Wednesday, 15 February 2017

ಪ್ರೀತಿ ಜಮಾನ

ಒಂದು ದಿನ ಸಂಜೆ,
ಯಾರೋ ಮನೆ ಬಾಗಿಲು ತಟ್ಟಿದರು.

ಬಾಗಿಲು ತೆಗೆದು ನೋಡಿದರೆ ಹೊರಗಡೆ ನಾಲ್ವರು ಅಪರಿಚಿತರು
ನಿಂತಿದ್ದರು.
‘ಯಾರೋ ಪ್ರವಾಸಿಗರಂತೆ ಕಾಣುತ್ತಿದ್ದೀರಿ. ಬನ್ನಿ ಒಳಗೆ’ ಎಂದು ಆತ  ಆಹ್ವಾನಿಸಿದ.

 ‘ಹೆಂಡತಿ-ಮಕ್ಕಳು ಮನೆಯಲ್ಲಿದ್ದಾರೆಯೇ?’ ಎಂದು ಕೇಳಿದ  ನಾಲ್ವರಲ್ಲೊಬ್ಬ. ‘ಇಲ್ಲ. ಅವರು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇನ್ನೇನು
ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ.

ಯಾಕೆ?’ ಎಂದು ಕೇಳಿದ ಮನೆಯಾತ.

 ‘ಹಾಗಾದರೆ ಅವರು ಬರುವವರೆಗೆ ನಾವು ಒಳ ಬರುವಂತಿಲ್ಲ’ ಎಂದ ಇನ್ನೊಬ್ಬ.

ಸ್ವಲ್ಪ ಹೊತ್ತಿನ ನಂತರ ಹೆಂಡತಿ, ಮಕ್ಕಳು ಮನೆಗೆ ವಾಪಸಾದರು.

ಆಗ ಮನೆಯಾತ ಅಪರಿಚಿತರು ಬಂದಿರುವ ಬಗ್ಗೆ ಹೇಳಿದ.

‘ಆ ನಾಲ್ವರು ಇಲ್ಲೇ ಎಲ್ಲೋ ಇರಬೇಕು. ಹುಡುಕಿ ಕರೆದುಕೊಂಡು  ಬಾ’ ಎಂದು ಮನೆಯ ಯಜಮಾನ  ಮಗನನ್ನು ಕಳುಹಿಸಿದ. 

ಸ್ವಲ್ಪ ದೂರದಲ್ಲಿ ಹೋಗುತ್ತಿದ್ದ ಆ ನಾಲ್ವರನ್ನು ಮಗ ಮನೆಗೆ ಆಹ್ವಾನಿಸಿದ.

ಆಗ ಒಬ್ಬ ಹೇಳಿದ ‘ನಾವು ನಾಲ್ಕೂ ಜನರು ಏಕಕಾಲಕ್ಕೆ ಮನೆಯೊಳಗೆ ಬರುವುದಿಲ್ಲ’.

‘ಹೌದಾ? ಹಾಗೇಕೆ?’ ಎಂದು ಕೇಳಿದ ಮಗ.

ಪಕ್ಕದಲ್ಲಿ ನಿಂತಿದ್ದವನನ್ನು ತೋರಿಸಿ ಒಬ್ಬ ಹೇಳಿದ;
ಈತನ ಹೆಸರು ಸಂಪತ್ತು, ಅವರಿಬ್ಬರು ಸಂತೋಷ ಮತ್ತು
ಯಶಸ್ಸು , ನಾನು ಪ್ರೀತಿ. ನಾವೆಲ್ಲರೂ ಒಟ್ಟಿಗೆ ಬರುವುದಿಲ್ಲ. ನಾಲ್ವರಲ್ಲಿ ಯಾರು ಬರಬೇಕೆಂದು ಕೇಳಿಕೊಂಡು ಬಾ’ ಎಂದ.

ಮಗ ಮನೆಗೆ ಬಂದು ನಡೆದ ವಿಷಯ ತಿಳಿಸಿದ.

ಅಪ್ಪ ಹೇಳಿದ ‘ಹಾಗಾದರೆ ಯಶಸ್ಸನ್ನು ಕರೆಯೋಣ.
ಅವನಿಂದ ಮನೆಗೆ ಒಳಿತಾಗುತ್ತದೆ’.

ಅಮ್ಮ ಅದಕ್ಕೆ ಒಪ್ಪಲಿಲ್ಲ, ಆಕೆ ಸಂಪತ್ತನ್ನು ಕರೆಯೋಣ ಎಂದಳು.

ಮಗಳು ಸಂತೋಷವನ್ನೇ ಕರೆಯೋಣ ಎಂದಳು.

‘ಬೇಡ ನಾವು ಪ್ರೀತಿಯನ್ನು ಒಳಗೆ ಕರೆಯೋಣ’ ಎಂದು ಮಗ ಘೋಷಿಸಿದ. ಎಲ್ಲರೂ ಮಗನ ಮಾತನ್ನು  ಒಪ್ಪಿದರು. 

ಮಗ ನಾಲ್ವರಿದ್ದಲ್ಲಿಗೆ ಬಂದು, ‘ನಿಮ್ಮಲ್ಲಿ ಪ್ರೀತಿ ಎನ್ನುವವರು ನಮ್ಮ ಮನೆಗೆ ಬರಬಹುದು’ ಎಂದ. 

ಪ್ರೀತಿ ಎದ್ದು ಮನೆ ಕಡೆಗೆ ನಡೆದು ಬರತೊಡಗಿದ, 

ಅಚ್ಚರಿಯೆಂಬಂತೆ ಉಳಿದ ಮೂವರೂ ಆತನನ್ನು ಹಿಂಬಾಲಿಸಿಕೊಂಡು ಬಂದರು!

ಹುಡುಗ ಕೇಳಿದ ‘ನಾಲ್ವರೂ ಒಟ್ಟಿಗೆ ಬರಲಾಗದು ಎಂದಿರಲ್ಲ?!

ಆಗ ಪ್ರೀತಿ ನಕ್ಕು ಹೇಳಿತು, ‘ನೀವು ಸಂತೋಷ, ಸಂಪತ್ತು,
ಯಶಸ್ಸಿನಲ್ಲಿ ಯಾರಾದರೊಬ್ಬರನ್ನು ಆರಿಸಿಕೊಂಡಿದ್ದರೆ ಅವರು  ಮಾತ್ರ ಬರುತ್ತಿದ್ದರು. ಆದರೆ ನೀವು ಪ್ರೀತಿಯನ್ನು
ಆಹ್ವಾನಿಸಿದ್ದರಿಂದ ಉಳಿದ ಮೂರೂ ಕೂಡ ನಿಮಗೆ ಸಿಗುತ್ತದೆ. 

ಪ್ರೀತಿ ಇರುವಲ್ಲಿ ಸಂತೋಷ, ಸಂಪತ್ತು, ಯಶಸ್ಸು ಮನೆ
ಮಾಡುತ್ತದೆ’ ಎಂದ.

ಜೀವನದಲ್ಲಿ ಪ್ರೀತಿಯಿದ್ದವನಿಗೆ ಮಾತ್ರ ಸಂತೋಷ, ನೆಮ್ಮದಿ, ಯಶಸ್ಸು ಸಿಗಲು ಸಾಧ್ಯ.

ದ್ವೇಷದಿಂದ ಸಾಧಿಸಲಾಗದನ್ನು ಪ್ರೀತಿಯಿಂದ ಸಾಧಿಸಬಹುದು.           
   👌🙏👌

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...