Wednesday, 3 June 2020

ಪ್ರತಿದಿನ ಕ್ಯಾರೆಟ್ ಸೇವಿಸಿ‌ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಿ.

ನೈಸರ್ಗಿಕವಾಗಿ ಸಿಹಿ ಮತ್ತು ರುಚಿಕರವಾಗಿರುವ ಕ್ಯಾರೆಟ್ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವಾಗುವ ತರಕಾರಿ. ಏಕೆಂದರೆ ಇದನ್ನು ಬೇಯಿಸದೇ ಹಾಗೆಯೇ ಹಸಿಯಾಗಿ ಕೂಡ ಸೇವಿಸಬಹುದಾದಂತಹ ಮತ್ತು ಅತ್ಯಂತ ಹೆಚ್ಚಿನ ರೀತಿಯ ಪೌಷ್ಟಿಕಾಂಶವನ್ನು ಹೊಂದಿರುವಂತದ್ದಾಗಿದೆ. ಇದನ್ನು ಎಲ್ಲಾ ದೇಶದಲ್ಲಿಯೂ ಬೆಳೆಯುತ್ತಾರೆ.


Carrots Nutrition, Health Benefits, Recipes and Carrot Juice - Dr. Axe


ಇದರಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಯಥೇಚ್ಛವಾಗಿದ್ದು, ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುವುದಲ್ಲದೇ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕ್ಯಾರೋಟಿನ್ ಅಂಶವು ಆಯಂಟಿಆಕ್ಸಿಡೆಂಟ್ ಗುಣವನ್ನು ಹೊಂದಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.


Scientists Identify Gene Linked to Thinness – Unique to People ...



ಕ್ಯಾರೆಟ್ ನಲ್ಲಿ ಸುಲಭವಾಗಿ ಕರಗಬಲ್ಲ ಫೈಬರ್ ಅಂಶವೂ ಇರುವುದರಿಂದ ಜೀರ್ಣಕ್ರಿಯೆಯಲ್ಲಿ ಸಕ್ಕರೆ ಮತ್ತು ಪಿಷ್ಟದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕರಗದೇ ಇರುವ ಫೈಬರ್ ಕೂಡ ಇದೆ. ಅದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಮಾತ್ರ ಅಲ್ಲಾ ಅದರ ಎಲೆಗಳನ್ನು ಸಹ ತಿನ್ನಬಹುದು. ಈ ಎಲೆಗಳು ಪ್ರೋಟೀನ್, ವಿಟಮಿನ್ಸ್, ಖನಿಜಾಂಶಗಳಿಂದ ಸಮೃದ್ಧವಾಗಿದ್ದು ಪ್ರತ್ಯೇಕ ರುಚಿಯನ್ನು ಹೊಂದಿದೆ.


Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...