ಜಗತ್ತಿನಾದ್ಯಂತದ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ರವಿವಾರ 60 ಲಕ್ಷವನ್ನು ದಾಟಿದೆ. ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಸಾಂಕ್ರಾಮಿಕವು ವೇಗವಾಗಿ ಹರಡುತ್ತಿದ್ದು, ಮುಂದಿನ ಕೆಲವು ವಾರಗಳು ಆ ದೇಶಗಳಿಗೆ ಸಂಕಷ್ಟದ ದಿನಗಳಾಗಿರುವ ಸಾಧ್ಯತೆಯಿದೆ.
ಅದೇ ವೇಳೆ, ಜಗತ್ತಿನ ಹೆಚ್ಚಿನ ದೇಶಗಳು ಸಾಂಕ್ರಾಮಿಕವನ್ನು ತಡೆಯಲು ಹೇರಲಾಗಿದ್ದ ಬೀಗಮುದ್ರೆಗಳನ್ನು ಹಂತಹಂತವಾಗಿ ತೆರೆಯಲು ಆರಂಭಿಸಿವೆ ಹಾಗೂ ನೆಲಕಚ್ಚಿರುವ ಆರ್ಥಿಕತೆಗಳನ್ನು ಸರಿಪಡಿಸಲು ಮುಂದಾಗಿವೆ.
ದಕ್ಷಿಣ ಅಮೆರಿಕ ಖಂಡದಲ್ಲಿ ಸಾಂಕ್ರಾಮಿಕದ ಕೇಂದ್ರಬಿಂದುವಾಗಿರುವ ಬ್ರೆಝಿಲ್‌ನಲ್ಲಿ 5 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅದು ಈಗ ಅಮೆರಿಕದಿಂದ ಮಾತ್ರ ಹಿಂದಿದೆ. ಅಲ್ಲಿ ಕೊರೋನ ವೈರಸ್‌ನಿಂದಾಗಿ ಸಂಭವಿಸಿರುವ ಸಾವಿನ ಸಂಖ್ಯೆ 30,000ವನ್ನು ಸಮೀಪಿಸುತ್ತಿದೆ. ಅದೇ ವೇಳೆ, ಜಗತ್ತಿನಾದ್ಯಂತ ಕೋವಿಡ್-19ರಿಂದಾಗಿ ಮೃತಪಟ್ಟವರ ಸಂಖ್ಯೆ 3,68,000ವನ್ನು ದಾಟಿದೆ.
ಭಾರತ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಅತ್ತ ದೆಹಲಿಯಿಂದ ಸಮಾಧಾನದ ಸಂಗತಿಯೊಂದು ಬಂದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಸೋಂಕಿತರು ಗುಣಮುಖರಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಕೋವಿಡ್-19 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದು ಒಂದು ದಿನದಲ್ಲಿ ಅತಿ ಹೆಚ್ಚು ಚೇತರಿಸಿಕೊಂಡ ರೋಗಿಗಳ ಪ್ರಮಾಣ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ....
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
ಬೇಂದ್ರೆಯವರ ಆಯ್ದ ಭಾವಗೀತೆಗಳು ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದು ಜೀವದಾಣೆಯಂತೆ ತಾನೆ ನುಡಿಯುತಿರುವುದ...
-
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳ...