Saturday, 30 May 2020

ನಿರಂತರವಾಗಿ ಕಾಡುವ ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು.! ಪದೇ ಪದೇ ಕಾಡುವ ಗ್ಯಾಸ್...

ಹೊಟ್ಟೆಯಲ್ಲಿ ಗ್ಯಾಸ್‌ ಸಮಸ್ಯೆಗಳಾದರೆ, ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು

ಕೆಲವೊಮ್ಮೆ ಮುಜುಗರಕ್ಕೆ ಎಡೆಮಾಡುವ ಗ್ಯಾಸ್ ಸಮಸ್ಯೆಯು ಹೊಟ್ಟೆಯಲ್ಲಿ ಸೆಳೆತ, ಹೊಟ್ಟೆ ಉಬ್ಬು, ಹೊಟ್ಟೆ ಭಾರ ಹಾಗೂ ಎದೆ ಉರಿಯಂತಹ ಸಮಸ್ಯೆಯನ್ನು ಹೆಚ್ಚಿಸುವುದು. ಜೀರ್ಣಕ್ರಿಯೆ ಸುಗಮವಾಗಿ ನೆರವೇರದೆ ಅನಿಲವು ಸಂಗ್ರಹವಾಗುವ ಸ್ಥಿತಿಯೇ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆ ಎಂದು ಪರಿಗಣಿಸಲಾಗುವುದು.
ಮನಸ್ಸು ಬಯಸಿದ ಊಟ-ತಿಂಡಿ ಸಿಕ್ಕಾಗ ಖುಷಿಯಿಂದ ಸೇವಿಸುತ್ತೇವೆ. ಆದರೆ ಅದರ ಪರಿಣಾಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆಯನ್ನು ಉಂಟುಮಾಡಬಹುದು. ಪದೇ ಪದೇ ಗಾಸ್ ಬಿಡುಗಡೆಯಾಗುವುದು, ಹೊಟ್ಟೆಯಲ್ಲಿ ನೋವು ಹಾಗೂ ಬಳಲಿಕೆ ಉಂಟಾಗುತ್ತದೆ. ಕೆಲವೊಮ್ಮೆ ಸಭೆ-ಸಮಾರಂಭಗಳ ನಡುವೆ ಇರುವಾಗ ಗ್ಯಾಸ್ ಸಮಸ್ಯೆಯು ಕಾಡುವ ಸಾಧ್ಯತೆಗಳು ಇರುತ್ತವೆ. ಆಗ ಸಾಕಷ್ಟು ಇರುಸು-ಮುರಿಸು ಉಂಟಾಗುವುದು. ಹೊಟ್ಟೆಯಲ್ಲಿರುವ ಗ್ಯಾಸ್ ಹೊರಗೆ ಹೋದರೆ ಅಷ್ಟು ಸಮಸ್ಯೆ ಎನಿಸದು. ಅದು ಹೊಟ್ಟೆಯಲ್ಲಿಯೇ ಉಳಿದುಕೊಂಡಾಗ ಸಮಸ್ಯೆ ಅಧಿಕವಾಗುವುದು.
ಕೆಲವೊಮ್ಮೆ ಮುಜುಗರಕ್ಕೆ ಎಡೆಮಾಡುವ ಗ್ಯಾಸ್ ಸಮಸ್ಯೆಯು ಹೊಟ್ಟೆಯಲ್ಲಿ ಸೆಳೆತ, ಹೊಟ್ಟೆ ಉಬ್ಬು, ಹೊಟ್ಟೆ ಭಾರ ಹಾಗೂ ಎದೆ ಉರಿಯಂತಹ ಸಮಸ್ಯೆಯನ್ನು ಹೆಚ್ಚಿಸುವುದು. ಜೀರ್ಣಕ್ರಿಯೆ ಸುಗಮವಾಗಿ ನೆರವೇರದೆ ಅನಿಲವು ಸಂಗ್ರಹವಾಗುವ ಸ್ಥಿತಿಯೇ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆ ಎಂದು ಪರಿಗಣಿಸಲಾಗುವುದು. ನಮ್ಮ ದೇಹದ ಒಳಗೆ ಸಂಗ್ರಹವಾಗುವ ಹೈಡ್ರೋಜನ್, ಮೀಥೇನ್ ಅಥವಾ ಕಾರ್ಬನ್ ಡೈಆಕ್ಸೈಡ್ ನಂತಹ ಅನಿಲಗಳು ಹೊರ ಹೋಗಬೇಕು. ಅವು ಹೊಟ್ಟೆಯ ಒಳಗೆ ಹಾಗೇ ಇದ್ದರೆ ಅಸ್ವಸ್ಥತೆ ಉಂಟಾಗುವುದು.

ಹಾಗಾಗಿ ನಾವು ಸೇವಿಸುವ ದೈನಂದಿನ ಆಹಾರ ಸಮತೋಲನ ಹಾಗೂ ಆರೋಗ್ಯ ಪೂರ್ಣವಾಗಿರಬೇಕು. ಬೀನ್ಸ್, ಎಲೆಕೋಸು, ಕಡಲೆ, ಸಕ್ಕರೆ ಮತ್ತು ಮಸೂರದಂತಹ ಪದಾರ್ಥಗಳು ಹೆಚ್ಚಿನ ಕಾರ್ಬನ್ಗಳನ್ನು ಒಳಗೊಂಡಿರುತ್ತವೆ. ಅವು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಅವು ಕೊಲೋನ್ ಮೂಲಕ ಹಾದುಹೋಗುತ್ತವೆ. ಅಲ್ಲದೆ ಬಹಳಷ್ಟು ಬ್ಯಾಕ್ಟೀರಿಯಾಗಳಿಂದಲೂ ಕೂಡಿರುತ್ತದೆ. ಅವು ಹೆಚ್ಚು ಅನಿಲವನ್ನು ಬಿಡುಗಡೆ ಮಾಡುವುದರ ಮೂಲಕ ಅನಾರೋಗ್ಯ ಹಾಗೂ ಗ್ಯಾಸ್ ಸಮಸ್ಯೆಯನ್ನು ಸೃಷ್ಟಿಸುತ್ತವೆ. ಇದ್ದಕ್ಕಿದ್ದಂತೆಯೇ ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ ಸಮಸ್ಯೆಗೆ ನೀವು ಮನೆ ಮದ್ದನ್ನು ಬಳಸಬಹುದು. ಬಹಳ ಪರಿಣಾಮಕಾರಿ ರೀತಿಯಲ್ಲಿ ಶಮನವನ್ನು ನೀಡುವುದು. ಜೊತೆಗೆ ಜನಗಳ ಮಧ್ಯೆ ಇರುವಾಗ ಉಂಟಾಗುವ ಮುಜುಗರವನ್ನು ತಡೆಯುವುದು.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...