Sunday, 19 May 2024

ಊಟದ ಮಧ್ಯೆ ಸಿಗುವ ಕರಿಬೇವಿನ ಎಲೆ ತಿನ್ನದೆ ಪಕ್ಕಕ್ಕೆ ಇಡಬೇಡಿ ! ಕರಿಬೇವಿನ ಎಲೆಯ ಅದ್...


Curry Leaves: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿದು ತಿಂದರೆ ಏನಾಗುತ್ತೆ ಗೊತ್ತಾ?


Benefits of Curry Leaves: ಆಹಾರಗಳ ರುಚಿ ಹೆಚ್ಚಿಸಲು ಕರಿಬೇವಿನ ಎಲೆಗಳನ್ನು ಬಳಲಾಗುತ್ತದೆ. ಆದರೆ ಈ ಎಲೆಗಳನ್ನು ಬೆಳಗ್ಗೆ ಬೇಗನೆ ಅಗಿಯುವುದು ತುಂಬಾ ಪ್ರಯೋಜನಕಾರಿ. ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಜೀವಸತ್ವಗಳು ಮತ್ತು ಮೆಗ್ನೀಸಿಯಮ್‍ನಂತಹ ಪೋಷಕಾಂಶಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ.

ಕರಿಬೇವಿನ ಎಲೆಗಳ ಪ್ರಯೋಜನಗಳು


ಕರಿಬೇವಿನ ಎಲೆ ತಿನ್ನುವ ಪ್ರಯೋಜನಗಳು: ಭಾರತೀಯ ಅಡುಗೆಮನೆಯಲ್ಲಿ ಕರಿಬೇವಿನ ಎಲೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಈ ಎಲೆಯನ್ನು ಬಳಸುತ್ತಾರೆ. ಯಾವುದೇ ಆಹಾರದ ರುಚಿಯನ್ನು ಕರಿಬೇವಿನ ಎಲೆಗಳಿಂದ ಸುಧಾರಿಸಬಹುದು. ಕರಿಬೇವಿನ ಎಲೆಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಕರಿಬೇವಿನ ಸೊಪ್ಪು ಆರೋಗ್ಯದ ನಿಧಿ:
ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಜೀವಸತ್ವಗಳು ಮತ್ತು ಮೆಗ್ನೀಸಿಯಮ್‍ನಂತಹ ಪೋಷಕಾಂಶಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನೀವು ಪ್ರತಿದಿನ ಬೆಳಗ್ಗೆ 3 ರಿಂದ 4 ಹಸಿರು ಎಲೆಗಳನ್ನು ಅಗಿದು ಸೇವಿಸಿದರೆ ಅದು ನಿಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿಯಿರಿ.

ಕರಿಬೇವಿನ ಎಲೆಗಳ ಪ್ರಯೋಜನಗಳು

ಕರಿಬೇವಿನ ಎಲೆ ತಿನ್ನುವುದರ ಅದ್ಭುತ ಪ್ರಯೋಜನಗಳು

1. ಕಣ್ಣುಗಳಿಗೆ ಒಳ್ಳೆಯದು: ಕರಿಬೇವಿನ ಎಲೆಗಳನ್ನು ತಿನ್ನುವುದು ರಾತ್ರಿ ಕುರುಡುತನ ಅಥವಾ ಇತರ ಅನೇಕ ಕಣ್ಣಿನ ಸಂಬಂಧಿತ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ. ಏಕೆಂದರೆ ಇದರಲ್ಲಿ ಅಗತ್ಯವಾದ ಪೋಷಕಾಂಶವಾದ ವಿಟಮಿನ್ ‘ಎ’ ಕಂಡುಬರುತ್ತದೆ. ಇದು ದೃಷ್ಟಿ ಸುಧಾರಿಸಲು ಸಹಾಯಕವಾಗಿದೆ.

2. ಮಧುಮೇಹದಲ್ಲಿ ಸಹಾಯಕ: ಮಧುಮೇಹ ರೋಗಿಗಳಿಗೆ ಕರಿಬೇವಿನ ಎಲೆಗಳನ್ನು ಅಗಿಯಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿರುತ್ತವೆ.

3. ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ: ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯಬೇಕು. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆ, ಆಮ್ಲೀಯತೆ, ಉಬ್ಬಳಿಕೆ ಸೇರಿದಂತೆ ಎಲ್ಲಾ ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

4. ಸೋಂಕಿನಿಂದ ರಕ್ಷಣೆ: ಆಂಟಿಫಂಗಲ್ ಮತ್ತು ಆ್ಯಂಟಿಬಯೋಟಿಕ್ ಗುಣಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ. ಇದು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ ಮತ್ತು ರೋಗಗಳ ಅಪಾಯವನ್ನು ತಡೆಯುತ್ತದೆ.

5. ತೂಕ ಕಡಿಮೆಯಾಗುತ್ತದೆ: ಕರಿಬೇವಿನ ಎಲೆಗಳನ್ನು ಜಗಿಯುವುದರಿಂದ ತೂಕ ನಷ್ಟ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಈಥೈಲ್ ಅಸಿಟೇಟ್, ಮಹಾನಿಂಬಿನ್ ಮತ್ತು ಡೈಕ್ಲೋರೋಮೆಥೇನ್ ನಂತಹ ಪೋಷಕಾಂಶಗಳು ಕಂಡುಬರುತ್ತವೆ.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮನೆಮದ್ದು ಮತ್ತು ಸಲಹೆ ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯರ ಸಲಹೆ ಪಾಲಿಸಬೇಕು.)

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...