ಭಾರತದ ಚಿನ್ಹೆಗಳು
1} #ರಾಷ್ಟ್ರಧ್ವಜ
=> ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2
=> ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ
=> ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ.
=> ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.
=> ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.
=> ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು.
=> ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.
=> ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು.
=> ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು
=> ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ.
=> ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.
2} #ರಾಷ್ಟ್ರೀಯ_ಚಿನ್ಹೆ
=> ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ.
=> ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ.
=> ಭಾರತ ಸರ್ಕಾರವು ಇದನ್ನು 26 ಜನೆವರಿ 1950 ರಂದು ಅಳವಡಿಸಿಕೊಂಡಿತು.
=> ಇದರ ಕೆಳಗೆ ಮಂಡಕೊಪನಿಷತ್ತಿನಿಂದ ಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.
=> ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು.
3} #ರಾಷ್ಟ್ರೀಯ_ಹೂವು
=> ಭಾರತದ ಪುಷ್ಪ - ಕಮಲದ ಹೂವು
=> ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ.
=> ಕಮಲದ ವೈಜ್ಞಾನಿಕ ಹೆಸರು - ನೀಲುಂಬಾ ನುಸಿಫೇರಾ(Nelumbo nucifera)
=> ಸಸ್ಯ ಸಂಪತ್ತಿನಲ್ಲಿ ಭಾರತ ಜಗತ್ತಿನಲ್ಲಿ 10 ನೇ ಸ್ಥಾನದಲ್ಲಿದೆ.
4} #ರಾಷ್ಟ್ರಗೀತೆ
=> ಭಾರತದ ರಾಷ್ಟ್ರಗೀತೆ 'ಜನಗಣಮನ"
=> ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ್
=> ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.
=> ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
=> ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ.
=> ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.
=> ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ ಹಾಡುವ ನಿಯಮವಿದೆ.
=> ರವೀಂದ್ರನಾಥ ಟ್ಯಾಗೋರ್ ರವರ 'ಅಮರ್ ಸೋನಾರ್ ಬಾಂಗ್ಲಾ' ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ( ಈ ಗೀತೆಯನ್ನು 1905 ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ರಚಿಸಿದ್ದರು)
=> 1905 ರ ಬಂಗಾಳ ವಿಭಜನೆ ವಿರೋಧಿಸಿ ಇವರು ಹಿಂದೂ ಮುಸ್ಲಿಂರಿಗೆ "ರಕ್ಷಾಬಂಧನ" ಆಚರಿಸುವಂತೆ ಕರೆ ನೀಡಿದ್ದರು.
5} #ರಾಷ್ಟ್ರೀಯ_ಹಾಡು
=> ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು ಭಾರತದ ಸಂವಿಧಾನ ರಚನಾ ಸಭೇಯನ್ನು ಜನೆವರಿ 24 1950 ರಂದು ಅಳವಡಿಸಿಕೊಂಡಿತು.
=> ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ ಚಟ್ಟೋಪಧ್ಯಾಯರು 1882 ರಲ್ಲಿ ರಚಿಸಿದ 'ಆನಂದಮಠ' ಕಾದಂಬರಿಯಿಂದ ಆಯ್ದುಕ್ಕೊಳ್ಳಲಾಗಿದೆ.
=> ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾ ಕಾಂಗ್ರೆಸ್ಸ ಅಧಿವೇಶನದಲ್ಲಿ ಹಾಡಲಾಯಿತು.
=> ಭಾರತಕ್ಕೆ ಸ್ವಾತಂತ್ರ ದೊರೆಯವರೆಗೂ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡಲಾಗುತ್ತಿತ್ತು.
=> ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.
6} #ರಾಷ್ಟ್ರೀಯ_ಪಂಚಾಂಗ
=> ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ.
=> ಇದನ್ನು ಮಾರ್ಚ 22, 1957 ರಂದು ಅವಡಿಸಿಕ್ಕೊಳಲಾಗಿದೆ.
=> ಸಾಮಾನ್ಯ ವರ್ಷದ ಮೊದಲ ದಿನಾಂಕ - ಮಾರ್ಚ 21
=> ಅಧಿಕ ವರ್ಷದ ಮೊದಲ ದಿನಾಂಕ - ಮಾರ್ಚ 22
=> ಕ್ರಿ.ಶ 78 ಶಾಲಿವಾನ ಶಕೆ ವರ್ಷವನ್ನು ಕುಶಾನರ ಅರಸ ಕನಿಷ್ಕನು ಅಧಿಕಾರಕ್ಕೆ ಬಂದಿರುವದರ ನೆನಪಿಗಾಗಿ ಜಾರಿಗೆ ತಂದನು.
=> 2015 ರ ವರ್ಷವನ್ನು ಭಾರತೀಯ ಕ್ಯಾಲೆಂಡರನಂತೆ 1937 ನೇ ವರ್ಷ ಎನ್ನಲಾಗುವುದು.
=> ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ ಮೊದಲನೇ ತಿಂಗಳು - ಚೈತ್ರ
=> ಕೊನೆಯ ತಿಂಗಳು - ಫಾಲ್ಗುಣ
=> ರಾಷ್ಟ್ರೀಯ ಪಂಚಾಂಗದ ತಿಂಗಳುಗಳು : ಚೈತ್ರ ವೈಶಾಖ ಜೇಷ್ಟ ಆಶಾಢ ಶ್ರಾವಣ ಭಾದ್ರಪದ ಅಶ್ವಿನ್ ಕಾರ್ತಿಕ ಮೃಗಶಿರ ಪುಷ್ಯ ಮಾಘ ಫಾಲ್ಗುಣ
7} #ರಾಷ್ಟ್ರೀಯ_ಕ್ರೀಡೆ
=> ಭಾರತದ ರಾಷ್ಟ್ರೀಯ ಕ್ರೀಡೆ - ಹಾಕಿ
=> ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ.
=> ಭಾರತ ಹಾಕಿ ತಂಡ ಒಟ್ಟು 08 ಸಲ ಓಲಂಪಿಕ್ಸನಲ್ಲಿ ಚಿನ್ನದ ಪದಕ ಗೆದ್ದಿದೆ.
=> ಕರ್ನಾಟಕದ ಕೊಡಗು ಜಿಲ್ಲೆಗೆ ಹಾಕಿಯ ತವರೂರು ಎನ್ನುತ್ತಾರೆ.
=> ಭಾರತದ ಹಾಕಿಯ ಮಾಂತ್ರಿಕ - ಧ್ಯಾನಚಂದ್
=> ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಅಗಷ್ಟ್ -29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುವರು.
=> ಕರ್ನಾಟಕದ ರಾಷ್ಟ್ರೀಯ ಕ್ರೀಡೆ ಸಹ ಹಾಕಿ ಆಗಿದೆ.
=> ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ ಹಾಕಿ ಕ್ರೀಡೆಯ ಟ್ರೋಫಿಯಾಗಿದೆ.
=> ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ - 70 ನಿಮಿಷಗಳು.
8} #ರಾಷ್ಟ್ರೀಯ_ನದಿ
=> ಭಾರತದ ರಾಷ್ಟ್ರೀಯ ನದಿ - ಗಂಗಾನದಿ
=> ನವೆಂಬರ್ 04, 2008 ರಂದು ಗಂಗಾನದಿಯನ್ನು ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು ಘೋಷಿಸಿದರು.
=> ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ ಉದ್ದವಾಗಿದೆ(2510 km)
=> ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ ಪಾಟ್ನಾದಲ್ಲಿ.
9} #ರಾಷ್ಟ್ರೀಯ_ಜಲಪ್ರಾಣಿ
=> ಭಾರತ ಸರ್ಕಾರವು ಅಕ್ಟೋಬರ್ 05,2009 ರಂದು ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಪ್ರಾಣಿ ಎಂದು ಘೋಷಿಸಿದೆ.
=> ಡಾಲ್ಫಿನದ ವೈಜ್ಞಾನಿಕ ಹೆಸರು - ಪ್ಲಾಂಟಾನಿಷ್ಟಾ ಗ್ಯಾಂಗ್ಯಾಟಿಕಾ.((Platanista gangetica)
10} #ರಾಷ್ಟ್ರೀಯ_ಪಕ್ಷಿ
=> ಭಾರತದ ರಾಷ್ಟ್ರೀಯ ಪಕ್ಷಿ - ನವಿಲು
=> ಭಾರತದ ವನ್ಯಜೀವಿ ರಕ್ಷಣಾ ಕಾಯ್ದೆ - 1972 ರ ಅಡಿಯಲ್ಲಿ ನವಿಲು ಸಂರಕ್ಷಿಸಲಾಗುವುದು.
=> ನವಿಲಿನ ವೈಜ್ಞಾನಿಕ ಹೆಸರು - ಪಾವೋ ಕ್ರಿಸ್ಟಾಟಸ್ (pavo cristatus)
=> ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ ನವಿಲು ವನ್ಯಧಾಮಗಳಿವೆ.
11} #ರಾಷ್ಟ್ರೀಯ_ಮರ
=> ಭಾರತದ ರಾಷ್ಟ್ರೀಯ ಮರ - ಬನಯಾನ್ ಅಥವಾ ಅರಳಿ ಮರ.
=> ಅರಳಿ ಮರದ ವೈಜ್ಞಾನಿಕ ಹೆಸರು - ಫೈಕಾಸ್ ಬೆಂಗಾಲೆನಿಸ್ (ficus benghalensis)
=> ಅರಳಿ ಮರದ ಬೇರುಗಳು ತಂತುರೂಪಗಳಾಗಿವೆ.
=> ಗೌತನ ಬುದ್ದನಿಗೆ ಜ್ಞಾನೋದಯವಾದದ್ದು ಬಿಹಾರದ ಗಯಾದ ನಿರಂಜನ ನದಿಯ ದಡದಲ್ಲಿರುವ ಅರಳಿ ಮರದ ಕೆಳಗೆ.
=> ಗೌತಮ ಬುದ್ದನ ಆಧ್ಯಾತ್ಮಿಕ ಗುರು - ಅಲಾರ ಕಮಾ
=> ಭಾರತದ ಅತ್ಯಂತ ದೊಡ್ಡ ಅರಳಿ ಇರುವುದು - ಕಲ್ಕತ್ತದಲ್ಲಿ.
=> ಪ್ರಪಂಚದ ಅತಿ ದೊಡ್ಡ ವೃಕ್ಷ - ದೈತ್ಯ ಸಿಕೋಯ್ ಮರ.
=> ಮರಗಳ ಆಯುಷ್ಯವನ್ನು ನಿರ್ಧರಿಸುವುದು ಅವುಗಳು ಕಾಂಡದಲ್ಲಿರುವ ಸೆಲ್ಯುಲಸನಿಂದ ಮಾಡಲ್ಪಟ್ಟಿರುವ ವೃತ್ತಗಳ ಸಂಖ್ಯೆಯ ಆಧಾರದ ಮೇಲೆ.
12} #ರಾಷ್ಟ್ರೀಯ_ಹಣ್ಣು
=> ಭಾರತದ ರಾಷ್ಟ್ರೀಯ ಹಣ್ಣು - ಮಾವಿನ ಹಣ್ಣು
=> ಮಾವಿನ ವೈಜ್ಞಾನಿಕ ಹೆಸರು - ಮ್ಯಾಂಜಿಫೇರಾ ಇಂಡಿಕಾ (mangifera indica)
=> ಮಾವಿ ಹಣ್ಣಿನಲ್ಲಿರುವ ಜೀವಸತ್ವಗಳು - A,C,D
=> ಭಾರತವು ಮಾವಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ.
13} #ರಾಷ್ಟ್ರೀಯ_ವಂಶಪಾರಂಪರ್ಯ_ಪ್ರಾಣಿ
=> ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ.
=> ಆನೆಯ ವೈಜ್ಞಾನಿಕ ಹೆಸರು - ಎಲಿಫಾಸ್ ಮ್ಯಾಕ್ಷಿಮಸ್ (elephas maximus)
=> ಭೂವಾಸಿಗಳಲ್ಲಿ ದೊಡ್ಡದಾದ ಪ್ರಾಣಿ - ಆಪ್ರಿಕಾದ ಆನೆ.
=> ಭಾರತದ ಆನೆಗಳ ಯೋಜನೆ ಜಾರಿಗೆ ತಂದ ವರ್ಷ - 1992.
=> ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ.
=> ಕರ್ನಾಟಕದ ರಾಜ್ಯ ಪ್ರಾಣಿ - ಆನೆ.
14} #ರಾಷ್ಟ್ರೀಯ_ಪ್ರಾಣಿ
=> 1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು.
=> ಭಾರತದ ಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು.
=> ಹುಲಿಯ ವೈಜ್ಞಾನಿಕ ಹೆಸರು - ಪ್ಯಾಂಥೇರಾ ಟ್ರೈಗಿಸ್. (Panthera tigris)
=> ಭಾರತದ ಮೊದಲ ಹುಲಿ ಅಭಯಾರಣ್ಯ - ಉತ್ತರಖಂಡದ ಕಾರ್ಬೆಟ್
=> ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ.
=> ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ - ಆಂದ್ರಪ್ರದೇಶದ ನಾಗಾರ್ಜುನ ಸಾಗರ
=> ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ - ಪಶ್ಚಿಮ ಬಂಗಾಳದ ಸುಂದರಬನ್ಸ್
=> ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ - 1972
15} #ರಾಷ್ಟ್ರೀಯ_ಕಟ್ಟಡ
=> ದೆಹಲಿಯಲ್ಲಿರುವ ಇಂಡಿಯಾ ಗೇಟ್ ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ.
16} #ರಾಷ್ಟ್ರೀಯ_ದೊರೆ
=> ಮೌರ್ಯ ವಂಶದ ಚಂದ್ರಗುಪ್ತ ಮೌರ್ಯ.