
Thursday, 2 July 2020
ಒಡವೆ ಖರೀದಿದಾರರಿಗೆ ಬಂಪರ್ ನ್ಯೂಸ್ : ಚಿನ್ನ 575 ರೂ. - ಬೆಳ್ಳಿ ಬರೋಬರಿ 1075 ರೂಪಾಯಿ ಕಡಿಮೆಯಾಗಿದೆ.!

Tuesday, 30 June 2020
ನವೆಂಬರ್‌ವರೆಗೆ ಮುಂದಿನ 5 ತಿಂಗಳು ಉಚಿತ ಅಕ್ಕಿ-ಬೇಳೆ ನೀಡಲಿದೆ ಕೇಂದ್ರ.!



Monday, 29 June 2020
ಚೀನಾ ಯೋಧರ ತೊಡೆಮುರಿ ಕಟ್ಟಲು ಭಾರತದ ಘಾತಕ್ ಕಮ್ಯಾಂಡ್‍ಗಳ ನಿಯೋಜನೆಯಾಗಿದೆ.! ಈ ಕಮ್ಯಾಂಡ್‌ಗಳು ಹೇಗಿರಲಿವೆ ಗೊತ್ತಾ?




ಟಿಕ್ ಟಾಕ್ ಸಹಿತ ಕೇಂದ್ರ ಬ್ಯಾನ್ ಮಾಡಿರುವ 59 ಚೈನೀಸ್ ಆಯಪ್ ಗಳ ಪಟ್ಟಿ ಇಲ್ಲಿದೆ ನೋಡಿ..!


Shareit
Kwai
UC Browser
Baidu map
Shein
Clash of Kings
DU battery saver
Helo
Likee
YouCam makeup
Mi Community
CM Browers
Virus Cleaner
APUS Browser
ROMWE
Club Factory
Newsdog
Beutry Plus
UC News
QQ Mail
Xender
QQ Music
QQ Newsfeed
Bigo Live
SelfieCity
Mail Master
Parallel Space
Mi Video Call Xiaomi
WeSync
ES File Explorer
Viva Video QU Video Inc
Meitu
Vigo Video
New Video Status
DU Recorder
Vault- Hide
Cache Cleaner DU App studio
DU Cleaner
DU Browser
Hago Play With New Friends
Cam Scanner
Clean Master Cheetah Mobile
Wonder Camera
Photo Wonder
QQ Player
We Meet
Sweet Selfie
Baidu Translate
Vmate
QQ International
QQ Security Center
QQ Launcher
U Video
V fly Status Video
Mobile Legends
DU Privacy
Big Breaking: 'ಟಿಕ್‌ಟಾಕ್' ಜೊತೆ ಚೀನಾದ 59 ಅಪ್ಲಿಕೇಶನ್ ಬ್ಯಾನ್ : ಕೇಂದ್ರ ಸರ್ಕಾರದಿಂದ ಬಿಗ್ ಶಾಕ್


ಸ್ಥಳೀಯ ಉತ್ಪನ್ನ ಖರೀದಿಸಿದರೆ ದೇಶಕ್ಕೆ ಬಲ: ಪ್ರಧಾನಿ ಮೋದಿ
Sunday, 28 June 2020
ಕೊರೊನಾ ಬಗ್ಗೆ 10 ವರ್ಷ ಮುಂಚೆಯೇ ಮುನ್ಸೂಚನೆ ನೀಡಿತ್ತು ಈ ಸಿನಿಮಾ.!






Friday, 26 June 2020
`CET' ಪರೀಕ್ಷೆ ಕುರಿತಂತೆ ಇಲ್ಲಿದೆ ಪ್ರಮುಖ ಸುದ್ಧಿ..!


Thursday, 25 June 2020
ಮತ್ತೆ ʼಲಾಕ್ ಡೌನ್ʼ ಆಗುತ್ತಾ? ಇಲ್ವಾ? ಇಲ್ಲಿದೆ ಪ್ರಮುಖ ಮಾಹಿತಿ

Monday, 15 June 2020
ನೀವೂ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಟಾಪಿಕ್ ನೀಡಬಹುದು..!
ಪ್ರತಿ ತಿಂಗಳು ಕೊನೆಯ ಭಾನುವಾರ ಪ್ರಸಾರವಾಗುವ ಮನ್ ಕಿ ಬಾತ್ ನಲ್ಲಿ ಮಾತನಾಡಲು ಹೊಸ ಆಲೋಚನೆ ಮತ್ತು ವಿಷಯಗಳನ್ನು ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.
ಈ ತಿಂಗಳ ಮನ್ ಕಿ ಬಾತ್ ಜೂನ್ 28ಕ್ಕೆ ಪ್ರಸಾರವಾಗಲಿದೆ. ಅದಕ್ಕೆ ಇನ್ನು ಎರಡು ವಾರ ಬಾಕಿ ಇರುವಾಗಲೇ ನಿಮ್ಮ ಆಲೋಚನೆಗಳು, ವಿಷಯಗಳನ್ನು ನನ್ನ ಜೊತೆ ಹಂಚಿಕೊಳ್ಳಿ. ಇದರಿಂದ ನನಗೆ ಮತ್ತಷ್ಟು ಹೆಚ್ಚು ವಿಷಯಗಳ ಬಗ್ಗೆ ಮಾತನಾಡಲು ಕಮೆಂಟ್, ಫೋನ್ ಕಾಲ್ ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಕೋವಿಡ್-19 ಜೊತೆಗೆ ಸಾಕಷ್ಟು ಇನ್ನೂ ಹಲವು ವಿಷಯಗಳು ನಿಮ್ಮ ಬಳಿ ಇರಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಜನರು ಸಲಹೆ ನೀಡಲು ಸಂಖ್ಯೆಯೊಂದನ್ನು ನೀಡಿದ್ದು ಅದರಲ್ಲಿ ನಾಗರಿಕರು ರೆಕಾರ್ಡ್ ಮಾಡಿರುವ ಸಂದೇಶಗಳನ್ನು ಕಳುಹಿಸಬಹುದು.ನಮೊ ಆಪ್ ಅಥವಾ ಮೈಗವರ್ಮೆಂಟ್ ಮೂಲಕ ಸಹ ಕಳುಹಿಸಬಹುದು ಎಂದಿದ್ದಾರೆ.
Narendra Modi✔@narendramodiYour ideas have always been the strength of #MannKiBaat, making it a vibrant platform that showcases the strengths of 130 crore Indians!Record your message:
Dial 1800-11-7800
Write on:
NaMo App.
MyGov Open Forum. https://www.mygov.in/group-issue/inviting-ideas-pm-narendra-modis-mann-ki-baat-28th-june-2020/ …Inviting Ideas for PM Narendra Modi's Mann Ki Baat on 28th June, 2020
PM Narendra Modi looks forward to sharing his thoughts on themes and issues that matter to you. The Prime Minister invites you to share your ideas on topics he should address on the 66th Episode of...
mygov.in
Wednesday, 3 June 2020
ಕೊರೋನಾ ಟೈಮಲ್ಲಿ ಅಮ್ಮಂದಿರು ಚಿಕ್ಕ ಮಗುವನ್ನು ಹೇಗೆ ಕೇರ್ ಮಾಡಬೇಕು?
ಅಮ್ಮ ಮತ್ತು ಮಗುವಿನ ಶುಚಿತ್ವ, ಆರೋಗ್ಯಕರ ಅಭ‍್ಯಾಸಗಳು ಈ ಸಮಯದಲ್ಲಿ ಅತೀ ಮುಖ್ಯ. ಹೀಗಾಗಿ ಹೆತ್ತಮ್ಮನೇ ಆಗಿದ್ದರೂ ಮಗುವನ್ನು ಸ್ಪರ್ಶಿಸುವ ಮೊದಲು ಪ್ರತೀ ಬಾರಿಯೂ ಕೈ ತೊಳೆದುಕೊಂಡು ಸ್ಯಾನಿಟೈಸ್ ಮಾಡಿ.
.jpg)
ನವಜಾತ ಶಿಶುವಿಗೆ ಮಾಸ್ಕ್ ಹಾಕುವುದು ಕಷ್ಟವಾಗಬಹುದು. ಹೀಗಾಗಿ ತಾಯಂದಿರು ಮಾಸ್ಕ್ ಧರಿಸಿಯೇ ಹಾಲುಣಿಸುವುದು ಉತ್ತಮ. ಆಗಾಗ ಮಗುವಿನ ಮೈಯನ್ನು ಬಿಸಿ ನೀರಿನಲ್ಲಿ ಅದ್ದಿದ ಶುದ್ಧವಾದ ಬಟ್ಟೆಯಿಂದ ಒರೆಸಿ ವೈರಾಣು ದೇಹ ಪ್ರವೇಶಿಸಿದಂತೆ ಕಾಪಾಡಿಕೊಳ್ಳಿ. ಮಗು ಮತ್ತು ಅಮ್ಮ ಬಳಸುವ ಬಟ್ಟೆಗಳು, ಬೆಡ್ ಶೀಟ್ ಎಲ್ಲವನ್ನೂ ಬಿಸಿ ನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿಟ್ಟು ಡೆಟಾಲ್ ಅಥವಾ ಆಲ್ಕೋಹಾಲ್ ಕಂಟೆಂಟ್ ಇರುವ ದ್ರಾವಣ ಬೆರೆಸಿ ಒಗೆದು, ಬಿಸಿಲಿಗೆ ಒಣಗಲು ಹಾಕಿ. ಆದಷ್ಟು ಅಮ್ಮ-ಮಗು ಇರುವ ಕೊಠಡಿಗೆ ಅಪರಿಚಿತರು, ನೆಂಟರಿಷ್ಟರು ಎಂದು ಜನ ಒಟ್ಟು ಸೇರಲು ಅವಕಾಶ ಕೊಡಬೇಡಿ.
ಶಾಕಿಂಗ್ ನ್ಯೂಸ್ : ಕರ್ನಾಟಕದಲ್ಲಿ ಇಂದು 388 ಮಂದಿಗೆ ಕೊರೋನಾ ಪಾಸಿಟಿವ್..!
ಒಂದೆಡೆ ರಾಜ್ಯ ಸರ್ಕಾರ ಅನ್‌ಲಾಕ್ ಗೆ ಅವಕಾಶ ಕಲ್ಪಿಸಲು ಮುಂದಾಗಿರುವ ಬೆನ್ನಲ್ಲೇ ಇಂದು ರಾಜ್ಯದಲ್ಲಿ ಕೊರೋನಾ ಕೇಕೆ ಸಹ ಅಬ್ಬರಿಸಿದೆ.
ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿ ಒಂದೇ ದಿನ ರಾಜ್ಯದಲ್ಲಿ 388 ಹೊಸ ಸೋಂಕಿತರು ಪತ್ತೆಯಾಗಿದ್ದು ಜನರಲ್ಲಿ ಗಾಬರಿ ಮೂಡಿಸಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದೆ.
ಇಲ್ಲಿಯವರೆಗೆ 200ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಆದರೆ ಒಂದೇ ದಿನ 380ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಇದೇ ಮೊದಲು. ಸೋಮವಾರದವರೆಗೆ ರಾಜ್ಯದಲ್ಲೇ ಬೆಂಗಳೂರಿನಲ್ಲಿ(385) ಅತ್ಯಧಿಕ ಪ್ರಕರಣ ದಾಖಲಾಗಿತ್ತು.
ಪತ್ತೆಯಾಗಿರುವ 388 ಪ್ರಕರಣಗಳ ಪೈಕಿ 363 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಿಂದಲೇ ಪತ್ತೆಯಾಗಿದೆ. ಉಡುಪಿಯಲ್ಲಿ 150 ಪ್ರಕರಣ ಮತ್ತು ಕಲಬುರಗಿಯಲ್ಲಿ 100 ಪತ್ತೆಯಾಗಿದ್ದು ಮಹಾ ನಂಜಿಗೆ ಅಕ್ಷರಶಃ ತತ್ತರಿಸಿ ಹೋಗಿವೆ.
ಉಡುಪಿ 150, ಕಲಬುರಗಿ 100, ಬೆಳಗಾವಿ 51, ರಾಯಚೂರು 16, ಬೆಂಗಳೂರು ನಗರ 12, ಬೀದರ್ 10, ಬಾಗಲಕೋಟೆ ಹಾಸನ 9, ದಾವಣಗೆರೆ 7, ಯಾದಗಿರಿ 5, ಮಂಡ್ಯ, ವಿಜಯಪುರದಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ 3, ಚಿಕ್ಕಬಳ್ಳಾಪುರ, ಧಾರವಾಡ, ಚಿಕ್ಕಮಗಳೂರಿನಲ್ಲಿ ತಲಾ 2, ಕೋಲಾರ, ಹಾವೇರಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.
ಈ ಬೆಳವಣಿಗೆಯೊಂದಿಗೆ ಉಡುಪಿ ಹಾಗೂ ಕಲಬುರ್ಗಿ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಬೆಂಗಳುರೂನ್ನು ಹಿಂದಿಕ್ಕಿ ಮೊದಲೆರಡು ಸ್ಥಾನ ಆಕ್ರಮಿಸಿಕೊಂಡಿವೆ.
ಒಟ್ಟು 410 ಪ್ರಕರಣಗಳೊಂದಿಗೆ ಉಡುಪಿ ಈಗ ರಾಜ್ಯದ ಕೊರೋನಾ ಕಾರಸ್ಥಾನವಾಗಿದ್ದರೇ ಕಲಬುರ್ಗಿ 405 ಪ್ರಕರಣಗಳನ್ನು ಕಂಡಿದೆ.
ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ , ಗದಗ, ಚಿಕ್ಕಮಗಳೂರು, ಕೊಪ್ಪಳ, ಕೊಡಗು, ರಾಮನಗರದಲ್ಲಿ ಇಂದು ಯಾವುದೇ ಪಾಸಿಟಿವ್ ವರದಿಯಾಗಿಲ್ಲ.
ಮಂಡ್ಯ 20, ಧಾರವಾಡ 15, ಬಳ್ಳಾರಿ 11, ಬೆಳಗಾವಿ 9, ಉತ್ತರ ಕನ್ನಡ 5, ತುಮಕೂರು 5, ಕೋಲಾರ 4, ಹಾವೇರಿ 3, ವಿಜಯಪುರದಲ್ಲಿ 3 ಮಂದಿ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
3,796 ಪ್ರಕರಣಗಳ ಪೈಕಿ 1403 ಮಂದಿ ಗುಣಮುಖರಾಗಿದ್ದಾರೆ. ಇನ್ನು 2339 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟಾರೆ 52 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಬಂಪರ್ ಸುದ್ಧಿ! ಇನ್ಮುಂದೆ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್..!
ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ಪಡೆದಿರುವ 1.10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ನೆಟ್ ಸೇವೆ ಒದಗಿಸುವ ಸಂಬಂಧ ಈ ಸೇವೆ ಒದಗಿಸುವ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಮಂಗಳವಾರ ಇಂಟರ್‌ನೆಟ್ ಪೂರೈಕೆದಾರ ಸಂಸ್ಥೆಗಳ ಪ್ರತಿನಿಧಿಗಳ ಜತೆ ವಿಡಿಯೊ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ಲ್ಯಾಪ್‌ಟಾಪ್ ಕೊಟ್ಟ ನಂತರ ಅವುಗಳ ಸದುಪಯೋಗ ಸರಿಯಾಗಿ ಆಗುತ್ತಿಲ್ಲ. ಈ ಕಾರಣಕ್ಕೆ ಇಂಟರ್‌ನೆಟ್ ಸೇವೆ ಒದಗಿಸುವಂತೆ ಕೋರಲಾಗಿದೆ. ಇದಕ್ಕೆ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಮಾಹಿತಿ ಒದಗಿಸುವಂತೆ ಕೋರಿವೆ. ಇದರ ನಡುವೆ ಆನ್‌ಲೈನ್ ಕಂಟೆಂಟ್ ಕೂಡ ಒದಗಿಸುವ ಕೆಲಸ ಇಲಾಖೆಯಿಂದ ಆಗುತ್ತಿದೆ' ಎಂದು ವಿವರಿಸಿದರು.
'ಲ್ಯಾಪ್ ಟಾಪ್ ಇಲ್ಲದವರಿಗೆ ಆನ್ ಲೈನ್ ಶಿಕ್ಷಣ ಪಡೆಯಲು ತೊಂದರೆಯಾಗುತ್ತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಲ್ಯಾಪ್ ಟಾಪ್ ಹೊಂದಿರುವವರು ಅದನ್ನು ಸದ್ಬಳಕೆ ಮಾಡಿಕೊಳ್ಳಲು ಬೇಕಾದ ಸೌಲಭ್ಯ ಒದಗಿಸುವುದು ನಮ್ಮ ಗುರಿ. ಲ್ಯಾಪ್ ಟಾಪ್ ಇಲ್ಲದೇ ಇರುವವರಿಗೆ ಏನು ಎಂಬುದನ್ನು ಮುಂದೆ ತೀರ್ಮಾನ ಮಾಡಲಾಗುವುದು,' ಎಂದು ಹೇಳಿದರು.
'ಪ್ರಥಮ ವರ್ಷದ 1.10 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅವರು ದ್ವಿತೀಯ ಪದವಿಯಲ್ಲಿ ವ್ಯಾಸಂಗ ಮಾಡಲಿದ್ದಾರೆ. ಇವರಿಗೆ ಸಾಮಾನ್ಯ ತರಗತಿ ಜತೆಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡುವ, ತರಬೇತಿ ಒದಗಿಸುವ ಬಗ್ಗೆಯು ಕ್ರಮ ಕೈಗೊಳ್ಳಲಾಗುವುದು,' ಎಂದು ತಿಳಿಸಿದರು.
'ಈಗಾಗಲೇ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಆರಂಭವಾದರೂ ಇಂಟರ್ ನೆಟ್ ಸಮಸ್ಯೆ ಇದೆ. ಇದರ ಜತೆಗೆ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಲ್ಯಾಪ್ ಟಾಪ್ ಕೂಡ ಇಲ್ಲ. ಈ ರೀತಿಯ ಸಮಸ್ಯೆ, ಸವಾಲುಗಳು ಬಂದಾಗ ಅದನ್ನು ಬಗೆಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಕೊವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಅನಿಯಂತ್ರಿತ ಇಂಟರ್ ನೆಟ್ ಮತ್ತು ವಿದ್ಯುತ್ ಪೂರೈಕೆ ಮಾಡುವ ಮೂಲಕ ನಮ್ಮ ಸರ್ಕಾರ ಸೈ ಎನಿಸಿಕೊಂಡಿದ್ದು, ಅದೇ ಮಾದರಿಯಲ್ಲಿ ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗುವುದು,' ಎಂದರು.
# ಸೇವಾ ಸಂಸ್ಥೆಗಳೂ ಜವಾಬ್ದಾರಿ ಹೊರಬೇಕು :
'ನಗರ ಪ್ರದೇಶಗಳಲ್ಲಿ ಇಂಟರ್ ನೆಟ್ ಸೇವಾ ಪೂರೈಕೆದಾರರು ಅತ್ಯುತ್ತಮ ಸೇವೆ ಒದಗಿಸುತ್ತಿದ್ದಾರೆ. ಇದರ ಮಧ್ಯೆ ಕೆಲವರು ಅನುಮತಿ ಪಡೆಯದೆ ರಸ್ತೆ, ಪಾದಚಾರಿ ಮಾರ್ಗಗಳನ್ನು ಅಗೆಯುವುದು, ಹಾಳು ಮಾಡುವುದು ಮುಂತಾದ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಸಮಸ್ಯೆ ಆಗುವುದಿಲ್ಲ.
ಆದ್ದರಿಂದ ಇಂಟರ್ ನೆಟ್ ಸೇವಾ ಪೂರೈಕೆದಾರರು, ಬಿಎಂಆರ್‌ಸಿಎಲ್, ಗೇಲ್, ಬಿಬಿಎಂಪಿ, ಜಲಮಂಡಲಿ, ಬೆಸ್ಕಾಂ ಮುಂತಾದ ಸಂಸ್ಥೆಗಳ ಜತೆಗೆ ಸಮನ್ವಯತೆ ಅಗತ್ಯ. ಇದಕ್ಕೆ ಪೂರಕವಾಗಿ ಎಲ್ಲಾ ಮಾಹಿತಿಗಳನ್ನೊಳಗೊಂಡ ರೋಡ್ ಹಿಸ್ಟರಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ,' ಎಂದರು.
'ಕೊವಿಡ್ ಲಾಕ್ ಡೌನ್ ಬಳಿಕ ವರ್ಕ್ ಫ್ರಂ ಹೋಮ್ ವ್ಯವಸ್ಥೆಗೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಅನೇಕ ಕಂಪನಿಗಳು ಈ ವ್ಯವಸ್ಥೆಯೇ ಸೂಕ್ತ ಎಂದು ಹೇಳಿವೆ. ಭವಿಷ್ಯದಲ್ಲಿ ಕಂಪನಿಗಳು ವರ್ಕ್ ಫ್ರಂ ಹೋಮ್ ಮುಂದುವರಿಸಲು ಬಯಸಿದರೆ ಅದಕ್ಕೆ ಬೇಕಾದ ಇಂಟರ್ನೆಟ್ ಸೌಲಭ್ಯ ಒದಗಿಸಬೇಕು. ಈ ವಿಚಾರದಲ್ಲಿ ಇಂಟರ್ನೆಟ್ ಸೇವಾ ಪೂರೈಕೆದಾರರು, ಕಂಪನಿಗಳು ಮತ್ತು ಜನರ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲು ಸರ್ಕಾರ ಸಿದ್ಧವಿದೆ,' ಎಂದು ಭರವಸೆ ನೀಡಿದರು.
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
ಸಂಧಿಗಳು ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. “ ಊರು ಊರು” ಎಂಬೆರಡು ಶಬ್ದಗಳನ್ನು ‘ ಊರೂರು ' ಎಂದು ಕೂಡಿಸಿಯೇ ಮಾತನಾಡುತ್ತ...
-
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳ...

