ್ಯಾಣು ವೃದ್ಧಿಯಾಗುತ್ತದೆ.

ಇರುಳುಗಣ್ಣು ಸಮಸ್ಯೆ ಇದ್ರೆ ಹಲಸಿನ ಹಣ್ಣು ತಿನ್ನೋದ್ರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಇನ್ನು ಹಲವು ಆರೋಗ್ಯಕಾರಿ ಅಂಶಗಳನ್ನು ಹಲಸಿನ ಹಣ್ಣು ಹೊಂದಿದೆ. ಇದರ ಸೇವನೆ ಮಿತವಾಗಿರಲಿ ಅತಿಯಾಗಿ ತಿಂದರೆ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಹಲಸಿನ ಹಣ್ಣಿನ ಉಪಯೋಗಗಳು ನಿಮಗೆ ಇಷ್ಟ ಆಗಿದ್ದಲ್ಲಿ ಬೇರೆಯವರಿಗೂ ಕೂಡ ತಿಳಿಸಿ ಇದರ ಲಾಭಗಳನ್ನು ಪಡೆದು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲಿ.

ಪುರುಷರ ಶಕ್ತಿ ವರ್ಧಕ ಹಲಸಿನಹಣ್ಣು, ಎಷ್ಟೆಲ್ಲ ಔಷದಿ ಗುಣಗಳಿವೆ!

ಪುರುಷರ ಶಕ್ತಿ ವರ್ಧಕ ಹಲಸಿನಹಣ್ಣು, ಎಷ್ಟೆಲ್ಲ ಔಷದಿ ಗುಣಗಳಿವೆ!

ನರ ದೌರ್ಬಲ್ಯವನ್ನು ನಿವಾರಿಸುವ ಜೊತೆಗೆ ...
ಹಲಸಿನಹಣ್ಣು ಒಂದು ಸೀಸನ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಹಣ್ಣಿನಲ್ಲಿ ಯಾವೆಲ್ಲ ಪ್ರಯೋಜನಕಾರಿ ಅಂಶಗಳಿವೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಹಲಸಿನಹಣ್ಣು ಮೂಲತಃ ಭಾರತೀಯ ಹಣ್ಣಾಗಿದ್ದು ಇದನ್ನು ಇಂಗ್ಲಿಷ್ ನಲ್ಲಿ ಜಾಕ್ ಪ್ರುಟ್ ಎಂಬುದಾಗಿ ಕರೆಯಲಾಗುತ್ತದೆ.

ಹಲಸಿನ ಹಣ್ಣಿನಲ್ಲಿರುವಂತ ಔಷದಿ ಗುಣಗಳು: ಚೀನಾದಲ್ಲಿ ಹಲಸಿನಹಣ್ಣನ್ನು ಶಕ್ತಿ ವರ್ಧಕ ಟಾನಿಕ್ ಆಗಿ ಬಳಸಲಾಗುತ್ತದೆ, ಇನ್ನು ಹಲಸಿನ ಹಣ್ಣು ಮಧ್ಯ ಸೇವನೆಯ ದುಷ್ಪರಿಣಾಮಗಳನ್ನು ಕಡಿಮೆ ಗೊಳಿಸುತ್ತದೆ ಎಂಬುದನ್ನು ಸಂಶೋಧನೆಯ ಮೂಲಕ ತಿಳಿಯಲಾಗಿದೆ.

ಹಲಸಿನ ಬೀಜಗಳನ್ನು ಹುರಿದು ಬೆಲ್ಲದ ಜತೆ ಸೇವಿಸಿದರೆ ವೀರ್ಯ ವೃದ್ಧಿಯಾಗುವದು, ಅಷ್ಟೇ ಅಲ್ಲದೆ ಹಲಸಿನ ಎಲೆಯನ್ನು ಸುತ್ತು ಕರಕು ಮಾಡಿ ಕೊಬ್ಬರಿ ಎಣ್ಣೆ ಜತೆ ಮಿಶ್ರಮಾಡಿ ಹಚ್ಚಿದರೆ ಗಾಯಗಳು ಒಣಗುತ್ತವೆ.

ಜ್ವರ ಹಾಗು ಭೇದಿಯ ಸಂದರ್ಭಗಳಲ್ಲಿ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಒಳ್ಳೆಯದು. ಹಲಸಿನ ಎಲೆಯನ್ನು ಬಿಸಿಮಾಡಿ ಕುರು ಗದ್ದೆ ಮುಂತಾದುವುಗಳ ಮೇಲೆ ಕಟ್ಟಿದರೆ ಅವು ಬೇಗ ಒಡೆಯುತ್ತದೆ ಗಯಾ ಮಾಯುತ್ತದೆ. ಹೀಗೆ ಹತ್ತಾರು ಪ್ರಯೋಜನಗಳನ್ನು ಹಲಸಿನಿಂದ ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ಹಲಸಿನಹಣ್ಣು ತಿನ್ನುವುದು ಒಳ್ಳೆಯದು.

ಪುರುಷರ ಶಕ್ತಿ ವರ್ಧಕ ಹಲಸಿನಹಣ್ಣು, ಎಷ್ಟೆಲ್ಲ ಔಷದಿ ಗುಣಗಳಿವೆ!

ಪುರುಷರ ಶಕ್ತಿ ವರ್ಧಕ ಹಲಸಿನಹಣ್ಣು, ಎಷ್ಟೆಲ್ಲ ಔಷದಿ ಗುಣಗಳಿವೆ!


ಹಲಸಿನಹಣ್ಣು ಒಂದು ಸೀಸನ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಹಣ್ಣಿನಲ್ಲಿ ಯಾವೆಲ್ಲ ಪ್ರಯೋಜನಕಾರಿ ಅಂಶಗಳಿವೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಹಲಸಿನಹಣ್ಣು ಮೂಲತಃ ಭಾರತೀಯ ಹಣ್ಣಾಗಿದ್ದು ಇದನ್ನು ಇಂಗ್ಲಿಷ್ ನಲ್ಲಿ ಜಾಕ್ ಪ್ರುಟ್ ಎಂಬುದಾಗಿ ಕರೆಯಲಾಗುತ್ತದೆ.

ಹಲಸಿನ ಹಣ್ಣಿನಲ್ಲಿರುವಂತ ಔಷದಿ ಗುಣಗಳು: ಚೀನಾದಲ್ಲಿ ಹಲಸಿನಹಣ್ಣನ್ನು ಶಕ್ತಿ ವರ್ಧಕ ಟಾನಿಕ್ ಆಗಿ ಬಳಸಲಾಗುತ್ತದೆ, ಇನ್ನು ಹಲಸಿನ ಹಣ್ಣು ಮಧ್ಯ ಸೇವನೆಯ ದುಷ್ಪರಿಣಾಮಗಳನ್ನು ಕಡಿಮೆ ಗೊಳಿಸುತ್ತದೆ ಎಂಬುದನ್ನು ಸಂಶೋಧನೆಯ ಮೂಲಕ ತಿಳಿಯಲಾಗಿದೆ.


ಹಲಸಿನ ಬೀಜಗಳನ್ನು ಹುರಿದು ಬೆಲ್ಲದ ಜತೆ ಸೇವಿಸಿದರೆ ವೀರ್ಯ ವೃದ್ಧಿಯಾಗುವದು, ಅಷ್ಟೇ ಅಲ್ಲದೆ ಹಲಸಿನ ಎಲೆಯನ್ನು ಸುತ್ತು ಕರಕು ಮಾಡಿ ಕೊಬ್ಬರಿ ಎಣ್ಣೆ ಜತೆ ಮಿಶ್ರಮಾಡಿ ಹಚ್ಚಿದರೆ ಗಾಯಗಳು ಒಣಗುತ್ತವೆ.

ಜ್ವರ ಹಾಗು ಭೇದಿಯ ಸಂದರ್ಭಗಳಲ್ಲಿ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಒಳ್ಳೆಯದು. ಹಲಸಿನ ಎಲೆಯನ್ನು ಬಿಸಿಮಾಡಿ ಕುರು ಗದ್ದೆ ಮುಂತಾದುವುಗಳ ಮೇಲೆ ಕಟ್ಟಿದರೆ ಅವು ಬೇಗ ಒಡೆಯುತ್ತದೆ ಗಯಾ ಮಾಯುತ್ತದೆ. ಹೀಗೆ ಹತ್ತಾರು ಪ್ರಯೋಜನಗಳನ್ನು ಹಲಸಿನಿಂದ ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ಹಲಸಿನಹಣ್ಣು ತಿನ್ನುವುದು ಒಳ್ಳೆಯದು.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...