Thursday, 4 July 2019

ಬ್ರಾಜಿಷ್ಣುವಿನ ವಡ್ಡಾರಾಧನೆ

ಬ್ರಾಜಿಷ್ಣುವಿನ ವಡ್ಡಾರಾಧನೆ
                 ಪಂಪಯುಗದಲ್ಲಿ ರಚಿತವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ''ವಡ್ಡಾರಾಧನೆ''. ಇದನ್ನು ರಚಿಸಿದವರು ಬ್ರಾಜಿಷ್ಣು. ಇವರ ಕಾಲ ಸುಮಾರು ಕ್ರಿ.ಶ.೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ ಕವಿಯಾದ ಬ್ರಾಜಿಷ್ಣು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದರು. ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಬ್ರಾಜಿಷ್ಣು ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ. 
‘ವಡ್ಡಾರಾಧನೆ’ಯಲ್ಲಿ ೧೯ ಕಥೆಗಳಿವೆ. (.Pdf ನಂತೆ download ಮಾಡಲು ಕಥೆಯ ಮೇಲೆ ಕ್ಲಿಕ್ ಮಾಡಿ)
  1. ಸುಕುಮಾರಸ್ವಾಮಿಯ ಕಥೆ
  2. ಸುಕೌಶಳಸ್ವಾಮಿಯ ಕಥೆ
  3. ಗಜಕುಮಾರನ ಕಥೆ
  4. ಸನತ್ಕುಮಾರ ಚಕ್ರಚರ್ತಿಯ ಕಥೆ
  5. ಅಣ್ಣಿಕಾಪುತ್ರನ ಕಥೆ
  6. ಭದ್ರಬಾಹು ಭಟ್ಟಾರರ ಕಥೆ
  7. ಲಲಿತಘಟೆಯ ಕಥೆ
  8. ಧರ್ಮಘೋಷ ಭಟ್ಟಾರರ ಕಥೆ
  9. ಸಿರಿದಣ್ಣ ಭಟ್ಟಾರರ ಕಥೆ
  10. ವೃಷಭಸೇನ ಭಟ್ಟಾರರ ಕಥೆ
  11. ಕಾರ್ತಿಕ ಋಷಿಯ ಕಥೆ
  12. ಅಭಯಘೋಷ ಮುನಿಯ ಕಥೆ
  13. ವಿದ್ಯುಚ್ಚೋರನ ಕಥೆ
  14. ಗುರುದತ್ತ ಭಟ್ಟಾರರ ಕಥೆ
  15. ಚಿಲಾತಪುತ್ರನ ಕಥೆ
  16. ದಂಡಕನೆಂಬ ರಿಸಿಯ ಕಥೆ
  17. ಮಹೇಂದ್ರದತ್ತಾಚಾರ್ಯನ ಕಥೆ
  18. ಚಾಣಾಕ್ಯ ರಿಸಿಯ ಕಥೆ
  19. ವೃಷಭಸೇನ ರಿಸಿಯ ಕಥೆ
 -ಕೃಪೆ: siri-kannada.in

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...