Wednesday, 22 March 2017

ಜೈನ ಧರ್ಮ


  • ಜೈನ ಹಾಗೂ ಬೌದ್ಧ ಮತದ ಸಂಸ್ಥಾಪಕರು - ಕ್ಷತ್ರಿಯರು
  • ಜೈನಧರ್ಮದ 23 ನೇ ತೀರ್ಥಂಕರ - ಪಾರ್ಶ್ವನಾಥ
  • ಜೈನಧರ್ಮದ 24 ನೇ ತೀರ್ಥಂಕರ - ಮಹಾವೀರ
  • ಪಾರ್ಶ್ವನಾಥನ ತಂದೆಯ ಹೆಸರು - ಅಶ್ವಸೇನಾ
  • ಜೈನ ಧರ್ಮದ ಸ್ಥಾಪಕ - ಮಹಾವೀರ
  • ಮಹಾವೀರ ಜನಿಸಿದ ವರ್ಷ - ಕ್ರಿ.ಪೂ. 599 ಅಥವಾ 540
  • ಮಹಾವೀರ ಜನಿಸಿದ ಪ್ರದೇಶ - ಪಾಟ್ನ ಸಮೀಪದ ಕುಂಡಲಿವನ ಅಥವಾ ಕುಂದಗ್ರಾಮ
  • ಮಹಾವೀರನ ತಂದೆಯ ಹೆಸರು - ಸಿದ್ಧಾರ್ಥ
  • ಸಿದ್ಧಾರ್ಥ ಈ ಜನಾಂಗದ ್ರಸ - ಜ್ಞಾತ್ರಿಕರೆಂಬ , ಕ್ಷತ್ರಿಯ ಜನಾಂಗ
  • ಮಹವೀರನ ತಾಯಿಯ ಹೆಸರು - ತ್ರಿಶಲಾದೇವಿ
  • ಮಹಾವೀರ ವಿವಾಹವಾಗಿದ್ದು - 18 ನೇ ವಯಸ್ಸಿನಲ್ಲಿ
  • ಮಹಾವೀರನ ಪತ್ನಿಯ ಹೆಸರು - ಯಶೋಧರೆ
  • ಮಹಾವೀರ ಕೈವಲ್ಯ ಜ್ಞಾನವನ್ನು ಪಡೆದ ಗ್ರಾಮದ ಹೆಸರು - ಜ್ರುಂಬಕ
  • ಮಹಾವೀರನು ಜೀವನದ ಅಂತ್ಯ ದಿನಗಳನ್ನು ಈ ಪ್ರದೇಶದಲ್ಲಿ ಕಳೆದನು - ಬಿಹಾರದ ಪಾವಾ ಪುರಿ ಎಂಬಲ್ಲಿ
  • ಮಹಾವೀರನು ನಿರ್ವಾಣ ಹೊಂದಿದ ವರ್ಷ - ಕ್ರಿ.ಪೂ.527
  • ಜೈನ ಧರ್ಮದ ಮುಖ್ಯ ಗುರಿ - ಆತನ ಮುಕ್ತಿ ಮತ್ತು ಲೌಕಿಕ ಸಂಬಂಧಗಳಿಂದ ಶಾಶ್ವತ ಬಿಡುಗಡೆ

  • ಮಹಾವೀರನ ತತ್ವಗಳು
  • ಅಹಿಂಸೆ
  • ಸತ್ಯ ಸಂಧತೆ
  • ಕಳ್ಳತನ ಮಾಡದಿರುವುದು
  • ಸಂಪತ್ತಿನ ಬಗ್ಗೆ ವ್ಯಾಮೋಹ ಕೂಡದು
  • ಬ್ರಹ್ಮಚಾರ್ಯ

  • ಮಹಾವೀರನ ರತ್ನ ತ್ರಯಗಳು
  • A. ಸತ್ಯದಲ್ಲಿ ನಂಬಿಕೆ - ಸಮ್ಯಕ್ ದರ್ಶನ
  • B. ಉತ್ತಮ ಜ್ಞಾನ - ಸಮ್ಯಕ್ ಜ್ಞಾನ
  • C. ಉತ್ತಮ ಚಾರಿತ್ರ್ಯ - ಸಮ್ಯಕ್ ಚಾರಿತ್ರ್ಯ
  • ಸತ್ಯದಲ್ಲಿ ನಂಬಿಕೆ ಎಂದರೆ - ತೀರ್ಥಂಕರರ ಅಸ್ತಿತ್ವವನ್ನು ನಂಬುವುದು
  • ಉತ್ತಮ ಜ್ಞಾನ ಎಂದರೆ - ಜೈನ ಧರ್ಮದ ತತ್ವಗಳನ್ನು ಪಾಲಿಸಿ ಜಯಿಸುವುದು
  • ಉತ್ತಮ ಚಾರಿತ್ರ್ಯ ಎಂದರೆ - ಮಾನವೀಯ ಮೌಲ್ಯಗಳನ್ನಾಧರಿಸಿ ನೀತಿಯುತ ಬಾಳ್ವೆ ನಡೆಸುವುದು
  • ಜೈನರು ಅನುಸರಿಸುತ್ತಿದ್ದ ಉಪವಾಸ ಪದ್ದತಿ - ಸಲ್ಲೇಖನ ವ್ರತ
  • ಜೈನ ಧರ್ಮ ಮೊದಲು ಆರಂಭವಾದುದು - ವೈಶಾಲಿ ಹಾಗೂ ಮಗಧ ದೇಶದಲ್ಲಿ

  • ಜೈನ ಧರ್ಮದ ಶಾಖೆಗಳು
  • ಶ್ವೇತಾಂಬರರು
  • ದಿಗಂಬರರು

  • ಶ್ವೇತಾಂಬರರು
  • ಇವರು ಪಾರ್ಶ್ವನಾಥನ ಅನುಯಾಯಿಗಳು
  • ಬಿಳಿಯ ವಸ್ತ್ರವನ್ನು ಧರಿಸುವವರು

  • ದಿಗಂಬರರು
  • a. ಇವರು ಮಹಾವೀರನ ಅನುಯಾಯಿಗಳು
  • b. ಇವರು ನಗ್ನರಾಗಿರುತ್ತಾರೆ
  • c. ಇವರಿಗೆ ದಿಕ್ಕೆ ಅಂಬರ
  • d. ಉಪವಾಸದ ಮೂಲಕ ದೇಹ ದಂಡಿಸುವುದು ಇವರ ಪದ್ದತಿ

  • ಚಂದ್ರಗುಪ್ತ ಮೌರ್ಯರೊಡನೆ ಶ್ರವಣಬೆಳಗೋಳಕ್ಕೆ ಬಂದ ಜೈನ ಮುನಿಯ ಹೆಸರು - ಭದ್ರಬಾಹು
  • ದಕ್ಷಿಣ ಭಾರತದಲ್ಲಿ ಜೈನ ಧರ್ಮವನ್ನು ಪ್ರಚಾರ ಮಾಡಿದ ಜೈನ ಮುನಿ - ಭದ್ರಬಾಹು
  • ಜೈನ ಧರ್ಮವನ್ನು ರಕ್ಷಿಸಿ ಬೆಳೆಸಿದ ರಾಜ ಮನೆತನಗಳು - ಪಲ್ಲವರು ,ಗಂಗರು ,ರಾಷ್ಟ್ರಕೂಟರು
  • ಜೈನಧರ್ಮದ ಗ್ರಂಥಗಳನ್ನು ಈ ಹೆಸರಿನಿಂದ ಕರೆಯುವರು - ದ್ವಾದಶ ಅಂಗಗಳು

  • ಜೈನ ಧರ್ಮದ ಪವಿತ್ರ ಗ್ರಂಥಗಳು
  • ಆಚಾರಂಗ ಮತ್ತು ಉಪಾಸಾಂಗ
  • ಧವಳ ಮತ್ತು ಜಯಧವಳ

  • Extra Tips

  • ಮಗಧದ ಇಂದಿನ ಹೆಸರು - ಬಿಹಾರ
  • ವೈಶಾಲಿ ನಗರದ ಇಂದಿನ ಹೆಸರು - ವೇಸಾಡ್
  • ಜೈನರ ಮೊದಲ ತೀರ್ಥಂಕರ - ಆಧಿನಾಥ ಅಥವಾ ವೃಷಭನಾಥ
  • ಜಿನ ಪದದ ಅರ್ಥ - ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು ಅಥವಾ ಜಯಿಸಿದವನು
  • ಜೈನ ಧರ್ಮದ ಕೊನೆಯ ತೀರ್ಥಂಕರ - ಮಹಾವೀರ
  • ಕುಂಡಲಿವನದ ಇಂದಿನ ಹೆಸರು - ಬಸುಕುಂದ
  • ಮಹಾವೀರನ ಜನನವಾದದ್ದು - 599
  • ಮಹಾವೀರನು ಸನ್ಯಾಸಿಯಾದುದ್ದು - ತನ್ನ 30 ನೇ ವಯಸ್ಸಿನಲ್ಲಿ
  • ಮಹಾವೀರನ ಪ್ರಥಮ ಗಮಧರ ಅಥವಾ ಶಿಷ್ಯ - ಇಂದ್ರಭೂತಿ
  • ಜೈನ ಧರ್ಮ ಗ್ರಂಥಗಳು ಈ ಭಾಷೆಯಲ್ಲಿದೆ - ಪ್ರಾಕೃತ
  • ಬಿಂಬಸಾರ ಈ ವಂಶದವರು - ಹರ್ಯಾಂಕ
  • ಬಿಂಬಸಾರ ಇನ್ನೋಂದು ಹೆಸರು - ಶ್ರೇಣಿಕ
  • ಬಿಂಬಸಾರನ ಪುತ್ರನ ಹೆಸರು - ಅಜಾತಶತೃ
  • ಮಹಾವೀರನು ನಿರ್ವಾಣ ಹೊಂದಿದ್ದು ಈ ವಯಸ್ಸಿನಲ್ಲಿ - 72
  • ಮಹಾವೀರನು ನಿರ್ವಾಣ ಹೊಂದಿದ್ದ ವರ್ಷ - ಕ್ರಿ.ಪೂ.527
  • ಜೈನರ ಕರ್ನಾಟಕದ ಪ್ರಾಚೀನ ಕೇಂದ್ರಗಳು - ಕೊಪ್ಪಳ ಹಾಗೂ ಶ್ರವಣಬೆಳಗೋಳ
  • ಬಸದಿಗಳೆಂದರೆ - ಜೈನ ಸನ್ಯಾಸಿಗಳು ವಾಸಿಸುವ ವಸತಿ ಗೃಹ
  • ಜೈನರ ಪ್ರಮುಖ ಬಸದಿಗಳು - ಒರಿಸ್ಸಾದ ಹಾಥಿಗುಂಪಾ ,ಕರ್ನಾಟಕದ ಬಾದಾಮಿ
  • ಜೈನರ ಯಕ್ಷಿ ಜನಪ್ರಿಯ ದೇವತೆ - ಪದ್ಮಾವತಿ ಯಕ್ಷಿ
  • ತೀರ್ಥಂಕರರು ಎಂದರೇ - ಮಾರ್ಗದರ್ಶಕರು ಎಂದರ್ಥ ಅಥವಾ ಭವ ಸಾಗರವನ್ನು ದಾಟಬಲ್ಲ ಧರ್ಮಗುರು
  • ಮಹಾವೀರನ ಮೊದಲ ಹೆಸರು - ವರ್ದಮಾನ
  • ತ್ರಿಶಾಲಾದೇವಿ ಈ ವಂಶದ ರಾಜ ಕುಮಾರಿ - ವೈಶಾಲಿಯ ಲಿಚ್ಚವಿ ವಂಶ
  • ಮಹಾವೀರನ ಹೆಣ್ಣು ಮಗುವಿನ ಹೆಸರು - ಅನೋಜ್ಯ ಅಥವಾ ಪ್ರಿಯದರ್ಶನ
  • ವರ್ಧಮಾನನು ಸನ್ಯಾಸತ್ವ ಸ್ವೀಕರಿಸಿದ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾ ಪರಿತ್ಯಾಗ
  • ಕೇವಲನ್ , ನಿರ್ಗ್ರಂಥ ಎಂದು ಕರೆಸಿಕೊಂಡವನು - ಮಹಾವೀರ
  • ಕೇವಲಿನ್ ಎಂದರೆ - ಮಹಾಜ್ಞಾನಿ
  • ನಿರ್ಗ್ರಂಥ ಎಂದರೆ - ಬಂಧಮುಕ್ತ ಎಂದರ್ಥ
  • ಮಹಾವೀರನ ಅನುಯಾಯಿಗಳನ್ನು ಬೌದ್ಧ ಕೃತಿಗಳಲ್ಲಿ ಈ ರೀತಿಯಾಗಿ ಸಂಭೋಧಿಸಲಾಗಿದೆ - ನಿರ್ಗ್ರಂಥರು
  • ಕರ್ಮ ಸಿದ್ಧಾಂತದ ಪ್ರವರ್ತಕ - ಮಹಾವೀರ

  • ಮಹಾವೀರನು ಲೌಕಿಕರಿಗೆ ನೀಡಿದ ಕೆಲ ರಿಯಾಯಿತಿಗಳು
  • ಆಕಸ್ಮಿಕ ಹಿಂಸೆ
  • ಔದ್ಯೋಗಿಕ ಹಿಂಸೆ
  • ರಕ್ಷಣಾ ಸಂಬಂಧಿ ಹಿಂಸೆ
  • ಉದ್ದೇಶ ಪೂರ್ವಕ ಹಿಂಸೆ

  • ಮೋಕ್ಷ ಸಾಧನೆಯ ಮಾರ್ಗಗಳು
  • ತಪಶ್ವರ್ಯ
  • ದೇಹದಂಡನೆ
  • ಪ್ರಾಯೋಪವೇಶನ ( ಸಲ್ಲೇಖನ )
  • ಮೊದಲನೇ ಜೈನ ಸಮ್ಮೇಳನ ನಡೆದ ವರ್ಷ - ಕ್ರಿ.ಪೂ -3 ನೇ ಶತಮಾನ
  • ಮೊದಲನೆ ಜೈನ ಸಮ್ಮೇಳನ ಈ ಪ್ರದೇಶದಲ್ಲಿ ನಡೆಯಿತು - ಪಾಟಲಿಪುತ್ರ
  • ಮೊದಲ ಜೈನ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಸ್ಥೂಲಭದ್ರ
  • ಕ್ರಿ.ಪೂ.5 ನೇ ಶತಮಾನದಲ್ಲಿ - ವಲ್ಲಭಿ ಸಮ್ಮೇಳನ ಗುಜರಾತ್ ನಲ್ಲಿ ದೇವರ್ದಿ ಕಶ್ಮಶರ್ಮನ ಅಧ್ಯಕ್ಷತೆಯಲ್ಲಿ ನಡೆಯಿತು
  • ಗಣಧರರ ಗುರು ಪರಂಪರೆಯನ್ನು ಆರಂಭಿಸಿದವರು - ಸುಧರ್ಮ
  • ವೃಷಭನಾಥನ ಬಗೆಗೆ ಪ್ರಸ್ತಾಪವಿರುವ ಹಿಂದೂ ಗ್ರಂಥಗಳು - ವಿಷ್ಣು ಪುರಾಣ ಹಾಗೂ ಭಗವತ್ ಪುರಾಣ
  • ತ್ರಿರತ್ನಗಳನ್ನು ಪ್ರಚುರಪಡಿಸಿವರು - ಮಹಾವೀರ
  • ಕರ್ನಾಟಕದಲ್ಲಿ ಜೈನರ ಪವಿತ್ರ ಯಾತ್ರ ಸ್ಥಳ - ಹಾಸನ ಜಿಲ್ಲೆಯ ಶ್ರವಣಬೆಳಗೋಳ
  • ಋಗ್ವೇದ ದಲ್ಲಿ ಈ ತೀರ್ಥಂಕರನ ಕುರಿತು ಪ್ರಸ್ತಾಪವಿದೆ - ವೃಷಭನಾಥ
  • ಜೈನ ತತ್ವಕ್ಕಿರುವ ಮತ್ತೋಂದು ಹೆಸರು - ಸ್ಮಾರವಾದ
  • 23 ನೇ ತೀರ್ಥಂಕರ ಪಾರ್ಶ್ವನಾಥನು ಈ ವಂಶಕ್ಕೆ ಸೇರಿದವನು - ಕಾಶಿ
  • ಪಂಚವ್ರತಗಳನ್ನು ಗೃಹಸ್ಥರು ಪಾಲಿಸುವುದನ್ನು ಈ ಹೆಸರಿನಿಂದ ಕರೆಯುವರು - ಅನುವ್ರತಗಳು
  • ಜೈನಧರ್ಮವನ್ನು ರಾಜ್ಯ ಧರ್ಮವನ್ನಾಗಿ ಸ್ವೀಕರಿಸಿದ ಲಿಚ್ಚವಿ ರಾಜ್ಯದ ಯುವ ರಾಜನ ಹೆಸರು - ಅಭಯ
  • ಜೈನ ಧರ್ಮದಲ್ಲಿ ಪೋಸಧ ಎಂದರೆ - ಪೌರ್ಣಮಿಯ ದಿನದಂದು ಜೈನರು ಉಪವಾಸ ಮಾಡುವುದು
  • ಭದ್ರಬಾಹು ಜೈನ ವಿಹಾರಗಳಿಗೆ - 6 ನೇ ಖಲೀಫ
  • ಪಾರ್ಶ್ವನಾಥರು ದೈವಾಧೀನವಾದ ಪ್ರದೇಶ - ಬಂಗಾಳ
  • ಮಹಾವೀರನು ತಪಸ್ಸು ಮಾಡಿದ ಆಲದ ಮರ ಜೃಂಬಿಕಾ ವೃಕ್ಷ ಇರುವ ಸ್ಥಳ - ರುಜುಪಾಲಿಕ
  • ಜೈನ ಧರ್ಮದ ಮಹಾನ್ ಗುರು - ಸುಧಾರ್ಯ
  • ವೃಷಭನಾಥನ ಮಗನ ಹೆಸರು - ಭರತ

  • ಜೈನ ಧರ್ಮದ ಅವನತಿಗೆ ಕಾರಣಗಳು
  • ಜೈನರ ಅನುಯಾಯಿಗಳಲ್ಲಿ ಧರ್ಮದ ಪ್ರಚಾರದ ಆಸಕ್ತಿ ಕಡಿಮೆಯಾದುದು
  • ರಾಜರ ಪ್ರೋತ್ಸಹ ಕ್ರಮೇಣ ಕಡಿಮೆಯಾದುದು
  • ಜೈನ ಧರ್ಮದಲ್ಲಿ ಪಂಥದ ರೂಪಣಿ ಹಾಗೂ ಬಿಕ್ಕಟ್ಟು
  • ಜಾತಿ ಪದ್ದತಿ ಪುನಃ ತಲೆ ಎತ್ತಿದ್ದು
  • ಹಿಂದೂಗಳಲ್ಲಿ ಕಾಣಿಸಿಕೊಂಡ ಸುಧಾರಣಾ ಚಳುವಳಿ
  • ಆಚರಣಿಗೆ ನಿಲುಕದ ಮಹಾವೀರನ ಬೋಧನೆಗಳು

  • ಪ್ರಸಿದ್ದ ಗೊಮ್ಮಟೇಶ್ವರ ( ಶ್ರವಣಬೆಳಗೋಳ ) ನಿರ್ಮಾತೃ - ಚಾವುಂಡರಾಯ
  • ಜೈನರ ಚಿಹ್ನೆ - ಸ್ವಸ್ತಿಕ್ ಮತ್ತು ಅಭಯ ಹಸ್ತ
  • ಜಾನರ ಪ್ರಮುಖ ಪೂಜಾಸ್ಥಳ - ಬಸದಿ
  • ಪಾರ್ಶ್ವನಾಥನ ತಂದೆ ತಾಯಿ - ಅಶ್ವಸೇನಾ ಮತ್ತು ಪ್ರಭಾವತಿ
  • ತ್ರಿಶಾಲಾ ದೇವಿಯ ಅಣ್ಣನ ಹೆಸರು - ಚೇತಕ
  • ಜೃಂಬಿಕ ಗ್ರಾಮ ಈ ನದಿಯ ದಂಡೆಯಲ್ಲಿದೆ - ಋಜುಪಾಲಕ ನದಿ
  • ಪ್ರಸಿದ್ದ ಮೌಂಟ್ ಅಬು ದೇವಾಲಯದ ನಿರ್ಮಾತೃ - ಗುಜರಾತಿನ ರಾಜಕುಮಾರ ಕುಮಾರ ಪಾಲ
  • 1000 ಕಂಬಗಳಿರುವ ಜೈನ ಬಸದಿ ಇರುವ ಕರ್ನಾಟಕ ಸ್ಥಳ - ಮೂಡಬಿದ್ರೆ
  • ಜೈನರ ಮೆಕ್ಕಾ ಎಂದು ಕರೆಯಲ್ಪಡುವ ಸ್ಥಳ - ಮೂಡಬಿದ್ರೆ
  • ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ - ಶ್ರವಣಬೆಳಗೋಳ

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...