ಓ೦ ಶ್ರೀಗುರು ಬಸವಲಿಂಗಾಯ ನಮಃ ಆಸೆಗೆ ಸತ್ತದು ಕೋಟಿ" ಆಮಿಷಕ್ಕೆ ಸತ್ತದು ಕೋಟಿ" ಹೊನ್ನ-ಹೆಣ್ಣು-ಮಣ್ಣೆಂದು ಸತ್ತದು ಕೋಟಿ" ಗುಹೇಶ್ವರ ನಿಮಗಾಗಿ ಸತ್ತವರನಾನನೂ ಕಾಣೆ"!
ಹಣದ ಆಸೆ ಮನೆಯ ಆಸೆ, ಪಟ್ಟದ ಆಸೆ ರಾಜ್ಯದ ಆಸೆ, ರಾಜನಾಗುವ ಆಸೆ , ಹಣ ಮಾಡುವ ಆಸೆ ,ಹಣ ಬಂದರು ಇನ್ನೂ ಬೇಕು ಬೇಕು ಎನ್ನುವ ಆಸೆ, ಒಬ್ಬೊಬ್ಬರಿಗೆ ಒಂದೊಂದು ಆಸೆ, ಹುಟ್ಟಿನಿಂದ ಸಾವಿನವರೆಗೆ ಬರಿ ಆಸೆ ಆಸೆ ಇದಕ್ಕೆ ಸತ್ತವರೂ ಕೋಟಿ" ಇನ್ನು ಆಮಿಷಕ್ಕೆ ಸಿಕ್ಕು, ನರಳುವವರು ಇದ್ದಾರೆ, ಯಾರೊ ಹೇಳಿದ ಕೆಲಸ ಮಾಡಿದರೆ, ಇಷ್ಟು ಕೊಡುವೆ ಎಂದರೆ ಸಾಕು, ಮಾಡುತ್ತಾರೆ ಕೊಲೆ ಸುಲಿಗೆ ಅನ್ಯಾಯಗಳ, ಲಂಚದ ಆಮಿಷ ತೋರಿಸಿ ಕೆಲಸ ಮಾಡಿಸಿಕೊಳ್ಳುತ್ತಾರೆ, ಆ ವ್ಯಕ್ತಿ ಆಮಿಷಕ್ಕೆ ಬಲಿಯಾಗುತ್ತಾನೆ, ಇನ್ನು ಹೆಣ್ಣನು ನೋಡಿ, ಬಯಸಿ ಬಯಸಿ, ಮುದುಕ ರಿಂದ ಹುಡುಗರ ತನಕ, ಹಣ್ಣಿನಾಸೆಗೆ ಬಲಿಯಾದವರು ಕೋಟಿ, ಬಂಗಾರ ಎಂದರೆ ಸಾಕು ಮುಖದಲ್ಲಿ ಖುಷಿ ಮಹಿಳೆಯರಿಗೆ ಪುರುಷರಿಗೆ ಅಜ್ಜ ಅಜ್ಜಿಗೂ ಬಂಗಾರದ ಪ್ರೀತಿ ತಮ್ಮ ಸಂಪಾದನೆ ಬರಿ ಹೊನ್ನಿಗೆ ಇಟ್ಟವರು ಇದ್ದಾರೆ ಈ ಆಸೆ ಬಲಿಯಾದವರೂ ಕೋಟಿ ಕೋಟಿ ಇನ್ನು ಈ ಮಣ್ಣು , ಅದು ನನ್ನ ಜಾಗ ,ಇದು ನನ್ನ ಜಾಗ, ನಾನು ಆ ಜಾಗ ತೊಗಳ್ಳಬೇಕು, ಅಷ್ಟು ನನಗೆ ಬೇಕು, ಇಷ್ಟು ನನ್ನ ಮಕ್ಕಳಿಗೆ ಬೇಕು, ಎಂದು ಕೊನೆಗೆ ತನ್ನನ್ನು ಮುಚ್ಚುವ ಆ ಆರು ಮೂರರ ಮಣ್ಣಿನ ಆಸೆಗೆ ಬಲಿಯಾದವರೂ ಕೋಟಿ" ಗುಹೇಶ್ವರ , ನಿನ್ನ ನಾಮ ಸ್ಮರಣೆ ಮಾಡಿ , ಲಿಂಗದ ಮೇಲಿನ ಪ್ರೀತಿಯಿಂದ , ಸಾರ ಸಜ್ಜನರ ಸಂಗವ ಮಾಡಿ. ತನುವ ಗುರುವಿಗೆ. ಮನವ ಲಿಂಗಕ್ಕೆ. ಧನವ ಜಂಗಮಕ್ಕೆ ಕೊಟ್ಟು ಸೇವೆಯಲ್ಲಿ ಸತ್ತವರನಾರನೂ ಕಾಣೆ!!" ಎನ್ನುತ್ತಾರೆ ಶೂನ್ಯ ಸಿಂಹಾಸನಾದೀಶ ಅಲ್ಲಮಪ್ರಭು
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...

-
ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್...
-
ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್...