Friday, 23 December 2016

ಅನ್ನದ ಮಹತ್ವ

*ರತನ್ ಟಾಟಾ* ಹೇಳಿದ
“ *ಊಟದ ಸ್ಟೋರಿ*”:
ವಿಶ್ವದ ಶ್ರೀಮಂತ ಉಧ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ರತನ್ ಟಾಟಾ ಜರ್ಮನಿಯಲ್ಲಿ  ತಮಗೆ ಎದುರಾದ ಒಂದು ಸನ್ನಿವೇಶವನ್ನ ಹಂಚಿಕೊಂಡಿದ್ದಾರೆ.
ಒಂದು ಸಾರಿ ನಾವು ಜರ್ಮನಿಗೆ ಹೊಗಿದ್ದೆವು.
ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು.
ಹಂಬರ್ಗ್ ನಲ್ಲಿ  ಊಟ ಮಾಡಲು ಅಲ್ಲಿನ ಹೋಟೆಲ್’ಗೆ ಹೋದೆವು.
ಬಹಳ ಟೇಬಲ್ ಖಾಲಿ ಇವೆ.
ನಮಗೆ ಆಶ್ಚರ್ಯವಾಯಿತು.
ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ.
ಒಂದು ಮೂಲೆಯ ಟೇಬಲ್ ನಲ್ಲಿ ವೃದ್ಧರು ಒಂದೇ ಊಟ ತರಿಸಿಕೊಂಡು ಅದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು.
ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದರಲ್ಲ ಎನ್ನಿಸಿತು.
ನಾವು ನಮ್ಮ ಸ್ಟೇಟಸ್ ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು.
ನಮ್ಮವರು ಕೆಲವು ತಿನಿಸುಗಳು ಇಷ್ಟವಾಲಿಲ್ಲವೆಂದು,
ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು.!!
ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಹಾಗೆ ವೆಸ್ಟ್ ಮಾಡಬಾರದು ಅದು ನಮ್ಮ ಆಹಾರ ಎಂದಳು.!!
ನಮ್ಮವರು ಅದು ನಮ್ಮಿಷ್ಟ ಎಂದರು. ತಕ್ಷಣ ಪೋನ್ ತೆಗೆದು ಆಕೆ ಯಾರಿಗೋ ಪೋನ್ ಮಾಡಿದಳು.!!
ಪೊಲೀಸರು ಬಂದರು.!!!!
ನಡೆದಿದ್ದನ್ನು ಕೇಳಿದರು.
ನಮಗೆ 50 ಯೂರೋ ದಂಡ ಹಾಕಿದರು. ಮರುಮಾತನಾಡದೇ ಕಟ್ಟಿ ಬಂದೆವು.
ಅವರು ಹೇಳಿದರು
"ಹಣ ನಿಮ್ಮದು ಅಷ್ಟೇ,
ಇಲ್ಲಿಯ ಸಂಪನ್ಮೂಲಗಳಲ್ಲ.!!
ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ.!!
ಆಮೂಲಕ ನೀವು ನಮ್ಮ ದೇಶದ ಸಂಪತ್ತನ್ನು ನಷ್ಟ ಮಾಡಿದ್ದೀರಿ.!!!
ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.!!!"
ಇದು ನಮಗೆ ಒಂದು ಗುಣಪಾಠವಲ್ಲವೇ…?
“ *MONEY* *IS* *YOURS*
*BUT RESOURCES BELONGS TO THE SOCIETY*”

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...