Sunday, 13 May 2018

ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ

  • ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ.
  • ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. 
  • ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ. ಗಾಂಧೀಜಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೫೫ ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು.
  • ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
  • ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ.
  • ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ 1990 ರಲ್ಲಿ ಮತ್ತು ಖಾನ್ ಅಬ್ದುಲ್ ಗಫರ್ ಖಾನ್. 1987 ರಲ್ಲಿ.
  • ಮದರ್ ಥೆರೆಸಾರನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಿ 1980 ರಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
  • ಇಲ್ಲಿಯವರೆಗೆ 2013 ವರೆಗೆ 43 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
  • ಮೊದಲ ಪ್ರಶಸ್ತಿ ವಿಜೇತ ವಿದೇಶಿ ವ್ಯಕ್ತಿ ಖಾನ್ ಅಬ್ದುಲ್ ಗಫರ್ ಖಾನ್ 1987 ರಲ್ಲಿ. (ಪಾಕಿಸ್ತಾನದ ಪ್ರಜೆ, ಭಾರತ ಸ್ವತಂತ್ರ ಪಡೆಯುವ ಮುಂಚೆ ಭಾರತೀಯ ಪ್ರಜೆಯಾಗಿದ್ದ.
  • ಭಾರತ ರತ್ನ ಪ್ರಶಸ್ತಿ ಏಕೈಕ ಕೈಗಾರಿಕೋದ್ಯಮಿ ಜೆ.ಆರ್.ಡಿ ಟಾಟಾ.1992 ರಲ್ಲಿ.
  • ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಕಿರಿಯ ವ್ಯಕ್ತಿ ಸಚಿನ ತೆಂಡೂಲ್ಕರ್ (43 ನೇ ವಯಸ್ಸಿನಲ್ಲಿ 2013 ರಲ್ಲಿ)
  • ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಗುಲ್ಜಾರಿಲಾಲ್ ನಂದಾ (99 ನೇ ವಯಸ್ಸಿನಲ್ಲಿ 1997 ರಲ್ಲಿ)
  • ಭಾರತ ರತ್ನ ಪ್ರಶಸ್ತಿ ವಿಜೇತ ಕರ್ನಾಟಕದವರು ಸರ್,ಎಮ್,ವಿಶ್ವೇಶ್ವರಯ್ಯ (1955), ಭೀಮಶೇನ ಜೋಷಿ (2008), ಸಿ,ಎನ್,ರಾವ್ (2013)
  • ಪ್ರಶಸ್ತಿ ವಿಜೇತ ಮೊದಲ ಮಹಿಳೆ ಇಂದಿರಾಗಾಂಧಿ (1971)
  • ಭಾರತದ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಗೊಳಿಸಿದ ಪ್ರಧಾನಿ ಮುರಾರ್ಜಿ ದೇಸಾಯಿ, (1991 ರಲ್ಲಿ ಪ್ರಶಸ್ತಿ ವಿಜೇತರಾದರು)
  • ಭಾರತ ರತ್ನ ಪ್ರಶಸ್ತಿ ಪಡೆದ ಪ್ರಧಾನಿಗಳು ಜವಾಹರ್ ಲಾಲ್ ನೆಹರೂ (1955) ಇಂದಿರಾ ಗಾಂಧಿ (1971) ರಾಜೀವ ಗಾಂಧಿ (1991) ಮೊರಾರ್ಜಿ ದೇಸಾಯಿ (1991) ಗುಲ್ಜಾರಿಲಾಲ್ ನಂದಾ (1997)
  • ಪ್ರಶಸ್ತಿ ವಿಜೇತ ರಾಷ್ಟ್ರಪತಿಗಳು :- ಸರ್ವಪಳ್ಳಿ ರಾದಾಕೃಷ್ಣನ್(1954) ಬಾಬು ರಾಜೇಂದ್ರ ಪ್ರಸಾದ (1962) ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
  • ಪ್ರಶಸ್ತಿ ಪಡೆದು ರಾಷ್ಟ್ರಪತಿಯಾದವರು :- ಸರ್ವಪಳ್ಳಿ ರಾದಾಕೃಷ್ಣನ್(1954) 
  • ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
  • ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಪಡೆದವರು :- ಡಾ. ಚಂದ್ರಶೇಖರ್ ವೆಂಕಟರಾಮನ್, ಮದರ್ ತೆರೆಸಾ, ಅಮರ್ತ್ಯ ಸೇನ್. 
  • ಪ್ರಶಸ್ತಿ ಪಡೆದ ಮೊದಲ ನಟ :-ಜಿ ರಾಮಚಂದ್ರನ್ 
  • 2014 ರಲ್ಲಿ ಪ್ರಶಸ್ತಿ ವಿಜೇತರು :- ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ ಮೋಹನ್ ಮಾಳವಿಯ(ಮರೋಣತ್ತರವಾಗಿ)

ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ

ಕ್ರಮಾಂಕಹೆಸರುಜನನ - ನಿಧನಪುರಸ್ಕೃತ ವರ್ಷಬಗ್ಗೆರಾಜ್ಯ / ರಾಷ್ಟ್ರ
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್೧೮೮೮-೧೯೭೫೧೯೫೪ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ.ತಮಿಳು ನಾಡು
೨.ಚಕ್ರವರ್ತಿ ರಾಜಗೋಪಾಲಾಚಾರಿ೧೮೭೮ - ೧೯೭೨೧೯೫೪ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿತಮಿಳು ನಾಡು
೩.ಡಾ. ಚಂದ್ರಶೇಖರ ವೆಂಕಟ ರಾಮನ್೧೮೮೮–೧೯೭೦೧೯೫೪ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತತಮಿಳು ನಾಡು
೪.ಡಾ. ಭಗವಾನ್ ದಾಸ್೧೮೬೯–೧೯೫೮೧೯೫೫ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿಉತ್ತರ ಪ್ರದೇಶ
೫.ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ೧೮೬೧–೧೯೬೨೧೯೫೫ಅಭಿಯಂತರು (ಇಂಜಿನೀಯರ್)ಕರ್ನಾಟಕ
೬.ಜವಾಹರ್‌ಲಾಲ್ ನೆಹರು೧೮೮೯–೧೯೬೪೧೯೫೫ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕಉತ್ತರ ಪ್ರದೇಶ
೭.ಗೋವಿಂದ ವಲ್ಲಭ ಪಂತ್೧೮೮೭–೧೯೬೧೧೯೫೭ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವಉತ್ತರ ಪ್ರದೇಶ
೮.ಡಾ. ಧೊಂಡೊ ಕೇಶವ ಕರ್ವೆ೧೮೫೮–೧೯೬೨೧೯೫೮ಶಿಕ್ಷಣ ತಜ್ಞ,ಸಮಾಜ ಸೇವಕಮಹಾರಾಷ್ಟ್ರ
೯.ಡಾ.ಬಿಧನ್ ಚಂದ್ರ ರಾಯ್೧೮೮೨–೧೯೬೨೧೯೬೧ವೈದ್ಯ,ರಾಜಕೀಯ ನೇತಾರಪಶ್ಚಿಮ ಬಂಗಾಳ
೧೦.ಪುರುಷೋತ್ತಮ್ ದಾಸ್ ಟಂಡನ್೧೮೮೨–೧೯೬೨೧೯೬೧ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞಉತ್ತರ ಪ್ರದೇಶ
೧೧.ಡಾ. ಬಾಬು ರಾಜೇಂದ್ರ ಪ್ರಸಾದ್೧೮೮೪–೧೯೬೩೧೯೬೨ಭಾರತ ಸರ್ಕಾರದ ಪ್ರಥಮ ರಾಷ್ಟ್ರಪತಿ, ಸ್ವಾತಂತ್ರ್ಯ ಸೇನಾನಿ, ಕಾನೂನು ತಜ್ಞಬಿಹಾರ
೧೨.ಡಾ. ಜಾಕಿರ್ ಹುಸೇನ್೧೮೯೭–೧೯೬೯೧೯೬೩ಭಾರತದ ಮಾಜಿ ರಾಷ್ಟ್ರಪತಿ,ವಿದ್ವಾಂಸಆಂಧ್ರ ಪ್ರದೇಶ
೧೩.ಡಾ. ಪಾಂಡುರಂಗ ವಾಮನ ಕಾಣೆ೧೮೮೦–೧೯೭೨೧೯೬೩Indologist,ಸಂಸ್ಕೃತ ವಿದ್ವಾಂಸಮಹಾರಾಷ್ಟ್ರ
೧೪.ಲಾಲ್ ಬಹಾದುರ್ ಶಾಸ್ತ್ರಿ೧೯೦೪–೧೯೬೬೧೯೬೬(ಮರಣೋತ್ತರ ಪ್ರಶಸ್ತಿ)ಭಾರತದ ದ್ವಿತೀಯ ಪ್ರಧಾನಿ,ಸ್ವಾತಂತ್ರ್ಯ ಸೇನಾನಿಉತ್ತರ ಪ್ರದೇಶ
೧೫.ಇಂದಿರಾ ಗಾಂಧಿ೧೯೧೭–೧೯೮೪೧೯೭೧ಭಾರತದ ಮಾಜಿ ಪ್ರಧಾನಿಉತ್ತರ ಪ್ರದೇಶ
೧೬.ವಿ ವಿ ಗಿರಿ೧೮೯೪–೧೯೮೦೧೯೭೫ಭಾರತದ ಮಾಜಿ ರಾಷ್ಟ್ರಪತಿ, ಕಾರ್ಮಿಕ ನಾಯಕಆಂಧ್ರ ಪ್ರದೇಶ
೧೭.ಕುಮಾರಸ್ವಾಮಿ ಕಾಮರಾಜ್೧೯೦೩–೧೯೭೫೧೯೭೬(ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ.ತಮಿಳು ನಾಡು
೧೮.ಆಗ್ನೆಸ್ ಗೊನ್ಚ ಬೊಹಾಚ್ಯು (ಮದರ್ ತೆರೆಸಾ)೧೯೧೦–೧೯೯೭೧೯೮೦ಮಾನವತಾವಾದಿ,ಸಾಮಾಜಿಕ ಕಾರ್ಯಕರ್ತೆ, ನೋಬೆಲ್ ಪುರಸ್ಕೃತೆ (ಶಾಂತಿಗಾಗಿ, ೧೯೭೯).ಪಶ್ಚಿಮ ಬಂಗಾಳ
೧೯.ವಿನೋಬಾ ಭಾವೆ೧೮೯೫–೧೯೮೨೧೯೮೩(ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ,ಸಮಾಜ ಸುಧಾರಕಮಹಾರಾಷ್ಟ್ರ
೨೦.ಖಾನ್ ಅಬ್ದುಲ್ ಗಫಾರ್ ಖಾನ್೧೮೯೦–೧೯೮೮೧೯೮೭ಸ್ವಾತಂತ್ರ ಸೇನಾನಿ,ಭಾರತ ರತ್ನ ಪಡೆದ ಪ್ರಥಮ ಹೊರ ದೇಶದ ಪ್ರಜೆ (ಆದರೂ ವಿದೇಶಿ ಅಲ್ಲ!)ಪಾಕಿಸ್ತಾ
೨೧.ಡಾ. ಎಮ್. ಜಿ. ರಾಮಚಂದ್ರನ್೧೯೧೭–೧೯೮೭೧೯೮೮(ಮರಣೋತ್ತರ ಪ್ರಶಸ್ತಿ),ತಮಿಳು ನಾಡಿನ ಮುಖ್ಯಮಂತ್ರಿ,ಚಲನಚಿತ್ರ ನಟತಮಿಳು ನಾಡು
೨೨.ಡಾ. ಬಿ.ಆರ್.ಅಂಬೇಡ್ಕರ್೧೮೯೧–೧೯೫೬೧೯೯೦(ಮರಣೋತ್ತರ ಪ್ರಶಸ್ತಿ),ಭಾರತದ ಸಂವಿಧಾನಶಿಲ್ಪಿಮಹಾರಾಷ್ಟ್ರ
೨೩.ಡಾ. ನೆಲ್ಸನ್ ಮಂಡೇಲಾ೧೯೧೮-2013೧೯೯೦ವರ್ಣಭೇದ ನೀತಿ ವಿರುದ್ಧ ಹೋರಾಟ,ಭಾರತ ರತ್ನ ಪಡೆದ ಪ್ರಥಮ ವಿದೇಶಿ ಪ್ರಜೆ.ದಕ್ಷಿಣ ಆಫ್ರಿಕ
೨೪.ರಾಜೀವ್ ಗಾಂಧಿ೧೯೪೪–೧೯೯೧೧೯೯೧(ಮರಣೋತ್ತರ ಪ್ರಶಸ್ತಿ),ಭಾರತದ ಮಾಜಿ ಪ್ರಧಾನಿನವ ದೆಹಲಿ
೨೫.ಸರ್ದಾರ್ ವಲ್ಲಭಭಾಯ್ ಪಟೇಲ್೧೮೭೫–೧೯೫೦೧೯೯೧(ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ಭಾರತ ಸರ್ಕಾರದ ಪ್ರಥಮ ಗೃಹ ಸಚಿವಗುಜರಾತ್
೨೬.ಮೊರಾರ್ಜಿ ದೇಸಾಯಿ೧೮೯೬–೧೯೯೫೧೯೯೧ಭಾರತದ ಮಾಜಿ ಪ್ರಧಾನಿ, ಸ್ವಾತಂತ್ರ್ಯ ಸೇನಾನಿಗುಜರಾತ್
೨೭.ಮೌಲಾನಾ ಅಬ್ದುಲ್ ಕಲಮ್ ಆಜಾದ್೧೮೮೮–೧೯೫೮೧೯೯೨(ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿಪಶ್ಚಿಮ ಬಂಗಾಳ
೨೮.ಜೆ.ಆರ್.ಡಿ.ಟಾಟಾ೧೯೦೪–೧೯೯೩೧೯೯೨ಭಾರತೀಯ ಕೈಗಾರಿಕೆ ಪಿತಾಮಹ,ಸಮಾಜಮುಖಿಮಹಾರಾಷ್ಟ್ರ
೨೯.ಸತ್ಯಜಿತ್ ರೇ೧೯೨೨–೧೯೯೨೧೯೯೨ಭಾರತೀಯ ಚಲನಚಿತ್ರ ನಿರ್ದೇಶಕಪಶ್ಚಿಮ ಬಂಗಾಳ
೩೦.ಎ.ಪಿ.ಜೆ.ಅಬ್ದುಲ್ ಕಲಾಂ೧೯೩೧-2015೧೯೯೭ಭಾರತದ ರಾಷ್ಟ್ರಪತಿ,ವಿಜ್ನಾನಿತಮಿಳು ನಾಡು
೩೧.ಗುಲ್ಜಾರಿಲಾಲ್ ನಂದಾ೧೮೯೮–೧೯೯೮೧೯೯೭ಸ್ವಾತಂತ್ರ್ಯ ಸೇನಾನಿ,ಭಾರತದ ಪ್ರಧಾನಿ.ಪಂಜಾಬ
೩೨.ಅರುಣಾ ಅಸಫ್ ಅಲಿ೧೯೦೮–೧೯೯೬೧೯೯೭(ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ.ಪಶ್ಚಿಮ ಬಂಗಾಳ
೩೩.ಎಮ್ ಎಸ್ ಸುಬ್ಬುಲಕ್ಷ್ಮಿ೧೯೧೬–೨೦೦೪೧೯೯೮ಶಾಸ್ತ್ರೀಯ ಸಂಗೀತಗಾರ್ತಿ.ತಮಿಳು ನಾಡು
೩೪.ಸಿ. ಸುಬ್ರಮಣ್ಯಮ್೧೯೧೦–೨೦೦೦೧೯೯೮ಸ್ವಾತಂತ್ರ್ಯ ಸೇನಾನಿ, ಕೃಷಿ ಇಲಾಖೆಯ ಸಚಿವ(ಕೃಷಿ ಕ್ರಾಂತಿಯ ಹರಿಕಾರ).ತಮಿಳು ನಾಡು
೩೫.ಜಯಪ್ರಕಾಶ್ ನಾರಾಯಣ್೧೯೦೨–೧೯೭೯೧೯೯೮(ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ, ನವಸಮಾಜದ ಹರಿಕಾರ.ಉತ್ತರ ಪ್ರದೇಶ
೩೬.ಪಂಡಿತ್ ರವಿಶಂಕರ್೧೯೨೦-2012೧೯೯೯ಸಿತಾರ್ ವಾದಕರು.ಉತ್ತರ ಪ್ರದೇಶ
೩೭.ಡಾ. ಅಮರ್ತ್ಯ ಸೇನ್೧೯೩೩-೧೯೯೯ನೋಬೆಲ್ ಪುರಸ್ಕೃತ (೧೯೯೮), ಅರ್ಥಶಾಸ್ತ್ರಜ್ಞಪಶ್ಚಿಮ ಬಂಗಾಳ
೩೮.ಗೋಪಿನಾಥ್ ಬೋರ್ಡೊಲೋಯಿ೧೮೯೦–೧೯೫೦೧೯೯೯(ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ.ಆಸ್ಸಾಮ್
೩೯.ಲತಾ ಮಂಗೇಶ್ಕರ್೧೯೨೯-೨೦೦೧ಹಿನ್ನಲೆ ಗಾಯಕಿ.ಮಹಾರಾಷ್ಟ್ರ
೪೦.ಉಸ್ತಾದ್ ಬಿಸ್ಮಿಲ್ಲಾ ಖಾನ್೧೯೧೬-೨೦೦೬೨೦೦೧ಶಹನಾಯ್ ವಾದಕ.ಉತ್ತರ ಪ್ರದೇಶ
೪೧.ಭೀಮ್‍ಸೇನ್ ಜೋಷಿ೧೯೨೨-೨೦೧೧೨೦೦೮ಶಾಸ್ತ್ರೀಯ ಸಂಗೀತಗಾರ.ಕರ್ನಾಟಕ
೪೨.ಸಿ ಎನ್ ಆರ್ ರಾವ್ಹು.೧೯೩೪೨೦೧೩-೧೪ವಿಜ್ಞಾನಿಕರ್ನಾಟಕ
೪೩.ಸಚಿನ್ ತೆಂಡೂಲ್ಕರ್ಹು.೧೯೭೩೨೦೧೩-೧೪ಕ್ರಿಕೆಟ್ ಆಟಗಾರಮಹಾರಾಷ್ಟ್ರ
೪೪.ಅಟಲ್ ಬಿಹಾರಿ ವಾಜಪೇಯಿ೧೯೨೪-2015ರಾಜಕಾರಣಿ ಹಾಗು ಮಾಜಿ ಪ್ರಧಾನಿಮಧ್ಯ ಪ್ರದೇಶ
೪೫.ಮದನ ಮೋಹನ ಮಾಳವೀಯ೧೮೬೧-೧೯೪೬2015(ಮರಣೋತ್ತರ ಪ್ರಶಸ್ತಿ), ರಾಜಕಾರಣಿಉತ್ತರ ಪ್ರದೇಶ

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...