ಒದ್ದೆ ಬಟ್ಟೆಯನ್ನು ಧರಿಸಿ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡಲು ಒಂದು ವೈಜ್ಞಾನಿಕ ಕಾರಣ ಇದೆ. ನಾವು ನೋಡಿರಬಹುದು ದೇವಾಲಯದಲ್ಲಿ ದೇವರ ದರ್ಶನ ಪಡೆದ ನಂತರ ದೇವಾಲಯವನ್ನು ಪ್ರದಕ್ಷಿಣೆ ಹಾಕುತ್ತೇವೆ ಅದರಲ್ಲೂ ಹೆಚ್ಚಿನ ಮಂದಿ ದೇವಾಲಯದಲ್ಲಿ ಯಾವುದಾದರೂ ನದಿ ಹೊಳೆ ಇದ್ದರೆ ಅಲ್ಲಿ ಮುಳುಗಿ ಹಾಗೆ ಒದ್ದೆ ಬಟ್ಟೆಯಲ್ಲಿ ಬಂದು ದೇವಾಲಯವನ್ನು ಪ್ರದಕ್ಷಿಣೆ ಮಾಡುತ್ತಾರೆ ಹೀಗೆ ಮಾಡುವುದು ಏಕೆ ಎಂಬುದು ನಿಮಗೆ ತಿಳಿದಿಲ್ಲ ಅಂದ್ರೆ ತಿಳಿಯೋಣ. ಭಕ್ತಾದಿಗಳು ದೇವರ ಕೃಪೆಯನ್ನು ಪಡೆಯಲು ಎಷ್ಟೆಲ್ಲ ರೀತಿಯ ಪೂಜೆ ಹರಕೆಗಳನ್ನು ಮಾಡುತ್ತಾರೆ ಅಲ್ಲವೇ, ದೇವರು ತನ್ನ ಭಕ್ತರಿಂದ ಇಚ್ಚಿಸುವುದು ಒಂದೇ ಅದು ಭಕ್ತಾದಿಗಳ ಶುದ್ದ ಭಕ್ತಿ. ಅವರ ಮಾನಸಿಕ ಶುದ್ಧತೆಯನ್ನು ಮಾತ್ರ. ಹಾಗಾಗಿ ದೇವರ ಕೃಪೆ ಪಡೆಯಲು ಹೋದಾಗ ಪ್ರತಿಯೊಬ್ಬರೂ ಕೂಡಾ ಮಾನಸಿಕವಾಗಿ ದೈಹಿಕವಾಗಿ ಶುದ್ಧತೆಯನ್ನು ಹೊಂದಿರಬೇಕು.

ಹಾಗೆಯೇ ನಾವು ಒದ್ದೆ ಬಟ್ಟೆಯನ್ನೂ ಧರಿಸಿದಾಗ ನಮ್ಮ ಮನಸ್ಸು ಪೂರ್ಣವಾಗಿ ನಮ್ಮ ಹಿಡಿತದಲ್ಲಿ ಏಕಾಗ್ರತೆಯಿಂದ ಕೂಡಿರುತ್ತದೆ ಮನಸ್ಸು ಭಕ್ತಿಭಾವದಲ್ಲಿ ಮುಳುಗಿರಲು ತಣ್ಣೀರು ಸ್ನಾನ, ಒದ್ದೆ ಬಟ್ಟೆಗಳು ಸಹಕಾರಿ ಆಗುತ್ತದೆ. ನಮ್ಮ ಹಿಂದಿನ ಜನತೆ ಮಾಡಿರುವ ಶಾಸ್ತ್ರ ಎಂಬುದರಲ್ಲಿ ಸತ್ಯದನಡೆ, ನುಡಿಗಳು, ವರ್ತನೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಆಚರಿಸುವ ನಂಬಿಕೆಗಳು, ವೈಚಾರಿಕತೆಯ ಬಗ್ಗೆ ತಿಳಿಸುತ್ತದೆ. ಹಿಂದಿನ ಕಾಲದಲ್ಲಿ ಮಾಡಿರುವ ಶಾಸ್ತ್ರದಲ್ಲಿ ನೈಜತೆ, ವಾಸ್ತವಿಕತೆ ಹಾಗೂ ಸಕಾರಾತ್ಮಕ ಚಿಂತನೆಗಳಿಂದ ಕೂಡಿರುತ್ತದೆ, ಹೀಗೆ ನಮ್ಮ ಸಂಪ್ರದಾಯ ಬಹಳ ಉನ್ನತವಾಗಿದೆ. ಹಾಗೆಯೇ ವೈಜ್ಞಾನಿಕವಾಗಿ ನೋಡುವುದಾದರೆ ಒದ್ದೆ ಬಟ್ಟೆ ಧರಿಸಿ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಹಲವರು ರೀತಿಯ ಲಾಭಗಳು ನಮಗೆ ಸಿಗುತ್ತವೆ ಅವುಗಳು ದೇವರ ದರ್ಶನವನ್ನ ಪಡೆದು ಕೊಳ್ಳಲು ಹೋಗುವ ಮೊದಲು ಅಲ್ಲೇ ಇರುವ ಕಲ್ಯಾಣಿ, ಕೊಳ ಅಥವಾ ನದಿಗಳಲ್ಲಿ ಸ್ನಾನ ಮಾಡುವುದು ಒಂದು ವಾಡಿಕೆ.

ನಾವು ಸೇವನೆ ಮಾಡುವ ಆಹಾರ ಜೀರ್ಣವಾದ ನಂತರ ಉಳಿದಿರುವ ಕಲ್ಮಶಗಳು ಅನೇಕ ಬಾರಿ ದೇಹದಲ್ಲಿ ಉಳಿದು ಬಿಟ್ಟು ಮಲಬದ್ಧತೆಗೆ ದಾರಿ ಮಾಡಿಕೊಡುತ್ತದೆ, ಈ ರೀತಿಯಲ್ಲಿ ಅಜೀರ್ಣ ಉಂಟಾಗಲು ಕಾರಣ ಏನೆಂದರೆ ನಾವು ಸೇವಿಸಿದ ಆಹಾರ ಸಕ್ರಮವಾಗಿ ಜೀರ್ಣ ಆಗದಿರುವುದು, ಹಾಗಾಗಿ ನಾವು ದೇವಸ್ಥಾನಕ್ಕೆ ಭೇಟಿ ನೀಡುವ ಸಮಯದಲ್ಲಿ ಮಡಿ ಎನ್ನುವ ಹೆಸರಿನಲ್ಲಿ ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ನಮ್ಮ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ, ಜೊತೆಗೆ ಒದ್ದೆ ಬಟ್ಟೆಯನ್ನೂ ಧರಿಸಿಕೊಂಡು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುವುದರಿಂದ ಆರೋಗ್ಯ ಕೂಡಾ ಸುಧಾರಿಸುತ್ತದೆ ಹಾಗಾಗಿ ದೇವಾಲಯದಲ್ಲಿ ಒದ್ದೆ ಬಟ್ಟೆ ಧರಿಸಿ ದೇವಾಲಯದ ಪ್ರದಕ್ಷಿಣೆ ಮಾಡುತ್ತಾರೆ ಜೊತೆಗೆ ತಮ್ಮ ಮನಸಿನ ಕೋರಿಕೆ ಬಹುಬೇಗನೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಉಪಯುಕ್ತ ಲೇಖನ ನಿಮಗೆ ಇಷ್ಟ ಆಗಿದ್ರೆ ಮರೆಯದೇ ಶೇರ್ ಮಾಡಿರಿ.