Friday, 16 February 2024

ಈ ಆಹಾರಗಳನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ, ಈಸಿಯಾಗಿ ತೂಕ ಇಳಿಸಿಕೊಳ್ಳಬಹುದು!


ಈ ಆಹಾರಗಳನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ, ಈಸಿಯಾಗಿ ತೂಕ ಇಳಿಸಿಕೊಳ್ಳಬಹುದು!

ಖಾಲಿ ಹೊಟ್ಟೆಗೆ ಕೆಲವೊಂದು ಆಹಾರಗಳನ್ನು ಸೇವನೆ ಮಾಡುವುದರಿಂದ, ಈಸಿಯಾಗಿ ದೇಹದ ತೂಕ ಇಳಿಸಿಕೊಳ್ಳಬಹುದು.

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಾದರೆ ಕೆಲವೊಂದು ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಈಸಿಯಾಗಿ ದೇಹದ ತೂಕ ಇಳಿಸಿಕೊಳ್ಳಬಹುದು! ಹಾಗಾದ್ರೆ ಆ ಆಹಾರ ಗಳು ಯಾವುದು ಎನ್ನುವುದನ್ನು ಒಂದೊಂದಾಗಿ ನೋಡುತ್ತಾ ಹೋ ಗೋಣ...


ನೆನೆಸಿಟ್ಟ ಬಾದಾಮಿ ಬೀಜಗಳು

ಪ್ರೋಟೀನ್ ಅಂಶಗಳು ಹೆಚ್ಚಿರುವ ಬಾದಾಮಿ ಬೀಜಗಳನ್ನು ನೆನೆಸಿಟ್ಟು, ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ, ದೇಹದ ತೂಕ ಇಳಿಸಲು ನೆರವಾಗುತ್ತದೆ.


ಮೊಳಕೆ ಕಟ್ಟಿದ ಕಾಳುಗಳು

ಪ್ರೋಟೀನ್ ಮತ್ತು ನಾರಿನಾಂಶ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ ಕಡಿಮೆ ಪ್ರಮಾಣದಲ್ಲಿಇರುವ ಕಾರಣದಿಂದ, ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಮೊಳಕೆ ಕಟ್ಟಿದ ಕಾಳು ಗಳುಒಳ್ಳೆಯ ಕೆಲಸ ಮಾಡುತ್ತವೆ.



ನಿಂಬೆ ನೀರಿನ ಪಾನೀಯ

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ತಾಜಾ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು, ಸಕ್ಕರೆ ಮತ್ತು ಉಪ್ಪು ಹಾಕದೆ ಖಾಲಿ ಹೊಟ್ಟೆ ಯಲ್ಲಿ ಕುಡಿದರೆ, ದೇಹದ ತೂಕ ಇಳಿಸಲು ನೆರವಾಗುತ್ತದೆ.



ಸೇಬು ಹಣ್ಣು

ಸೇಬು ಹಣ್ಣಿನಲ್ಲಿ ಕಂಡು ಬರುವಂತಹ ಹಲವಾರು ಬಗೆಯ ವಿಟಮಿನ್ಸ್ ಗಳು, ಪೋಷಕಾಂಶಗಳು ಹಾಗೂ ಕರಗುವ ನಾರಿನಾಂಶ ಅಧಿಕ ಪ್ರಮಾಣ ದಲ್ಲಿ ಕಂಡು ಬರುವುದರಿಂದ, ಖಾಲಿ ಹೊಟ್ಟೆಗೆ ಈ ಹಣ್ಣನ್ನು ಸೇವನೆ ಮಾಡಿದರೆ, ದೇಹದ ತೂಕ ಇಳಿಸಿಕೊಳ್ಳಬಹುದು.



ಪಪ್ಪಾಯಿ ಹಣ್ಣು

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಅದರಿಂದ ತೂಕ ಇಳಿಸಲು ತುಂಬಾ ನೆರವಾಗಲಿದೆ. ಇದಕ್ಕೆ ಪ್ರಮುಖ ಕಾರಣ, ಈ ಹಣ್ಣಿನಲ್ಲಿ ಸಿಗುವ ಅಧಿಕ ಪ್ರಮಾಣದ ನಾರಿನಾಂಶ ಹಾಗೂ ಕಡಿಮೆ ಪ್ರಮಾಣ ಕ್ಯಾಲೋರಿ ಅಂಶಗಳು


ಸಲಾಡ್ ಮಾಡಿ ಸೇವನೆ ಮಾಡಿ

ಹಣ್ಣುಗಳು ಹಾಗೂ ತರಕಾರಿಯಿಂದ ತಯಾರಿಸಿಕೊಂಡಿರುವಂತಹ ಸಲಾಡ್ ಅನ್ನು ಖಾಲಿ ಹೊಟ್ಟಗೆ ಸೇವಿಸಿದರೆ ಕೂಡ ದೇಹದ ತೂಕ ಇಳಿಸಿಕೊಳ್ಳಲು ನೆರವಾಗುವುದು.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...